HOME
CINEMA NEWS
GALLERY
TV NEWS
REVIEWS
CONTACT US
ಜ್ಯೂನಿಯರ್ ಗೆಂಡೆತಿಮ್ಮನ ಕಥನ
ಹಿಟ್ ಚಿತ್ರ ಪರಸಂಗದ ಗೆಂಡತಿಮ್ಮ ನೆನಪು ಮಾಡಿಕೊಂಡರೆ ಲೋಕೇಶ್ ಕಣ್ಣಮುಂದೆ ಬರುತ್ತಾರೆ. ಅದೇ ರೀತಿಯಲ್ಲಿ ಹೊಸ ‘ಪರಸಂಗ’ದಲ್ಲಿ ತಿಮ್ಮನಾಗಿ ಪ್ರೇಕ್ಷಕರ ಮನಸ್ಸನ್ನು ಕದಡುತ್ತಾನೆ. ಹಳ್ಳಿ ಸೊಗಡಿನ ಕತೆಯಲ್ಲಿ ಅಲ್ಲಿನ ಜನರ ವಾಸ್ತವ ಬದುಕು, ಬವಣೆ ಹಾಗೂ ಭಾವನಾತ್ಮಕ ಸಂಬಂದಗಳ ಮೌಲ್ಯವನ್ನು ಕಟ್ಟಿಕೊಡುತ್ತದೆ. ತಿಮ್ಮ ತೀರಾ ಮುಗ್ದ, ಇತರರ ಸಹಾಯಕ್ಕೆ ಸಿದ್ದನಿರುತ್ತಾನೆ. ಅವನನ್ನು ಸಮಾಜವು ಹೇಗೆ ಬಳಸಿಕೊಳ್ಳುತ್ತದೆ ಅದರಿಂದ ಹಂಗೆಲ್ಲಾ ನೋವು ಅನುಭವಿಸುತ್ತಾನೆ ಎಂಬುದು ಸನ್ನಿವೇಶಗಳು ಭಾವನೆಗಳ ಮೂಲಕ ಬರುತ್ತದೆ. ಅವನಿಗೆ ನನ್ನ ಹೆಂಡ್ತಿ ಪತಿವ್ರತೆ, ಅವಳ ಮೇಲೆ ನಂಬಿಕೆ ಇದೆ. ಯಾರು ಆಕೆಯ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಹೇಳುವ ಹೊತ್ತಿಗೆ ಒಂದು ಘಟನೆಯೊಂದು ನಡೆದು ಅವನ ಬಾಳು ಮುಳುವಾಗಿರುತ್ತದೆ. ಮೊದಲ ಭಾಗವು ಹೆಚ್ಚು ಮಾತುಗಳಿಗೆ ಸೀಮತವಾಗಿದೆ. ಅದರಲ್ಲೂ ಎರಡರ್ಥದ ಸಂಭಾಷಣೆಗಳು ಕಚಗುಳಿ ಇಟ್ಟರೂ ಕೆಲವು ಕಡೆ ಮುಜುಗರ ತರಿಸುತ್ತದೆ. ಇದನ್ನು ತಪ್ಪಿಸಿದ್ದರೆ ಚಿತ್ರವು ಆಪ್ತವಾಗುತ್ತಿತ್ತು. ಇದೆಲ್ಲವನ್ನು ಪಕ್ಕಕ್ಕೆ ಇಟ್ಟು ನೋಡಿದರೆ ಸಂಪೂರ್ಣ ಮನರಂಜನೆಗೆ ಮೋಸವಿಲ್ಲ. ನಂಬಿಕೆ, ವಂಚನೆ, ಅನುಮಾನ ಇವುಗಳಿಂದ ಏನೆಲ್ಲಾ ಆಗುತ್ತದೆ ಎಂಬುದನ್ನು ಸೂಕ್ಷವಾಗಿ ಹೇಳಿದ್ದಾರೆ.

ತಿಮ್ಮನಾಗಿ ಮಿತ್ರ ಸಿನಿಮಾಪೂರ್ತಿ ಆವರಿಸಿಕೊಂಡು ಚಿತ್ರಮಂದಿರದಿಂದ ಹೊರಗೆ ಬಂದರೂ ಅವರು ಕಾಡುತ್ತಾರೆ. ಅಂತಹ ಅದ್ಬುತ ಅಭಿನಯವನ್ನು ನೋಡುವುದೆ ಚಂದ. ಮೋಹಕ ನಾಯಕಿ ಅಕ್ಷತಾ ಸರಿಸಾಟಿಯಾಗಿ ನಟನೆ ಮಾಡಿರುವುದು ಕಾಣಿಸುತ್ತದೆ. ಸ್ಪುರದ್ರೂಪಿ ಮನೋಜ್‍ಪುತ್ತೂರು ನಾಯಕನಾಗುವ ಲಕ್ಷಣಗಳು ಇದೆ. ಊಟಕ್ಕೆ ಉಪ್ಪಿನಕಾಯಿ ಇರುವಂತೆ ನವನಟ ಚಂದ್ರಪ್ರಭಾ ಕಾಮಿಡಿ ಟೈಮಿಂಗ್ ಭವಿಷ್ಯದ ಹಾಸ್ಯನಟ ಹುಟ್ಟಿಕೊಂಡಿದ್ದಾರೆ. ಹರ್ಷವರ್ಧನ್‍ರಾಜ್ ಸಂಗೀತದಲ್ಲಿ ಎರಡು ಹಾಡುಗಳು ಗುನುಗುವಂತೆ ಮಾಡಿದೆ. ನಿರ್ದೇಶಕ ಕೆ.ಎಂ.ರಘು ಹಳ್ಳಿಯ ವಾತವರಣದಲ್ಲಿ ಚಿತ್ರ ಮಾಡಿರುವುದರಿಂದ ಪ್ರೇಕ್ಷಕನಿಗೆ ಅಲ್ಲಿರುವಂತೆ ಭಾಸವಾಗುತ್ತದೆ. ಒಟ್ಟಾರೆ ಮುಗ್ದಮನಸಿನ ಕತೆಯನ್ನು ಒಮ್ಮೆ ನೋಡಬಹುದು.
ನಿರ್ಮಾಣ: ಹೆಚ್,ಕುಮಾರ್,ಕೆ.ಎಂ.ಲೋಕೇಶ್, ಎಂ.ಮಹದೇವಗೌಡ
ಸಿನಿ ಸರ್ಕಲ್.ಇನ್ ವಿಮರ್ಶೆ
7/07/18
ಎಲ್.ಎನ್.ಶಾಸ್ತ್ರೀ ನಿರ್ಮಾಣ ಮಾಡಬೇಕಿದ್ದ ಚಿತ್ರ
ಹಾಸನದ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆಯ ‘ಪರಸಂಗ’ ಚಿತ್ರದ ಹಲವು ವಿಶೇಷತೆಗಳನ್ನು ಹಂಚಿಕೊಳ್ಳಲು ತಂಡವು ಕೊನೆಬಾರಿ ಮಾದ್ಯಮದವರನ್ನು ಭೇಟಿ ಮಾಡಿತು. ಮೈಕ್ ತೆಗೆದುಕೊಂಡ ನಿರ್ದೇಶಕ ಕೆ.ಎಂ.ರಘು ಮಾತನಾಡಿ ತಿಮ್ಮನ ಮನಕುಲುಕುವ ಕತೆಯಾಗಿದೆ. ನಂಬಿಕೆ, ಮೋಸ, ಅನುಮಾನದಿಂದ ಏನೆಲ್ಲಾ ಸಮಸ್ಯೆ ಆಗುತ್ತೆ. ಸಣ್ಣ ಸಣ್ಣ ತಪ್ಪುಗಳು ಮುಂದೆ ದೊಡ್ಡ ತಪ್ಪಾಗಿ ಅನಾಹುತಗಳು ಉಂಟಾಗುತ್ತವೆ. ಅದಕ್ಕಾಗಿ ತಿಮ್ಮನ ಕತೆ ಎಂದು ಉಪಶೀರ್ಷಿಕೆಯಲ್ಲಿ ಹೇಳಲಾಗಿದೆ. ಹಳ್ಳಿಯಲ್ಲಿ ಸೋಡಾ ಬಳಸದೆ ಅಡಿಗೆ ಮಾಡುತ್ತಾರೆ. ಅದರಂತೆ ಈ ಸಿನಿಮಾ ಇರಲಿದೆ. ಗಾಯಕ,ಸಂಗೀತ ನಿರ್ದೇಶಕ ಎಲ್.ಎನ್.ಶಾಸ್ತ್ರೀ ಒಂದು ಏಳೆಯ ಸಾಲನ್ನು ಕೇಳಿ ನಿರ್ಮಾಣ ಮಾಡಲು ಮುಂದಾಗಿ, ಟೈಟಲ್ ನೊಂದಣಿ ಮಾಡಿಸಿದ್ದರು. ಆದರೆ ಆರೋಗ್ಯ ವ್ಯತ್ಯಯ ಕಂಡುಬಂದು ಕೊನೆಗೂ ಅವರ ಆಸೆ ಈಡೇರದೆ ನಮ್ಮನ್ನು ಬಿಟ್ಟು ಹೋಗಿದ್ದಾರೆ. ಅವರು ಬರೆದುಕೊಟ್ಟಿದ್ದ ಅನುಮತಿ ಪತ್ರದ ಮೇಲೆ ಹೆಸರನ್ನು ವರ್ಗಾವಣೆ ಮಾಡಿಕೊಳ್ಳಲಾಗಿದೆ. ಹೆಚ್.ಡಿ.ಕೋಟೆ ಬಳಿ ಸಾವಿರ ಅಡಿ ಎತ್ತರದಲ್ಲಿರುವ ಚಿಕ್ಕಮ್ಮ ಚಿಕ್ಕದೇವ ಬೆಟ್ಟದಲ್ಲಿ ಕೆಲವು ದೃಶ್ಯಗಳನ್ನು ಸೆರೆ ಹಿಡಿರುವುದು ಹೈಲೈಟ್ ಆಗಿದೆ. ಕತೆಯನ್ನು ಸ್ಟಾರ್ ನಟರಿಗೆ ಹೇಳಲಾಗಿ, ಅವರು ಪಾತ್ರ ಮಾಡಲು ಒಪ್ಪದ ಕಾರಣ ಮಿತ್ರ ಆಯ್ಕೆಯಾದರೆಂದು ಹೇಳಿದರು.

ಒಳ್ಳೆ ಶೀರ್ಷಿಕೆ ಇರುವುದಕ್ಕೆ ಚಿತ್ರ ಅರ್ಧ ಗೆದ್ದಂತೆ ಎಂದು ಹಿರಿಯ ಪತ್ರಕರ್ತರೊಬ್ಬರು ಹೇಳಿ ಶುಭಹಾರೈಸಿದರು. ಪಾತ್ರದಲ್ಲಿ ತಿಮ್ಮನಾಗಿ ನಕ್ಕು ನಕ್ಕು ಅಳಿಸುತ್ತೇನೆ. ಪ್ರೇಕ್ಷಕನಿಗೆ ಚಿತ್ರಮಂದಿರದಿಂದ ಹೊರಗೆ ಬರುವಾಗ ತಿಮ್ಮ ಆವರಿಸಿಕೊಂಡಿರುತ್ತಾನೆ ಎಂಬುದಾಗಿ ಬಿಂಬಿಸಿಕೊಂಡಿದ್ದು ನಾಯಕ ಮಿತ್ರ.

ತೆಲುಗು, ತಮಿಳು ಚಿತ್ರದಲ್ಲಿ ನಟಿಸುವಾಗ ಅಲ್ಲಿನವರು ಕನ್ನಡದಲ್ಲಿ ಯಾಕೆ ಅಭಿನಯಿಸಿಲ್ಲವೆಂದು ಕೇಳುತ್ತಿದ್ದರು. ಅದಕ್ಕೆ ಈಗ ಕಾಲ ಕೂಡಿ ಬಂದಿದೆ. ನಾಯಕಿಯಾಗಿ ಸಕರಾತ್ಮಕ, ನಕರಾತ್ಮಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಖುಷಿ ಅಂತಾರೆ ನಾಯಕಿ ಅಕ್ಷತಾ.

ಹಾಸ್ಯ ಪಾತ್ರದಲ್ಲಿ ನಟನೆ ಮಾಡಿರುವ ಕಾಮಾಡಿಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ, ನವನಟ ಚಂದ್ರಪ್ರಭಾ, ಸಂಗೀತ ನಿರ್ದೇಶಕ ಹರ್ಷವರ್ಧನ್‍ರಾಜ್, ವೈದ್ಯನ ಪಾತ್ರ ಮಾಡಿರುವ ಮನೋಜ್‍ಪುತ್ತೂರು, ನಿರ್ಮಾಪಕರಗಳಾದ ಹೆಚ್.ಕುಮಾರ್, ಎಂ.ಮನೋಹರ್ ಮತ್ತು ಕೆ.ಎಂ.ಲೋಕೇಶ್ ಕಡಿಮೆ ಸಮಯ ತೆಗೆದುಕೊಂಡರು.

ವಿತರಕ ದೀಪಕ್‍ಗಂಗಾಧರ್ ಮುಖಾಂತರ ಇದೇ ಶುಕ್ರವಾರದಿಂದ ಸುಮಾರು 120 ಕೇಂದ್ರಗಳಲ್ಲಿ ಪರಸಂಗನ ಮುಗ್ದತೆಗಳನ್ನು ನೋಡಬಹುದು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
4/07/18

ನಂಬಿಕೆ ಮೋಸ ಎರಡರ ನಡುವಿನ ಕಥನ
ಚಿತ್ರಜಗತ್ತಿನಲ್ಲಿ ನೈಜ ಘಟನೆಯ ಚಿತ್ರಗಳನ್ನು ಜನರು ಇಷ್ಟಪಡುವಂತೆ, ಹಳೇ ಚಿತ್ರದ ಶೀರ್ಷಿಕೆಗಳನ್ನು ಬಳಸುತ್ತಿರುವುದು ವಾಡಿಕೆಯಾಗಿದೆ. ಅದರಂತೆ ‘ಪರಸಂಗ’ ಅಡಿಬರಹದಲ್ಲಿ ತಿಮ್ಮನ ಕತೆ ಅಂತ ಹೇಳಿಕೊಂಡಿರುವ ಎನ್ನುವ ಸಿನಿಮಾ ಸೇರ್ಪಡೆಯಾಗಿದೆ. ಹೆಸರು ಕೇಳಿದರೆ ಪರಸಂಗದ ಗೆಂಡತಿಮ್ಮ ನೆನಪಿಗೆ ಬರುತ್ತದೆ. ಚಿತ್ರದ ಮೊದಲ ಸುದ್ದಿಗೋಷ್ಟಿಯಲ್ಲಿ ನಿರ್ದೇಶಕ ಕೆ.ಎಂ.ರಘು ಮಾತನಾಡಿ ಮಂಡ್ಯಾ ಭಾಗದಲ್ಲಿ ನಡೆದ ಘಟನೆಯನ್ನು ಬಳಸಲಾಗಿದೆ. 45 ದಿನಗಳ ಕಾಲ ಮೈಸೂರು ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಂಬಿಕೆ ಮೋಸ ಎರಡರ ಮಧ್ಯೆ ಹೋಗುವ ಕತೆಯಾಗಿದೆ. ಗಂಡ-ಹೆಂಡತಿ, ಹುಡುಗ-ಹುಡುಗಿ ಇವರುಗಳಿಗೆ ಯಾವತ್ತು ನಂಬಿಕೆ ಮುಖ್ಯವಾಗಿರುತ್ತದೆ, ಅನುಮಾನ ಇರಬಾರದು. ಇದು ಬಂದರೆ ಪರಿಸ್ಥತಿ ಏನಾಗುತ್ತದೆ. ಎಲ್ಲಿಗೆ ತೆಗೆದುಕೊಂಡು ಹೋಗುತ್ತದೆ ಎಂಬುದನ್ನು ಸಿನಿಮಾದಲ್ಲಿ ನೋಡಬಹುದೆಂದು ಚಿತ್ರದ ವ್ಯಾಖ್ಯಾನ ಬಿಚ್ಚಿಟ್ಟರು.

ರಾಗ ಸೋಲಿನಿಂದ ಮೌನರಾಗವಾಗಿದ್ದ ನನಗೆ ಇದು ಮರುಜೀವ ನೀಡಿದೆ. ಎರಡನೆ ಬಾರಿ ನಾಯಕ, ತಿಮ್ಮನಾಗಿ ಮಡಿವಂತಿಕೆ ಇರುವ ಪಾತ್ರ. ಗ್ರಾಮೀಣ ಸೊಗಡಿನ ಪರಸಂಗದ ಗೆಂಡತಿಮ್ಮನಂತೆ ಇರುತ್ತೇನೆ. ಅಂದು ಸ್ಟ್ರಗಲಿಂಗ್ ಸ್ಟಾರ್ ಆಗಿದ್ದವನು ರಾಗ ನಂತರ ಕ್ರೆಡಿಟ್ ಸ್ಟಾರ್ ಆಗದ್ದೇನೆ. ಚಿಂತೆಯಿಲ್ಲ. ಎದುರಿಸುತ್ತೇನೆ. ಹಿನ್ನಲೆ ಸಂಗೀತ ಪ್ಲಸ್ ಪಾಯಿಂಟ್ ಆಗಿದೆ. ಮರಳಿಬಾರದೆ, ಹೂವನ್ನು ಕೇಳು ಇಷ್ಟದ ಹಾಡು ಎಂದರು. ಹಳೇ ಚಿತ್ರ ಇಂದಿಗೆ ತೆರೆಕಂಡು ನಲವತ್ತು ವರ್ಷ ಆದಂತೆ ನನಗೆ ವಯಸ್ಸು ಅಷ್ಟೇ ಆಗಿದೆ ಎಂದು ಕಿರುನಗೆ ಚೆಲಿದರು ಮಿತ್ತ.

ಮಂಗಳೂರು ಹುಡುಗಿ, ತೆಲುಗಿನಲ್ಲಿ ಒಂದು ಚಿತ್ರ ನಿರ್ದೇಶನ, ನಟನೆ ಮಾಡಿರುವ ಅಕ್ಷತಾ ಎರಡು ಶೇಡ್‍ಗಳಲ್ಲಿ ಕಾಣಿಸಿಕೊಳ್ಳುತ್ತೇನೆ. ಸಂದೇಶ ಇರಲಿದೆ. ಕಾದಿರೋ ಕಾಫಿ ಗೀತೆ ಗುನುಗುವಂತೆ ಮಾಡಿದೆ ಅಂತ ಅಪ್ಪಟ ಕನ್ನಡದಲ್ಲಿ ಪಾತ್ರದ ಪರಿಚಯ ಮಾಡಿಕೊಂಡರು. ಒಂದು ಗೀತೆಯನ್ನು ಶಿವರಾಜ್‍ಕುಮಾರ್ ಅನಾವರಣಗೊಳಿಸಿದ್ದರೆ, ಉಳಿದ ಮೂರು ಗೀತೆಗಳನ್ನು ಸ್ಟಾರ್ ನಿರ್ದೇಶಕರುಗಳಾದ ಸಂತೋಷ್‍ಆನಂದರಾಮ್, ಎ.ಪಿ.ಅರ್ಜುನ್ ಮತ್ತು ಬಹದ್ದೂರ್‍ಚೇತನ್ ಬಿಡುಗಡೆ ಮಾಡಿ ಕೆ.ಕುಮಾರ್ ಗೆಳತನವನ್ನು ನೆನಪು ಮಾಡಿಕೊಂಡು ತಂಡಕ್ಕೆ ಶುಭಹಾರೈಸಿದರು. ಚೂಚ್ಚಲಬಾರಿ ಸಂಗೀತ ನೀಡಿರುವ ಹರ್ಷವರ್ಧನ್‍ರಾಜ್ ಐದು ಗೀತೆಗಳ ವಿವಿರ ನೀಡಿದರು. ಕೆ.ಎಂ.ಲೋಕೇಶ್, ಹೆಚ್.ಕುಮಾರ್ ಹಾಗೂ ಎಂ.ಮಹದೇವಗೌಡ ಜಂಟಿಯಾಗಿ ನಿರ್ಮಾಣ ಮಾಡಿರುವ ಚಿತ್ರವು ಮುಂದಿನ ತಿಂಗಳು ತೆರೆಕಾಣುವ ಸಾದ್ಯತೆ ಇದೆ.

ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
20/03/18


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

/