HOME
CINEMA NEWS
GALLERY
TV NEWS
REVIEWS
CONTACT US
ಇದೇ ತಿಂಗಳು ಪುಟ 109
‘ಪುಟ 109’ ಚಿತ್ರದ ಕತೆಯು ಥ್ರಿಲ್ಲರ್‍ನಿಂದ ಕೂಡಿದೆ. ಚಿತ್ರದ ಅವಧಿ 90 ನಿಮಿಷ. ಒಟ್ಟು 25 ಸನ್ನಿವೇಶಗಳು. ಅದರಲ್ಲಿ 24 ಸನ್ನಿವೇಶವು 28 ನಿಮಿಷದಲ್ಲಿ ಕಾಣಿಸಿಕೊಂಡರೆ, 1 ಸನ್ನಿವೇಶ 62 ನಿಮಿಷಗಳು ತೆಗೆದುಕೊಳ್ಳುತ್ತದೆ. ಎರಡು ಪಾತ್ರಧಾರಿಗಳು ಮಾತನಾಡುತ್ತಾರೆ. ಹಾಗಂತ ನೋಡುಗರಿಗೆ ಬೋರ್ ಆಗದಂತೆ ಹಲವು ಷಾಟ್‍ಗಳನ್ನು ವಿಭಾಗಿಸಲಾಗಿದೆ. ಎರಡು ಹಾಡುಗಳಿಗೆ ಸಂಗೀತ ಒದಗಿಸಿರುವ ಗಣೇಶ್‍ನಾರಾಯಣ್ ಹಿನ್ನಲೆ ಸಂಗೀತಕ್ಕೆ 54 ದಿವಸ ತೆಗೆದುಕೊಂಡಿರುವುದು ವಿಶೇಷ.

ನಿರ್ದೇಶಕ, ನಿರ್ಮಾಪಕ ದಯಾಳ್‍ಪದ್ಮನಾಭನ್ ಹೇಳುವಂತೆ ಕರಾಳ ರಾತ್ರಿ ಚಿತ್ರ ಮಾಡುವ ಸಲುವಾಗಿ ಲೋಕೇಶನ್ ನೋಡಲು ಮೂಡಿಗೆರೆಗೆ ಹೋದಾಗ, ಅಲ್ಲಿ ಒಂದು ಬಂಗಲೆ ನೋಡಲಾಯಿತು. ಈ ಸ್ಥಳವು ಆರ್.ಅರವಿಂದ್ ಬರೆದ ಕತೆಗೆ ಸೂಕ್ತವಾಗಿದೆ ಅಂತ ಸಂಭಾಷಣೆಗಾರ ನವೀನ್‍ಕೃಷ್ಣ ಅವರೊಂದಿಗೆ ಒಂದು ಸಣ್ಣದಾಗಿ ಚರ್ಚೆ ನಡೆಸಿದ್ದಾರೆ. ಮುಂದೆ ಬೆಂಗಳೂರು ತಲುಪುವಷ್ಟರಲ್ಲಿ ಚಿತ್ರಕತೆ ಸಿದ್ದವಾಗಿದೆ. ಕೊನೆಗೆ ಹೊಸ ರೀತಿಯ ಪ್ರಯೋಗವೆಂದು 10 ದಿವಸದಲ್ಲಿ ಚಿತ್ರೀಕರಣ ಮುಗಿಸಲಾಗಿದೆ. ದೂಡ್ಡ ಸನ್ನಿವೇಶದಲ್ಲಿ ಇನ್ಸ್‍ಪೆಕ್ಟರ್ ಆಗಿ ಜೆಕೆ. ಮತ್ತು ನವೀನ್‍ಕೃಷ್ಣ ಕಾಣಿಸಿಕೊಳ್ಳುವ ದೃಶ್ಯಗಳು ಹೈಲೈಟ್ ಆಗಲಿದೆ ಅಂತಾರೆ. ಕೊಲೆ ಹೇಗೆ ನಡೆಯುತ್ತದೆ. ಅದನ್ನು ಯಾವ ರೂಪದಲ್ಲಿ ತನಿಖೆ ಮಾಡಲಾಗುತ್ತದೆ. ಪುಟ 109 ಮಿಸ್ಸಿಂಗ್ ಆಗಿದ್ದರಿಂದ ಕತೆ ತಿರುವು ಪಡೆದುಕೊಳ್ಳುತ್ತದೆ. ನಾಯಕಿ ವೈಷ್ಣವಿಮೆನನ್, ಸಂಖಲನ ಕ್ರೇಜಿಮೈಂಡ್ಸ್ ಅವರದಾಗಿದೆ. ಅವಿನಾಶ್ ಸಹನಿರ್ಮಾಪಕರಾಗಿರುವ ಚಿತ್ರವು 16/11/2018 ಬಿಡುಗಡೆಯಾಗುವ ಸಾದ್ಯತೆ ಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
15/10/18

ಪುಟ 109ಕ್ಕೆ ಸುದೀಪ್ ಫಿದಾ
ಆ ಕರಾಳ ರಾತ್ರಿ ಯಶಸ್ವಿ ತಂಡದಿಂದ ಸಿದ್ದಗೊಂಡಿರುವ ‘ಪುಟ 109’ ಚಿತ್ರದ ಕತೆಯು ಥ್ರಿಲ್ಲರ್‍ನಿಂದ ಕೂಡಿದೆ. ಸಿನಿಮಾದಲ್ಲಿ ಹಲವು ವಿಶೇಷತೆಗಳು ಇರಲಿದೆ. ಮೊದಲೆನಯದಾಗಿ ಸುದೀಪ್ ಚಿತ್ರ ವೀಕ್ಷಿಸಿ ಇದನ್ನು ತೆಲುಗು, ತಮಿಳು ಭಾಷೆಯಲ್ಲಿ ನಿರ್ಮಾಣ ಮಾಡಲು ಆಸಕ್ತಿ ತೋರಿಸಿರುವುದು ಇವರೊಂದಿಗೆ ಜಾಕ್ ಮಂಜು ಸೇರಿಕೊಂಡಿದ್ದಾರೆ. ಚಿತ್ರದ ಅವಧಿ 90 ನಿಮಿಷ. ಒಟ್ಟು 25 ಸನ್ನಿವೇಶಗಳು. ಅದರಲ್ಲಿ 24 ಸನ್ನಿವೇಶವು 28 ನಿಮಿಷದಲ್ಲಿ ಕಾಣಿಸಿಕೊಂಡರೆ, 1 ಸನ್ನಿವೇಶ 62 ನಿಮಿಷಗಳು ತೆಗೆದುಕೊಳ್ಳುತ್ತದೆ. ಎರಡು ಪಾತ್ರಧಾರಿಗಳು ಮಾತನಾಡುತ್ತಾರೆ. ಹಾಗಂತ ನೋಡುಗರಿಗೆ ಬೋರ್ ಆಗದಂತೆ ಹಲವು ಷಾಟ್‍ಗಳನ್ನು ವಿಭಾಗಿಸಲಾಗಿದೆ. ಎರಡು ಹಾಡುಗಳಿಗೆ ಸಂಗೀತ ಒದಗಿಸಿರುವ ಗಣೇಶ್‍ನಾರಾಯಣ್ ಹಿನ್ನಲೆ ಸಂಗೀತಕ್ಕೆ 54 ದಿವಸ ತೆಗೆದುಕೊಂಡಿದ್ದರೂ, ಅಂತಿಮ ಹಂತಕ್ಕೆ ತಂದಿಲ್ಲ. ಏನೇ ಆದರೂ ಸೆನ್ಸಾರ್‍ಗೆ ಹೋಗುವ ಮುನ್ನ ಕೆಲಸ ಪೂರೈಸುವುದಾಗಿ ಭರವಸೆ ನೀಡಿದ್ದಾರಂತೆ.

ನಿರ್ದೇಶಕ, ನಿರ್ಮಾಪಕ ದಯಾಳ್‍ಪದ್ಮನಾಭನ್ ಹೇಳುವಂತೆ ಕರಾಳ ರಾತ್ರಿ ಚಿತ್ರ ಮಾಡುವ ಸಲುವಾಗಿ ಲೋಕೇಶನ್ ನೋಡಲು ಮೂಡಿಗೆರೆಗೆ ಹೋದಾಗ, ಅಲ್ಲಿ ಒಂದು ಬಂಗಲೆ ನೋಡಲಾಯಿತು. ಈ ಸ್ಥಳವು ಆರ್.ಅರವಿಂದ್ ಬರೆದ ಕತೆಗೆ ಸೂಕ್ತವಾಗಿದೆ ಅಂತ ಸಂಭಾಷಣೆಗಾರ ನವೀನ್‍ಕೃಷ್ಣ ಅವರೊಂದಿಗೆ ಒಂದು ಸಣ್ಣದಾಗಿ ಚರ್ಚೆ ನಡೆಸಿದ್ದಾರೆ. ಮುಂದೆ ಬೆಂಗಳೂರು ತಲುಪುವಷ್ಟರಲ್ಲಿ ಚಿತ್ರಕತೆ ಸಿದ್ದವಾಗಿದೆ. ಕೊನೆಗೆ ಹೊಸ ರೀತಿಯ ಪ್ರಯೋಗವೆಂದು 10 ದಿವಸದಲ್ಲಿ ಚಿತ್ರೀಕರಣ ಮುಗಿಸಲಾಗಿದೆ. ದೂಡ್ಡ ಸನ್ನಿವೇಶದಲ್ಲಿ ಇನ್ಸ್‍ಪೆಕ್ಟರ್ ಆಗಿ ಜೆಕೆ. ಮತ್ತು ನವೀನ್‍ಕೃಷ್ಣ ಕಾಣಿಸಿಕೊಳ್ಳುವ ದೃಶ್ಯಗಳು ಹೈಲೈಟ್ ಆಗಲಿದೆ ಅಂತಾರೆ. ಕೊಲೆ ಹೇಗೆ ನಡೆಯುತ್ತದೆ. ಅದನ್ನು ಯಾವ ರೂಪದಲ್ಲಿ ತನಿಖೆ ಮಾಡಲಾಗುತ್ತದೆ. ಪುಟ 109 ಮಿಸ್ಸಿಂಗ್ ಆಗಿದ್ದರಿಂದ ಕತೆ ತಿರುವು ಪಡೆದುಕೊಳ್ಳುತ್ತದೆ. ನಾಯಕಿ ವೈಷ್ಣವಿಮೆನನ್, ಸಂಖಲನ ಕ್ರೇಜಿಮೈಂಡ್ಸ್ ಅವರದಾಗಿದೆ. ಫಣೀಶ್‍ರಾಜ್‍ಗೆ ಸಂಸ್ಕ್ರತದಲ್ಲಿ ಹಾಡು ಬರೆದಿರುವುದು ಛಾಲೆಂಜ್ ಆಗಿದೆಯಂತೆ. ಅವಿನಾಶ್ ಸಹನಿರ್ಮಾಪಕರಾಗಿರುವ ಚಿತ್ರವನ್ನು ಸೆಪ್ಟಂಬರ್ 5ರಂದು ಬಿಡುಗಡೆ ಮಾಡಲು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
25/09/18

ಎರಡು ಪಾತ್ರಗಳ ಪುಟ 109
ಆ ಕರಾಳ ರಾತ್ರಿಯ ಖುಷಿಯಲ್ಲಿದ್ದ ನಿರ್ದೇಶಕ ದಯಾಳ್‍ಪದ್ಮನಾಭನ್ ಅವರ ಮತ್ತೋಂದು ‘ಪುಟ 109’ ಕ್ಲೈಮ್ ಥ್ರಿಲ್ಲರ್ ಕತೆಯಾಗಿದೆ. ಒಂದು ವಾಣಿಜ್ಯಾತ್ಮಕ ವಿಷಯದ ಬಗ್ಗೆ ಇಬ್ಬರು ಧೀರ್ಘ ಕಾಲ ಚರ್ಚೆ ನಡೆಸುವ ಕತೆಯಲ್ಲಿ ಎರಡು ಪ್ರಮುಖ ಪಾತ್ರದಾರಿಗಳು ಕಾಣಿಸಿಕೊಳ್ಳಲಿದೆ. ಪೋಲೀಸ್ ಅಧಿಕಾರಿಯಾಗಿ ಜೆಕೆ. ಬರಹಗಾರನ ಪಾತ್ರದಲ್ಲಿ ನವೀನ್‍ಕೃಷ್ಣ, ಉಳಿದಂತೆ ವೈಷ್ಣವಿಚಂದ್ರನ್, ಯತಿರಾಜ್, ಸಿಹಿಕಹಿಚಂದ್ರು, ಡ್ಯಾನಿ ತಾರಬಳಗದಲ್ಲಿ ಇದ್ದಾರೆ. ಮೂಡಿಗೆರೆ ಸಮೀಪದ ಸ್ಥಳದ ಒಂದು ಪುರಾತನ ಮನೆ ಮತ್ತು ಅಕ್ಕಪಕ್ಕದ ಸುಂದರ ತಾಣಗಳಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ನqಸಿರುವುದು ವಿಶೇಷವಾಗಿದೆ. ಒಂದು ಗೀತೆಗೆ ಆರ್.ಎಸ್.ಗಣೇಶ್‍ನಾರಾಯಣ್ ಸಂಗೀತ ಇರಲಿದ್ದು, ಹಿನ್ನಲೆ ಸಂಗೀತವನ್ನು ವಿಭಿನ್ನ ರೀತಿಯಲ್ಲಿ ಇರಲಿದೆ.
ಛಾಯಗ್ರಾಹಕ ಪಿ.ಕೆ.ಹೆಚ್ ದಾಸ್, ಸಂಕಲನ ಕ್ರೇಜಿ ಮೈಂಡ್ಸ್, ಸಂಭಾಷಣೆ ನವೀನ್‍ಕೃಷ್ಣ, ನೃತ್ಯ ತ್ರಿಭುವನ್, ಕತೆ ಆರ್.ಅರವಿಂದ್ ಅವರದಾಗಿದೆ. ಪ್ರಚಾರದ ಮೊದಲ ಹಂತವಾಗಿ ಸಿನಿಮಾದ ಟ್ರೈಲರ್‍ನ್ನು 10ರ ಸೋಮವಾರದಂದು ಬಿಡುಗಡೆ ಮಾಡಲು ತಂಡವು ಯೋಜನೆ ಹಾಕಿಕೊಂಡಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
8/09/18
ಎರಡು ಪಾತ್ರಗಳ ಪುಟ 109
ನಿರ್ದೇಶಕ ದಯಾಳ್‍ಪದ್ಮನಾಭನ್ ಒಟ್ಟಿಗೆ ಎರಡು ಚಿತ್ರಗಳನ್ನು ಕೈಗೆತ್ತಿಕೊಂಡಿದ್ದು ಅದರಲ್ಲಿ ‘ಪುಟ 109’ ಕ್ಲೈಮ್ ಥ್ರಿಲ್ಲರ್ ಚಿತ್ರವು ಸೇರಿದೆ. ಒಂದು ವಾಣಿಜ್ಯಾತ್ಮಕ ವಿಷಯದ ಬಗ್ಗೆ ಇಬ್ಬರು ಧೀರ್ಘ ಕಾಲ ಚರ್ಚೆ ನಡೆಸುವ ಕತೆಯಲ್ಲಿ ಎರಡು ಪ್ರಮುಖ ಪಾತ್ರದಾರಿಗಳು ಕಾಣಿಸಿಕೊಳ್ಳಲಿದೆ. ಪೋಲೀಸ್ ಅಧಿಕಾರಿಯಾಗಿ ಜೆಕೆ. ಬರಹಗಾರನ ಪಾತ್ರದಲ್ಲಿ ನವೀನ್‍ಕೃಷ್ಣ, ಉಳಿದಂತೆ ವೈಷ್ಣವಿಚಂದ್ರನ್, ಯತಿರಾಜ್, ಸಿಹಿಕಹಿಚಂದ್ರು, ಡ್ಯಾನಿ ತಾರಬಳಗದಲ್ಲಿ ಇದ್ದಾರೆ. ಮೂಡಿಗೆರೆ ಸಮೀಪದ ಸ್ಥಳದ ಒಂದು ಪುರಾತನ ಮನೆ ಮತ್ತು ಅಕ್ಕಪಕ್ಕದ ಸುಂದರ ತಾಣಗಳಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ. ಒಂದು ಗೀತೆಗೆ ಗೌತಂಶ್ರೀವತ್ಸ ಸಂಗೀತ ಇರಲಿದ್ದು, ಇವರಿಗೆ ಹಿನ್ನಲೆ ಸಂಗೀತವನ್ನು ವಿಭಿನ್ನ ರೀತಿಯಲ್ಲಿ ಸಂಯೋಜಿಸುತ್ತಿರುವುದು ವಿಶೇಷವಾಗಿದೆ. ಅದರ ವಿವರವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದಂತೆ.

ಛಾಯಗ್ರಾಹಕ ಪಿ.ಕೆ.ಹೆಚ್ ದಾಸ್, ಸಂಕಲನ ಕ್ರೇಜಿ ಮೈಂಡ್ಸ್, ಸಂಭಾಷಣೆ ನವೀನ್‍ಕೃಷ್ಣ, ನೃತ್ಯ ತ್ರಿಭುವನ್, ಕತೆ ಆರ್.ಅರವಿಂದ್ ಅವರದಾಗಿದೆ. ಸೋಮವಾರ ಓಣಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಮಹೂರ್ತ ಸಮಾರಂಭದಲ್ಲಿ ಮುಗುಳುನಗೆ ಚಿತ್ರದ ನಿರ್ಮಾಪಕ ಸೈಯದ್ ಸಲಾಂ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಹಿರಿಯ ನಿರ್ಮಾಪಕ ಎನ್.ಕುಮಾರ್, ವಾಣಿಜ್ಯ ಮಂಡಳಿಯ ಉಮೇಶ್‍ಬಣಕಾರ್ ಉಪಸ್ತಿತರಿದ್ದರು.
ಚಿತ್ರಗಳು; ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
-20/02/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore