HOME
CINEMA NEWS
GALLERY
TV NEWS
REVIEWS
CONTACT US
ಪಂಚತಂತ್ರದಿಂದ ಕಿರುಚಿತ್ರ ಸ್ಪರ್ಧೆ
‘ಪಂಚತಂತ್ರ’ ಚಿತ್ರತಂಡದಿಂದ 2 ರಿಂದ 5 ನಿಮಿಷದ ಕಿರುಚಿತ್ರ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ 1000ಕ್ಕೂ ಹೆಚ್ಚು ಆಸಕ್ತರು ಚಿತ್ರ ತಯಾರಿಸಿದ್ದಾರೆ. ಇದರಲ್ಲಿ 150ನ್ನು ಆಯ್ಕೆ ಮಾಡಿ, ನಂತರ 10 ಚಿತ್ರಗಳನ್ನು ಪ್ರದರ್ಶನಕ್ಕೆ ಏರ್ಪಾಟು ಮಾಡಲಾಗಿತ್ತು. ಸ್ಪರ್ಧೆಯಲ್ಲಿ ಹೆಚ್ಚಿನವರು ಉತ್ತರ ಕರ್ನಾಟಕ ಭಾಗದವರು ಇರುವುದು ವಿಶೇಷವಾಗಿತ್ತು. ಭಟ್ಟರೊಂದಿಗೆ ಸಂಭಾಷಣೆಗಾರ ಮಾಸ್ತಿ, ಛಾಯಾಗ್ರಾಹಕ ಸುಜ್ಘಾನ್‍ಮೂರ್ತಿ ಮತ್ತು ನಾಯಕಿ ಸೋನಾಲ್‍ಮಾಂತೋರೆ ಅವರುಗಳ ನೇತೃತ್ವದಲ್ಲಿ ಚಿತ್ರಗಳನ್ನು ವೀಕ್ಷಿಸಲಾಯಿತು. ಅಂತಿಮವಾಗಿ ಜಮಖಂಡಿಯ ಯುವ ಪ್ರತಿಭೆ ಲಿಂಗರಾಜ ಸಂಗಳಿ ನಿರ್ದೇಶನದ ‘ದಿ ಡಾರ್ಕ್ ನೈಟ್’ ಶಾರ್ಟ್ ಫಿಲ್ಮ್ ಆಯ್ಕೆ ಆಯಿತು. ವಿಜೇತರಿಗೆ ತಂಡದಿಂದ ಶ್ಲಾಘನೆ ಪ್ರಮಾಣಪತ್ರ, 5 ಟಿಕೆಟ್‍ಗಳನ್ನು ಉಚಿತವಾಗಿ ನೀಡಲಾಗುವುದು. ನಿರ್ಮಾಪಕರುಗಳಾದ ಹರಿಪ್ರಸಾದ್‍ಜಯಣ್ಣ, ಹೇಮಂತ್‍ಪರಾಡ್ಕರ್ ಮುಂದಿನ ಚಿತ್ರದಲ್ಲಿ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಮಾಸ್ತಿ ಬರೆದಿರುವ ಆನೆ ಮತ್ತು ಮೊಲದ ಕತೆ ಚಿತ್ರವಾಗಿದೆ. ಹಳೆ ತಲೆಮಾರು ಮತ್ತು ಪ್ರಸಕ್ತ ಯುವ ಜನಾಂಗದ ನಡುವಿನ ತಲ್ಲಣಗಳು, ಪ್ರಥಮ ಬಾರಿ ಅಂತರರಾಷ್ಟ್ರೀಯ ಕಾರ್‍ರೇಸ್ ಇರುವುದು ಪ್ಲಸ್ ಪಾಯಿಂಟ್ ಆಗಿದೆ. ಅದರಲ್ಲೂ ವಿ.ಹರಿಕೃಷ ಸಂಗೀತದ ‘ಶೃಂಗಾರದ ಹೊಂಗೆ ಮರ’ ಗೀತೆಯು ಹಿಟ್ ಆಗಿರುವುದರಿಂದ ಜನರು ಸಿನಿಮಾ ನೋಡಲು ಕಾತುರರಾಗಿದ್ದಾರೆ. ನಾಯಕನಾಗಿ ವಿಹಾನ್‍ಗೌಡ, ಹಿರಿಯ ತಲೆಮಾರಿನಲ್ಲಿ ರಂಗಾಯಣರಘು, ಕರಿಸುಬ್ಬು, ಕಿರಿಯರುಗಳಾಗಿ ಅಕ್ಷರಾಗೌಡ, ದೀಪಕ್,ಸಾಕ್ಷಿ ಅಭಿನಯಿಸಿದ್ದಾರೆ. ಚಿತ್ರವು ಇದೇ 29ರಂದು ರಾಜ್ಯದ್ಯಂತ ತೆರೆಕಾಣಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
14/03/19




For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore