HOME
CINEMA NEWS
GALLERY
TV NEWS
REVIEWS
CONTACT US
ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನೂತನ ಚಿತ್ರ ಆರಂಭ
ಬೆಳಗಾವಿ ಸಿಂಹದಮರಿ ಡಾ.ಶಿವರಾಜ್‍ಕುಮಾರ್ ಅಭಿಮಾನಿಗಳ ಸಂಘದವರಾದ ಮಲ್ಲೇಶ.ಬ.ಪೂಜಾರಿ ಮತ್ತು ಶೇಖರ.ನಾ.ಕಾಲೇರಿ ಇವರುಗಳು ವೃತ್ತಿಯಲ್ಲಿ ತರಕಾರಿ ಬೆಳೆಯುವವರು. ಚಿಕ್ಕಂದಿನಿಂದಲೂ ಶಿವರಾಜ್‍ಕುಮಾರ್ ಚಿತ್ರಗಳನ್ನು ನೋಡುತ್ತಲೆ ಅವರ ಕಟ್ಟಾ ಅಭಿಮಾನಿಯಾಗಿ, ಇಂದು ನಿರ್ಮಾಪಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಪ್ರೊಡಕ್ಷನ್ ನಂ.1ದಲ್ಲಿ ಚಿತ್ರಕ್ಕೆ ಕತೆ,ಚಿತ್ರಕತೆ, ಸಂಭಾಷಣೆ ಬರೆದು ಮೊದಲಬಾರಿ ನಿರ್ದೇಶಕರಾಗಿ ಚಂದೂರ ಮಾರುತಿ ಪರಿಚಯವಾಗುತ್ತಿದ್ದಾರೆ. ಇವರು ಸತತ ಏಳು ವರ್ಷಗಳ ಕಾಲ ಬಿ.ಸುರೇಶ್ ಬಳಿ ಸಹಾಯಕರಾಗಿ ದುಡಿದ ಅನುಭವವಿದೆ. ಇಬ್ಬರು ಒಂದೇ ಊರಿನವರಾಗಿರುವುದು ವಿಶೇಷ. ಕತೆಯಲ್ಲಿ ಸೇೀವೆಯಲ್ಲಿರುವ ತಹಸೀಲ್ದಾರ್ ಮಗ ಡಿಗ್ರಿ ವ್ಯಾಸಂಗ ಮಾಡುತ್ತಿದ್ದು, ಒಂದು ದಿನ ಅಪ್ಪನ ದುಡ್ಡನ್ನು ಕಳ್ಳತನ ಮಾಡಿ ಪಲಾಯನ ಮಾಡುತ್ತಾನೆ. ಯಾವ ಕಾರಣ, ಉದ್ದೇಶಕ್ಕೆ ಹಣ ತೆಗೆದುಕೊಂಡು ಹೋದ ಎಂಬುದನ್ನು ಸಿನಿಮಾದಲ್ಲಿ ತಿಳಿಯಬೇಕಂತೆ. ಇದಕ್ಕೆ ಕಮರ್ಷಿಯಲ್ ಅಂಶಗಳನ್ನು ಸೇರಿಸಿಕೊಂಡು ಒಳ್ಳೆ ಚಿತ್ರ ಮಾಡಲು ಯೋಜನೆ ಹಾಕಿಕೊಂಡಿದೆ.

ಮಗನ ಪಾತ್ರದಲ್ಲಿ ಅರುಣ್ ನಾಯಕನಾಗಿ ಎರಡನೆ ಚಿತ್ರ. ಬೆಂಗಳೂರಿನ ಚೈತ್ರ ನಾಯಕಿ. ಖಳನಾಯಕನಾಗಿ ಪ್ರಶಾಂತ್.ಜಿಕೆ. ಇವರೊಂದಿಗೆ ಮೈಕೋಮಂಜು, ಭವಾನಿಪ್ರಕಾಶ್, ಹರೀಶ್‍ನೀನಾಸಂ, ಮಾಲತಿಶ್ರೀಮೈಸೂರು ತಾರಬಳಗದಲ್ಲಿದ್ದಾರೆ. ಕಾರವಾರ, ಮೈಸೂರು, ಮಂಗಳೂರು, ಮಡಕೇರಿ, ಬೆಳಗಾಂ ಸುತ್ತಮುತ್ತ ಚಿತ್ರೀಕರಣ ನಡೆಸಲು ತಂಡವು ಸಿದ್ದತೆಗಳನ್ನು ಮಾಡಿಕೊಂಡಿದೆ. ಮಂಗಳೂರಿನ ಲಾಯ್ ವ್ಯಾಲೆಂಟನ್ ಸಂಗೀತದ ಐದು ಹಾಡುಗಳಿಗೆ ಡಾ..ನಾಗೇಂದ್ರಪ್ರಸಾದ್ ಮತ್ತು ಸತೀಶ್‍ಮಾಚೇನಹಳ್ಳಿ ಗೀತರಚನೆ ಮಾಡುತ್ತಿದ್ದಾರೆ. ಛಾಯಗ್ರಹಣ ಕೃಷ್ಣಮಂಡ್ಯಾ, ಸಂಕಲನ ಪ್ರಕಾಶ್ ಕಾರಿಂಜ್ ಅವರದಾಗಿದೆ. ರಾಚೆನಹಳ್ಳಿಯ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆದ ಮಹೂರ್ತ ಸಮಾರಂಭಕ್ಕೆ ಸೆಂಚುರಿ ಸ್ಟಾರ್ ಡಾ.ಶಿವರಾಜ್‍ಕುಮಾರ್ ಮೊದಲ ದೃಶ್ಯಕ್ಕೆ ಕ್ಲಾಪ್ ತಂಡಕ್ಕೆ ಶುಭ ಹಾರೈಸಿದರು.
ಸಿನಿ ಸರ್ಕಲ್.ಇನ್ ನ್ಯೂಸ್
11/05/18

For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore