HOME
CINEMA NEWS
GALLERY
TV NEWS
REVIEWS
CONTACT US
ಪ್ರೇಮಯುದ್ದಂ ಹಾಡುಗಳ ಸಮಯ
‘ಪ್ರೇಮಯುದ್ದಂ’ಚಿತ್ರದಲ್ಲಿಗ್ರಾಮೀಣ ಸೊಗಡು, ಮಾತಿನ ಭಾಗದ ದೃಶ್ಯಗಳಲ್ಲಿ ಆಂಗ್ಲ ಭಾಷೆ ಮತ್ತು ಮೊಬೈಲ್ ಬಳಸದಿರುವುದು ವಿಶೇಷ. ಕನ್ನಡಿಗರು ನಮ್ಮ ಸಿನಿಮಾವನ್ನು ನೋಡುತ್ತಾರೆ.ಬೇರೆ ಭಾಷೆಯವರು ವೀಕ್ಷಿಸಲಿ ಎನ್ನುವಕಾರಣಕ್ಕೆಇದೇ ಶೀರ್ಷಿಕೆ ಇಡಲಾಗಿದ್ದರೂ, ಇದು ಸಂಸ್ಕ್ರತ ಪದವೆಂದುನಾಲ್ಕು ಹಾಡುಗಳಿಗೆ ಸಾಹಿತ್ಯ ಮತ್ತು ಸಂಗೀತ ಒದಗಿಸಿರುವ ಕಾರ್ತಿಕ್‍ವೆಂಕಟೇಶ್ ಸಮಂಜಸಉತ್ತರಕೊಡುತ್ತಾರೆ.ಒಮ್ಮೆ ನಿರ್ದೇಶಕ, ನಿರ್ಮಾಪಕರು ಸಿನಿಮಾ ಮಾಡುವ ಸಲುವಾಗಿ ಲೋಕೇಶನ್ ನೋಡಲುಪ್ರಯಾಣ ಬೆಳೆಸಿದ್ದಾರೆ. ದಾರಿಯಲ್ಲಿಕಾರುದೇವಸ್ಥಾನ ಬಳಿ ಕೆಟ್ಟು ನಿಂತುಕೊಳ್ಳುತ್ತದೆ. ಆ ಸಮಯಲ್ಲಿಔಪಚಾರಿಕವಾಗಿ ಮಾತನಾಡುವಾಗಅಲ್ಲಿನ ಪರಿಸರಕಂಡಿದ್ದೇಕತೆ ಹುಟ್ಟಿಕೊಂಡು, ಬಿಡುಗಡೆ ಹಂತದವರೆಗೂತಂದು ನಿಲ್ಲಿಸಿದೆಯಂತೆ.ಹಳ್ಳಿ ಹಿನ್ನಲೆಯ ಶುದ್ದಪ್ರೀತಿಕತೆಯಲ್ಲಿಪ್ರೇಮಿಗಳು ಕೇವಲ ಕಣ್ಣಲ್ಲೇ ಪ್ರೀತಿಯ ಭಾವನೆಗಳನ್ನು ತೋರಿಸುತ್ತಾರೆ.ಕನಸಿನಲ್ಲೂ ಹಾಡನ್ನುತುರುಕಿಲ್ಲ. ಕನ್ನಡ ಭಾಷೆ, ಸಂಸ್ಕ್ರತಿಯನ್ನುಹೇಳಲಾಗಿದೆ.

ಅನಿಲ್ ಹಳ್ಳಿ ಹುಡುಗನಾಗಿ ಅನಿಲ್ ನಾಯಕ.ಕಿರುತೆರೆಯ ಪಲ್ಲವಿ ನಾಯಕಿ.ಇವರೊಂದಿಗೆ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ.ರಚನೆ-ಚಿತ್ರಕತೆ-ಸಂಭಾಷಣೆ ಮತ್ತು ನಿರ್ದೇಶನ ಶ್ರೀಮಂಜು ನಿರ್ವಹಿಸಿದ್ದಾರೆ. ಮಂಡ್ಯಾ, ಪಾಂಡವಪುರ, ಕನಕನಮಾರುಡಿ ಹಾಗೂ ಬ್ಯಾಡರಹಳ್ಳಿಯ ಸುಂದರ ವಾತವರಣದಲ್ಲಿಚಿತ್ರೀಕರಣ ನಡೆಸಲಾಗಿದೆ. ಗುರುಮೂರ್ತಿ ಸಿನಿಮಾ ಕೃಷಿಗೆ ಬಂಡವಾಳ ಹೂಡಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಸಿರಿ ಮ್ಯೂಸಿಕ್ ಸಂಸ್ಥೆಯು ಹೊರತಂದಿರುವ ಹಾಡುಗಳನ್ನು ನಟಿಸ್ಪರ್ಶಾರೇಖಾ ಅನಾವರಣಗೊಳಿಸಿ ಸಿನಿಮಾವು ಯಶಸ್ವಿಯಾಗಲೆಂದು ಹೇಳಿದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
7/01/20For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore