HOME
CINEMA NEWS
GALLERY
TV NEWS
REVIEWS
CONTACT US
ಕರ್ತವ್ಯ ಮತ್ತು ಸಂಬಂದಗಳ ಹೂರಣ
ತಂದೆ ತಾಯಿಯ ಪ್ರೀತಿಯ ಆಸರೆಯಲ್ಲಿ ಬೆಳದ ಮಕ್ಕಳು ಪ್ರಸಕ್ತ ಸಮಾಜದಲ್ಲಿ ಸಾಧನೆ ಮಾಡುವುದು ದೊಡ್ಡ ವಿಷಯವಲ್ಲ. ಅದೇ ಅನಾಥ ಹುಡುಗನಿಗೆ ಪ್ರೀತಿ ತೋರಿಸಿದರೆ, ಆತ ಕೂಡ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಬಲ್ಲ ಎಂಬುದನ್ನು ‘’ಪಾರ್ಥಸಾರಥಿ’ ಸಿನಿಮಾದಲ್ಲಿ ಚೆನ್ನಾಗಿ ಹೇಳಿದ್ದಾರೆ. ನಿರ್ಮಾಪಕ ಮತ್ತು ನಿರ್ದೇಶಕ ಅಂತಹುದೆ ಸಾಧನೆ ಮಾಡಿದ ಹುಡುಗನೊಬ್ಬನನ್ನು ಕಂಡು ಅವನ ಸ್ಪೂರ್ತಿಯಿಂದ ಕತೆ ಬರೆದಿರುವುದು ವಿಶೇಷ. ಕತೆಯಲ್ಲಿ ನಾಯಕ ಅನಾಥ. ಆತನ ಪ್ರಾಮಾಣಿಕತೆಯನ್ನು ಕಂಡು ಶ್ರೀಮಂತ ವ್ಯಕ್ತಿಯೊಬ್ಬ ಅವನನ್ನು ಬೆಳಿಸಿ ಉನ್ನತ ಶಿಕ್ಷಣ ಕೊಡಿಸುತ್ತಾರೆ. ತಾನು ಆಗಾಗ ಹೊರದೇಶಗಳಿಗೆ ಹೋಗಬೇಕಾದ ಕಾರಣ ನಂಬಿಕಸ್ಥ ಕಾರು ಚಾಲಕನ ಸುಪರ್ದಿಗೆ ಬಿಡುತ್ತಾನೆ. ತನ್ನ ಹೆಸರು ಗೊತ್ತಿಲ್ಲದ ಆ ಹುಡುಗನಿಗೆ ಪಾರ್ಥಸಾರಥಿ ಎಂದು ಸಾಕು ತಂದೆ ಹೆಸರಿಡುತ್ತಾನೆ. ಮುಂದೆ ಆತನು ಓದಿ ನಿಷ್ಟಾವಂತ ಐಪಿಎಸ್ ಅಧಿಕಾರಿಯಾಗುತ್ತಾನೆ. ಪೋಲೀಸ್ ಕತೆಯಾದರೂ ಹೊಡೆದಾಟಗಳು ಇರದೆ, ಮಾನವೀಯ ಸಂಬಂದಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ.

ನಾಯಕ ರೇಣುಕುಮಾರ್‍ಗೆ ಮೊದಲ ಅನುಭವವಾಗಿರುವುದರಿಂದ ಎಲ್ಲೂ ಅಭಿನಯದಲ್ಲಿ ಕುಂದು ತೋರಿಸದೆ ಇರುವುದು ಗಮನಾರ್ಹವಾಗಿದೆ. ಅಕ್ಷತಾ ನಾಯಕಿಯಾಗಿ ಚೆಲ್ಲು ಅಭಿನಯದಿಂದ ಇಷ್ಟವಾಗುತ್ತಾರೆ. ಉಳಿದಂತೆ ಸಿದ್ದು, ಮಿಥುನ್, ಮಾಸ್ಟರ್ ಆದಿತ್ಯ, ದೀಪಕ್, ಲಕ್ಷೀಶ, ಪ್ರವೀಣ್‍ಶೆಟ್ಟಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರೀಲ್‍ನಲ್ಲಿ ಕಾರು ಚಾಲಕನಾಗಿರುವ ಮಂಜುನಾಥ್‍ಭದ್ರಾವತಿ ರಿಯಲ್‍ನಲ್ಲಿ ಅದೇ ರೀತಿ ಇರುವುದು ಮತ್ತೋಂದು ವಿಶೇಷ.. ವಿಕ್ಟರ್ ಲೋಗಿದಸನ್ ಸಂಗೀತದಲ್ಲಿ ಹಾಡುಗಳನ್ನು ಒಂದುಸಾರಿ ಆಲಿಸಬಹುದು. ನಿಲೇಶ್‍ಕೇಣಿ ಕ್ಯಾಮಾರ ಅಲ್ಲಲ್ಲಿ ಕೆಲಸ ಮಾಡಿದೆ. ಹರ್ಷವರ್ದನ್ ಚುರುಕಾದ ಸಂಭಾಷಣೆಗಳು ಹೈಲೈಟ್ ಆಗಿದೆ. ಟಗರು ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದ ರಾಜು ಎರಡು ಹಾಡುಗಳಿಗೆ ನಿರ್ದೇಶನ ಮಾಡಿರುವುದು ಪ್ಲಸ್ ಪಾಯಿಂಟ್. ಭಾವನೆಗಳನ್ನು ಇಷ್ಟಪಡುವವರಿಗೆ ಪಾರ್ಥಸಾರಥಿ ಒಮ್ಮೆ ನೋಡಬಲ್.
ಸಿನಿ ಸರ್ಕಲ್.ಇನ್ ವಿಮರ್ಶೆ
19/05/18

ಥಿಯೇಟರ್‍ಗೆ ಬರಲಿದ್ದಾನೆ ಪಾರ್ಥಸಾರಥಿ
ಮೈಸೂರಿನವರಾದ ರಾಬೆರ್ಟ್ ನವರಾಜ್ 30 ವರ್ಷಗಳ ಹಿಂದೆ ಕೆಲಸಕ್ಕಾಗಿ ಗೋವಾಕ್ಕೆ ಹೋಗಿ ಅಲ್ಲಿಯೇ ಬದುಕನ್ನು ಕಂಡುಕೊಂಡು, ನಂತರ ಕೊಂಕಣಿ, ಮರಾಠಿ ಭಾಷೆಗಳ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಈಗ ಕನ್ನಡ ಭಾಷೆಯ ಅಭಿಮಾನದ ಮೇಲೆ ‘ಪಾರ್ಥಸಾರಥಿ’ ಚಿತ್ರಕ್ಕೆ ಕತೆ, ನಿರ್ದೇಶನ ಮಾಡಿರುವ ಜೊತೆಗೆ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಅವರು ಹೇಳುವಂತೆ ಹೊರ ರಾಜ್ಯ ಗೋವಾ ಕನ್ನಡಿಗರು ನಿರ್ಮಿಸಿದ ಮೊದಲನೇ ಕನ್ನಡ ಚಿತ್ರವಂತೆ. ಅಪ್ಪ-ಅಮ್ಮ ಬೆಳಸಿದ ಮಕ್ಕಳು ಸಮಾಜದಲ್ಲಿ ಸಾಧನೆ ಮಾಡುತ್ತಾರೆ. ಅದರಂತೆ ಅನಾಥ ಹುಡುಗನನ್ನು ಉಪೇಕ್ಷೆ ಮಾಡದೆ ಪ್ರೀತಿಯನ್ನು ತೋರಿಸಿದರೆ ಆತನು ಸಹ ಬುದ್ದಿವಂತ ಆಗುತ್ತಾನೆಂದು ಹೇಳಲಾಗಿದೆ. ಅಂತಹುದೇ ಹುಡುಗನ ಸ್ಪೂರ್ತಿಯಿಂದ ಚಿತ್ರಕತೆ ಸಿದ್ದಪಡಿಸಲಾಗಿದೆ. ಪೋಲೀಸ್ ಕತೆ ಇದ್ದರೂ ಆಕ್ಷನ್ ಇರದೆ, ಭಾವನೆಗಳು ಹೆಚ್ಚು ತುಂಬಿಕೊಂಡಿರುತ್ತದೆ.

ಅನಾಥನಾಗಿ ಮುಂದೆ ಛಲದಿಂದ ಶಿಕ್ಷಣ ಪಡೆದು ಐಪಿಎಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಾಯಕ ರೇಣುಕುಮಾರ್. ಪತ್ರಕರ್ತೆಯಾಗಿ ಕನ್ನಡತಿ ಅಕ್ಷತಾ ನಾಯಕಿ. ಇವರಿಗೂ ಕನ್ನಡದಲ್ಲಿ ಮೊದಲ ಚಿತ್ರವಾಗಿದ್ದರೂ ಮಲೆಯಾಳಂ, ತಮಿಳು ಚಿತ್ರಗಳಲ್ಲಿ ನಟಿಸಿದ ಅನುಭವವಿದೆಯಂತೆ. ಸುಬಜೀತ್‍ದತ್ತ ಸಂಕಲನದ ಜೊತೆ ಸಹ ನಿರ್ಮಾಪಕರು. ಟಗರು ಹಾಡಿಗೆ ನೃತ್ಯ ಸಂಯೋಜಿಸಿದ ರಾಜು ಎರಡು ಹಾಡುಗಳಿಗೆ ಕೆಲಸ ಮಾಡಿದ್ದಾರೆ. ನಿಲೇಶ್‍ಕಿಣಿ ಛಾಯಗ್ರಹಣ, ಹರ್ಷವರ್ಧನ್ ಸಂಭಾಷಣೆ, ಡಾ.ಪುನೀತ್-ರಾಬರ್ಟ್‍ನವರಾಜ್ ಸಾಹಿತ್ಯದ ಐದು ಗೀತೆಗಳಿಗೆ ಸಂಗೀತ ಸಂಯೋಜಿಸಿರುವುದು ವಿಕ್ಟರ್‍ಲೋಗಿದಾಸನ್. ತಾರಬಳಗದಲ್ಲಿ ಸಿದ್ದು, ಮಿಥುನ್, ಮಾಸ್ಟರ್ ಆದಿತ್ಯ, ದೀಪಕ್, ಲಕ್ಷೀಶ, ಪ್ರವೀಣ್‍ಶೆಟ್ಟಿ, ಮಂಜು ಮುಂತಾದವರು ಅಭಿನಯಿಸಿದ್ದಾರೆ. ಇದೇ 18ರಂದು ಸುಮಾರು 75 ಕೇಂದ್ರಗಳಲ್ಲಿ ಚಿತ್ರವು ತೆರಕಾಣಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
14/05/18


ಬಿಎಂಎಸ್ ಕಾಲೇಜಿನಲ್ಲಿ ಪಾರ್ಥಸಾರಥಿ ಕಲರವ
ಬಿಎಂಎಸ್ ಇಂಜನಿಯರಿಂಗ್ ಕಾಲೇಜ್ ಹಬ್ಬದಲ್ಲಿ, ಭವಿಷ್ಯದ ಇಂಜಿನಿನರ್ ವಿದ್ಯಾರ್ಥಿಗಳ ಸಮ್ಮುಖದಲ್ಲಿ ‘ಪಾರ್ಥಸಾರಥಿ’ ಸಿನಿಮಾದ ಧ್ವನಿಸಾಂದ್ರಿಕೆಯನ್ನು ವಿ.ಮನೋಹರ್ ಅನಾವರಣಗೊಳಿಸಿ ಚಿತ್ರವು ಯಶಸ್ಸುಗಳಿಸಲೆಂದು ಶುಭಹಾರೈಸಿದರು. ನಂತರ ತಂಡವು ಸಭಾಂಗಣಕ್ಕೆ ಶಿಫ್ಟ್ ಆಯಿತು. ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ನಾಲ್ಕು ವರ್ಷವಾಗಿದೆ. ಶಾರುಖ್‍ಖಾನ್ ಸಂಸ್ಥೆಯ ಚಿತ್ರದಲ್ಲಿ ಆಲಿಯಭಟ್ ಅವರೊಂದಿಗೆ ಪರದೆ ಹಂಚಿಕೊಂಡಿದ್ದೇನೆ. ನಾಯಕನಾಗಿ ಮೊದಲ ಚಿತ್ರ. ಕತೆಯಲ್ಲಿ ಅನಾಥನಾಗಿ ಜನರ ಪ್ರೀತಿಯಿಂದ ಬೆಳೆದು ಮುಂದೆ ಶಿಸ್ತು, ಪ್ರಾಮಾಣಿಕ ಐಪಿಎಸ್ ಆಧಿಕಾರಿಯಾಗಿ ಗುರಿಯನ್ನು ತಲುಪುವ ಸಂದರ್ಭದಲ್ಲಿ ಸಾಕಷ್ಟು ತಿರುವುಗಳು ಬರುತ್ತವೆ. ಭರತನಾಟ್ಯ, ಕಥಕ್, ವೆಸ್ಟ್ರನ್ ಡ್ಯಾನ್ಸ್ ಕಲಿಯಲಾಗಿದೆ ಎಂದು ಪರಿಚಯಿಸಿಕೊಂಡರು ರೇಣುಕ್‍ಕುಮಾರ್.

ತಮಿಳು, ಮಲೆಯಾಳಂದಲ್ಲಿ ನಟಿಸಲಾಗಿದ್ದು, ಕನ್ನಡದಲ್ಲಿ ನಾಯಕಿಯಾಗಿ ಮೂರನೆ ಚಿತ್ರ. ಪೋಲೀಸ್ ಇಲಾಖೆಯನ್ನು ಸಂಶೋಧನೆ ಮಾಡುವ ಸಂಧರ್ಭದಲ್ಲಿ ಅಧಿಕಾರಿಯನ್ನು ಹೇಗೆ ಸಂಭಾಳಿಸುತ್ತೇನೆ ಎನ್ನುವ ಪತ್ರಕರ್ತೆಯಾಗಿ ನಟಿಸಲಾಗಿದೆ ಎಂಬುದು ಅಕ್ಷತಾ ಸಂತಸದ ನುಡಿ.

ಹುಟ್ಟೂರು ಮೈಸೂರು, 30 ವರ್ಷಗಳ ಹಿಂದೆ ಕೆಲಸಕ್ಕಾಗಿ ಗೋವಾಕ್ಕೆ ಹೋಗಿ ಅಲ್ಲಿಯೇ ಬದುಕನ್ನು ಕಂಡುಕೊಂಡಿರುವ ರಾಬರ್ಟ್‍ನವರಾಜ್ ಕತೆ, ನಿರ್ದೇಶನ ಮಾಡಿರುವ ಜೊತೆಗೆ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಅವರು ಹೇಳುವಂತೆ ರಾಜ್ಯದಲ್ಲಿ ನಿರ್ಮಾಣವಾದ ಮೊದಲನೇ ಕನ್ನಡ ಚಿತ್ರ. ಅಪ್ಪ-ಅಮ್ಮ ಬೆಳಸಿದ ಮಕ್ಕಳು ಸಮಾಜದಲ್ಲಿ ಸಾಧನೆ ಮಾಡುತ್ತಾರೆ. ಅದರಂತೆ ಅನಾಥ ಹುಡುಗನನ್ನು ಉಪೇಕ್ಷೆ ಮಾಡದೆ ಪ್ರೀತಿಯನ್ನು ತೋರಿಸಿದರೆ ಆತನು ಸಹ ಬುದ್ದಿವಂತ ಆಗುತ್ತಾನೆಂದು ಹೇಳಲಾಗಿದೆ. ಅಂತಹುದೇ ಹುಡುಗನ ಸ್ಪೂರ್ತಿಯಿಂದ ಚಿತ್ರ ಮಾಡಲು ಮನಸ್ಸು ಮಾಡಿದಂತೆ ಇಲ್ಲಿಯವರೆಗೂ ಬಂದಿದೆ. ಪೋಲೀಸ್ ಕತೆ ಇದ್ದರೂ ಆಕ್ಷನ್ ಇರದೆ, ಭಾವನೆಗಳು ಹೆಚ್ಚು ತುಂಬಿಕೊಂಡಿರುತ್ತದೆ. ಮೈಸೂರು, ಬೆಂಗಳೂರು, ಉತ್ತರಕನ್ನಡ, ದಕ್ಷಿಣಕನ್ನಡ, ಗೋವಾ, ಗುಜರಾತ್, ರಾಜಸ್ಥಾನ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮುಂದಿನ ತಿಂಗಳು ಸುಮಾರು 75 ಕೇಂದ್ರಗಳಲ್ಲಿ ಬಿಡುಗಡೆ ಮಾಡಲು ಯೋಜನೆ ಹಾಕಲಾಗಿದೆ ಎಂಬುದರ ವ್ಯಾಖ್ಯಾನ ನೀಡಿದರು.

ಟಗರು ಖ್ಯಾತಿಯ ನೃತ್ಯ ನಿರ್ದೇಶಕ ಎರಡು ಹಾಡುಗಳಿಗೆ ಕೆಲಸ ಮಾಡಿದ್ದು, ಶಿವಣ್ಣರನ್ನು ಕುಣಿಸಿದ ನೃತ್ಯದ ಜಲಕ್‍ನ್ನು ಪ್ರದರ್ಶಿಸಿದರು. ಹರ್ಷವರ್ಧನ್-ಎನ್.ರಾಘವೇಂದ್ರ. ಸಂಭಾಷಣೆ, ಡಾ.ಪುನೀತ್, ರಾಬರ್ಟ್‍ನವರಾಜ್, ಹರ್ಷವರ್ಧನ್ ಸಾಹಿತ್ಯದ ಐದು ಹಾಡುಗಳಿಗೆ ಸಂಗೀತ ಸಂಯೋಜಿಸಿರುವ ವಿಕ್ಟರ್‍ಲೋಗಿದಸನ್, ಛಾಯಗ್ರಾಹಕ ನೀಲೇಶ್‍ಕೆಣಿ ಹೆಚ್ಚೇನು ಮಾತನಾಡಲಿಲ್ಲ. ಸುಬಜೀತ್‍ದತ್ತ ಸಂಕಲನದ ಜೊತೆಗೆ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರಂತೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
16/04/18
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore