HOME
CINEMA NEWS
GALLERY
TV NEWS
REVIEWS
CONTACT US
ಡಾ.ವಿಷ್ಣುವರ್ದನ್ ಹೇಳಿದ ಪ್ರಸಂಗಗಳು
ಚಂದನವನದ ಹೆಸರಾಂತ ನಿರ್ಮಾಪಕ ಗಂಡುಗಲಿ ಕೆ.ಮಂಜು ಆರಾಧಿಸುವುದು, ಇಷ್ಟಪಡುವುದು ಅಂದರೆ ಡಾ.ವಿಷ್ಣುವರ್ಧನ್ ಮಾತ್ರ. ಅಂತೆಯೇ ವಿಷ್ಣು ನಟನೆಯ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಆ ಸಮಯದಲ್ಲಿ ಕಾಲೇಜು ದಿನಗಳಲ್ಲಿ ನಡೆದ ಘಟನೆಗಳನ್ನು ಇವರ ಹತ್ತಿರ ಹೇಳಿಕೊಂಡಿದ್ದರಂತೆ. ಅದನ್ನೆ ಈಗ ‘ಪಡ್ಡೆ ಹುಲಿ’ ಚಿತ್ರದಲ್ಲಿ ತೋರಿಸಲಾಗುತ್ತಿದೆ. ಚಿತ್ರದ ಮೊದಲ ಸುದ್ದಿಗೋಷ್ಟಿಯಲ್ಲಿ ತಂಡವು ಮಾದ್ಯಮದವರನ್ನು ಭೇಟಿ ಮಾಡಿತು. ನಿರ್ದೇಶಕ ಗುರುದೇಶಪಾಂಡೆ ಹೇಳುವಂತೆ ಕೆಲವು ನಿಮಿಷದ ಪ್ರೋಮೋಗೆ 40 ಲಕ್ಷ ಖರ್ಚು ಮಾಡಲಾಗಿದೆ. ದುರ್ಗದಿಂದ ಪ್ರಾರಂಭವಾಗುವ ಕತೆ ನಾಯಕ ಮದ್ಯಮ ವರ್ಗದಲ್ಲಿ ಬೆಳೆದು ಇಂಜಿನಿಯರಿಂಗ್ ಓದುವಾಗಲೇ ಸಂಗೀತ ಹುಚ್ಚು ಬೆಳಸಿಕೊಂಡು ಹೇಗೆ ಹಿಪ್‍ಹಾಪ್ ಆಗತ್ತಾನೆ ಎಂಬುದು ಒಂದು ಏಳೆಯ ಸಾರಾಂಶ. ಮಂಜು ಹೇಳಿದ ಕತೆಯನ್ನು ವಿಸ್ತಾರ ಮಾಡಲಾಗಿದೆ. ಪ್ರೋಮೋ ಭಾಗವನ್ನು ಶೇಕಡ 25ರಷ್ಟು ಬಳಸಲಾಗುವುದು. 89ರಲ್ಲಿ ಪ್ರೇಮಲೋಕ, 2018ರ ಪಡ್ಡೆಹುಲಿಯಾಗಲಿದೆ. ಈಗಿನ ವಿದ್ಯಾರ್ಥಿಗಳು ಹೇಗಿರುತ್ತಾರೆ ಎಂದು ತಿಳಿಯಲು ಕಾಲೇಜುಗಳಿಗೆ ಭೇಟಿ ನೀಡಿ ಮಾಹಿತಿಗಳನ್ನು ಗುಡ್ಡೆಹಾಕಿ ಚಿತ್ರಕತೆ ಸಿದ್ದಪಡಿಸಲಾಗಿದೆ ಎಂದರು.

2012ರಲ್ಲಿ 90 ಕೆ.ಜಿ ತೂಕ ಇದ್ದಾಗ ಅಪ್ಪ ಕಡೆಗಾಣ ಸಿದ್ದು, ಪುನೀತ್‍ರಾಜ್‍ಕುಮಾರ್ ಡ್ಯಾನ್ಸ್, ಫೈಟ್ ಗಮನ ಸಳೆದು, ಮುಂದೆ ವೈಜಾಗ್, ಪಾಂಡಿಚೇರಿ ನಟನಾ ತರಭೇತಿ ಶಾಲೆಯಲ್ಲಿ ಅಭ್ಯಾಸ ಮಾಡಿದ್ದು, ಹೆಬ್ಬುಲಿ ಸೆಟ್‍ನಲ್ಲಿ ಸುದೀಪ್‍ರಿಂದ ಕಲಿತುಕೊಂಡಿದ್ದು ಹೀಗೆ ಎಲ್ಲವನ್ನು ಸವಿವರವಾಗಿ ಹೇಳಿಕೊಂಡರು ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ ಮಂಜು ಸುಪುತ್ರ ಶ್ರೇಯಸ್. ಕಾಲೇಜು ಹುಡುಗಿಯಾಗಿ ಕಾಣ ಸಿಕೊಳ್ಳುತ್ತಿದ್ದೇನೆ ಅಂತಾರೆ ನಾಯಕಿ ನಿಶ್ವಿಕಾ.

42 ಚಿತ್ರಗಳನ್ನು ನಿರ್ಮಾಣ ಮಾಡಿರುವ ನನಗೆ ಯಾವುದೇ ನಿರ್ಮಾಪಕರಿಗೆ ಲಾಸ್ ಆಗಬಾರದೆಂಬ ಉದ್ದೇಶದಿಂದ ಮಗನನ್ನು ಹಾಕಿಕೊಂಡು ಸಿನಿಮಾ ಮಾಡುತ್ತೆನೆಂದು ಯಾರೇ ಬಂದರೂ ಒಪ್ಪಿಕೊಂಡಿರಲಿಲ್ಲ. ಅವನು ಸಿನಿಮಾಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಪಡೆದುಕೊಂಡು ಮುಂದೆ ನಿಂತಾಗ ತಮಿಳಿನ ಪಿಚ್ಚಿಕಾರನ್ ಮಾಡಲು ನಿರ್ಧರಿಸಲಾಯಿತು. ಮೊದಲ ಚಿತ್ರ ರಿಮೇಕ್ ಮಾಡುವುದಿಲ್ಲವೆಂದು ಹೇಳಿದ. ಗುರುಗಳು ಹೇಳಿದ ಪ್ರಸಂಗಗಳು ನೆನಪಿಗೆ ಬಂದು ಅದನ್ನೆ ಸಿನಿಮಾ ಮಾಡಬಹುದೆಂದು ಒಂದು ಏಳೆಯನ್ನು ನಿರ್ದೇಶಕರಿಗೆ ಹೇಳಿದಂತೆ ಚೆನ್ನಾಗಿ ಕತೆಯನ್ನು ಸಿದ್ದಪಡಿಸಿದ್ದಾರೆ. ಅಜನೀಶ್‍ಲೋಕನಾಥ್ ಆರು ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಸಿನಿಮಾವನ್ನು ಪ್ರೀತಿಸಬೇಕು, ಗೌರವಿಸಬೇಕು. ಯಾವುದೇ ಕಾರಣಕ್ಕೂ ನಿರ್ಮಾಪಕರನ್ನು ನೋಯಿಸುವಂತೆ ಕೆಲಸ ಮಾಡಬೇಡವೆಂದು ಹಿತಿನುಡಿಗಳನ್ನು ಹೇಳಿದ್ದೇನೆ. ವಿಷ್ಣುಜೀ ಮೂಲ ಹೆಸರು ಸಂಪತ್‍ಕುಮಾರ್ ಇರುವಂತೆ ಚಿತ್ರದಲ್ಲಿ ಅದೇ ಹೆಸರಿನೊಂದಿಗೆ ನಟಿಸುತ್ತಿದ್ದಾನೆ ಎಂದು ಹೇಳುತ್ತಾ ಹೋದರು ಕೆ.ಮಂಜು. ಕೆ.ಎಸ್.ಚಂದ್ರಶೇಖರ್ ಚಿತ್ರಕ್ಕೆ ಕಣ್ಣಾಗಿದ್ದರೆ, ರುಕೇಶ್-ಶ್ರೀಕಾಂತ್ ಮಾತುಗಳನ್ನು ಪೋಣ ಸುತ್ತಿದ್ದಾರೆ. ಭಾನುವಾರ ನಡೆಯಲಿರುವ ಮಹೂರ್ತ ಸಮಾರಂಭಕ್ಕೆ ತಂಡಕ್ಕೆ ಶುಭ ಹಾರೈಸಲು ಪುನೀತ್‍ರಾಜ್‍ಕುಮಾರ್, ಸುದೀಪ್ ಆಗಮಿಸಲಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
11/03/18
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore