HOME
CINEMA NEWS
GALLERY
TV NEWS
REVIEWS
CONTACT US
ಅಂತಿಮ ಹಂತದಲ್ಲಿ ಪ್ರಸೆಂಟ್ ಪ್ರಪಂಚಜೀರೋ ಪರ್ಸೆಂಟ್ ಲವ್
ವಿನೂತನ ಹೆಸರಿನ ‘ಪ್ರಸೆಂಟ್‍ಪ್ರಪಂಚಜೀರೋ ಪರ್ಸೆಂಟ್ ಲವ್’ ಚಿತ್ರದಕತೆಯು ಈಗಿನ ವಸ್ತುಸ್ಥಿತಿಗೆ ಹೋಲಿಸಿದರೆ ಕುಟುಂಬದ ಸಂಕೋಲೆಗಳು, ಟೆಕ್ಕಿಗಳ ಬದುಕಿನಲ್ಲಿ ಏನು ನಡೆಯುತ್ತಿದೆಎನ್ನುವುದನ್ನುಥ್ರಿಲ್ಲರ್, ಆಕ್ಷನ್,ರೋಮಾಂಟಿಕ್‍ಜಾನರ್‍ದಲ್ಲಿಹೇಳಲಾಗಿದೆ. ಕುಂಗುಫುಚಂದ್ರು ಸಾರಥ್ಯದಲ್ಲಿಅಂತಿಮ ಹಂತದ ಫೈಟ್‍ದೃಶ್ಯ ನಡೆಯುತ್ತಿದ್ದ ಸ್ಥಳಕ್ಕೆ ಮಾದ್ಯಮದವರು ಭೇಟಿ ನೀಡಿದಾಗತಂಡವುಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿತು. ಕುತೂಹಲದ ಅಂಶಗಳು ಇದ್ದರೂ, ಭಾವನೆಗಳ ದೃಶ್ಯಗಳು ಬಂದು, ಹಾಸ್ಯಕ್ಕೆ ವಾಲಿಕೊಂಡ ನಂತರಅರ್ಥಪೂರ್ಣಸಂದೇಶದೊಂದಿಗೆಕೊನೆಗೊಳ್ಳುತ್ತದೆ. ನಾವು ಊಹೆ ಮಾಡಿದ ಸನ್ನಿವೇಶಗಳು ಬರುತ್ತದೆಅಂದುಕೊಂಡರೆ, ಪರದೆ ಮೇಲೆ ಬೇರೆಯದೆರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ.ಟೆಕ್ಕಿ ದಂಪತಿಗಳ ಬದುಕಿನಲ್ಲಿಏನೇನೆಲ್ಲಾ ನಡೆಯುತ್ತೆ. ಅದು ಪ್ರಸಕ್ತ ಸನ್ನಿವೇಶಕ್ಕೆ ಹೇಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ಹೇಳುವುದೇ ಒನ್ ಲೈನ್ ಸ್ಟೋರಿಯಾಗಿದೆ.ಮೊದಲಭಾಗದಲ್ಲಿ ಮದುವೆಯಾದ ಪತಿ-ಪತ್ನಿ, ಎರಡನೆ ಭಾಗದಲ್ಲಿ ಪ್ರೇಮಿಗಳಾಗಿರುವುದು.ಇಂತಹಗೊಂದಲ ಸೃಷ್ಟಿಸುವ ಸಲುವಾಗಿ ವಿನೂತನಚಿತ್ರಕತೆರಚಿಸಲಾಗಿದೆಯಂತೆ. ಶೇಕಡ ನೂರರಷ್ಟು ಪ್ರೀತಿಯನ್ನುಜೀವನದಲ್ಲಿ ಉಳಿಸಿಕೊಳ್ಳಿ. ಇಂದಿನ ಪ್ರಪಂಚವುಯಾವರೀತಿಇರುತ್ತದೆಂದು, ಅಂತಿಮವಾಗಿ ಭಾರತೀಯ ಸಂಸ್ಕ್ರತಿಯನ್ನುತೋರಿಸವ ಪ್ರಯತ್ನ ಮಾಡಲಾಗಿದೆ.

‘ಸಂಯುಕ್ತ-2’ ನಿರ್ದೇಶನಮಾಡಿರುವಅಭಿರಾಮ್‍ರಚನೆ,ಆಕ್ಷನ್‍ಕಟ್ ಹೇಳಿದ್ದಾರೆ. ಇದೇಚಿತ್ರ ನಿರ್ಮಾಣ ಮಾಡಿದ್ದಅರ್ಜುನ್‍ಮಂಜುನಾಥ್‍ರಿಗೆನಾಯಕನ ಸ್ಥಾನವನ್ನು ಕಲ್ಪಿಸಿ ಋಣ ತೀರಿಸಿಕೊಂಡಿದ್ದಾರೆ.ಲವರ್‍ಬಾಯ್, ಸಂಸಾರಸ್ಥ ಹೀಗೆ ಎರಡು ಶೇಡ್‍ಇರುವಕಾರಣದೇಹವನ್ನುಅದೇ ಶೇಪಿಗೆ ಮಾಡಿಕೊಂಡಿರುವುದುಇವರ ಶ್ರದ್ದೆತೋರಿಸುತ್ತದೆ.ಅದರಂತೆ ನಾಯಕಿ ಸಂಭ್ರಮಶ್ರೀಗೂ ಇದೇಅನುಭವಆಗಿದೆ.ಉಪನಾಯಕಿ ಹುಬ್ಬಳ್ಳಿಯ ಮಾಡಲ್‍ಅಕ್ಷರ, ರಂಗಭೂಮಿಯಯಶಸ್‍ಅಭಿಇಬ್ಬರಿಗೂ ಹೊಸ ಅವಕಾಶ. ಉಳಿದಂತೆ ವಕೀಲರಾಗಿಎಸ್.ನಾರಾಯಣ್, ನಗಿಸಲು ನಿರ್ದೇಶಕರಾಗಿಓಂಪ್ರಕಾಶ್‍ರಾವ್, ಗೋವಿಂದೇಗೌಡ ನಟಿಸಿದ್ದಾರೆ. ವಿಶೇಷವಾಗಿ ಕೆಮಿಸ್ಟ್ರಿ ಆಫ್‍ಕರಿಯಪ್ಪತಂಡದತಬಲನಾಣಿ, ಅಪೂರ್ವ, ಚಂದನ್, ಸಂಜನಾ ಇವರುಗಳಿಂದಲೇ ಸನ್ನಿವೇಶಕ್ಕೆ ನ್ಯಾಯಸಲ್ಲಿಸುತ್ತಾ ಸುಖಾಂತ್ಯತರಿಸುತ್ತಾರೆ, ಇವರ ಭಾಗವನ್ನು ನಾಲ್ಕು ದಿನಗಳ ಕಾಲ ಸೆರೆ ಹಿಡಿಯಲಾಗಿದೆ.ಡಾ.ನಾಗೇಂದ್ರಪ್ರಸಾದ್ ಸಾಹಿತ್ಯದಎರಡು ಗೀತೆಗಳಿಗೆ ಕೆ.ವಿ.ರವಿಚಂದ್ರ ಸಂಗೀತ ಒದಗಿಸಿದ್ದಾರೆ. ಈವೆಂಟ್ ನಡೆಸುತ್ತಿರುವಕೃಷ್ಣಮೂರ್ತಿ.ಎಲ್ ಮತ್ತು ರವಿಕುಮಾರ್.ಹೆಚ್.ಪಿ ಜಂಟಿಯಾಗಿ ಬಂಡವಾಳ ಹೂಡುತ್ತಿದ್ದು, ದೇವರಾಜ್.ಜಿ ಸಹ ನಿರ್ಮಾಪಕರಾಗಿದ್ದಾರೆ. ಜೀರೋಪರ್ಸೆಂಟ್ ಲವ್ ಇದೆಯಾಇಲ್ಲವಾ? ಅಂತತೋರಿಸಲುಚಿತ್ರವನ್ನುಪ್ರೇಮಿಗಳ ದಿನದಂದು ಬಿಡುಗಡೆ ಮಾಡಲುಯೋಜನೆ ರೂಪಿಸಿಕೊಂಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
7/01/20

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore