HOME
CINEMA NEWS
GALLERY
TV NEWS
REVIEWS
CONTACT US
ಘೋರ ಪಾತಕಿ ಶಂಕ್ರ ಹೊರಗೆ ಬಂದಾಗ
ಅತ್ಯಾಚಾರ, ಕೊಲೆ ಸುಲಿಗೆ ಮಾಡಿರುವ ‘ ಸೈಕೋ ಶಂಕ್ರ’ ಸದ್ಯ ಕಂಬಿ ಎಣ ಸುತ್ತಿದ್ದಾನೆ. ನಾಲ್ಕನೆ ಬಾರಿ ತಪ್ಪಿಸಿಕೊಂಡಾಗ ಜನರ ಮನಸ್ಥಿತಿ, ಇವನಿಂದ ಹಿಂಸೆಗೆ ಗುರಿಯಾದವರ ತಳಮಳವನ್ನು ಹೇಳುವ ಪ್ರಯತ್ನವನ್ನು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಅಡಿಬರಹದಲ್ಲಿ ಸ್ಟಿಲ್ ಅಲೈವ್ ಎಂದು ಹೇಳಿಕೊಂಡಿದ್ದು, ಕ್ಲೈಮಾಕ್ಸ್‍ನಲ್ಲಿ ಈತನನ್ನು ಸಾಯಿಸಿದ್ದಾರೆ. ಕತ್ತಲ ರಾತ್ರಿಯಲ್ಲಿ ಹೊರಬಂದ ಶಂಕ್ರನ ಸುಳಿವು ನೀಡಿದವರಿಗೆ 5 ಲಕ್ಷ, ಈತನನ್ನು ಜೀವಂತವಾಗಿ ಹಿಡಿದರೆ ಪೋಲೀಸ್ ಇಲಾಖೆಗೆ ಹತ್ತು ಲಕ್ಷ ಕೊಡುವುದಾಗಿ ಸರ್ಕಾರ ಘೋಷಿಸುತ್ತದೆ. ಈ ಹಣಕ್ಕಾಗಿ ಪ್ರತ್ಯೇಕ ಟ್ರ್ಯಾಕ್‍ಗಳು ಹುಟ್ಟಿಕೊಳ್ಳುತ್ತವೆ. ವೈದ್ಯಕೀಯ ಸಹಾಯಕ್ಕಾಗಿ ಪರಿತಪಿಸುವುದು, ಲಂಚಕ್ಕಾಗಿ ಪೋಲೀಸ್ ಅಧಿಕಾರಿ, ಮೂವರು ಹಳ್ಳಿ ಮುಗ್ದರು ಈತನಿಗಾಗಿ ಹುಡುಕಾಡುವುದು. ಅಂತಿಮವಾಗಿ ದುರಳ ವ್ಯಕ್ತಿ ಹೇಗೆ ಸಿಕ್ಕುತ್ತಾನೆ ಎಂಬುದನ್ನು ವಿರಾಮದ ನಂತರ ತಿಳಿಯಲಿದೆ. ಶಂಕ್ರನಿಂದ ಹಣ,ಒಡವೆ ಪಡೆದುಕೊಂಡು ಬಿಡುವ ಪೋಲೀಸ್ ಅಧಿಕಾರಿ, ಹುಡುಗರ ವಿಷಯದಲ್ಲಿ ರಾಜಿಯಾಗಿ ಶಂಕ್ರನನ್ನು ಮುಗಿಸಲು ಸ್ವಾತಂತ್ರ ಕೊಡುತ್ತಾನೆ. ಮುಂದೆ ಏನೇನು ನಡೆಯುತ್ತದೆ ಅಂತ ತಿಳಿದುಕೊಳ್ಳಲು ಚಿತ್ರ ನೋಡುವುದು ಸೂಕ್ತ.

ನಾಯಕನ ಪ್ರೇಯಸಿ, ಹುಡುಗನ ತಂಗಿ ಈತನಿಂದ ಅತ್ಯಾಚಾರಕ್ಕೆ ಒಳಗಾಗಿದ್ದರಿಂದ ಇವನನ್ನು ಸಾಯಿಸಲು ಮೂವರು ಹುಡುಕುತ್ತಿರುತ್ತಾರೆ. ಕೊನೆಗೆ ತಂಗಿ ಸಾವಿಗೆ ಕಾರಣನಾದ ಶಂಕ್ರನನ್ನು ಮುಗಿಸುವಲ್ಲಿಗೆ ಶುಭಂ ಪರದೆ ಬೀಳುತ್ತದೆ. ನಾಯಕನಾಗಿ ಯಶಸ್‍ಸೂರ್ಯ , ಈತನಿಗೆ ಜೋಡಿಯಾಗಿ ಪೂಜಾ ನಟನೆ ಹೇಳಿಕೊಳ್ಳುವಂತಿಲ್ಲ. ಮೂವರು ಹುಡುಗರಾದ ವಿಜಯ್‍ಚೆಂಡೂರ್, ಸುಧಾಕರ್ ಪೈಕಿ ಪ್ರಣವ್ ನಟನೆಹೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳು ಸಿಗಲಿದೆ. ಭ್ರಷ್ಟ ಅಧಿಕಾರಿಯಾಗಿ ಶರತ್‍ಲೋಹಿತಾಶ್ವ ಅಭಿನಯ ಸೂಪರ್. ಮೂಕನಾಗಿ ಅಭಿನಯಿಸಿರವ ಸೈಕೋಶಂಕ್ರನ ಪಾತ್ರದಲ್ಲಿ ನವರಸನ್ ಗಮನಸೆಳೆಯುತ್ತಾರೆ. ನಾಲ್ಕು ಹಾಡುಗಳಿಗೆ ರಾಗ ಸಂಯೋಜಿಸಿರುವ ಶ್ರೀಧರ್‍ಕಶ್ಯಪ್ ಅವರಿಗಿಂತ ರವಿಬಸ್ರೂರು ಹಿನ್ನಲೆ ಸಂಗೀತ ಹೈಲೈಟ್ ಆಗಿದೆ. ಪ್ರಣವ್-ನವರಸನ್ ಫೈಟ್ ದೃಶ್ಯಗಳು ನೋಡುಗರಿಗೆ ಮೈ ನಡುಕ ಹುಟ್ಟಿಸುವಂತೆ ಸೆರೆಹಿಡಿದಿರುವ ನಿತಿನ್ ಕೆಲಸ ಮೆಚ್ಚಬಹುದು. ಮೊದಲ ಪ್ರಯತ್ನದಲ್ಲೆ ತಾನು ನಿರ್ದೇಶಕನಾಗಲು ಅರ್ಹನೆಂದು ಸಾಬೀತು ಮಾಡುವಲ್ಲಿ ಪುನೀತ್ ಆರ್ಯ ಸಪಲರಾಗಿದ್ದಾರೆ. ಚೊಚ್ಚಲಬಾರಿ ನಿರ್ಮಾಣ ಮಾಡಿರುವ ಮೈಸೂರಿನ ಪ್ರಭಾಕರ್ ಮತ್ತು ಪಿ.ಮಂಜುಳಾ ಧೈರ್ಯವನ್ನು ಮೆಚ್ಚಬೇಕಾಗಿದೆ.
-11/11/17

ಸೈಕೋ ಶಂಕ್ರ ಗಾನಲಹರಿ
ಘೋರ ಪಾತಕಿ ‘ಸೈಕೋ ಶಂಕ್ರ’ ಚಿತ್ರದ ಧ್ವನಿಸಾಂದ್ರಿಕೆಯು ವಿಭಿನ್ನ ರೀತಿಯಲ್ಲಿ ಅನಾವರಣಗೊಂಡಿತು. ಸಿಡಿ ಬಿಡುಗಡೆ ಮಾಡಿದ ಹಿರಿಯ ಪ್ರಚಾರಕರ್ತ ಸುದೀಂದ್ರವೆಂಕಟೇಶ್ ಮಾತನಾಡುತ್ತಾ ಮಂಗಳವಾರ ಉಪೇಂದ್ರ ಹೊಸ ಪಕ್ಷ ಸ್ಥಾಪನೆ ಮಾಡಿದ್ದಾರೆ.ಸಿಡಿ ಬಿಡುಗಡೆ ಮಾಡಿರುವುದರಿಂದ ಇಂದು ವಿಶೇಷ ದಿನವಾಗಿದೆ. ಟೈಟಲ್ ಕೇಳಿದಾಕ್ಷಣ ಮಾದ್ಯಮದ ಪ್ರಶ್ನಗಳಿಗೆ ಉತ್ತರ ನೀಡಲು ಸಿದ್ದರಾಗಿರಿ ಅಂತ ಮೊದಲ ಭೇಟಿಯಲ್ಲಿ ನಿರ್ದೇಶಕರಿಗೆ ಹೇಳಿದ್ದೆ ಎಂದರು. ಇದಕ್ಕೂ ಮುನ್ನ ಮಾತನಾಡಿದ ನಿರ್ದೇಶಕ ಪುನೀತ್‍ಆರ್ಯ ಐದು ಹಾಡುಗಳು ಚೆನ್ನಾಗಿ ಮೂಡಿಬಂದಿದೆ. ಯುಎ ಪ್ರಮಾಣಪತ್ರ ಬರುವುದಾಗಿ ನಂಬಿಕೆ ಇತ್ತು. ಆದರೆ ಸೆನ್ಸಾರ್‍ನವರು ಎ ನೀಡಿದ್ದಾರೆ. ಅಪರಾಧಿ ಹಿನ್ನಲೆಯ ಕತೆಯಾಗಿದ್ದರಿಂದ ಕ್ಯಾಚಿಯಾಗಿರಲೆಂದು ಇದನ್ನೆ ಇಡಲಾಗಿದೆ. ಚಿತ್ರದಲ್ಲಿ ರಕ್ತಪಾತವಿಲ್ಲ, ಅಶ್ಲೀಲ ದೃಶ್ಯಗಳು ಇರುವುದಿಲ್ಲ. ಸೈಕೋ ಶಂಕ್ರ ತಪ್ಪಿಸಿಕೊಂಡಾಗ ಇವನಿಂದ ಅನ್ಯಾಯಕ್ಕೆ ಒಳಗಾದವರ ಪರಿಸ್ಥತಿ, ಜನರ ಪ್ರತಿಕ್ರಿಯೆ ಹೇಗಿರುತ್ತೆ ಎಂಬುದನ್ನು ಐದು ಪಾತ್ರಗಳ ಸುತ್ತ ತೋರಿಸುವ ಪ್ರಯತ್ನ ಮಾಡಲಾಗಿದೆ. ಅತ್ಯಾಚಾರ, ಕೊಲೆ ದೃಶ್ಯಗಳು ಇರುವುದಿಲ್ಲ. ಸಂಭಾಷಣೆಗಳಲ್ಲಿ ಇವೆಲ್ಲವು ಬರಲಿದೆ ಎಂದಾಗ ಮಾಧ್ಯಮ ಕಡೆಯಿಂದ ಕೇಳಲಾದ ಪ್ರಶ್ನಗಳಿಗೆ ಸಮಂಜಸ ಉತ್ತರ ನೀಡಿದರು.

ಪ್ರಣವ್ ಅಣ್ಣನಾಗಿ, ಗೆಳಯನ ಪಾತ್ರದಲ್ಲ್ಲಿ ವಿಜಯ್‍ಚೆಂಡೂರು, ಗಾಯಕಿ ವೇದಶ್ರೀ ಕ್ರೈಮ್ ವರದಿಗಾರ್ತಿಯಾಗಿ ಕಾಣ ಸಿಕೊಂಡಿದ್ದೇನೆಂದು ಪರಿಚಯ ಮಾಡಿಕೊಂಡರು. ಶಂಕ್ರನಾಗಿ ಡೈಲಾಗ್ ಇಲ್ಲದೆ ಎಲ್ಲವನ್ನು ಅಭಿನಯದಲ್ಲೆ ಹೇಳುವುದು ಕಷ್ಟವಾಗಿತ್ತು. 120 ಅಡಿ ಆಳದಲ್ಲಿ ಸಾಹಸ ದೃಶ್ಯ ಚೆನ್ನಾಗಿ ಬಂದಿದೆ. ಬೇರೆ ಚಿತ್ರದೊಂದಿಗೆ ಸ್ಪರ್ಧೆ ಬೇಡವೆಂದು ಹೇಳಿಕೊಂಡಿದ್ದೆ. ಆದರೆ ಈಗಾಗಲೇ ನೂರು ಸಿನಿಮಾಗಳು ಬಿಡುಗಡೆ ಸಿದ್ದವಿರುವುದುದರಿಂದ ಇದಕ್ಕೆ ಕಾದರೆ ನಾವು ಐದು ತಿಂಗಳು ಮುಂದಕ್ಕೆ ಹೋಗಬೇಕಾಗುತ್ತದೆ. ನಿರ್ಮಾಪಕ ಪ್ರಭಾಕರ್ ಸರ್‍ಗೆ ತೊಂದರೆ ಆಗುವುದು ಬೇಡವೆಂದು ಮುಂದಿನವಾರ ಜನರಿಗೆ ತೋರಿಸಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ನವರಸನ್.
-03/11/17ಬೆಚ್ಚಿ ಬೀಳಿಸುವ ಸೈಕೋ ಶಂಕ್ರ
ದುರಳ ಕೆಲಸ ಮಾಡಿದವರ ಸಿನಿಮಾ ಮಾಡಿದಾಗ ಜನರು ಇಷ್ಟಪಡುತ್ತಾರೆ ಎಂಬುದಕ್ಕೆ ವೀರಪ್ಪನ್, ದಂಡುಪಾಳ್ಯ ಸಾಕ್ಷಿಯಾಗಿದೆ. ಅದರಂತೆ ಅತ್ಯಾಚಾರ, ಕೊಲೆ ಸುಲಿಗೆ ಮಾಡಿ ಇಂದು ಕಂಬಿ ಎಣ ಸುತ್ತಿರುವ ‘ಸೈಕೋ ಶಂಕ್ರ’ ಕುರಿತ ಅಡಿಬರಹದಲ್ಲಿ ಸ್ಟಿಲ್ ಅಲೈವ್ ಎಂದು ಹೇಳಿಕೊಂಡಿರುವ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. 2016ರಲ್ಲಿ ಜೈಲಿನಿಂದ ತಪ್ಪಿಸಿಕೊಂಡು ಕೆಲವೇ ದಿನಗಳ ಅಂತರದಲ್ಲಿ ಬಂದಿಯಾಗಿದ್ದ. ಸಿನಿಮಾದಲ್ಲಿ ಇವರ ಕತೆಯನ್ನು ತೆಗೆದುಕೊಳ್ಳದೆ, ಆತ ಹೂರಬಂದ ಸಂದರ್ಭದಲ್ಲಿ ಜನರ ಪ್ರತಿಕ್ರಿಯೆ ಹೇಗಿತ್ತು. ಅವರ ತಳಮಳ, ಕಾತುರ, ಮಾನಸಿಕ ಒತ್ತಡಗಳು ಇವೆಲ್ಲಾ ಘಟನೆಗಳನ್ನು ಬಳಸಿಕೊಳ್ಳಲಾಗಿದೆ. ಈತ ಮಾಡಬಾರದ್ದೆಲ್ಲವನ್ನು ಮಾಡಿ, ನೋಡುಗರ ಕೆಂಗಣ ್ಣಗೆ ಗುರಿಯಾಗಿದ್ದ. ಇದೆಲ್ಲಾ ಸತ್ಯ. ಆದರೆ ಇವನು ಆರ್ಭಟಿಸುವುದಿಲ್ಲ. ಮಾತನಾಡದೆ ಎಲ್ಲವನ್ನು ಕಣ್ಣೋಟದಿಂದಲೇ ಗಮನಿಸಿ ಅಪರಾಧಗಳನ್ನು ಮಾಡುತ್ತಿದ್ದನಂತೆ. ಅಂತಹ ಪಾತ್ರವನ್ನು ನವರಸನ್ ನಿರ್ವಹಿಸಿದ್ದಾರೆ. ಅವರು ಹೇಳುವಂತೆ ಮೊದಲ ಇಂತಹ ಪಾತ್ರಕ್ಕೆ ಕರೆ ಬಂದಾಗ ನೆಗಟೀವ್ ಶೇಡ್ ಇರುವುದಿಂದ ಚಿತ್ರದಲ್ಲಿ ತೊಡಗಿಕೊಳ್ಳಲು ಹಿಂಜರಿದಿದ್ದಾರೆ. ನಿರ್ದೇಶಕರು ನಿಮಗೆ ಡೈಲಾಗ್ ಇರುವುದಿಲ್ಲ, ಎಲ್ಲವನ್ನು ಕಣ ್ಣನಲ್ಲೆ ತೋರಿಸಬೇಕಾಗಿದೆ ಅಂತ ಮನವರಿಕೆ ಮಾಡಿದಂತೆ ನಟಿಸಿಲು ಒಪ್ಪಿಕೊಳ್ಳಲಾಯಿತು ಎನ್ನುತ್ತಾರೆ.

ಕತೆ ಬರೆದು ಚೊಚ್ಚಲ ಬಾರಿ ನಿರ್ದೇಶನ ಮಾಡಿರುವ ಆರ್. ಪುನೀತ್‍ಆರ್ಯ ಇವರಿಗೆ ಚಿತ್ರವನ್ನು ಮುಗಿಸಿರುವುದು ಚಾಲೆಂಜ್ ಆಗಿತ್ತು ಅಂತಾರೆ. ಪ್ರೇಮಿಗಳಾಗಿ ಯಶಸ್‍ಸೂರ್ಯ-ಕಿರುತೆರೆ ನಟಿ ಅಮೃತರಾಮಮೂರ್ತಿ, ರಗಡ್ ಪೋಲೀಸ್ ಅಧಿಕಾರಿಯಗಿ ಶರತ್‍ಲೋಹಿತಾಶ್ವ, ವಿಜಯ್‍ಚೆಂಡೂರು, ಜಿವಿ ಅಯ್ಯರ್ ಸಂಬಂದಿ ರಷಿಕಾ ಹಳ್ಳಿಹುಡುಗಿಯಾಗಿ ಕೊಳ್ಳೆಗಾಲ ಭಾಷೆಯಲ್ಲಿ ಮಾತನಾಡಿದ್ದಾರೆ. ಚಿತ್ರದಲ್ಲಿ ಮಾದಪ್ಪನ ಪಾತ್ರ ಹೈಲೈಟ್ ಆಗಿರುವುದರಿಂದ ಇವರಿಗಂತಲೇ ಟಪ್ಪಾಂಗುಚ್ಚಿ ಹಾಡನ್ನು ಸೃಷ್ಟಿಸಲಾಗಿದೆಯಂತೆ. ಮೈಸೂರು, ನಾಗಮಲೆ, ಕೊಳ್ಳೆಗಾಲ, ನಾಗಮಂಗಲ ಮುಂತಾದ ಕಡೆ ಚಿತ್ರೀಕರಣ ನಡೆಸಲಾಗಿದೆ. ನಾಲ್ಕು ಹಾಡುಗಳಿಗೆ ಶ್ರೀಧರ್ ಸಂಗೀತ, ರವಿಬಸ್ರೂರ್ ಹಿನ್ನಲೆ ಸಂಗೀತವನ್ನು ಒದಗಿಸಿದ್ದಾರೆ. ಸಂಕಲನ ವಿಶ್ವ, ಸಾಹಸ ಅಲ್ಟಿಮೇಟ್‍ಶಿವ ಅವರದಾಗಿದೆ. ಮೈಸೂರಿನ ರಾಜಕಾರಣ ಪ್ರಭಾಕರ್.ಎಸ್. ಮತ್ತು ಮಂಜುಳಾ.ಪಿ ಜಂಟಿಯಾಗಿ ನಿರ್ಮಾಣ ಮಾಡಿರುವ ಚಿತ್ರವು ನವಂಬರ್ ತಿಂಗಳಲ್ಲಿ ತೆರೆಕಾಣುವ ಸಾದ್ಯತೆ ಇದೆ.
-26/10/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore