HOME
CINEMA NEWS
GALLERY
TV NEWS
REVIEWS
CONTACT US
ಪರಧಿಯೊಳಗೊಂದು ಮೌನರಾಗ
ಕಳೆದ ಮೂರು ದಶಕಗಳಿಂದ ಪುಷ್ಪಕವಿಮಾನ, ಮಿರರ್ ಮತ್ತು ಮಕ್ರ್ಯೂರಿ ಮಾತಿಲ್ಲದ ಚಿತ್ರಗಳ ಪೈಕಿ ಮಿರರ್ ಇನ್ನು ಬಿಡುಗಡೆಯಾಗಬೇಕಾಗಿದೆ. ಈಗ ಅಂತಹುದೆ ‘ಪರಧಿ’ ಎನ್ನುವ ಚಿತ್ರವೊಂದು ತೆರೆಗೆ ಬರಲು ಸಿದ್ದವಾಗಿದೆ. ಪಾರ್ಸೆಲ್ ಕಂಪೆನಿಯಲ್ಲಿ ಕೆಲಸ ಮಾಡುವ ಯುವಕನೊಬ್ಬ ಐಷರಾಮಿ ಜೀವನಕ್ಕೆ ಆಸೆ ಪಟ್ಟು, ಇರುವ ಕೆಲಸಕ್ಕೆ ಬೆನ್ನು ತೋರಿಸಿ ಅರಿವಿಲ್ಲದೆ ಅಪರಾಧದ ಜಗತ್ತಿಗೆ ಕಾಲಿಡುತ್ತಾನೆ. ಇದರಿಂದ ನೆಮ್ಮದಿಯಾಗಿದ್ದವನು ಅದರಲ್ಲಿ ಸಿಲುಕಿಕೊಂಡು ಕಷ್ಟದ ವರ್ತುಲದಿಂದ ಹೇಗೆ ಹೊರಗೆ ಬರುತ್ತಾನೆ ಎಂಬುದು ಕತೆಯ ತಿರುಳು. ಕತೆ,ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಎಸ್.ಬಿ.ಶ್ರೀನಿವಾಸ್ ಈ ಮೊದಲು ಎರಡು ಸಿನಿಮಾಕ್ಕೆ ಕೆಲಸ ಮಾಡಿದ್ದು ಅರ್ಧಕ್ಕೆ ನಿಂತಿದೆ. ಈ ಸಮಯದಲ್ಲಿ ಏನಾದರೂ ಹೊಸ ರೀತಿಯಲ್ಲಿ ಪ್ರಯತ್ನ ಮಾಡಬೇಕೆಂದು ಯೋಚಿಸಿದ್ದ ಪರದಿ ಹುಟ್ಟಿ ಕೊಂಡಿದೆಯಂತೆ.

ಮಿಸ್ಡ್‍ಕಾಲ್ ಚಿತ್ರದಲ್ಲಿ ನಾಯಕನಾಗಿದ್ದ ರಾಜ್‍ಕಿರಣ್ ಮುಖ್ಯ ಪಾತ್ರ, ನಿಶಾಗೆ ನಾಯಕಿಯಾಗಿ ಎರಡನೆ ಚಿತ್ರ. ಇವರೊಂದಿಗೆ ಅಮರನಾಥಾರಾಧ್ಯ ನಟನೆ ಇದೆ. ಛಾಯಗ್ರಹಣ ಜೀವಾಆಂತೋಣಿ, ಸಂಕಲನ ನಿತೀಶ್‍ಕುಮಾರ್, ಹಿನ್ನಲೆ ಸಂಗೀತ ಸೂರಜ್‍ಮಹಾರಾಜ್-ಕಾರ್ತಿಕ್‍ವೆಂಕಟೇಶ್ ನಿರ್ವಹಿಸಿದ್ದಾರೆ. ಕೃಷ್ಣಗಿರಿಯಲ್ಲಿ ಕ್ಯಾಮಾರಗಳನ್ನು ಬಾಡಿಗೆ ನೀಡುವ ನಂದಕುಮಾರ್ ಚಿತ್ರಕ್ಕೆ ಇಪ್ಪತ್ತೈದು ಲಕ್ಷಗಳನ್ನು ವೆಚ್ಚ ಮಾಡಿದ್ದಾರೆ. ರೊಮಾಂಟಿಕ್, ಹಾರರ್, ಥ್ರಿಲ್ಲರ್ ಕತೆ ಹೊಂದಿರುವ ಚಿತ್ರವು 25ರಂದು ಬಿಡುಗಡೆಯಾಗಲಿದೆ.

ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
15/05/18



For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore