HOME
CINEMA NEWS
GALLERY
TV NEWS
REVIEWS
CONTACT US
ಪ್ರೇಕ್ಷಕರಿಗೆ ಹಿಟ್, ನಿರ್ಮಾಪಕರ ಪಾಲಿಗೆ ಸೂಪರ್‍ಹಿಟ್
ನಟನಾಗಿ 151 ಚಿತ್ರಗಳಲ್ಲಿ ನಟಿಸಿದ್ದರೂ ಈ ಸಿನಿಮಾ ಹೃದಯಕ್ಕೆ ಹತ್ತಿರವಾಗಿದೆ ಎಂದು ಅರ್ಜುನ್‍ಸರ್ಜಾ ನಿಟ್ಟಿಸಿರು ಬಿಟ್ಟರು. ಅವರು ‘ಪ್ರೇಮ ಬರಹ’ ಚಿತ್ರದ ಸಂತೋಷಕೂಟದಲ್ಲಿ ಮಾತನಾಡುತ್ತಾ ಜನರು ಚಿತ್ರವನ್ನು ಹಿಟ್ ಮಾಡಿದ್ದಾರೆ. ನನ್ನ ಪಾಲಿಗೆ ಸೂಪರ್ ಹಿಟ್ ಆಗಿದೆ. ಪ್ರೀತಿಯ ಕತೆ ಇರಬಹುದಾ ಎಂಬ ಗೊಂದಲದಲ್ಲಿದ್ದ ಜನರು ಮೂರನೇ ದಿವಸಕ್ಕೆ ಇದೊಂದು ದೇಶಭಕ್ತಿ ಜೊತೆಗೆ ಮೃಧುವಾದ ಲವ್ ಇರಲಿದೆ ಅಂತ ಗೊತ್ತಾಗಿದೆ. ಮಗಳನ್ನು ಕನ್ನಡದ ಜನರು ನಟಿಯಾಗಿ ಸ್ವೀಕರಿಸಿದ್ದಾರೆ. ಇದರ ಯಶಸ್ಸಿಗೆ ಕಾರಣರಾದವರು ಕಲಾವಿದರು, ತಂತ್ರಜ್ಘರು ಎಲ್ಲದಕ್ಕಿಂತ ಹೆಚ್ಚಾಗಿ ಮಾದ್ಯದವರು. ನೀವುಗಳು ಬರೆದ ಉತ್ತಮ ಲೇಖನದಿಂದ ಜನರು ನೋಡುವಂತಾಯಿತು. ಕ್ಯಾಮರಮನ್ ವೇಣುರವರು ಇದಕ್ಕೆ ಅಂತಲೇ ಒಂದೂವರೆ ವರ್ಷ ಸಮಯವನ್ನು ಮೀಸಲಿಟ್ಟಿದ್ದರು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಚಿತ್ರೀಕರಣ ನಡೆಸಲಾಗಿದೆ. ಕೆಲವು ಕಡೆ ಸಹಜ ಬೆಳಕಿನಲ್ಲಿ ಸೆರೆಹಿಡಿರುವುದು ಛಾಲೆಂಜ್ ಆಗಿತ್ತು. ವಿರಾಮದ ನಂತರ ಬರುವ ಸನ್ನಿವೇಶಗಳಿಗೆ ಸಾಧುಕೋಕಿಲ ಹಿನ್ನಲೆ ಸಂಗೀತವು ಮೆರುಗು ತಂದಿದೆ. ಇದಕ್ಕೂ ಮುನ್ನ ಮೂರು ಜನರಿಂದ ಸಂಗೀತ ಮಾಡಿಸಲಾಗಿತ್ತು. ಸಮಧಾನವಾಗದೆ ಸಾಧುರವರಿಂದ ಕೆಲಸ ತೆಗೆದುಕೊಂಡಿದ್ದು ತೃಪ್ತಿ ತಂದಿದೆ. ದೇಶಪ್ರೇಮಿಯಾಗಿ ಸಣ್ಣ ಪಾತ್ರದಲ್ಲಿ ನಟಿಸಿರುವ ಅಶೋಕ್‍ಮಂದಣ್ಣ ನಟನೆಯನ್ನು ಮೆಚ್ಚಿಕೊಂಡಿದ್ದಾರೆ ಎಂದು ಹೇಳುತ್ತಾ ಹೋದರು ನಿರ್ದೇಶಕ, ನಿರ್ಮಾಪಕ ಅರ್ಜುನ್‍ಸರ್ಜಾ.

ಅಭಿನಯಿಸಿದ ಚಿತ್ರಗಳಲ್ಲಿ ನನಗೆ ಜೀವ ತುಂಬಿದ ಸಿನಿಮಾವೆಂದು ಬಣ ್ಣಸಿಕೊಂಡ ನಾಯಕ ಚಂದನ್‍ಕುಮಾರ್, ನಿರ್ದೇಶಕರು ಪ್ರತಿ ದೃಶ್ಯವನ್ನು ರಿಹ್ರಸಲ್, ಟೆಸ್ಟ್ ಮಾಡಿಸಿಲ್ಲದೆ ತಾವೇ ನಟಿಸಿ ತೋರಿಸುತ್ತಿದ್ದರು. ನಾಯಕಿ ಸನ್ನಿವೇಶದಲ್ಲಿ ನಮ್ಮಲ್ಲರನ್ನು ತಿಂದು ಹಾಕಿದ್ದಾರೆ. ಕೆಲವು ದೃಶ್ಯಗಳು ಕಣ್ಣುಗಳನ್ನು ಒದ್ದೆ ಮಾಡಿಸುತ್ತವೆ ಎಂದರು.

ಏನು ಹೇಳಬೇಕೆಂದು ತಿಳಿಯುತ್ತಿಲ್ಲ. ಮೊದಲ ಚಿತ್ರಕ್ಕೆ ಮಾದ್ಯದವರು ಈ ರೀತಿಯಲ್ಲಿ ಪ್ರೋತ್ಸಾಹ ನೀಡಿದ್ದಕ್ಕೆ ಥ್ಯಾಂಕ್ಸ್. ದರ್ಶನ್ ಸರ್ ಕಾಣ ಸಿಕೊಂಡಿದ್ದು ಪ್ಲಸ್ ಪಾಯಿಂಟ್ ಆಯಿತು. ಸಂಗೀತ, ರಿರೆರ್ಕಾಡಿಂಗ್ ಬೇರೆ ಜಾನರ್‍ನಿಂದ ಕೂಡಿಬಂದಿರುವುದು ಒಳ್ಳೇದು ಆಗಿದೆ ಅಂತ ಮತ್ತೋಮ್ಮೆ ಥ್ಯಾಂಕ್ಸ್ ಎಂದು ಹೇಳಿದರು ನಾಯಕಿ ಐಶ್ವರ್ಯಅರ್ಜುನ್.

ಮೊದಲವಾರದ ಗಳಿಗೆ ಚೆನ್ನಾಗಿದೆ. ಮುಂದೆ ಇದೇ ರೀತಿ ಆದಲ್ಲಿ ಬಂಡವಾಳ ವಾಪಸ್ಸು ಬರುತ್ತದೆ ಅಂತ ನಂಬಿಕೆ ಇದೆ ಎನ್ನತ್ತಾರೆ ತೂಗದೀಪ ವಿತರಣೆ ಸಂಸ್ಥೆಯ ಮಲ್ಲಿಕಾರ್ಜುನ್.
ನಟ ಅಶೋಕ್‍ಮಂದಣ್ಣ, ಡಿಜಿಟಲ್ ಪ್ರಚಾರಕರ್ತ ಮನು ಉಪಸ್ತಿತರಿದ್ದರು.
ಚಿತ್ರಗಳು; ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
-18/02/18
ಲಿಫ್ಟ್ ಬಳಸದೆ ಮಟ್ಟಿಲು ಹತ್ತಿದ್ದಕ್ಕೆ ಯಶಸ್ಸು ಬಂತು –ಅರ್ಜುನ್‍ಸರ್ಜಾ
150 ಚಿತ್ರಗಳ ಪಯಣ ನೆನಸಿಕೊಂಡರೆ ಹಿತವೆನಿಸುತ್ತದೆ. ಯಶಸ್ಸಿಗಾಗಿ ಲಿಫ್ಟ್ ಏರದೆ ಪ್ರತಿಯೊಂದು ಮೆಟ್ಟಿಲುಗಳನ್ನು ಹತ್ತುವಾಗ ಜಾರಿ, ಬಿದ್ದು, ಗಾಯಮಾಡಿಕೊಂಡಿದ್ದಕ್ಕೆ ಈ ಹಂತದವರೆಗೆ ಬರಲಾಗಿದೆ ಎಂದು ಮಾದ್ಯಮದವರ ಮೊದಲ ಪ್ರಶ್ನಗೆ ಉತ್ತರವಾದರು ಅರ್ಜುನ್ ಸರ್ಜಾ. ಗೆದ್ದಾಗ ಹಿಗ್ಗದೆ, ಬಿದ್ದಾಗ ಕುಗ್ಗದೆ ಎಲ್ಲವನ್ನು ಸರಿಸಮನಾಗಿ ನೋಡಿದ್ದೇನೆ. ಈಗಲೂ ಎಲ್ಲಾ ಭಾಷೆಗಳಿಂದ ಬೇಡಿಕೆ ಇದೆ. ಹಿಂದಿಯಲ್ಲಿ ನಟಿಸಲು ಕರೆ ಬಂದಿದೆ. ಸದ್ಯ ಪ್ರೇಮಬರಹದಲ್ಲಿ ಬ್ಯುಸಿ ಇರುವ ಕಾರಣ ಯಾವುದಕ್ಕೂ ಗಮನ ನೀಡಿರಲಿಲ್ಲ. ಚಿತ್ರವು ಬಿಡುಗಡೆಯಾಗಿದ್ದರಿಂದ ಇನ್ನು ಮುಂದೆ ಚಿತ್ರಗಳ ಬಗ್ಗೆ ಆಸಕ್ತಿ ತೋರಿಸಬೇಕಾಗಿದೆ ಎಂದು ಸಣ್ಣ ನಗು ಚೆಲ್ಲಿದರು. ಸುದೀಪ್ ಮಗಳ ನಟನೆಯನ್ನು ಪ್ರಶಂಸಿದ್ದಾರೆ. ಪ್ರಾರಂಭದಲ್ಲಿ ಮಗಳು ನಟನೆ ಮಾಡುತ್ತಾಳಾ ಎಂದು ಭಾವಿಸಲಾಗಿತ್ತು. ಆಕೆಯು ದೃಶ್ಯದಲ್ಲಿ ತೋರಿಸುತ್ತಿದ್ದ ಹಾವಭಾವವನ್ನು ನೋಡಿದಾಗ ನಿಜವಾಗಿಯೂ ಆಸಕ್ತಿ ಇದೆ ಎಂದು ತಿಳಿದುಬಂತು. ಅಭಿನಯ ಎನ್ನುವುದು ರಕ್ತದಲ್ಲಿ ಬಂದಿರುವುದರಿಂದ ಸುಲಭವಾಗಿದೆ. ನನ್ನ ಕರ್ತವ್ಯ ಎನ್ನುವಂತೆ ಚಿತ್ರರಂಗಕ್ಕೆ ಪರಿಚಯಿಸಲಾಗಿದೆ. ಮುಂದಿನದು ಅವಳಿಗೆ ಬಿಟ್ಟದ್ದು.

ನಂತರ ವಿಮರ್ಶೆ ಬಗ್ಗೆ ವಿಷಯ ತಂದಾಗ ಅವರು ಹೇಳಿದ್ದು ಈ ರೀತಿ: ಚಿತ್ರವನ್ನು ನೋಡಿದ ಮಾದ್ಯಮದವರು ಅಂಕಗಳನ್ನು ನೀಡಬಹುದಿತ್ತು. ಅದರಬದಲು ರೇಟಿಂಗ್ ಕೊಟ್ಟಿದ್ದು ಆ ಸಮಯಕ್ಕೆ ಬೇಸರತರಿಸದ್ದು ಉಂಟು. ಇದೆಲ್ಲಾ ಈಗ ಮಾತನಾಡುವುದು ಬೇಡ. ನಾನೇನು ಡಬ್ಬಲ್ ಮೀನಿಂಗ್, ಅಶ್ಲೀಲ ದೃಶ್ಯಗಳ ಸಿನಿಮಾ ಮಾಡಿಲ್ಲ. ಪ್ರೀತಿ ಕತೆ ಜೊತೆಗೆ ದೇಶಭಕ್ತಿ ಚಿತ್ರ ಮಾಡಿದ್ದೇನೆ. ದೇಶನ ಕಾಯೋನು ಯೋಧ, ಅಂತವರ ಮನೆ ಯಾವ ಸ್ಥಿತಿಯಲ್ಲಿರುತ್ತದೆ ಎಂಬುದನ್ನು ತೋರಿಸಿದ್ದೇನೆ. ನಮ್ಮ ಶ್ರಮ ಮತ್ತು ಶ್ರದ್ದೆ ಇದ್ದರೆ ಅದು ನಮ್ಮನ್ನು ಮುಂದಕ್ಕೆ ಕರೆದುಕೊಂಡು ಹೋಗುತ್ತದೆ ಅಂತ ನಂಬಿದ್ದೇನೆ. ಚೆನ್ನೈನಲ್ಲಿ ಬಿಡುಗಡೆ ಮಾಡಿದಾಗ ಅದು ಡಬ್ಬಿಂಗ್ ಎಂದು ಭಾವಿಸಿದ್ದಾರೆ. ಇಲ್ಲಿಯವರೆಗಿನ 15 ನಿರ್ದೇಶನದ ಚಿತ್ರಗಳಲ್ಲಿ ಇದು ಮನಸ್ಸಿಗೆ ಹಿಡಿಸಿದೆ ಅಂತಾರೆ.
ಚಿತ್ರಗಳು; ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
-18/02/18

ಪ್ರೇಮ ಮತ್ತು ಯುದ್ದ
1999ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಕಾರ್ಗಿಲ್ ಯುದ್ದ ನಡೆದು ಭಾರತ ಗೆಲುವು ಕಂಡಿತ್ತು. ಕಾರ್ಗಿಲ್ ಹೇಗೆ ನಡೆಯಿತು ಎಂಬುದನ್ನು ‘’ಪ್ರೇಮ ಬರಹ’’ ಚಿತ್ರದಲ್ಲಿ ನೋಡಬಹುದು. ಹಾಗಂತ ಚಿತ್ರದಲ್ಲಿ ಯುದ್ದ ಅಲ್ಲದೆ ನವೀರಾದ ಪ್ರೀತಿ ಕತೆಯು ಅದೇ ವರ್ಷದಲ್ಲಿ ನಡೆದಂತೆ ತೋರಿಸಲಾಗಿದೆ. ಸಂಜಯ್ (ಚಂದನ್) ಮತ್ತು ಮಧು(ಐಶ್ವರ್ಯ ಅರ್ಜುನ್) ಇಬ್ಬರು ಪ್ರತ್ಯೇಕ ವಾಹಿನಿಗಳಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿರುತ್ತಾರೆ. ಕಾರ್ಗಿಲ್ ಯುದ್ದವನ್ನು ನೇರವಾಗಿ ಸೆರೆ ಹಿಡಿದು ಪ್ರಸಾರ ಮಾಡಲು ಇಬ್ಬರಿಗೂ ಕೆಲಸ ನೀಡಿದಂತೆ ಅಲ್ಲಿಗೆ ಪ್ರಯಾಣ ಬೆಳೆಸುತ್ತಾರೆ. ದಾರಿಯಲ್ಲಿ ಸಂಜಯ್ ಕ್ಯಾಮಾರಾ ಹಾಳದಾಗ ಈಕೆಯ ಕ್ಯಾಮಾರದಲ್ಲಿ ಸೆರೆಹಿಡಿಯವಾಗ ನಿರೂಪಕಿ, ಆಕೆ ಕೈಯಲ್ಲಿ ಕ್ಯಾಮಾರ ಇದ್ದಾಗ ಇವನು ನಿರೂಪಕನಾಗಿ ಸುದ್ದಿಗಳನ್ನು ಹೇಳುತ್ತಿರುತ್ತಾನೆ. ಇದರ ಮಧ್ಯೆ ವಿರೋಧಿಗಳು ಜನರನ್ನು ಸದೆಬಡಿಯುವಾಗ ನಾಯಕ ರಕ್ಷಿಸುವುದು, ಸೈನಿಕನಿಗೆ ಗುಂಡು ತಗುಲಿ ಪ್ರಾಣ ಬಿಡುವುದು. ಮಾಜಿ ಸೈನಿಕನ ಉಪಕತೆಗಳು ಎಲ್ಲವು ಬಂದು ಹೋಗುತ್ತವೆ. ಇದಾದ ನಂತರ ಇಬ್ಬರ ಮದ್ಯೆ ವೈಮನಸ್ಸು ದೂರವಾಗಿ ಅಂತರಾಳದಲ್ಲಿ ಪ್ರೀತಿ ಹುಟ್ಟಿಕೊಳ್ಳುತ್ತದೆ. ವಾಪಸ್ಸು ಬರುವ ವೇಳೆಗೆ ಒಬ್ಬರನ್ನು ಬಿಟ್ಟು ಒಬ್ಬರು ಇರಬಾರದ ಪರಿಸ್ಥಿತಿಯಲ್ಲಿ ಮಧುಗೆ ನಿಶ್ಚಿತಾರ್ಥವಾದರೂ ಮದುವೆ ಇಷ್ಟವಿರುವುದಿಲ್ಲ. ಮುಂದೇನು ಎನ್ನುವುದು ಚಿತ್ರ ನೋಡಿದರೆ ಗೊತ್ತಾಗಲಿದೆ.

ಚಂದನ್‍ಕುಮಾರ್ ಚಿತ್ರದಲ್ಲಿ ಚೆನ್ನಾಗಿ ಕಾಣ ಸಲಿದ್ದು, ಫೈಟ್‍ನಲ್ಲಿ ಮಿಂಚಿದ್ದಾರೆ. ಅಲ್ಲದೆ ಮೂರು ಭಾಷೆಗಳಲ್ಲಿ ಕಾಣ ಸಿಕೊಂಡಿರುವುದರಿಂದ ನಟನೆ, ಫಿಸಿಕ್ ಇವರಿಗೆ ಭವಿಷ್ಯ ರೂಪಿಸಲು ಸಿನಿಮಾವು ಸಹಾಯವಾಗಲಿದೆ ಎನ್ನಬಹುದು. ಐಶ್ವರ್ಯಅರ್ಜುನ್ ಮೊದಲ ಚಿತ್ರದಲ್ಲೆ ಅದ್ಬುತವಾಗಿ ಲೀಲಾಜಾಲ ನಟನೆ ನೀಡಿದ್ದಾರೆ. ಅವಿನಾಶ್, ರಂಗಾಯಣರಘು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಾಧುಕೋಕಿಲ, ಜಹಾಂಗೀರ್, ಕುರಿಪ್ರತಾಪ್ ಸನ್ನಿವೇಶಗಳು ಪ್ರಾರಂಭದಲ್ಲಿ ನಗಿಸಿ ಮಾಯವಾಗುತ್ತಾರೆ. ಒಂದು ದೃಶ್ಯದಲ್ಲಿ ಅಶೋಕ್‍ಖೇಣ ಬಂದು ಹೋಗುತ್ತಾರೆ. ಪ್ರಕಾಶ್‍ರೈ ಪುಟ್ಟ ಪಾತ್ರವಾದರೂ ಪ್ರೇಕಕ್ಷರನ್ನು ಅಳಿಸುತ್ತಾರೆ. ಆಂಜನೇಯ ಹಾಡಿಗೆ ದರ್ಶನ್, ಅರ್ಜುನ್‍ಸರ್ಜಾ, ಚಿರಂಜೀವಿಸರ್ಜಾ,ಧ್ರುವಸರ್ಜಾ ಹೆಜ್ಜೆ ಹಾಕಿರುವುದು ಪ್ಲಸ್ ಪಾಯಿಂಟ್ ಆಗಿದೆ. ಜೆಸ್ಸಿಗಿಫ್ಟ್ ಸಂಗೀತದಲ್ಲಿ ಪ್ರೇಮಬರಹ ಹಾಡು ರಿಪೀಟ್ ಆಗಿದ್ದು, ಮಾಯೆ ಗೀತೆ ಮೆಲುಕು ಹಾಕುವಂತಿದೆ. ಕತೆ,ಚಿತ್ರಕತೆ, ಸಂಭಾóóóಷಣೆ, ನಿರ್ದೇಶನ ನಿರ್ಮಾಣ ಮಾಡಿರುವ ಅರ್ಜುನ್‍ಸರ್ಜಾ ಶ್ರಮ ಪ್ರತಿ ಚಿತ್ರದಲ್ಲಿ ಕಾಣಸಿಗುತ್ತದೆ,. ಸುಂದರತಾಣಗಳಿಗೆ ವೇಣು ಸgಹಿಡಿದಿರುವಂತೆ ಅದಕ್ಕೆ ಪೂರಕವಾಗಿ ಸಾಧುಕೋಕಿಲ ಹಿನ್ನಲೆ ಸಂಗೀತ ಇದೆ. ಉತ್ತಮ ಚಿತ್ರವನ್ನು ದಿನಕರ್‍ತೂಗದೀಪ, ಮಲ್ಲಿಕಾರ್ಜುನ್ ಮುಖಾಂತರ ಬಿಡಗುಡೆಯಾಗಿರುವುದು ಮತ್ತೋಂದು ಪ್ಲಸ್ಸ್ ಪಾಯಿಂಟ್. ಭಾರತೀಯನಾದವನು ಕಾರ್ಗಿಲ್ ನೋಡುವ ಆಸೆ ಇದ್ದಲ್ಲಿ ಪ್ರೇಮಬರಹ ವೀಕ್ಷಿಸಬಹುದು.
ಸಿನಿ ಸರ್ಕಲ್. ಇನ್ ವಿಮರ್ಶೆ
-9/02/18


ಫೆಬ್ರವರಿ 9ರಂದು ಪ್ರೇಮ ಬರಹ
ಅರ್ಜುನ್‍ಸರ್ಜಾ ನಿರ್ದೇಶನ ಹಾಗೂ ನಿರ್ಮಾಣದ ‘ಪ್ರೇಮ ಬರಹ’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯಾವುದೇ ದೃಶ್ಯಗಳಿಗೆ ಕತ್ತರಿ ಹಾಕದೆ ಯು ಪ್ರಮಾಣ ಪತ್ರ ನೀಡಿದೆ. ಕತೆ,ಚಿತ್ರಕತೆ, ಸಂಭಾಷಣೆ ಬರೆದಿರುವ ನಿರ್ದೇಶಕರು ಪುತ್ರಿ ಐಶ್ವರ್ಯಅರ್ಜುನ್ ಅವರನ್ನು ಮೊದಲಬಾರಿ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ನಾಯಕನಾಗಿ ಬಿಗ್‍ಬಾಸ್ ಖ್ಯಾತಿಯ ಚಂದನ್‍ಕುಮಾರ್ ನಟನೆ ಇದೆ. ಸಿನಿಮಾದ ಬಗ್ಗೆ ಇಲ್ಲಿಯವರೆಗೂ ಸಾರಾಂಶವನ್ನು ತಿಳಿಸದೆ ಜನರಲ್ಲಿ ಕುತೂಹಲ ಮೂಡಿಸಿರುವುದು ವಿಶೇಷವಾಗಿದೆ. ಜೆಸ್ಸಿ ಗಿಫ್ಟ್ ಸಂಗೀತದಲ್ಲಿ ಚಂದನ್‍ಶೆಟ್ಟಿ ಹಾಡಿರುವ ಗೀತೆ ಸೇರಿದಂತೆ ಮೂರು ಹಾಡುಗಳು ಮತ್ತು ವಿಜಯನರಸಿಂಹ ವಿರಚಿತ ಆಂಜನೇಯ ಗೀತೆ ಹಿಟ್ ಆಗಿರುವುದು ಪ್ಲಸ್ ಪಾಯಿಂಟ್ ಆಗಿದೆ. ಸ್ವಿಟ್ಜರ್‍ಲ್ಯಾಂಡ್, ಇಟಲಿ, ಬಾಂಬೆ, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಪ್ರತಾಪ್ ಚಿತ್ರದಲ್ಲಿ ಬರುವ ಹಂಸಲೇಖಾ ಸಂಗೀತ ಸಂಯೋಜಿಸಿ, ರಚಿಸಿರುವ ಪ್ರೇಮಬರಹ ಕೋಟಿ ತರಹ ಗೀತೆಯ ಪದವನ್ನು ಶೀರ್ಷಿಕೆಯನ್ನಾಗಿ ಬಳಸಲಾಗಿದೆ.
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-18/01/18
ಬಿಡುಗಡೆಗೊಂಡ ಪ್ರೇಮಬರಹ ಗೀತೆಗಳು
ಪ್ರತಾಪ್ ಚಿತ್ರದಲ್ಲಿ ‘ಪ್ರೇಮಬರಹ’ ಗೀತೆಯು ಹಿಟ್ ಆಗಿತ್ತು. ಈಗ ಅದೇ ಹೆಸರಿನ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಪ್ರಚಾರದ ಸಲುವಾಗಿ ಎರಡನೆ ಬಾರಿ ಆಡಿಯೋ ಬಿಡುಗಡೆ ನೆಪಮಾಡಿಕೊಂಡು ತಂಡವು ಮಾದ್ಯಮದವರನ್ನು ಭೇಟಿ ಮಾಡಿತು. ಕತೆ,ಚಿತ್ರಕತೆ, ನಿರ್ದೇಶನ, ನಿರ್ಮಾಣ ಮಾಡಿರುವ ಅರ್ಜುನ್‍ಸರ್ಜಾ ಮಾತನಾಡಿ ಒಳ್ಳೆ ಚಿತ್ರ ನೀಡಬೇಕು ಎನ್ನುವ ಹಂಬಲ ಇರುವ ಕಾರಣ ತಾಮಸ,ಭಯ ಇತ್ತು. ಅಲ್ಲದೆ ಮಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿರುವ ಕಾರಣ ಹೆಚ್ಚಿನ ಜವಬ್ದಾರಿ ಇದೆ. ಮಹೂರ್ತಕ್ಕೆ ಪಾರ್ವತಮ್ಮ ರಾಜ್‍ಕುಮಾರ್ ಆಗಮಿಸಿದ್ದು ಅದೇ ಕೊನೆಯಾಗಿದ್ದು, ಇಂದು ಅವರಿಲ್ಲದಿರುವುದು ವಿಷಾದವಾಗಿದೆ. ಭಕ್ತಿ ಹಾಡಿಗೆ ದರ್ಶನ್ ಹೆಜ್ಜೆ ಹಾಕಿದ್ದು ವಿಶೇಷವಾಗಿದೆ. ಹೆಚ್.ಸಿ.ವೇಣು ಸುಂದರ ತಾಣಗಳನ್ನು ಚೆನ್ನಾಗಿ ತೋರಿಸಿದ್ದಾರೆ. ವಿಜಯನರಸಿಂಹ ವಿರಚಿತ ಆಂಜನೇಯ ಗೀತೆ ಮತ್ತು ಪ್ರತಾಪ್ ಚಿತ್ರಕ್ಕೆ ಹಂಸಲೇಖಾ ರಚಿಸಿ, ಸಂಯೋಜಿಸಿದ ಹಾಡನ್ನು ಬಳಸಲಾಗಿದೆ. ಸ್ವಿಟ್ಜರ್‍ಲ್ಯಾಂಡ್, ಇಟಲಿ, ಬಾಂಬೆ,ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂಬುದರ ಮಾಹಿತಿ ಬಿಚ್ಚಿಟ್ಟರು.

ಟೈಟಲ್ ಅದ್ಬುತವಾಗಿದೆ. ಶೀರ್ಷಿಕೆ ಗೀತೆಯ ಹಕ್ಕನ್ನು ಉಚಿತವಾಗಿ ನೀಡಲಾಗಿದೆ. ಇಲ್ಲಿ ದುಡ್ಡು ಬರುವುದಿಲ್ಲ. ಅದಕ್ಕಿಂತ ಪ್ರೀತಿ ಮುಖ್ಯ. ಲಹರಿ ಸಂಸ್ಥೆ ಪ್ರಶಸ್ತಿ ಪಡೆದ ನಂತರ ಮೊದಲ ಆಡಿಯೋ ಹಕ್ಕುಗಳನ್ನು ತೆಗೆದುಕೊಂಡಿದ್ದು ಇದೇ ಸಿನಿಮಾ ಅಂತ ವಿಷಯವನ್ನು ಹೊರಹಾಕಿದರು ಲಹರಿವೇಲು. ಜೆಸ್ಸಿಗಿಫ್ಟ್‍ಗೆ ಆಧಾರ್, ರೇಶನ್‍ಕಾರ್ಡ್ ಸಿಕ್ಕಿರುವುದರಿಂದ ನಮ್ಮೆವರೆ ಆಗಿದ್ದಾರೆ. ಚಿತ್ರವನ್ನು ಹಲವು ಶಕ್ತಿಗಳ ಸಂಗಮ ಎನ್ನಬಹುದು. ಅರ್ಜುನ್ ಸರ್ ನಾನು ಕ್ಲಾಸ್‍ಮೆಟ್ ಆಗಿದ್ದವು. ಕಾಲೇಜಿನಿಂದಲೂ ಅವರ ನಡೆ, ನುಡಿ ಈಗಿನಂತಲೇ ಇತ್ತು. ಹತ್ತು ವರ್ಷಕ್ಕೆ ಒಬ್ಬರು ನಟರು ಬರುತ್ತಿರುವಂತೆ ಚಂದನ್ ಬಂದಿದ್ದಾರೆ. ಅರ್ಜುನ್ ಎ ಪಾಸಿಟೀವ್, ಮಗಳು ಭಾರತದ ನಟಿಯಾಗಲಿ ಎಂಬುದು ರಂಗಾಯಣರಘು ಮಾತು.

ಸಣ್ಣ ಪಾತ್ರದಲ್ಲಿ ನಟನೆ, ಹಿನ್ನಲೆ ಸಂಗೀತ ಕೆಲಸ ಮಾಡಿದ್ದು ಖುಷಿ ನೀಡಿದೆ. ಇದಕ್ಕಿಂತಲೂ ಮೂವರಿಂದ ಆರ್‍ಆರ್, ಒಂದು ಹಾಡನ್ನು ಆರು ಗಾಯಕರಿಂದ ಹಾಡಿಸಿ, ಕೊನೆಗೆ ತನಗೆ ತೃಪ್ತಿ ಇರುವವರಿಂದ ಕೆಲಸ ಮಾಡಿಸಿದ್ದಾರೆಂದು ತಿಳಿದಿದೆ. ನಿರ್ದೇಶಕರು ಪ್ರತಿ ಚಿತ್ರದಲ್ಲಿ ದೇಶಪ್ರೇಮವನ್ನು ತೋರಿಸುತ್ತಾ ಬಂದಿದ್ದಾರೆ. ಅವರು ಖಡಕ್ ಇದ್ದಂತೆ ಸೆಟ್‍ನಲ್ಲಿ ಹಾಗೆಯೇ ಇರುತ್ತಾರೆ. ಮಗಳಿಗೆ ಸಿನಿಮಾ ಬಗ್ಗೆ ಅಪಾರವಾದ ಗೌರವವಿದೆ. ಉತ್ತಮ ನಟಿಯಾಗುವ ಲಕ್ಷಣಗಳು ಕಾಣಿಸುತ್ತವೆ. ಆಕೆಯ ಅಭಿನಯವನ್ನು ಶ್ರೀದೇವಿಗೆ ಹೋಲಿಸಬಹುದು. ಚಂದನ್ ಒಂದು ಎತ್ತರಕ್ಕೆ ನಿಲ್ಲುತ್ತಾರೆ ಎಂದು ಹೇಳಿದರು ಸಾಧುಕೋಕಿಲ.

ಇದೊಂದು ಪುಟ್ಟ ಆತ್ಮೀಯ ಸಮಾರಂಭ ಎನ್ನಬಹುದು. ಎಲ್ಲರ ಬರಹ ಬರೆಯುವವನು ವಿಧಾತ ಅಂದರೆ ಬ್ರಹ್ಮ. ಮೊಮ್ಮಗಳ ಭವಿಷ್ಯದ ಬರಹವನ್ನು ಈ ಸಿನಿಮಾದಲ್ಲಿ ಬರೆದು ಕಳುಹಿಸಿದ್ದಾನೆ. ಅರ್ಜುನ್ ಕಲಾವಿದರಾಗಿ ಆಯಾಮಾ ಸೃಷ್ಟಿ ಮಾಡುತ್ತಾ ತಮಿಳಿನಲ್ಲಿ ದಾಪುಗಾಲು ಆಗಿ ಬೆಳೆದಿರೋ ರೀತಿ ಸಾಧನೆಯಾಗಿದೆ. ದೈವಭಕ್ತಿ-ರಾಷ್ಟ್ರಭಕ್ತಿ ಎರಡನ್ನು ಸಮನಾಗಿ ಚಿತ್ರದಲ್ಲಿ ಅಳವಡಿಸುತ್ತಾರೆ. ಆಕೆಯ ಭವಿಷ್ಯ ಪ್ರಾಪ್ರವಾಗಲಿ, ಅರ್ಜುನ್ ತ್ರಿವಿಕ್ರಮನಾಗಿ ಮತ್ತಷ್ಟು ತಾರಕಕ್ಕೆ ಏರಲಿ. ಇದಕ್ಕೆ ಭಗವಂತ, ಜನರ ಆರ್ಶಿವಾದ ಇದೆ ಅಂತ ಮಾತಿಗೆ ವಿರಾಮ ಹಾಕಿದರು ಹಿರಿಯ ನಟ ರಾಜೇಶ್.
ನಾನು ಆಯ್ಕೆಯಾಗುವ ಮುನ್ನ ಮೂರು ನಾಯಕ ನಟರನ್ನು ನೋಡಿದ್ದಾರೆ ಅಂತ ತಿಳಿದ ಮೇಲೆ ಅವಕಾಶ ಸಿಕ್ಕಿದ್ದು ಪುಣ್ಯ ಎನ್ನಬಹುದು. ಸಣ್ಣ ದಾರಿಯಲ್ಲಿ ಹೋಗುತ್ತಿದ್ದ ನನಗೆ ಹೆದ್ದಾರಿಯನ್ನು ತೋರಿಸಿದ್ದಾರೆ. ಎತ್ತರಕ್ಕೆ ಹೋಗುವ ಪಾತ್ರ ನೀಡಿದ್ದಾರೆ ಎಂದಷ್ಟೇ ಹೇಳಿಕೊಂಡಿದ್ದು ನಾಯಕ ಚಂದನ್‍ಕುಮಾರ್.

ಒಂದು ಕಡೆ ಖುಷಿ, ಭಾವನೆಗಳು ತುಂಬಿಕೊಂಡಿದೆ ಎಂದು ಹೇಳಿದ ನಾಯಕಿ ಐಶ್ವರ್ಯಅರ್ಜುನ್, ಮುಂದುವರೆಸುತ್ತಾ ಅರ್ಜುನ್ ನನಗೆ ತಂದೆಯಲ್ಲ ಗುರು. ದೇವರಿಗೆ ಇಂತಹ ತಂದೆ ನೀಡಿದ್ದಕ್ಕೆ ಥ್ಯಾಂಕ್ಸ್ ಹೇಳುತ್ತೇನೆ. ಎಲ್ಲಾ ವಿಧದಲ್ಲಿ ಅವರು ದಿ ಬೆಸ್ಟ್. ಕಲಾವಿದೆಯಾಗಬಹುದು ಅಂತ ನನಗಿಂತಲೂ ಅವರಿಗೆ ನಂಬಿಕೆ ಇತ್ತು. ಹಿರಿಯ ಕಲಾವಿದರ ಜೊತೆ ತೆರೆ ಹಂಚಿಕೊಂಡಿದ್ದು ಮರೆಯಲಾಗದ ಅನುಭವ ಎಂದರು.

ಸಂಗೀತ ನಿರ್ದೇಶಕ ಜೆಸ್ಸಿಗಿಫ್ಟ್, ಭರ್ಜರಿ ಖ್ಯಾತಿ ಧ್ರುವಸರ್ಜಾ ಚುಟುಕು ಮಾತನಾಡಿದರು. ನಂತರ ಟ್ರೈಲರ್ ಹಾಗು ಶೀರ್ಷಿಕೆ ಹಾಡನ್ನು ತೋರಿಸಲಾಯಿತು. ಜನವರಿ ತಿಂಗಳಲ್ಲಿ ಚಿತ್ರವು ಬಿಡುಗಡೆಯಾಗುವ ಸಾದ್ಯತೆ ಇದೆ.
-18/12/17ಮಾರುತಿರಾಯನಿಗೆ ಜೈ ಅಂದ ಸ್ಟಾರ್ ಕಲಾವಿದರು
ಚಿತ್ರನಗರಿಯಲ್ಲಿ ಆಂಜನೇಯ ದೇವರನ್ನು ಆರಾಧಿಸುವವರು ಹೆಚ್ಚು ಇದ್ದಾರೆ. ಕಳೆದ ವರ್ಷ ಹರ್ಷ ನಿರ್ದೇಶನದ ವಜ್ರಕಾಯ ಚಿತ್ರದಲ್ಲಿ ಸ್ವಾಮಿಯ ಕುರಿತ ಗೀತೆಗೆ ರವಿಚಂದ್ರನ್, ಶಿವರಾಜ್‍ಕುಮಾರ್ ಸೇರಿದಂತೆ ಟಾಲಿವುಡ್‍ನ ರವಿತೇಜ ಮತ್ತು ಕಾಲಿವುಡ್‍ನ ವಿವೇಕ್ ಹೆಜ್ಜೆ ಹಾಕಿದ್ದರು. ಈಗ ಅಂತಹುದೆ ಹಾಡು ‘’ಪ್ರೇಮ ಬರಹ’ ಸಿನಿಮಾದ ಹಾಢಿಗೆ ದರ್ಶನ್ ಡ್ಯಾನ್ಸ್ ಮಾಡಿದ್ದು ವಿಶೇಷವಾಗಿತ್ತು. ಇವರೊಂದಿಗೆ ಚಿರಂಜೀವಿಸರ್ಜಾ, ಧ್ರುವಾಸರ್ಜಾ ಸಿನಿಮಾದ ನಾಯಕ ಚಂದನ್ ಮತ್ತು ನಾಯಕಿ ಐಶ್ವರ್ಯ ಕುಣ ದಿದ್ದಾರೆ. ಎಲ್ಲರು ಹನುಮನ ಭಕ್ತರಾಗಿ ಕಾಣ ಸಿಕೊಂಡು ಕೇಸರಿ ವಸ್ತ್ರ ಧರಿಸಿ ಕುಣ ದು ಕುಪ್ಪಳಿಸಿದ್ದಾರೆ. ಚೂಚ್ಚಲಬಾರಿ ದರ್ಶನ್ ಅರ್ಜುನ್‍ಸರ್ಜಾ ಕುಟುಂಬದೊಂದಿಗೆ ಪಾಲ್ಗೋಂಡಿದ್ದು ಅಭಿಮಾಗನಿಗಳಿಗೆ ಖುಷಿ ನೀಡಿದೆ. ಮತ್ತೋಂದು ವಿಶೇಷ ಎಂದರೆ ಗತಕಾಲದ ಸಾಹಿತಿ ವಿಜಯನರಸಿಂಹ ಬರೆದ ಹಾಡಿಗೆ ಜೆಸ್ಸಿಗಿಫ್ಟ್ ಸಂಗೀತ ಸಂಯೋಜನೆಯಲ್ಲಿ ಗಾಯಕ ಡಾ.ಬಾಲಸುಬ್ರಮಣ ಯನ್ ಧ್ವನಿಯಾಗಿದ್ದಾರೆ.

ಅರ್ಜುನ್‍ಸರ್ಜಾ ಪುತ್ರಿ ಐಶ್ವರ್ಯ ಸಲುವಾಗಿ ನಿರ್ಮಾಣ,ನಿರ್ದೇಶನ ಮಾಡುತ್ತಿದ್ದು, ಇಡೀ ಕುಟುಂಬವೇ ಆಂಜನೇಯನಿಗೆ ಭಕ್ತರಾಗಿದ್ದಾರೆ. ಮೋಹನ್ ನೃತ್ಯ ಸಂಯೋಜನೆಯಲ್ಲಿ ತಿಪ್ಪಸಂದ್ರ ಬಳಿ ಇರುವ ಆಚಿಜನೇಯ ಸ್ವಾಮಿ ದೇವಸ್ತಾದ ಎದುರು ಚಿತ್ರೀಕರಣ ನಡೆಸಿದೆ.

-8/12/17
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore