HOME
CINEMA NEWS
GALLERY
TV NEWS
REVIEWS
CONTACT US
ಜನರ ಮನಸ್ಸನ್ನು ಗೆದ್ದ ಪುಟ್ಟರಾಜು
ಕಳೆದ ವಾರ ಬಿಡುಗಡೆಯಾದ ‘ಪುಟ್ಟರಾಜು’ ಚಿತ್ರವು ಎಲ್ಲಾ ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದಕ್ಕಾಗಿ ಮಾದ್ಯಮದವರಿಗೆ ಅಭಿನಂದನೆ ಸಲ್ಲಿಸಲು ತಂಡವು ಸಣ್ಣದೊಂದು ಔತಣಕೂಟ ಏರ್ಪಾಟು ಮಾಡಿತ್ತು. ನಿರ್ಮಾಪಕ ನಾಗರಾಜು ಮಾತನಾಡಿ ಮೂರು ದಿನಗಳಲ್ಲಿ ಗಳಿಕೆ ಒಳ್ಳೆ ರೀತಿಯಲ್ಲಿ ಆಗಿದೆ. ಚಿತ್ರಮಂದಿರಕ್ಕೆ ಭೇಟಿ ನೀಡಿದಾಗ, ಪ್ರೇಕ್ಷಕರು ಶಿಳ್ಳೆ ಹೊಡೆಯುತ್ತಿದ್ದರು. ಬಿಗ್ ಸ್ಟಾರ್ ನಟರು ಇಲ್ಲದೆ ಹೋದರೂ ಹೊಸಬರ ಸಿನಿಮಾಕ್ಕೆ ಜನರು ಬರುತ್ತಿರುವುದು ಖುಷಿಯಾಗಿದೆ. ಮುಂದಿನವಾರದ ವರೆಗೆ ಇದೇ ರೀತಿಯಲ್ಲಿ ಕಲೆಕ್ಷನ್ ಆದರೆ ಬಂಡವಾಳ ವಾಪಸ್ಸು ಬರುತ್ತದೆ ಎಂದರು.

ಪ್ರೇಕ್ಷಕರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಎಲ್ಲಾ ಕಡೆ ಓಕೆ ಅಂತ ಹೇಳುತ್ತಿದ್ದಾರೆ. ಕೋಕೋ ಆಟವನ್ನು ಇಷ್ಟಪಟ್ಟಿದ್ದಾರೆ. ಕಲಾವಿದರು, ತಂತ್ರಜ್ಘರ ಸಹಕಾರದಿಂದ ಸಿನಿಮಾ ಗೆಲ್ಲಲು ಕಾರಣವಾಯಿತು ಎಂಬುದು ನಿರ್ದೇಶಕ ಸಹದೇವ ಸಂತಸದ ನುಡಿ. ರಾಯಚೂರು, ತುಮಕೂರು, ಬೆಂಗಳೂರು ಕಡೆಗಳಲ್ಲಿ ಸುತ್ತಾಡಿ ಎಲ್ಲಾ ಕಡೆ ನನ್ನ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ತುಮಕೂರು ಚಿತ್ರಮಂದಿರದಲ್ಲಿ ಜನರು ಮೇಲಕ್ಕೆ ಎತ್ತಿಕೊಂಡು ನಲಿದಾಡಿದರು ಎಂದು ಕರಡಿಸೀನ ಪಾತ್ರ ಮಾಡಿರುವ ಡಿಂಗ್ರಿನರೇಶ್ ಹೇಳಿದರು.
ನಾಯಕ ಅಮಿತ್, ನಾಯಕಿಯರಾದ ಜಯಶ್ರೀಆರಾಧ್ಯ, ಸುಶ್ಮಿತಾ ಹಾಜರಿದ್ದು ಖುಷಿಯ ಅನುಭವಗಳನ್ನು ಹಂಚಿಕೊಂಡರು. ವಿತರಕ ವಿಜಯ್ ಮಾತನಾಡುತ್ತಾ ಮೂರು ವಾರದ ಹಿಂದೆ ಬಿಡುಗಡೆಯಾಗಿದ್ದರೆ ಗಳಿಕೆಗೆ ಸಹಕಾರಿ ಆಗುತ್ತಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ಸೂಕ್ತ ಸ್ಪಂದನೆ ಸಿಕ್ಕಿದೆ ಅಂತಾರೆ. ಸಹ ನಿರ್ಮಾಪಕ ರಾಜುಬಾಲಕೃಷ್ಣ ಉಪಸ್ತಿತರಿದ್ದರು.
ಸಿನಿ ಸರ್ಕಲ್.ಇನ್ ನ್ಯೂಸ್
14/08/18
ಪುಟ್ಟರಾಜು ಪ್ರೇಮ ಕಥನ
ಪ್ರೌಡಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರ ನಡುವೆ ನಡೆಯುವ ಮೊದಲ ಕೃಶ್ ಹೇಗಿರುತ್ತದೆ ಎಂಬುದನ್ನು ‘ಪುಟ್ಟ ರಾಜು’ ಚಿತ್ರದಲ್ಲಿ ಚೆಂದವಾಗಿ ತೋರಿಸಲಾಗಿದೆ. ಸತ್ಯ ಘಟನೆ ಆಧಾರಿತ ಘಟನೆ ಎಂದು ಹೇಳಲಾಗಿದೆ. ಅದರಂತೆ ಕತೆಯು ಊರಿನ ಶಾಲೆಯಲ್ಲಿ ಪುಟ್ಟರಾಜು ಎನ್ನುವ ಹುಡುಗ ಅದೇ ಶಾಲೆಯಲ್ಲಿ ಓದುತ್ತಿರುವ ಒಬ್ಬಳ ಮೇಲೆ ಪ್ರೀತಿ ಹುಟ್ಟುತ್ತದೆ. ಆಕೆಯನ್ನು ಒಲಿಸಿಕೊಳ್ಳಲು ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಾನೆ. ಇದರ ಮಧ್ಯೆ ಗೆಳಯರ ತುಂಟಾಟ, ಹಾಸ್ಯ, ಕೀಟಲೆಗಳು ಬಂದು ಹೋಗುತ್ತವೆ. ಇವೆಲ್ಲಾ ನಡೆಯುವ ವೇಳೆಗೆ ಮಧ್ಯಂತರ ಬರುತ್ತದೆ. ಅದು ಅವಳ ಅಪ್ಪನಿಗೆ ವರ್ಗವಾಗಿ ಬೇರೆ ಊರಿಗೆ ಹೋದಾಗ ತನ್ನ ಪ್ರೀತಿಯನ್ನು ಹೇಳಿಕೊಳ್ಳಲು ಆಗುವುದಿಲ್ಲ. ವಿರಾಮದ ನಂತರ ಮತ್ತೋಂದು ಲವ್ ಶುರುವಾಗುತ್ತದೆ. ಆ ಹುಡುಗಿಯದ್ದು ಅದೇ ಹೆಸರು ಶಶಿಕಲಾ ಆಗಿರುತ್ತದೆ. ಈ ಎರಡು ಕುಟುಂಬ ಮಧ್ಯೆ ದ್ವೇಷ ಇರುವುದು ವಿಶೇಷ. ಇದರಿಂದ ಇಬ್ಬರ ಪ್ರೀತಿಗೆ ಕುಟುಂಬದವರೇ ವಿಲನ್ ಆಗುತ್ತಾರೆ. ಮುಂದೆ ನಾವು ಹೇಳುವುದು ಸೂಕ್ತವಲ್ಲ. ನೀವುಗಳು ಚಿತ್ರಮಂದರಕ್ಕೆ ಬರಬೇಕು.

ನಿರ್ದೇಶಕ ಸಹದೇವ ನೈಜ ಘಟನೆಗೆ ಶೇಕಡ 20ರಷ್ಟು ಸಿನಿಮಾ ಸ್ಪರ್ಶ ನೀಡಿದ್ದಾರೆ. ಸಿನಿಮಾಕ್ಕೆ ಧಕ್ಕೆಯಾಗದಂತೆ ಚೊಕ್ಕಟವಾಗಿ ಚಿತ್ರಕತೆ ಸಿದ್ದಪಡಿಸಿರುವುದು ಪರದೆ ಮೇಲೆ ಕಾಣಿಸುತ್ತದೆ. ಪ್ರಚಲಿತ ಯುವ ಜನಾಂಗದ ಹುಡುಗ-ಹುಡುಗಿಯರ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ಹೇಳಲಾಗಿದೆ. ಏಳೆ ವಯಸ್ಸಿನಲ್ಲಿ ಪ್ರೀತಿಸಿ ಓಡಿ ಹೋಗಬಾರದೆಂದು ತೂಕದ ಸಂದೇಶವನ್ನು ಹೇಳಿದ್ದಾರೆ. ನಾಯಕ ಅಮಿತ್, ನಾಯಕಿಯರಾದ ಸುಶ್ಮಿತಾ, ಜಯಶ್ರೀ ಎಲ್ಲರಿಗೂ ಅಭಿನಯ ಹೊಸತು ಆಗಿರುವುದರಿಂದ ಹೆಚ್ಚೇನು ಹೇಳುವ ಅಗತ್ಯವಿಲ್ಲ. ಶ್ರೀಮಾನ್‍ಗಂಧರ್ವ ಹಾಡುಗಳಿಗಿಂತ ಹಿನ್ನಲೆ ಸಂಗೀತ ದೃಶ್ಯಗಳಿಗೆ ಸಾಥ್ ನೀಡಿದೆ. ಇದಕ್ಕೆ ಪೂರಕವಾಗಿ ರಾಜುಶಿರಾ ಛಾಯಗ್ರಹಣ ಚೆನ್ನಾಗಿ ಕೆಲಸ ಮಾಡಿದೆ. ಎಚ್.ವಿ.ನಾಗರಾಜು, ರಾಜುಬಾಲಕೃಷ್ಣ ನಿರ್ಮಾಣ ಮಾಡಿರುವ ಚಿತ್ರವನ್ನು ಒಮ್ಮೆ ನೋಡಲು ಅಡ್ಡಿಯಿಲ್ಲ.
ಸಿನಿ ಸರ್ಕಲ್.ಇನ್ ನ್ಯೂಸ್
***
11/08/18
ಪುಟ್ಟರಾಜು ಬರ್ತಾ ಇದ್ದಾನೆ
ನಿಜ ಜೀವನದಲ್ಲಿ ನಡೆದ ಘಟನೆಯ ‘ಪುಟ್ಟರಾಜು’ ಲವರ್ ಆಫ್ ಶಶಿಕಲಾ ಎಂದು ಅಡಿಬರಹದಲ್ಲಿ ಹೇಳಿಕೊಂಡಿರುವ ಚಿತ್ರವೊಂದು ತೆರೆಗೆ ಬರಲು ತಯಾರಿ ಮಾಡಿಕೊಂಡಿದೆ. ಬಿಡುಗಡೆಪೂರ್ವ ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ ಸಹದೇವ ಮಾತನಾಡುತ್ತಾ 2001 ರಂದು ತುಮಕೂರಿನಲ್ಲಿ ನಡೆದ ಘಟನೆಯನ್ನು ಬಳಸಲಾಗಿದೆ. ಪ್ರೌಡಶಾಲೆಯಲ್ಲಿ ಓದುವ ಹುಡುಗ-ಹುಡುಗಿಯ ಕತಯಲ್ಲಿ ಅರ್ಧದಷ್ಟು ಸನ್ನಿವೇಶಗಳು ಕೊಕ್ಕೋ ಆಟ ಬರಲಿದೆ. ಅವಳು ರಾಜ್ಯ ಕೊಕ್ಕೋ ಛಾಂಪಿಯನ್. ಆಕೆಯನ್ನು ಪಟಾಯಿಸಲು ಅವನು ಅದೇ ಆಟಕ್ಕೆ ಸೇರಿಕೊಳ್ಳುತ್ತಾನೆ. ಅಲ್ಲಿ ಸರಿಯಾಗಿ ಆಡದೆ ಇರುವುದರಿಂದ ಹೊರ ಬರಬೇಕಾಗುತ್ತದೆ. ಇದರ ಮಧ್ಯೆ ನಾಯಕಿಯ ಅಜ್ಜಿ, ನಾಯಕನ ತಾತ ಪ್ರವೇಶವಾಗಿ ಇಬ್ಬರಲ್ಲೂ ಕ್ರಶ್ ಆಗುತ್ತದೆ. ಮುಂದೇನು ಎನ್ನುವುದನ್ನು ಚಿತ್ರ ನೋಡಿದರೆ ತಿಳಿಯುತ್ತದೆ. ಪ್ರೀತಿಗೆ ವಯಸ್ಸು ಬೇಕಾಗಿಲ್ಲ. ಮನಸ್ಸುಗಳು ಒಂದಾದರೆ ಸಾಕು ಎಂದು ಸಂದೇಶದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ ಎನ್ನುತ್ತಾರೆ.

ಚಿಕ್ಕಮಗಳೂರು ಕಡೆಗಳಲ್ಲಿ ಶೇಕಡ 80ರಷ್ಟು ಚಿತ್ರೀಕರಣ ನಡೆಸಿ, ಕ್ಲೈಮಾಕ್ಸ್ ಹಾಗೂ ಹಾಡುಗಳನ್ನು ಬಾಕಿ ಉಳಿಸಿಕೊಂಡಿದೆ. ಹದಿಹರೆಯದ ವಯಸ್ಸಿನಲ್ಲಿ ಏನೇನು ಆಗುತ್ತದೆ ಎನ್ನುವ ಪಾತ್ರದಲ್ಲಿ ಪ್ರೌಢಶಾಲೆ ವಿದ್ಯಾರ್ಥಿಯಾಗಿ ಚಿಕ್ಕಮಗಳೂರಿನ ಅಮಿತ್ ನಾಯಕ. ಮೈಸೂರಿನ ಹುಡುಗಿ ಇಂಜನಿಯರಿಂಗ್ ಓದುತ್ತಿರುವ ಸುಶ್ಮಿತಾಸಿದ್ದಪ್ಪ ನಾಯಕಿ. ಮಾರಿಮುತ್ತು ಪಾತ್ರದಿಂದ ಹೆಸರು ಮಾಡಿದ್ದ ಸರೋಜಮ್ಮ ಮೊಮ್ಮಗಳು ಜಯಶ್ರೀಆರಾಧ್ಯ ಮತ್ತೋಬ್ದ ನಾಯಕಿಯಾಗಿ ಪರಿಚಯವಾಗಿದ್ದಾರೆ. ಗೆಳಯರಾಗಿ ವಿಕ್ರಾಂತ್, ಕಾವ್ಯ, ತಾತನಾಗಿ ರಂಗಭೂಮಿ ನಟ ಮಹದೇವಮೂರ್ತಿ, ವೃತ್ತಿಯಲ್ಲಿ ವೈದ್ಯೆ ಪ್ರವೃತ್ತಿ ಕಲಾವಿದೆಯಾಗಿರುವ ಡಾ.ರಮಾಮಣಿ ನಾಯಕಿ ಅಜ್ಜಿಯಾಗಿ ಕಾಣಿಸಿಕೊಂಡಿದ್ದಾರೆ. ಮೂರು ಹಾಡುಗಳಿಗೆ ಸಂಗೀತ ನೀಡಿರುವ ಶ್ರೀಮಾನ್‍ಗಂಧರ್ವ ಒಂದು ಹಾಡಿಗೆ ಧ್ವನಿ ನೀಡಿದರೆ, ಉಳಿದ ಎರಡು ಗೀತೆಗಳಿಗೆ ವಿಜಯ್ ಪ್ರಕಾಶ್, ನವೀನ್‍ಸಜ್ಜು ಕಂಠದಾನ ಮಾಡಿದ್ದಾರೆ. ನಿರ್ದೇಶಕರ ಮಾವ ನಾಗರಾಜು.ಹೆಚ್.ವಿ , ಬಾಮೈದ ರಾಜುಬಾಲಕೃಷ್ಣ, ಮತ್ತು ಕೃಷ್ಣಪ್ಪ ಜಂಟಿಯಾಗಿ ಹಣ ಹೊಡಿರುವ ಚಿತ್ರವು ಇದೇ ಶುಕ್ರವಾರದಂದು ವಿಜಯ್ ಫಿಲಿಂ ಮುಖಾಂತರ ಸುಮಾರು 60 ಕೇಂದ್ರಗಳಲ್ಲಿ ತೆರೆಕಾಣಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
7/08/18

ಪುಟ್ಟ ಪುಟ್ಟ ಹಾಡುಗಳು
‘ಪುಟ್ಟರಾಜು’ ಲವರ್ ಆಫ್ ಶಶಿಕಲಾ ಎಂದು ಅಡಿಬರಹದಲ್ಲಿ ಹೇಳಿಕೊಂಡಿರುವ ಚಿತ್ರದಲ್ಲಿ ಇಬ್ಬರು ಶಶಿಕಲಾ ಇರುವುದು ವಿಶೇಷ. 2001 ರಂದು ತುಮಕೂರು ಸುತ್ತಮುತ್ತ ನಡೆದ ಘಟನೆಯನ್ನು ಬಳಸಲಾಗಿದೆ. ಪ್ರೌಡಶಾಲೆಯಲ್ಲಿ ಓದುವ ಹುಡುಗ-ಹುಡುಗಿಯ ಕತಯಲ್ಲಿ ಅರ್ಧದಷ್ಟು ಸನ್ನಿವೇಶಗಳು ಕೊಕ್ಕೋ ಆಟ ಬರಲಿದೆ. ಅವಳು ರಾಜ್ಯ ಕೊಕ್ಕೋ ಛಾಂಪಿಯನ್. ಆಕೆಯನ್ನು ಪಟಾಯಿಸಲು ಅವನು ಅದೇ ಆಟಕ್ಕೆ ಸೇರಿಕೊಳ್ಳುತ್ತಾನೆ. ಅಲ್ಲಿ ಸರಿಯಾಗಿ ಆಡದೆ ಇರುವುದರಿಂದ ಹೊರ ಬರಬೇಕಾಗುತ್ತದೆ. ಇದರ ಮಧ್ಯೆ ನಾಯಕಿಯ ಅಜ್ಜಿ, ನಾಯಕನ ತಾತ ಪ್ರವೇಶವಾಗಿ ಇಬ್ಬರಲ್ಲೂ ಕ್ರಶ್ ಆಗುತ್ತದೆ. ಮುಂದೇನು ಎನ್ನುವುದನ್ನು ಚಿತ್ರ ನೋಡಿದರೆ ತಿಳಿಯುತ್ತದೆ. ಪ್ರೀತಿಗೆ ವಯಸ್ಸು ಬೇಕಾಗಿಲ್ಲ. ಮನಸ್ಸುಗಳು ಒಂದಾದರೆ ಸಾಕು ಎಂದು ಸಂದೇಶದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ ಎಂದು ನಿರ್ದೇಶಕ ಸಹದೇವ ಮಾಹಿತಿ ಬಿಚ್ದಿಟ್ಟರು.

ಹದಿಹರೆಯದ ವಯಸ್ಸಿನಲ್ಲಿ ಏನೇನು ಆಗುತ್ತದೆ ಎನ್ನುವ ಪಾತ್ರದಲ್ಲಿ ಪ್ರೌಢಶಾಲೆ ವಿದ್ಯಾರ್ಥಿಯಾಗಿ ಚಿಕ್ಕಮಗಳೂರಿನ ಅಮಿತ್ ನಾಯಕ. ಮೈಸೂರಿನ ಹುಡುಗಿ ಇಂಜನಿಯರಿಂಗ್ ಓದುತ್ತಿರುವ ಸುಶ್ಮಿತಾಸಿದ್ದಪ್ಪ ನಾಯಕಿ. ಮಾರಿಮುತ್ತು ಪಾತ್ರದಿಂದ ಹೆಸರು ಮಾಡಿದ್ದ ಸರೋಜಮ್ಮ ಮೊಮ್ಮಗಳು ಜಯಶ್ರೀಆರಾಧ್ಯ ಮತ್ತೋಬ್ದ ನಾಯಕಿಯಾಗಿ ಪರಿಚಯವಾಗಿದ್ದಾರೆ. ಗೆಳಯರಾಗಿ ವಿಕ್ರಾಂತ್, ಕಾವ್ಯ, ತಾತನಾಗಿ ರಂಗಭೂಮಿ ನಟ ಮಹದೇವಮೂರ್ತಿ, ವೃತ್ತಿಯಲ್ಲಿ ವೈದ್ಯೆ ಪ್ರವೃತ್ತಿ ಕಲಾವಿದೆಯಾಗಿರುವ ಡಾ.ರಮಾಮಣಿ ನಾಯಕಿ ಅಜ್ಜಿಯಾಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕರು ಬರೆದಿರುವ ಮೂರು ಹಾಡುಗಳಿಗೆ ಶ್ರೀಮಾನ್‍ಗಂಧರ್ವ ಸಂಗೀತವಿದೆ. ನಿರ್ದೇಶಕರ ಮಾವ ನಾಗರಾಜು.ಹೆಚ್.ವಿ , ಬಾಮೈದ ರಾಜುಬಾಲಕೃಷ್ಣ ಜಂಟಿಯಾಗಿ ಹಣ ಹೊಡಿರುವ ಸಿನಿಮಾದ ಆಡಿಯೋ ಸಿಡಿಯು ಇತ್ತೀಚೆಗೆ ಅನಾವರಣಗೊಂಡಿತು.
ಸಿನಿ ಸರ್ಕಲ್.ಇನ್ ನ್ಯೂಸ್
22/07/18


ಹದಿಹರೆಯದ ಪ್ರೇಮ ಕಥನ
ನಿಜ ಜೀವನದಲ್ಲಿ ನಡೆದ ಘಟನೆಯ ಚಿತ್ರವನ್ನು ಪ್ರೇಕ್ಷಕ ಇಷ್ಟಪಡುತ್ತಾನೆಂದು ಯಾವ ಪುಣ್ಯಾತ್ಮ ಹೇಳಿದರೊ ತಿಳಿಯದು. ಅದರಂತೆ ‘ಪುಟ್ಟರಾಜು’ ಲವರ್ ಆಫ್ ಶಶಿಕಲಾ ಎಂದು ಅಡಿಬರಹದಲ್ಲಿ ಹೇಳಿಕೊಂಡಿರುವ ಚಿತ್ರವೊಂದು ಸೇರ್ಪಡೆಯಾಗಿದೆ. ಮೊದಲ ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ ಸಹದೇವ 2001 ರಂದು ತುಮಕೂರಿನಲ್ಲಿ ನಡೆದ ಘಟನೆಯನ್ನು ಬಳಸಲಾಗಿದೆ. ಊರಿನ ಹೆಸರನ್ನು ಹೇಳಲಿಚ್ಚಿಸಿದ ನಿರ್ದೇಶಕರು ಪ್ರೌಡಶಾಲೆಯಲ್ಲಿ ಓದುವ ಹುಡುಗ-ಹುಡುಗಿಯ ಕತಯಲ್ಲಿ ಅರ್ಧದಷ್ಟು ಸನ್ನಿವೇಶಗಳು ಕೊಕ್ಕೋ ಆಟ ಬರಲಿದೆ. ಅವಳು ರಾಜ್ಯ ಕೊಕ್ಕೋ ಛಾಂಪಿಯನ್. ಆಕೆಯನ್ನು ಪಟಾಯಿಸಲು ಅವನು ಅದೇ ಆಟಕ್ಕೆ ಸೇರಿಕೊಳ್ಳುತ್ತಾನೆ. ಅಲ್ಲಿ ಸರಿಯಾಗಿ ಆಡದೆ ಇರುವುದರಿಂದ ಹೊರ ಬರಬೇಕಾಗುತ್ತದೆ. ಇದರ ಮಧ್ಯೆ ನಾಯಕಿಯ ಅಜ್ಜಿ, ನಾಯಕನ ತಾತ ಪ್ರವೇಶವಾಗಿ ಇಬ್ಬರಲ್ಲೂ ಕ್ರಶ್ ಆಗುತ್ತದೆ. ಮುಂದೇನು ಎನ್ನುವುದನ್ನು ಚಿತ್ರ ನೋಡಿದರೆ ತಿಳಿಯುತ್ತದೆ. ಪ್ರೀತಿಗೆ ವಯಸ್ಸು ಬೇಕಾಗಿಲ್ಲ. ಮನಸ್ಸುಗಳು ಒಂದಾದರೆ ಸಾಕು ಎಂದು ಸಂದೇಶದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ ಎನ್ನುತ್ತಾರೆ.

ಚಿಕ್ಕಮಗಳೂರು ಕಡೆಗಳಲ್ಲಿ ಶೇಕಡ 80ರಷ್ಟು ಚಿತ್ರೀಕರಣ ನಡೆಸಿ, ಕ್ಲೈಮಾಕ್ಸ್ ಹಾಗೂ ಹಾಡುಗಳನ್ನು ಬಾಕಿ ಉಳಿಸಿಕೊಂಡಿದೆ. ಹದಿಹರೆಯದ ವಯಸ್ಸಿನಲ್ಲಿ ಏನೇನು ಆಗುತ್ತದೆ ಎನ್ನುವ ಪಾತ್ರದಲ್ಲಿ ಪ್ರೌಢಶಾಲೆ ವಿದ್ಯಾರ್ಥಿಯಾಗಿ ಚಿಕ್ಕಮಗಳೂರಿನ ಅಮಿತ್ ನಾಯಕ. ಮೈಸೂರಿನ ಹುಡುಗಿ ಇಂಜನಿಯರಿಂಗ್ ಓದುತ್ತಿರುವ ಸುಶ್ಮಿತಾಸಿದ್ದಪ್ಪ ನಾಯಕಿ. ಮಾರಿಮುತ್ತು ಪಾತ್ರದಿಂದ ಹೆಸರು ಮಾಡಿದ್ದ ಸರೋಜಮ್ಮ ಮೊಮ್ಮಗಳು ಜಯಶ್ರೀಆರಾಧ್ಯ ಮತ್ತೋಬ್ದ ನಾಯಕಿಯಾಗಿ ಪರಿಚಯವಾಗಿದ್ದಾರೆ. ಗೆಳಯರಾಗಿ ವಿಕ್ರಾಂತ್, ಕಾವ್ಯ, ತಾತನಾಗಿ ರಂಗಭೂಮಿ ನಟ ಮಹದೇವಮೂರ್ತಿ, ವೃತ್ತಿಯಲ್ಲಿ ವೈದ್ಯೆ ಪ್ರವೃತ್ತಿ ಕಲಾವಿದೆಯಾಗಿರುವ ಡಾ.ರಮಾಮಣ ನಾಯಕಿ ಅಜ್ಜಿಯಾಗಿ ಕಾಣ ಸಿಕೊಂಡಿದ್ದಾರೆ. ಮೂರು ಹಾಡುಗಳಿಗೆ ಸಂಗೀತ ನೀಡಿರುವ ಶ್ರೀಮಾನ್‍ಗಂಧರ್ವ ಒಂದು ಹಾಡಿಗೆ ಧ್ವನಿ ನೀಡಿದರೆ, ಉಳಿದ ಎರಡು ಗೀತೆಗಳಿಗೆ ವಿಜಯ್ ಪ್ರಕಾಶ್, ನವೀನ್‍ಸಜ್ಜು ಕಂಠದಾನ ಮಾಡಿದ್ದಾರೆ. ನಿರ್ದೇಶಕರ ಮಾವ ನಾಗರಾಜು.ಹೆಚ್.ವಿ , ಬಾಮೈದ ರಾಜುಬಾಲಕೃಷ್ಣ, ಮತ್ತು ಕೃಷ್ಣಪ್ಪ ಜಂಟಿಯಾಗಿ ಹಣ ಹೊಡಿರುವ ಚಿತ್ರವು ಏಪ್ರಿಲ್‍ನಲ್ಲಿ ತೆರೆ ಕಾಣುವ ಸಾದ್ಯತೆ ಇದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
-16/02/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore