HOME
CINEMA NEWS
GALLERY
TV NEWS
REVIEWS
CONTACT US

ಹೊಸ ಪ್ರಚಂಡ ಪುಟಾಣಿಗಳು
1981ರಲ್ಲಿ ಗೀತಪ್ರಿಯಾ ನಿರ್ದೇಶನದ ‘ಪ್ರಚಂಡ ಪುಟಾಣಿಗಳು’ ಮಕ್ಕಳ ಚಿತ್ರದಲ್ಲಿ ಮಾಸ್ಟರ್‍ರಾಮಕೃಷ್ಣಹೆಗಡೆ, ಭಾನುಪ್ರಕಾಶ್ ಮತ್ತು ಬೇಬಿ ಇಂದಿರಾಇವರೊಂದಿಗೆಸುಂದರಕೃಷ್ಣಅರಸ್, ಟೈಗರ್‍ಪ್ರಭಾಕರ್‍ನಟಿಸಿದ್ದು, ಅಂದು ಸೂಪರ್ ಹಿಟ್‍ಆಗಿತ್ತು. ಈಗ ಅದೇ ಹೆಸರಿನಲ್ಲಿ ಸಿನಿಮಾವೊಂದು ಸೆಟ್ಟೇರುತ್ತಿದೆ.ಬನಹಳ್ಳಿಯ ಸರ್ಕಾರಿ ಶಾಲೆಯವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಸÀವದತ್ತಿ, ಗೋಕಾಕ್‍ಕಡೆಗೆ ಪ್ರವಾಸಕ್ಕೆಂದು ಹೊರಡುತ್ತಾರೆ.ಆಕಸ್ಮಿಕವಾಗಿ ನಿಧಿಕಳ್ಳರ ಗುಂಪಿಗೆ ಸಿಕ್ಕಿಹಾಕಿಕೊಳ್ಳುತ್ತಾರೆ.ನಿಧಿಗಾಗಿ ಬಲಿ ಕೊಡಲೆತ್ನಿಸುವಅವರ ಗುಂಪಿನಿಂದ ಮಕ್ಕಳು ಹೇಗೆ ಪಾರಾಗಿ ಬರುತ್ತಾರೆಂಬದುಒಂದು ಏಳೆಯ ಸಾರಾಂಶವಾಗಿದೆ.

ಅವಿನಾಶ್ ಪ್ರಧಾನ ಪಾತ್ರ, ಚಿಣ್ಣರುಗಳಾದ ಭರಮೇಶ್, ಮನೀಶ್, ನೇಹ, ಹಿರಿಯ ಕಲಾವಿದರುಗಳಾದ ಬ್ಯಾಂಕ್‍ಜನಾರ್ದನ್, ಬಲರಾಂ, ಪಾಂಚಾಲ್.ಕಾವ್ಯ ಪ್ರಕಾಶ್ ಮುಂತಾದವರುಅಭಿನಯಿಸುತ್ತಿದ್ದಾರೆ. ರಾಜೀವ್‍ಕೃಷ್ಣ ರಚನೆ,ಚಿತ್ರಕಥೆ,ಸಂಭಾಷಣೆಮತ್ತು ನಿರ್ದೇಶನವಿದೆ. ಆರ್.ಪ್ರಮೋದ್‍ಛಾಯಾಗ್ರಹಣ, ಸುರೇಶ್‍ಕಂಬಳಿ ಸಾಹಿತ್ಯದ ಗೀತೆಗಳಿಗೆ ವಿನುಮನಸು ಸಂಗೀತ ಸಂಯೋಜಿಸುತ್ತಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ, ಹರಿಹರ ಹಾಗು ಸವದತ್ತಿಯಲ್ಲಿಚಿತ್ರೀಕರಣ ನಡೆಯಲಿದೆ. ಶ್ರೀಮತಿ.ವಿ.ಸುನಿತ ಹಾಗು ಶ್ರೀ ಎನ್.ರಘುಸಹಕಾರದಲ್ಲಿ ಡಿ ಅಂಡ್ ಡಿ ಫಿಲಂ ಪ್ರೊಡಕ್ಷನ್‍ಬ್ಯಾನರ್‍ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾವು ಬೇಸಿಗೆ ರಜಾದಿನದಲ್ಲಿತೆರೆಗೆ ಬರುವ ಸಾದ್ಯತೆಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
19/03/20

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore