HOME
CINEMA NEWS
GALLERY
TV NEWS
REVIEWS
CONTACT US
ಒಂದು ಸುಳ್ಳು ಹೇಳಿದರೆ ಮದುವೆ ಆಗುತ್ತದೆ
ಸಾವಿರ ಸುಳ್ಳು ಹೇಳಿ ಮದುವೆ ಮಾಡಿಸು ಅಂತ ಹಿರಿಯರು ಹೇಳಿದ್ದಾರೆ. ಆದರೆ ‘ಪತಿ ಬೇಕು.ಕಾಂ’ ಚಿತ್ರದಲ್ಲಿ ಒಂದು ಸುಳ್ಳಿಗೆ ನಾಯಕ-ನಾಯಕಿ ಮದುವೆ ಆಗುತ್ತಾರೆ. ಆಕೆ ಬಡ ಮಧ್ಯಮ ವರ್ಗದ ಸುಪುತ್ರಿ ಭಾಗ್ಯ. ಇದುವರೆಗೂ 60 ಗಂಡು ನೋಡಿಕೊಂಡು ಹೋಗಿರುತ್ತದೆ. ಕೊನೆಗೆ ಅಪ್ಪ-ಅಮ್ಮನಿಗೆ ತೊಂದರೆ ಕೊಡದೆ ಲವ್ ಮಾಡಿ ಹುಡುಗನನ್ನು ಪಡೆಯಲು ಯೋಜನೆ ಹಾಕಿಕೊಳ್ಳುತ್ತಾಳೆ. ಅದು ವಿಫಲವಾಗುತ್ತದೆ. ಮುಂದೆ ಗೆಳತನ ಮಾಡಿಕೊಂಡು ಸಂಗಾತಿಯನ್ನು ಬಯಸಲು ತೀರ್ಮಾನಿಸಿದಂತೆ, ಗೆಲುವು ಕಾಣುವುದಿಲ್ಲ. ಮದುವೆ ದಲ್ಲಾಳಿ ಮಾಡಿದರೆ ಸುಲಭವಾಗಿ ಹಣ ಸಂಪಾದಿಸಿ ಅದರಲ್ಲಿ ಮ್ಯಾರೇಜು ಆಗಬಹುದೆಂದು ಅದರಲ್ಲೂ ಒಂದು ಕೈ ನೋಡುತ್ತಾಳೆ. ಇದರ ಮುಖಾಂತರ ಶ್ರೀಮಂತ ಹುಡುಗನೊಬ್ಬ ದೂರವಾಣಿ ಮೂಲಕ ಸಂಪರ್ಕಿಸಿ, ತನಗೆ ಕುರುಡಿ ವಧು ಬೇಕಾಗಿದೆ ಎಂದು ಬೇಡಿಕೆ ಇಡುತ್ತಾನೆ. ಹಣದ ಆಸೆಯಿಂದ ಈಕೆಯೇ ಕುರುಡಿಯಂತೆ ನಾಟಕವಾಡುತ್ತಾಳೆ. ಮುಂದೆ ಅಂದುಕೊಂಡಿದ್ದೇ ಒಂದು, ಆಗುವುದೇ ಮತ್ತೋಂದು. ಇದೆಲ್ಲಾವನ್ನು ಹಾಸ್ಯಭರಿತವಾಗಿ ತೋರಿಸಿರುವುದು ಪ್ಲಸ್ ಪಾಯಿಂಟ್.

ಹುಡುಗ-ಹುಡುಗಿ ಹೆದರಿಕೊಂಡು ರೂಂಗೆ ಹೋಗುವುದು ಲವ್ ಮ್ಯಾರೇಜು. ಅದೇ ಧೈರ್ಯದಿಂದ ಹೋದಾಗ ಅದನ್ನು ಅರೇಂಜ್ ಮದುವೆ ಎನ್ನುತ್ತಾರೆಂದು ನಾಯಕಿಯಿಂದ ಹೇಳಿಸಿದ್ದಾರೆ. ನಾಯಕಿಯಾಗಿ ಶೀತಲ್‍ಶೆಟ್ಟಿ ಲೀಲಾಜಾಲವಾಗಿ ನಗುತ್ತಾ, ನಗಿಸುತ್ತಾ ಇಡೀ ಚಿತ್ರವನ್ನು ಹೆಗಲಮೇಲೆ ಹೊತ್ತುಕೊಂಡಿದ್ದಾರೆ. ಅರುಣ್‍ಗೌಡ ನಾಯಕ, ಅಷ್ಟೇ ಅಂತ ಹೇಳಬಹುದು. ಕೃಷ್ಣಅಡಿಗ-ಹರಿಣಿ ಪೋಷಕರಾಗಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಿರ್ದೇಶಕ ರಾಕೇಶ್ ಕತೆ ಬರೆಯುವ ಜೊತೆಗೆ ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿದ್ದು ಅಲ್ಲಲ್ಲಿ ನಗಿಸಿದ್ದಾರೆ. ಒಂದು ಹಾಡಿಗೆ ಕೌಶಿಕ್ ಹರ್ಷ ಸಂಗೀತ, ಹರ್ಷವರ್ಧನ್‍ರಾಜ್ ಹಿನ್ನಲೆ ಸಂಗೀತ ಕೇಳಲು ಖುಷಿ ಕೊಡುತ್ತದೆ. ಯೋಗಿ ಛಾಯಗ್ರಹಣಕ್ಕೆ ಪೂರಕವಾಗಿ ವಿಜಯ್.ಎಂ.ಕುಮಾರ್ ಸಂಕಲನ ಚೆನ್ನಾಗಿ ಕೆಲಸ ಮಾಡಿದೆ. ವರನನ್ನು ಹುಡುಕಲು ಮಧ್ಯವ ವರ್ಗದ ಜನರ ತವಕ,ತಲ್ಲಣಗಳನ್ನು ನವಿರಾಗಿ ತೋರಿಸಿರುವುದು ಸಿನಿಮಾದಲ್ಲಿ ಮುಖ್ಯವಾಗಿದೆ.
ನಿರ್ಮಾಪಕರು: ರಾಕೇಶ್-ಶ್ರೀನಿವಾಸ್-ಮಂಜುನಾಥ್
ಸಿನಿ ಸರ್ಕಲ್.ಇನ್ ವಿಮರ್ಶೆ
***
8/09/18
ಜನತಾ ದರ್ಶನದಲ್ಲಿ ಪತಿಬೇಕು.ಕಾಂ
ಭಾರತದಲ್ಲೆ ಮೊದಲು ಎನ್ನುವಂತೆ ವಿನೂತನವಾಗಿ ಜನತಾ ದರ್ಶನ ಮಾಡಿರುವ ಖ್ಯಾತಿ ಪ್ರಸಕ್ತ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಸಲ್ಲುತ್ತದೆ. ಪ್ರತಿ ಶನಿವಾರ ನಡೆಯಲಿದ್ದು ಖುದ್ದು ಮುಖ್ಯಮಂತ್ರಿಗಳು ಜನರನ್ನು ಭೇಟಿ ಮಾಡಿ ಸಾದ್ಯವಾದಷ್ಟು ಪರಿಹಾರ ಕೊಡಿಸಲು ಸೂಕ್ತ ಅಧಿಕಾರಿಗಳಿಗೆ ಆದೇಶ ಕೊಡುತ್ತಾರೆ. ‘ಪತಿಬೇಕು.ಕಾಂ’ ಎನ್ನುವ ಚಿತ್ರದಲ್ಲಿ ‘ಯಾಕಪ್ಪ ದೇವರೇ ಹೆಣ್ಣು ಮಕ್ಕಳಿಗೆ ಕಷ್ಟಕೋಡ್ತಿಯಾ’ ಹಾಡು ಇರಲಿದ್ದು, ಇದಕ್ಕೆ ಹೆಸರು ಮಾಡಿರುವ ವ್ಯಕ್ತಿಯಿಂದ ಮಾತನಾಡಿಸಿದರೆ ಹೆಚ್ಚು ಜನರಿಗೆ ತಲುಪುತ್ತದೆಂದು ನಿರ್ದೇಶಕ ರಾಕೇಶ್ ಯೋಚನೆ ಆಗಿದೆ. ಜನತಾ ದರ್ಶನದಲ್ಲಿ ನಾಡದೊರೆಗಳಿಂದ ಸಂದೇಶ ರವಾನಿಸಲು ಅನುಮತಿಗಾಗಿ ಪತ್ರವನ್ನು ಬರೆದಿದ್ದಾರೆ. ಆ ಕಡೆಯಿಂದ ಸಕರಾತ್ಮಕ ಉತ್ತರ ಬರುತ್ತದೆಂಬ ಆಶಾಭಾವನೆ ಚಿತ್ರತಂಡಕ್ಕೆ ಇದೆ. ಸಿನಿಮಾ ಕುರಿತು ಹೇಳುವುದಾದರೆ ಹೆಣ್ಣಿಗೆ ಗಂಡು ಇರುವಂತೆ, ಗಂಡಿಗೆ ಹೆಣ್ಣು ಭಗವಂತ ಕರುಣಿಸಿರುತ್ತಾರೆ. ಆದರೆ ಕೆಲವರಿಗೆ ಕಂಕಣಬಲ ಇರದೆ ಇದ್ದಲ್ಲಿ ತಡವಾಗಬಹುದು. ಇದರಿಂದ ಇಬ್ಬರಿಗೂ ಸರಿಯಾದ ವಯಸ್ಸಿನಲ್ಲಿ ಮದುವೆಯಾಗುವುದಿಲ್ಲ. ಹೆಸರೇ ಹೇಳುವಂತೆ ಮಧ್ಯಮ ವರ್ಗದ ಹುಡುಗಿಗೆ ಪೋಷಕರು ಹುಡುಗನನ್ನು ಹುಡುಕುವ ಪ್ರಸಂಗಗಳು. ಮನೆಗೆ ಹುಡುಗಿ ನೋಡಲು ಬರುತ್ತಾರೆಂದು ತಿಳಿದಾಗ ಆಕೆಯ ಅಪ್ಪ-ಅಮ್ಮ ಏನು ಮಾಡ್ತಾರೆ, ಸಂಭಂದಿಕರು ಯಾವ ರೀತಿ ಚರ್ಚೆ ನಡೆಸುತ್ತಾರೆ. ಇವೆಲ್ಲಾವನ್ನು ಹಾಸ್ಯದ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ. ಸೆಂಟಿಮೆಂಟ್ ಕತೆಯಾದರೂ ನೋಡುಗನಿಗೆ ಮನರಂಜನೆ ಕೊಡುತ್ತದೆ. ಹುಡುಗಿಯ ವೃತ್ತಿ, ಕ್ಲೈಮಾಕ್ಸ್‍ನಲ್ಲಿ ಮದುವೆಯಾಗುತ್ತದಾ? ಎಂಬುದನ್ನು ಸಿನಿಮಾದಲ್ಲಿ ನೋಡಬೇಕಂತೆ. ಒಂದು ಹಾಡಿಗೆ ಕೌಶಿಕ್‍ಹರ್ಷ ಸಂಗೀತ ಸಂಯೋಜಿಸಿದ್ದಾರೆ. ಬೆಂಗಳೂರು ಸುತ್ತಮುತ್ತ 45 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.

ಶೀತಲ್‍ಶೆಟ್ಟಿ ನಾಯಕಿ. ಇವರ ತಂದೆ-ತಾಯಿಯಾಗಿ ಕೃಷ್ಣಹರಡಿಗ, ಹರಿಣಿ ಕಾಣಿಸಿಕೊಂಡಿದ್ದಾರೆ. ಛಾಯಗ್ರಹಣ ಯೋಗಿ, ಸಂಕಲನ ವಿಜಯ್.ಎಂ.ಕುಮಾರ್,. ಹಿನ್ನಲೆ ಸಂಗೀತ ಹರ್ಷವರ್ಧನ್‍ರಾಜ್ ಅವರದಾಗಿದೆ. ನಿರ್ದೇಶಕರ ಜೊತೆಗೆ ಗ್ರಾಮೀಣ ಭಾಗದ ಮಂಜುನಾಥ್, ಶ್ರೀನಿವಾಸ್ ನಿರ್ಮಾಣದಲ್ಲಿ ಪಾಲುದಾರರು. ಯುಎ ಪ್ರಮಾಣಪತ್ರ ಪಡೆದುಕೊಂಡಿರುವ ಚಿತ್ರವು ಸೆಪ್ಟಂಬರ್ ಮೊದಲವಾರದಂದು 100 ಕೇಂದ್ರಗಳಲ್ಲಿ ಬಿಡುಗಡೆಯಾಗಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
29/08/18

ಸೂಕ್ತ ಹುಡುಗಿಗೆ ಹುಡುಗ ಬೇಕು
ಹೆಣ್ಣಿಗೆ ಗಂಡು ಇರುವಂತೆ, ಗಂಡಿಗೆ ಹೆಣ್ಣು ಭಗವಂತ ಕರುಣಿಸಿರುತ್ತಾರೆ. ಆದರೆ ಕಲವರಿಗೆ ಕಂಕಣಬಲ ಇರದೆ ಇದ್ದಲ್ಲಿ ತಡವಾಗಬಹುದು. ಇದರಿಂದ ಇಬ್ಬರಿಗೂ ಸರಿಯಾದ ವಯಸ್ಸಿನಲ್ಲಿ ಮದುವೆಯಾಗುವುದಿಲ್ಲ. ಇಂತಹುದೆ ಘಟನೆಗಳ ಕುರಿತ ‘ಪತಿಬೇಕು . ಕಾಮ್’ ಎನ್ನುವ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಹೆಸರೇ ಹೇಳುವಂತೆ ಮಧ್ಯಮ ವರ್ಗದ ಹುಡುಗಿಗೆ ಪೋಷಕರು ಹುಡುಗನನ್ನು ಹುಡುಕುವ ಪ್ರಸಂಗಗಳು. ಮನೆಗೆ ಹುಡುಗಿ ನೋಡಲು ಬರುತ್ತಾರೆಂದು ತಿಳಿದಾಗ ಆಕೆಯ ಅಪ್ಪ-ಅಮ್ಮ ಏನು ಮಾಡ್ತಾರೆ, ಸಂಭಂದಿಕರು ಯಾವ ರೀತಿ ಚರ್ಚೆ ನಡೆಸುತ್ತಾರೆ. ಇವೆಲ್ಲಾವನ್ನು ಹಾಸ್ಯದ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ. ಸೆಂಟಿಮೆಂಟ್ ಕತೆಯಾದರೂ ನೋಡುಗನಿಗೆ ಮನರಂಜನೆ ಕೊಡುತ್ತದೆ. ಹುಡುಗಿಯ ವೃತ್ತಿ, ಕ್ಲೈಮಾಕ್ಸ್‍ನಲ್ಲಿ ಮದುವೆಯಾಗುತ್ತದಾ? ಎಂಬುದನ್ನು ಸಿನಿಮಾದಲ್ಲಿ ನೋಡಬೇಕಂತೆ ಎಂದು ಅವಲತ್ತು ಮಾಡಿಕೊಳ್ಳುತ್ತಾರೆ ನಿರ್ದೇಶಕ ರಾಕೇಶ್. ಒಂದು ಹಾಡಿಗೆ ಕೌಶಿಕ್‍ಹರ್ಷ ಸಂಗೀತ ಸಂಯೋಜಿಸಿದ್ದಾರೆ. ಬೆಂಗಳೂರು ಸುತ್ತಮುತ್ತ 45 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.

ಶೀತಲ್‍ಶೆಟ್ಟಿ ನಾಯಕಿ. ಇವರ ತಂದೆ-ತಾಯಿಯಾಗಿ ಕೃಷ್ಣಹರಡಿಗ, ಹರಿಣಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್‍ನ್ನು ಸುದೀಪ್ ಬಿಡುಗಡೆ ಮಾಡಿ ಶುಭ ಹಾರೈಸಿರುವುದು ತಂಡಕ್ಕೆ ಆನೆ ಬಲ ಬಂದಿದೆಯಂತೆ. ಅಲ್ಲದೆ ಸೆನ್ಸಾರ್‍ನವರು ಯಾವುದೇ ದೃಶ್ಯವನ್ನು ಕಟ್ ಮಾಡದೆ ಯುಎ ಪ್ರಮಾಣಪತ್ರ ನೀಡಿದ್ದಾರೆ. ಛಾಯಗ್ರಹಣ ಯೋಗಿ, ಸಂಕಲನ ವಿಜಯ್.ಎಂ.ಕುಮಾರ್,. ಹಿನ್ನಲೆ ಸಂಗೀತ ಹರ್ಷವರ್ಧನ್‍ರಾಜ್ ಅವರದಾಗಿದೆ. ನಿರ್ದೇಶಕರ ಜೊತೆಗೆ ಗ್ರಾಮೀಣ ಭಾಗದ ಮಂಜುನಾಥ್, ಶ್ರೀನಿವಾಸ್ ನಿರ್ಮಾಣದಲ್ಲಿ ಪಾಲುದಾರರು. 1.57 ಗಂಟೆಯ ಸಿನಿಮಾವನ್ನು ವಿತರಕ ಕುಮಾರ್ ವರಮಹಾಲಕ್ಷೀ ಹಬ್ಬದಂದು ಬಿಡುಗಡೆ ಮಾಡಲು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
27/07/18For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

/