HOME
CINEMA NEWS
GALLERY
TV NEWS
REVIEWS
CONTACT US
ಪ್ರೇಮಕಥೆಗೆ ದಾರುಣ ಅಂತ್ಯ
ಉದ್ಯಮಿ ಕೆ.ಸಿ.ಶಿವಾನಂದ್ ಅವರ ನಿರ್ಮಾಣದ ಪರ್ಚಂಡಿ ಈ ವಾರ ತೆರೆಕಂಡಿದೆ. ಅದು ಮೈಸೂರು ಗ್ರಾಮಾಂತರ ಭಾಗದಲ್ಲಿ ಬರುವ ಅತ್ಯಂತ ಹಿಂದುಳಿದ ಒಂದು ಗ್ರಾಮ. ಆ ಊರಿನಲ್ಲಿ ಒಬ್ಬ ಬಲಶಾಲಿ ಯುವಕ, ಆತನ ಹೆಸರು ಅಮಾಸೆ,(ಮಹೇಶ್ ದೇವು) ಆತ ಅಮವಾಸ್ಯೆಯೆ ದಿನ ಹುಟ್ಟಿದ ಕಾರಣದಿಂದ ಆತನಿಗೆ ಆ ಹೆಸರು ಬಂದಿರುತ್ತೆ. ಆ ಊರಿನ ಪಂಚಾಯ್ತಿ ಮುಖ್ಯಸ್ಥನ ಮಗಳು ಲಕ್ಷ್ಮಿ(ಕಲ್ಪನಾ). ನೋಡಲು ಸುಂದರಳಾದ ಹುಡುಗಿ. ಅಮಾಸ ಮಹಾ ಬಲಿಷ್ಠವಂತ, ಹತ್ತು ಜನ ಜಟ್ಟಿಗಳು ಎದುರು ಬಂದರೂ ಒಂದೇ ಏಟಿಗೆ ಹೊಡೆದುರುಳಿಸುವಂಥ ಬಲಶಾಲಿ. ಯಾರಾದರೂ ರಕ್ಷಣೆ ಕೇಳಿ ಬಂದರೆ ಪ್ರಾಣ ಕೊಟ್ಟಾದರೂ ಉಳಿಸುವಂಥ ನಿಷ್ಠಾವಂತ. ಆತ ಇಬ್ಬರು ಪ್ರೇಮಿಗಳನ್ನು ಕೂಡ ಒಂದುಗೂಡಿಸುತ್ತಾನೆ, ಆತನ ನಿಷ್ಕಲ್ಮಶ ಮನಸು, ಸಹಾಯ ಮಾಡುವ ಗುಣಗಳನ್ನು ಕಂಡು ಲಕ್ಷ್ಮಿ ಅಮಾಸನನ್ನೇ ಮದುವೆಯಾಗಲು ತೀರ್ಮಾನಿಸುತ್ತಾಳೆ. ಆದರೆ ಲಕ್ಷ್ಮಿಯ ತಂದೆ(ಶೋಭರಾಜ್) ಅದಕ್ಕೆ ವಿರೋಧಿಸಿ ಮಗಳಿಗೆ ಬೇರೊಬ್ಬ ಹುಡುಗನ ಜೊತೆ ಮದುವೆ ಮಾಡಲು ನಿರ್ಧರಿಸುತ್ತಾನೆ. ಕೊನೆಗೆ ಆ ಪ್ರೇಮಿಗಳು ಮನೆಬಿಟ್ಟು ಓಡಿ ಹೋಗುತ್ತಾರೆ. ಆದರೆ ವಿಧಿಯಾಟವೇ ಬೇರೆ ಇರುತ್ತದೆ. ಪ್ರೇಮಿಗಳನ್ನು ಬೇರೆ ಮಾಡುವ ಪ್ರಯತ್ನದಲ್ಲಿ ಅಮಾಸನನ್ನು ಹಿಗ್ಗಾಮುಗ್ಗ ಥಳಿಸುವ ರೌಡಿಗಳು ಆತನ ಕೈಕಾಲು ಕಟ್ಟಿ ನದಿಗೆ ಎಸೆಯುತ್ತಾರೆ. ಇದನ್ನು ಕಂಡು ಲಕ್ಷ್ಮಿ ಅಮಾಸನನ್ನು ಬಿಟ್ಟಿರಲಾರದೆ ತಾನೂ ನದಿಗೆ ಹಾರಲು ಹೋಗುತ್ತಾಳೆ. ಆ ಸಮಯದಲ್ಲಿ ಆಕೆಯ ತಂದೆ ಹಿಂದಿನಿಂದ ಬಂದು ಬೆನ್ನಿಗೆ ಚೂರಿ ಹಾಕುತ್ತಾನೆ. ಲಕ್ಷ್ಮಿ ನದಿಗೆ ಹಾರಿ ಸಾವಿನಲ್ಲೂ ಪ್ರೇಮಿಯ ಜೊತೆ ಒಂದಾಗುತ್ತಾಳೆ. ಇದಿಷ್ಟೂ ಕಥೆಯನ್ನಿಟ್ಟುಕೊಂಡು ಪರ್ಚಂಡಿಗೆ ಚಿತ್ರಕಥೆ ಹೆಣೆಯಲಾಗಿದೆ. ಆಗಿನ ಕಾಲದ ಜನ ಮರ್ಯಾದೆಗೆ, ಮಾನವೀಯ ಮೌಲ್ಯಗಳಿಗೆ ಹೇಗೆ ಸ್ಪಂದಿಸುತ್ತಿದ್ದರು ಎಂದು ಈ ದೃಷ್ಟಾಂತದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಕೊಳ್ಳೇಗಾಲ, ಚಾಮರಾಜ ನಗರ ಹಾಗೂ ಹೊಳೆನರಸೀಪುರ ಸುತ್ತಮುತ್ತಲ ಗ್ರಾಮೀಣ ಭಾಗಗಳಲ್ಲಿಯೇ ಈ ಚಿತ್ರವನ್ನು ಸೆರೆಹಿಡಿಯುವ ಮೂಲಕ ಚಿತ್ರದಲ್ಲಿ ನೈಜತೆ ಮೂಡಿಸಲು ಪ್ರಯತ್ನಿಸಲಾಗಿದೆ. ಕೊಳ್ಳೇಗಾಲದ ಅಪ್ಪಟ ಗ್ರಾಮೀಣ ಭಾಷೆಯ ಸೊಗಡನ್ನು ಕಣ ್ಣಗೆ ಕಟ್ಟುವ ಹಾಗೆ ನಿರ್ದೇಶಕ ಜೂಮ್‍ರವಿ ಈ ಚಿತ್ರದಲ್ಲಿ ಮೂಡಿಸಿದ್ದಾರೆ. 1957ರ ಸಮಯದಲ್ಲಿ ಹಳ್ಳಿಯೊಂದರಲ್ಲಿ ನಡೆಯುವ ಕಥೆಯಿದಾಗಿದ್ದು ಪಕ್ಕಾ ಹಳ್ಳಿ ಹುಡುಗಿಯಾದ ನಾಯಕಿ ಕಲ್ಪನಾ, ಒಂದೇ ಕಾಟನ್ ಸೀರೆಯಲ್ಲಿ ಬಹುತೇಕ ಸೀನ್‍ಗಳಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೆ, ಇಡೀ ಚಿತ್ರದಲ್ಲಿ ಮೇಕಪ್ ಹಾಕದೆ ಅಭಿನಯಿಸಿದ್ದಾರೆ.
-Cine Circle News
-19/08/17ಹಠಮಾರಿಗಳ ಪ್ರೇಮ ಪ್ರಸಂಗ
ಚಂದನವನದಲ್ಲಿ ಗತಕಾಲದ ಚಿತ್ರಗಳು ಬರುತ್ತಿವೆ. ಇದರ ಸಾಲಿಗೆ ಕೊಂಡಿಯಂತೆ ‘ಪರ್ಚಂಡಿ’ ಸಿನಿಮಾವು 40 ವರ್ಷಗಳ ಹಿಂದಿನ ಗ್ರಾಮೀಣ ಭಾಗದ ಜೀವನವನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ. ಅಂದು ಮೂಲಭೂತ ಸೌಕರ್ಯಗಳು ಇಲ್ಲದಿದ್ದರೂ ಆರೋಗ್ಯಕರವಾದ ಆಹಾರ, ವ್ಯಾಯಾಮ, ಹರಟೆ ಇವುಗಳಿಂದ ಜನರು ನೆಮ್ಮದಿಯಾಗಿ ಬದುಕನ್ನು ಸಾಗಿಸುತ್ತಿದ್ದರು. ಮೋಸ, ಸೋಮಾರಿತನ ಏನೆಂದು ತಿಳಿದಿರಲಿಲ್ಲ. ದ್ವೇಷವೇನಾದರೂ ಬಂದಲ್ಲಿ ಈಗಿನಂತೆ ಮಚ್ಚು, ಗನ್ ಹಿಡಿಯುತ್ತಿರಲಿಲ್ಲ. ಊರ ಮುಖಂಡನ ಮುಂದೆ ಚರ್ಚೆ ನಡೆಸಿ ಅವರು ಏನು ಹೇಳುತ್ತಾರೋ ಅದೇ ಅಂತಿಮ ತೀರ್ಮಾನವಾಗುತ್ತಿತ್ತು. ಅಲ್ಲಿನ ಭಾಷೆಯ ಸೊಗಡು, ಕಲಾವಿದರು ಚಪ್ಪಲಿ ಹಾಕದೆ ಒಂದೇ ಕಾಸ್ಟ್ಯೂಮ್‍ನಲ್ಲಿ ನಟನೆ ಮಾಡಿರುವುದು ವಿಶೇಷವಾಗಿದೆ. ಶೀರ್ಷಿಕೆಗೆ ಹಠಮಾರಿತನ ಎನ್ನುವುದು ಅರ್ಥ ಕೊಡುತ್ತದಂತೆ. ಅದರಂತೆ ಕತೆಯಲ್ಲಿ ಹುಡುಗ,ಹುಡುಗಿ ಸಣ್ಣವರಾಗಿದ್ದಾಗ ಹಠ ಮಾಡುತ್ತಾ ಬೆಳೆದು ಪ್ರೀತಿ ಮಾಡುತ್ತಾರೆ. ಅವಸಾನದಲ್ಲಿ ಸಂದೇಶದ ಮೂಲಕ ಹೇಳಹೊರಟಿರುವುದನ್ನು ಚಿತ್ರ ನೋಡಿದರೆ ಅರ್ಥವಾಗುತ್ತದೆ. ನಂಜನಗೂಡು, ಟಿ.ನರಸೀಪುರ ತಟಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಶೋಭರಾಜ್ ಹೊರತುಪಡಿಸಿ ಬಹುತೇಕ ಕಲಾವಿದರಿಗೆ ಅಭಿನಯ ಹೊಸ ಅನುಭವ. ಮಹೇಶ್‍ದೇವ್ ನಾಯಕನಾಗಿ ನಾಸ್ತಿಕ, ಕಲ್ಪನಾ ನಾಯಕಿಯಾಗಿ ಆಸ್ತಿಕಳು. ಪೋಷಕ ಪಾತ್ರದಲ್ಲಿ ಗುರುತಿಸಿಕೊಂಡಿದ್ದ ಕುರಿರಂಗರಿಗೆ ನಾಯಕನ ಗೆಳಯನಾಗಿ ಸಿನಿಮಾ ಪೂರ್ತಿ ಅಲ್ಲದೆ ನೇತ್ರಾ ಎಂಬ ನಟಿ ಜೋಡಿಯಾಗಿದ್ದಾರೆ. ಉಳಿದಂತೆ ನಿರ್ಮಾಪಕರ ಸೋದರ ವಾಸುದೇವಮೂರ್ತಿ ಐದು ಶೇಡ್‍ಗಳಲ್ಲಿ ಅಗ್ನಿರವಿ ಜೊತೆ ಕಾಣ ಸಿಕೊಂಡಿದ್ದಾರೆ. ಎರಡು ಹಾಡುಗಳಿಗೆ ಸಂಗೀತ ಸಂಯೋಜಿಸಿರುವುದು ವಿಜಯರಂಗದೋಳ್. ಹ್ಯಾರೀಸ್‍ರಾಜ್, ಪುಷ್ಪರಾಜು ಸಾಹಸ, ರಾಜ್‍ಕಡೂರ್ ಛಾಯಗ್ರಹಣವಿದೆ. ನಂಜನಗೂಡಿನ ಶಿವಾನಂದ್ ಜಮೀನು ಹೊಂದಿದ್ದು, ಸದ್ಯ ಬಿಲ್ಡರ್ ಆಗಿದ್ದು, ಸಿನಿಮಾ ಮೋಹದ ಮೇಲೆ ನನ್ ಡವ್ ನನ್ ಗಿಫ್ಟ್ ಎನ್ನುವ ಚಿತ್ರಕ್ಕೆ ಹಣ ಹೂಡಿದ್ದರು. ಅದು ಕಾರಾಣಂತಾರದಿಂದ ಸ್ಥಗಿತಗೊಂಡಾಗ, ಅದನ್ನು ಪಕ್ಕಕ್ಕೆ ಇಟ್ಟು ಪರ್ಚಂಡಿ ಶುರು ಮಾಡಿ ಇದು ಬಿಡುಗಡೆಯಾದ ನಂತರ ಮೊದಲ ಸಿನಿಮಾಕ್ಕೆ ಮೋಕ್ಷ ನೀಡಲು ಯೋಜನೆ ಹಾಕಿಕೊಂಡಿದ್ದಾರೆ. ನಿರ್ದೇಶಕ ಜೂಮ್‍ರವಿಗೆ ಪ್ರಥಮ ಅವಕಾಶ ಸಿಕ್ಕಿದ್ದರಿಂದ ನಿರ್ಮಾಪಕರು ಖುಷಿಪಡುವ ಹಾಗೆ ಕೆಲಸವನ್ನು ಮಾಡಿಕೊಟ್ಟಿದ್ದಾರೆ. ಇದೇ 9 ರಂದು ಹಾಡುಗಳ ಅನಾವರಣ ಕಾರ್ಯಕ್ರಮ ನಡೆಯಲಿದೆ. ಸದ್ಯ ಚಿತ್ರವು ಸೆನ್ಸಾರ್ ಅಂಗಳದಲ್ಲಿದ್ದು, ಅಂದುಕೊಂಡಂತೆ ಆದರೆ ಜುಲೈ ಕೊನೆವಾರದಂದು ಜನರಿಗೆ ತೋರಿಸಲು ನಿರ್ಮಾಪಕರು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
-1/07/17


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore