HOME
CINEMA NEWS
GALLERY
TV NEWS
REVIEWS
CONTACT US
ಬದುಕಿನ ಸಾರ ತಿಳಿಸುವ ಪ್ರೀಮಿಯರ್ ಪದ್ಮಿನಿ
ಕಿರುತೆರೆ ಸ್ಟಾರ್ ನಿರ್ದೇಶಕ ರಮೇಶ್‍ಇಂದಿರಾ ‘ಪ್ರೀಮಿಯರ್ ಪದ್ಮಿನಿ’ ಚಿತ್ರಕ್ಕೆ ಕತೆ,ಚಿತ್ರಕತೆ,ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಿನಿಮಾದ ಕುರಿತು ಹೇಳುವುದಾದರೆ ಸಂಬಂದಗಳ ಮೇಲೆ ಬದುಕು ಸಾಗಲಿದ್ದು, ಎಲ್ಲರದು ಬೇರೆ ಬೇರೆ ದಾರಿಯಲ್ಲಿ ಇರುತ್ತದೆ. ಜೀವನವನ್ನು ಹಗುರವಾಗಿ ತೆಗೆದುಕೊಳ್ಳಬೇಕು. ಕಥನಾಯಕನ ಬಳಿ ಪ್ರೀಮಿಯರ್ ಪದ್ಮಿನಿ ಕಾರು ಇರುತ್ತದೆ. ಸೆಂಟಿಮೆಂಟ್ ಸಲುವಾಗಿ ಹೊಸ ಕಾರನ್ನು ಖರೀದಿಸದೆ ಅದರಲ್ಲೇ ಜೀವನ ಸಾಗಿಸುತ್ತಿರುತ್ತಾನೆ. ಮಧ್ಯಮ ವರ್ಗ, ಶ್ರಮಿಕ ಹಾಗೂ ಪ್ರಸಕ್ತ ಯುವ ಜನತೆಯ ಅಂಶಗಳನ್ನು ತೆಗೆದುಕೊಳ್ಳಲಾಗಿದೆ. ಬೆಂಗಳೂರು, ಮೈಸೂರು, ಚಿಕ್ಕಮಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ.

ಎಲ್ಲಾ ಇದ್ದರೂ ಏನು ಇಲ್ಲದಂತೆ ಕೊರಗುತ್ತಾ ಇರುವುದು. ಅದೆಲ್ಲಾವನ್ನು ಬದಿಗಿಟ್ಟು ಇರುವುದರಲ್ಲೆ ಸುಖ ಕಂಡುಕೊಂಡರೆ, ಬಾಳು ಬಂಗಾರವಾಗಿರುತ್ತದೆ. ಮದ್ಯಮ ವಯಸ್ಸು, ಸಂಗಾತಿ ಇರುವುದಿಲ್ಲ. ಕನಸಿನಲ್ಲಿ ಬಂದು ಹೋಗಿರುತ್ತಾಳೆ. ಮುಂದೆ ಚಾಲಕ ಬಂದಾಗ ಆತನ ಮಾರ್ಗದರ್ಶನ, ನಂಬಿಕೆಯಿಂದ ನೆಮ್ಮದಿಯಾಗಿ ಇರುವ ಪಾತ್ರದಲ್ಲಿ ಜಗ್ಗೇಶ್ ನಟನೆ ಇದೆ. ಅನುಭವ ಇಲ್ಲದ ನಿರ್ದೇಶಕರುಗಳ ಚಿತ್ರದಲ್ಲಿ ನಟಿಸಿದ್ದರಿಂದ ಇತರೆ ಜವಬ್ದಾರಿಗಳನ್ನು ಹೊತ್ತುಕೊಂಡಿದ್ದರಿಂದ ವೈಯಕ್ತಿವಾಗಿ ಬೇಸರವಾಗಿದೆ. ಅದಕ್ಕಾಗಿ ಬಂದ ಅವಕಾಶಗಳನ್ನು ನಯವಾಗಿ ತಿರಸ್ಕರಿಸ ಬೇಕಾಯಿತು. ಆಧರೆ ನಿರ್ದೇಶಕರು ಹೇಳಿದ ಕತೆ, ಒಳ್ಳೆ ಸಂಸ್ಥೆ ಇರುವ ಕಾರಣ ಅಭಿನಯಕ್ಕೆ ಹೆಚ್ಚು ಒತ್ತು ಕೊಡಬಹುದೆಂದು ನಟಿಸಲು ಒಪ್ಪಿಕೊಳ್ಳಲಾಯಿತು ಎಂದು ಜಗ್ಗೇಶ್ ಹೇಳಿದ್ದಾರೆ. ಜೋಡಿಯಾಗಿ ಮಧುಬಾಲ ಅಭಿನಯಿಸುತ್ತಿದ್ದಾರೆ. ನರೆಯ ಮನೆಯಲ್ಲಿ ವಾಸ ಮಾಡುವ ಸುಧಾರಾಣಿ, ಚಾಲಕನಾಗಿ ಗೀತಾ ಬ್ಯಾಂಗಲ್ಸ್ ಸ್ಟೋರ್ಸ್ ನಾಯಕ ಪ್ರಮೋದ್, ಅದರಂತೆ ಈಗಿನ ಕಾಲದ ಹುಡುಗಿಯರು ಭಾವನೆಗಳನ್ನು ಹೇಳಿಕೊಳ್ಳದೆ ಚಡಿಪಡಿಸುವ ಪಾತ್ರದಲ್ಲಿ ಹಿತಾಚಂದ್ರಶೇಖರ್ ಮತ್ತು ಜಹಾಂಗೀರ್ ಮುಂತಾದವರ ತಾರಬಳಗ ಸೇರ್ಪಡೆಯಾಗಿದೆ.

ಪ್ರತಿ ದೃಶ್ಯಗಳು ನೋಡುಗರಿಗೆ ಅವರದೇ ರೀತಿಯಲ್ಲಿ ಸಂದೇಶ ಇರುವಂತೆ ಭಾಸವಾಗುತ್ತದಂತೆ. ಸಂಗೀತ ಅರ್ಜುನ್‍ಜನ್ಯಾ, ಛಾಯಗ್ರಹಣ ಅದ್ವೈತಗುರುಮೂರ್ತಿ ಅವರದಾಗಿದೆ. ಅದ್ದೂರಿ ಧಾರವಾಹಿಗಳ ನಿರ್ಮಾಪಕಿ ಶೃತಿನಾಯ್ಡು ನಿರ್ಮಾಪಕಿಯಾಗಿ ಗಾಂದಿನಗರದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಬಸವ ಜಯಂತಿ ದಿನದಂದು ದೊಡ್ಡ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ತಂಡವು ಮಹೂರ್ತವನ್ನು ಆಚರಿಸಿಕೊಂಡಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
-ಸಿನಿಸರ್ಕಲ್.ಇನ್ ವಿಮರ್ಶೆ
-18/04/18
ಪ್ರೀಮಿಯರ್ ಪದ್ಮಿನಿ ಮಾಲೀಕ ಜಗ್ಗೇಶ್
ನವರಸ ನಾಯಕ ಜಗ್ಗೇಶ್ ‘ಪ್ರೀಮಿಯರ್ ಪದ್ಮಿನಿ’ ಕಾರಿಗೆ ಮಾಲೀಕರಾಗಿದ್ದಾರೆ. ಅಂದರೆ ಅವರು ಇದೇ ಹೆಸರಿನ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಫ್ಯಾಮಿಲಿ ಡ್ರಾಮಾ, ಪ್ರೀತಿ ಜೊತೆಗೆ ಭಾವನೆಗಳು ತುಂಬಿರುವ ಕತೆಯಾಗಿದೆ. ಹೆಚ್ಚಾಗಿ ಪ್ರಚಲಿತ ವಾಸ್ತವತೆಯ ಅಂಶಗಳು ಮತ್ತು ಯುವಕರಿಗೆ ಹೇಳಿ ಮಾಡಿಸಿದ ಸಿನಿಮಾವಾಗಲಿದೆಯಂತೆ. ಮಾತಿನ ಮಲ್ಲ ಇದ್ದಾರೆಂದ ಮೇಲೆ ಅಲ್ಲಿ ಹಾಸ್ಯಕ್ಕೆ ಕೊರತೆ ಇರುವುದಿಲ್ಲ. ಹಾಗಂತ ಪೂರ್ಣ ಚಿತ್ರ ಇದರ ಸುತ್ತ ಇರದೆ, ಮನರಂಜನೆ ಮತ್ತು ಅರ್ಥಪೂರ್ಣ ಸಂದೇಶ ಇರಲಿದೆ. ಹಲವು ಯಶಸ್ವಿ ಧಾರವಾಹಿಗಳಿಗೆ ಕತೆ ಬರೆದು ನಿರ್ದೇಶನ ಮಾಡಿರುವ ರಮೇಶ್‍ಚಂದ್ರ ಚಿತ್ರಕ್ಕೆ ಕತೆ,ಚಿತ್ರಕತೆ, ಸಂಭಾಷಣೆ ಮತ್ತು ನಿರ್ದೇಶನದ ಜವಬ್ದಾರಿಯನ್ನು ಹೊತ್ತು ಕೊಂಡಿದ್ದಾರೆ. ಕಿರುತೆರೆ ಸ್ಟಾರ್ ನಿರ್ಮಾಪಕಿ ಶ್ರುತಿನಾಯ್ಡು ಆಕ್ಷನ್ ಕಟ್ ಹೇಳುವ ಸಿನಿಮಾಗೆ ಹಿರಿತೆರೆಗೆ ನಿರ್ಮಾಪಕಿಯಾಗಿ ಪರಿಚಯವಾಗುತ್ತಿದ್ದಾರೆ. ರನ್ನ, ಸೀತರಾಮ ಕಲ್ಯಾಣದ ನಂತರ ಮಧುಬಾಲ ಅವರು ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಗೀತಾ ಬ್ಯಾಂಗಲ್ಸ್ ಸ್ಟೋರ್‍ನಲ್ಲಿ ನಾಯಕನಾಗಿದ್ದ ಪ್ರಮೋದ್, ಇವರೊಂದಿಗೆ ಸಿಹಿಕಹಿ ಗೀತಾ, ಸುಧರಾಣಿ ಮುಂತಾದವರ ಅಭಿನಯವಿದೆ. ಸಂಗೀತ ಅರ್ಜುನ್‍ಜನ್ಯಾ, ಛಾಯಗ್ರಹಣ ಅದ್ವೈತ ಅವರದಾಗಿದೆ. ಬೆಂಗಳೂರು, ಮೈಸೂರು ಸೇರಿದಂತೆ ಹಲವು ಕಡೆ 40 ದಿನಗಳ ಕಾಲ ಚಿತ್ರೀಕರಣ ನಡೆಸಲು ತಂಡವು ಯೋಜನೆ ಹಾಕಿಕೊಂಡಿದೆ. ಪ್ರಚಾರದ ಸಲುವಾಗಿ ಅಬ್ಬಾಯಿನಾಯ್ಡು ಸ್ಟುಡಿಯೋದಲ್ಲಿ ಛಾಯಗ್ರಾಹಕ ಮಹೇಂದ್ರಸಿಂಹ ಸಾರಥ್ಯದಲ್ಲಿ ಫೋಟೋ ಶೂಟ್ ನಡೆಯಿತು. ಬಸವ ಜಯಂತಿ ದಿನದಂದು ಮಹೂರ್ತ ನಡೆಯಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
16/04/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore