HOME
CINEMA NEWS
GALLERY
TV NEWS
REVIEWS
CONTACT US
ಆಸೆಯೇ ತೊಂದರೆಗಳಿಗೆ ಮೂಲ
ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎನ್ನುವ ಗಾದೆ ಇದೆ. ಅದನ್ನು ಮೀರಿದರೆ ಏನೆಲ್ಲಾ ಆಗುತ್ತದೆ ಎಂಬುದನ್ನು ‘ಪುನಾರಂಭ’ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಕತೆಯಲ್ಲಿ ನಾಯಕ ಅತಿಯಾದ ಆಸೆಯಿಂದ ಜೀವನದಲ್ಲಿ ಮೇಲೆ ಬರಲು ಹಚ್ಚು ಸಾಲ ಮಾಡುತ್ತಾನೆ. ನಂತರ ಸಾಲ ತೀರಿಸಲಾಗದೆ ಸಂಸಾರ ಕಷ್ಟಕ್ಕೆ ಸಿಲುಕುತ್ತದೆ. ಇದರಿಂದ ಹೆಂಡತಿಯೊಂದಿಗೆ ಜಗಳ, ಮಾನಸಿಕ ಒತ್ತಡ ಇವೆಲ್ಲವುಗಳಿಂದ ಕುಡಿತಕ್ಕೆ ಒಳಗಾಗುತ್ತಾನೆ. ಒಂದು ಅಪಘಾತದ ಬಳಿಕ ಜೀವನ ಶೈಲಿ ಬದಲಾಗುತ್ತದೆ. ಇಲ್ಲಿ ಅವನ ಬದುಕು ಪುರಾರಂಭವಾಗುತ್ತದೆ ಅಂದು ಕೊಂಡರೆ ಕತೆಯು ಬೇರಲ್ಲೋ ತೆಗೆದುಕೊಂಡು ಹೋಗುತ್ತದೆ.. ಮಾದಕ ದ್ರವ್ಯ ನಡೆಸುವ ಹಣವು ಆಕಸ್ಮಿಕವಾಗಿ ಈತನಿಗೆ ಸಿಕ್ಕಾಗ ಬಿಂದಾಸ್ ಆಗುತ್ತಾನೆ. ಇದನ್ನು ತಿಳಿದ ಖಳನಾಯಕ ಹಣವನ್ನು ವಾಪಸ್ಸು ಪಡೆಯಲು ನಾಯಕನ ಸಂಬಂದಿಗಳ ಅಪಹರಣ ಮಾಡಿದಾಗ ಅಷ್ಟು ಹಣವನ್ನು ವಾಪಸ್ ತರುತ್ತಾನೆ. ಆತ ಖರ್ಚು ಮಾಡಿದ ದುಡ್ಡನ್ನು ಹೇಗೆ ತರುತ್ತಾನೆ ಎಂಬುದನ್ನು ಕೇಳವ ಆಗಿಲ್ಲ. ದೃಶ್ಯಗಳು ದಕ್ಷಿಣಕನ್ನಡ ಮತ್ತು ಮಂಡ್ಯಾ ಶೈಲಿಯಲ್ಲಿ ಪಾತ್ರಗಳನ್ನು ಮಾತನಾಡಿಸುತ್ತದೆ.

ಕೆಲವು ಕಡೆ ಸನ್ನಿವೇಶಗಳು ಯಾತಕ್ಕಾಗಿ ಬಂತು ಎಂಬುದು ಅರ್ಥವಾಗುವುದಿಲ್ಲ. ಆತನಿಗೆ ಸಿಕ್ಕ ಪುನಾರಂಭ ಯಾವುದು ಅಂತ ತಿಳಿಯಬೇಕಿದ್ದರೆ ಸಿನಿಮಾ ನೋಡಬೇಕು. ಪೋಷಕ ಪಾತ್ರಗಳಲ್ಲಿ ಅಭನಯಿಸಿ ವಿದೇಶಕ್ಕೆ ಹಾರಿದ್ದ ಡಾ.ವಿಜಯ್‍ಕುಮಾರ್ ಗ್ಯಾಪ್ ನಂತರ ಕತೆ, ಚಿತ್ರಕತೆ, ನಿರ್ಮಾಣ, ನಿರ್ದೇಶನ ಜೊತೆಗೆ ಮೊದಲಬಾರಿ ನಾಯಕನಾಗಿ ಅಭಿನಯಿಸಿರುವುದರಿಂದ ಎಲ್ಲಾ ವಿಭಾಗದಲ್ಲಿ ಕೆಲಸ ಮಾಡಿರುವ ಕಾರಣ ಒಂದಷ್ಟು ತಪ್ಪುಗಳು ಕಾಣುವುದು ಸಹಜ. ಅದೆಲ್ಲಾವನ್ನು ಬದಿಗಿಟ್ಟು ನೋಡಿದರೆ ಸಿನಿಮಾ ಇಷ್ಟವಾಗುತ್ತದೆ. ನಾಯಕ ಐಶ್ವರ್ಯದಿನೇಶ್ ಅಭಿನಯದಲ್ಲಿ ಪಳಗಬೇಕು. ಶೋಭರಾಜ್ ಎಂದಿನಂತೆ ಖಳನಾಯಕನಾಗಿ ವಿಜೃಂಬಿಸಿದ್ದಾರೆ. ಉಳಿದಂತೆ ಶಂಕರ್‍ಅಶ್ವಥ್, ಕೆ.ಗಣೇಶ್‍ರಾವ್, ರಿಚರ್ಡ್‍ಲೂಯಿಸ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಡಾ.ನಾಗೇಂದ್ರಪ್ರಸಾದ್ ಸಾಹಿತ್ಯ ಮತ್ತು ಸಂಗೀತದಲ್ಲಿ ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ವಿಜಯ್‍ಕುಮಾರ್ ವೈದ್ಯನಾಗಿ ಕನ್ನಡ ಮೇಲಿನ ಅಭಿಮಾನಿದಿಂದ ಅಲ್ಲಿಂದ ಇಲ್ಲಿಗೆ ಬಂದು ಸಿನಿಮಾ ಮಾಡಿರುವ ಪರಿಯನ್ನು ಮೆಚ್ಚಬೇಕಾಗಿದೆ.
-6/01/18
ಜನರ ಎದುರು ಪುನಾರಂಭ
ವೃತ್ತಿಯಲ್ಲಿ ಡಾಕ್ಟರ್, ಅಂತರಾಳದಲ್ಲಿ ಕಲಾವಿದನಾಗಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿ ಬದುಕಿಗಾಗಿ ವಿದೇಶಕ್ಕೆ ಹೋದರೂ ಬಣ್ಣದ ವ್ಯಾಮೋಹ ಕಡಿಮೆಯಾಗಿಲ್ಲ. ಅದರಂತೆ ದುಡಿದ ಹಣದಲ್ಲಿ ‘ಪುನಾರಂ¨s’ ಚಿತ್ರಕ್ಕೆ ಕತೆ,ಚಿತ್ರPತೆ, ಸಂಭಾಷಣೆ, ನಿರ್ದೇಶನ ಜೊತೆಗೆ ನಾಯಕನಾಗಿ ಅಭಿನಯಿಸಿರುವುದು ಡಾ.ವಿಜಯ್‍ಕುಮಾರ್. ಸಿನಿಮಾ ಕುರಿತು ಹೇಳುವುದಾದರೆ ಕನಸುಗಳನ್ನು ಕಟ್ಟಿಕೊಂಡು ಸಾಧನೆ ಮಾಡಲು ಹೋದಾಗ ಹಣಕಾಸಿನಲ್ಲಿ ಏರುಪೇರು ಆಗುತ್ತದೆ. ಮುಂದೆ ಕುಟುಂಬದ ಮೇಲೆ ಪರಿಣಾಮಗಳು ಬೀರುತ್ತವೆ. ಅದನ್ನು ಯಾವ ರೀತಿಯಲ್ಲಿ ಹತೋಟಿಗೆ ತಂದು ಯಶಸ್ಸು ಕಾಣುತ್ತಾನೆ ಎಂಬುದು ಒಂದು ಏಳೆಯ ಕತೆಯಾಗಿದೆ.

ಮೈಸೂರಿನ ಮಾಡಲ್ ಐಶ್ವರ್ಯದಿನೇಶ್ ನಾಯಕಿಯಾಗಿ ಹೊಸ ಅನುಭವ. ಉಳಿದಂತೆ ಶಂಕರ್‍ಅಶ್ವಥ್, ಶೋಭರಾಜ್, ವಿಜಯ್‍ಕುಮಾರ್, ಗಣೇಶ್‍ರಾವ್, ರಿಚರ್ಡ್‍ಲೂಯಿಸ್, ಲಯೇಂದ್ರ, ವೈಷ್ಣವಿ, ಶ್ವೇತಗಾಡ, ಪ್ರೀತಂ, ಪೂಜಾ ಮುಂತಾದವರು ತಂಡದಲ್ಲಿ ಸೇರಿಕೊಂಡಿದ್ದಾರೆ. ಡಾ.ನಾಗೇಂದ್ರಪ್ರಸಾದ್ ಸಾಹಿತ್ಯ ರಚಿಸಿ ಸಂಗೀತ ಒದಗಿಸಿದ್ದು, ಜಯಂತ್‍ಕಾಯ್ಕಣಿ ಒಂದು ಗೀತೆಯನ್ನು ಬರೆದಿರುವುದು ವಿಶೇಷ. ಛಾಯಗ್ರಹಣ ಮುತ್ತುರಾಜ್, ನೃತ್ಯ ರಾಮು, ಸಾಹಸ ಸೂರ್ಯಪ್ರಕಾಶ್ ನಿರ್ವಹಿಸಿದ್ದಾರೆ. ವಿಭಿನ್ ಕ್ರಿಯೇಷನ್ಸ್ ಲಾಂಛನದಲ್ಲಿ ಪತ್ನಿ ಡಾ|| ರೂಪಕುಮಾರ್ ನಿರ್ಮಿಸಿರುವ ಸಿನಿಮಾವು ಜನವರಿ ಮೊದಲವಾರದಂದು ತೆರೆಕಾಣಲಿದೆ.
-2/01/18
ಪುನಾರಂಭ’ ಯು/ಎ ಪ್ರಮಾಣಪತ್ರ
ವಿಭಿನ್ ಕ್ರಿಯೇಷನ್ ಲಾಂಛನದಲ್ಲಿ ಡಾ: ರೂಪಕುಮಾರ್ ನಿರ್ಮಿಸುತ್ತಿರುವ ಪುನಾರಂಭ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ದೊರೆತಿದೆ. ಈ ಚಿತ್ರವನ್ನು 2018ರ ಜನವರಿ ಮೊದಲ ವಾರದಲ್ಲಿ ತೆರೆಗೆ ತರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

ಡಾ|| ವಿಜಯ್ ಕುಮಾರ್ ನಿರ್ದೇಶಿಸಿರುವ ಈ ಚಿತ್ರಕ್ಕೆ ಡಾ|| ವಿ.ನಾಗೇಂದ್ರ ಪ್ರಸಾದ್ ಸಂಗೀತ, ಎಂ.ಮುತ್ತುರಾಜ್ ಛಾಯಾಗ್ರಹಣ, ಜಯಂತ್ ಕಾಯ್ಕಿಣ , ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ವಿಜಯ್ ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ, ರಾಮು ನೃತ್ಯ ನಿರ್ದೇಶನ, ಸೂರ್ಯಪ್ರಕಾಶ್ ಸಾಹಸವಿದೆ. ಡಾ|| ವಿಜಯ್‍ಕುಮಾರ್ ಐಶ್ವರ್ಯ ದಿನೇಶ್, ಶೋಭರಾಜ್, ಶಂಕರ್ ಅಶ್ವತ್, ಗಣೇಶ್ ರಾವ್, ಕೆಸರ್‍ಕರ್, ರಿಚಾರ್ಡ್ ಲೂಯೀಸ್ ಲಯೇಂದ್ರ, ವೈಷ್ಣವಿ, ಶ್ವೇತಾಗೌಡ, ಪ್ರೀತು, ಪೂಜಾ, ಸುರೇಖಾ, ಮಾಸ್ಟರ್ ಸಂಜೀವ್, ಮಾಸ್ಟರ್ ಕಶ್ಯಪ್, ಗುರುರಾಜ್, ರಾಜೀವ್ ಮುಂತಾದವರ ತಾರಾಬಳಗವಿದೆ.
-13/12/17
ಪುನಾರಂಭ ಹಾಡುಗಳ ಮೇಳ
ಡಾ.ವಿಜಯ್‍ಕುಮಾರ್ ಈ ಹಿಂದೆ ಹಲವಾರು ಚಿತ್ರಗಳಲ್ಲಿ ನಟಿಸಿ, ವೆಸ್ಟ್ ಇಂಡೀಸ್‍ಗೆ ಮರಳಿ ಪ್ರಾಧ್ಯಪಕ, ವೈದ್ಯ ವೃತ್ತಿಯಲ್ಲಿ ತಲ್ಲೀನರಾಗಿದ್ದರು. ಆದರೆ ಒಮ್ಮೆ ಬಣ್ಣದ ರುಚಿ ಕಂಡವರು ಅದನ್ನು ಮರೆಯುವುದು ಅಷ್ಟು ಸುಲಭವಲ್ಲ. ಅದರಂತೆ ವೈದ್ಯರು ದೀರ್ಘ ಕಾಲದ ಗ್ಯಾಪ್ ನಂತರ ದುಡಿದ ಹಣದಲ್ಲಿ ‘ಪುನಾರಂಭ’ ಚಿತ್ರಕ್ಕೆ ಕತೆ, ಚಿತ್ರಕತೆ,ಸಂಭಾಷಣೆ, ನಿರ್ಮಾಣ, ನಿರ್ದೇಶನ ಜೊತೆಗೆ ನಾಯಕನಾಗಿ ಅಭಿನಯಿಸಿದ್ದಾರೆ. ಸೋಮವಾರ ಆಡಿಯೋ ಸಿಡಿ ಬಿಡುಗಡೆಗೊಂಡಿತು. ನಿರ್ಮಾಪಕರ ದೂರದ ಸಂಬಂದಿಯಾಗಿರುವ ಗುರುಕಿರಣ್ ತಮ್ಮ ಮಾತಿನಲ್ಲಿ ಡಾಕ್ಟರ್ ಚಿತ್ರರಂಗ ಬಿಟ್ಟುಹೋದರು ಅಂತ ತಿಳಿದುಕೊಂಡಿದ್ದೆ. ಆರಂಭ ಸಿನಿಮಾದಲ್ಲಿ ರಿಚರ್ಡ್ ಅವರನು ಭೇಟಿ ಮಾಡಿದ್ದೆ. ಪುರಾರಂಬ ಮೂಲಕ ಮತ್ತೋಮ್ಮೆ ನೋಡುವಂತಾಯಿತು. ತಾರಕದಲ್ಲಿರುವಾಗ ಚಿತ್ರರಂಗ ಬಿಟ್ಟುಹೋಗಿ ವಿದೇಶಕ್ಕೆ ಹಾರಿದರು. ಭಾಷೆಯ ಮೇಲಿನ ಮೋಹದಿಂದ ನಿರ್ಮಾಣ ಮಾಡಿದ್ದಾರೆ. ಯಶಸ್ಸು ಸಿಗಲಿ ಎಂದರು. ಅಭಿನಯ ತರಂಗದಲ್ಲಿ ವಿದ್ಯಾರ್ಥಿಯಾಗಿದ್ದಾಗ ರಿಚರ್ಡ್‍ಲೂಯಿಸ್ ಗುರಗಳಾಗಿದ್ದರು. ನಮ್ಮ ಕಾಲದಂತೆ ಇಂದು ಸಿನಿಮಾರಂಗವಿಲ್ಲ. ಹೊಸಬರಿಗೆ ಅವಕಾಶ ಮಾಡಿಕೊಡಲಾಗಿದೆ. ಕತೆಯಲ್ಲಿ ನಾಯಕ ರಿಸ್ಕ್ ತೆಗೆದುಕೊಂಡು ಎಲ್ಲವನ್ನು ಧಾರೆ ಎರೆದು ವ್ಯಾಪರಕ್ಕೆ ಹಣ ಹೂಡುತ್ತಾನೆ. ಇದರಿಂದ ಅನೇಕ ತೊಂದರೆಗಳು ಎದುರಾಗುತ್ತಾವೆ. ಮತ್ತೆ ಅದೇ ಹಣವನ್ನು ಪಡೆಯುವುದೇ ಸಿನಿಮಾದ ಶೀರ್ಷಿಕೆಯಾಗಿದೆ ಎಂಬುದರ ತಿರುಳನ್ನು ಬಿಚ್ಚಿಟ್ಟರು ವಿಜಯ್‍ಕುಮಾರ್.

ಶಿಷ್ಯನಿಗೆ ಶುಭ ಹಾರೈಸಲು ಆಗಿಮಿಸಿದ್ದ ಹಾಸ್ಯರತ್ನ ರಿಚರ್ಡ್‍ಲೂಯಿಸ್ ಸಿನಿಮಾ ಆರೋಗ್ಯ ಒಳ್ಳೆಯದಲ್ಲ. ಇಲ್ಲಿಯವರೆಗೆ 47 ಚಿತ್ರದಲ್ಲಿ ನಟನೆ, 38 ಸಿನಿಮಾಗಳಿಗೆ ಸಂಭಾಷಣೆ, 12 ಸಿನಿಮಾಗೆ ಕತೆ ಬರೆಯಲಾಗಿದೆ. ಸದ್ಯದ ಪರಿಸ್ಥತಿಯಲ್ಲಿ ಇದರಿಂದ ದುಡ್ಡು ಕಾಸು ಬರೋಲ್ಲ. ಆದರೂ ಬೇರೆ ಏನೋ ಖುಷಿ ಇದೆ. ಇದು ಒಂಥರ ಹೆಣ್ಣು ಇದ್ದಂತೆ. ನಾವುಗಳು ಹುಡುಗಿ ಹಿಂದೆ ಹೋದಂತೆ, ಚಿತ್ರರಂಗವು ನಮ್ಮ ಹಿಂದೆ ಬೀಳುತ್ತದೆಂದು ಹಾಸ್ಯ ಚಟಾಕಿ ಹಾರಿಸಿ ನಗಿಸಿದರು. ಮಿಸ್‍ಕರ್ನಾಟಕ, ಮಾಡೆಲ್ ಆಗಿರುವ ನನಗೆ ನಾಯಕಿಯಾಗಿ ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್ ಎನ್ನತ್ತಾರೆ ಐಶ್ವರ್ಯದಿನೇಶ್. ಮೊದಲು ಹಾಡುಗಳು ಮಾತಾಡಲಿ, ಮುಂದೆ ಹಾಡುಗಳ ಬಗ್ಗೆ ನೀವು ಮಾತನಾಡಬೇಕು. 8 ವರ್ಷ ಗೀತೆಗಳನ್ನು ಬರೆಯುವದರಲ್ಲಿ ಬ್ಯುಸಿ ಇರುವ ಕಾರಣ ಸಂಗೀತದ ಕಡೆ ಒಲವು ತೋರಿಸಲು ಆಗಲಿಲ್ಲ. ಇನ್ನು ಮುಂದೆ ಮ್ಯೂಸಿಕ್ ಮಾಡಲು ಸಮಯ ಮೀಸಲಿರಿಸುವುದಾಗಿ ಹೇಳಿಕೊಂಡಿದ್ದು ನಾಲ್ಕು ಹಾಡುಗಳಿಗೆ ರಾಗ ಸಂಯೋಜನೆ ಮಾಡಿರುವ ನಾಗೇಂದ್ರಪ್ರಸಾದ್ .
-8/11/17

ಪುನಾರಂಭ ಕುಂಬಳಕಾಯಿ
ವಿಭಿನ್ ಕ್ರಿಯೇಷನ್ ಲಾಂಛನದಲ್ಲಿ ಡಾ: ರೂಪಕುಮಾರ್ ನಿರ್ಮಿಸುತ್ತಿರುವ ‘ಪುನಾರಂ¨’sÀ ಚಿತ್ರೀಕರಣಕ್ಕೆ ಇತ್ತೀಚೆಗೆ ಮಂಚಿನಬೆಲ್ಲೆ ಡ್ಯಾಂ ಹತ್ತಿರ ನಾಯಕ ವಿಜಯ್‍ಕುಮಾರ್ ನಾಯಕಿ ಐಶ್ವರ್ಯದಿನೇಶ್ ಅಭಿನಯಿಸಿದ “ಮೊನ್ನೆಗಿಂತ ನೆನ್ನೆ, ನೆನ್ನೆಗಿಂತ ಇಂದು ಎಂದಿಗೆಂತ ಚೆಂದ ನಿನ್ನಿಂದ” ಎಂಬ ಹಾಡಿನೊಂದಿಗೆ ಒಟ್ಟು ಎರಡು ಹಾಡುಗಳನ್ನು ಚಿತ್ರೀಕರಿಸಿಕೊಳ್ಳುವುದರೊಂದಿಗೆ ಕುಂಬಳಕಾಯಿ ಒಡೆಯಲಾಗಿದೆ.

ಡಾ||ವಿಜಯ್‍ಕುಮಾರ್ ಹಾಗೂ ಕೆ.ಗಣೇಶ್‍ರಾವ್ ಜೊತೆಗೂಡಿ ನಿರ್ಮಿಸುತ್ತಿರುವ ಚಿತ್ರಕ್ಕೆ ಡಾ|| ವಿ.ನಾಗೇಂದ್ರ ಪ್ರಸಾದ್ ಸಂಗೀತ, ಎಂ.ಮುತ್ತುರಾಜ್ ಛಾಯಾಗ್ರಹಣ, ಜಯಂತ್ ಕಾಯ್ಕಿಣ , ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ವಿಜಯ್ ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ, ರಾಮು ನೃತ್ಯ ನಿರ್ದೇಶನ, ಸೂರ್ಯಪ್ರಕಾಶ್ ಸಾಹಸವಿದೆ. ತಾರಬಳಗದಲ್ಲಿ ಶೋಭರಾಜ್, ಶಂಕರ್ ಅಶ್ವತ್, ಗಣೇಶ್ ರಾವ್, ಕೆಸರ್‍ಕರ್, ರಿಚಾರ್ಡ್ ಲೂಯೀಸ್ ಲಯೇಂದ್ರ, ವೈಷ್ಣವಿ, ಶ್ವೇತಾಗೌಡ, ಪ್ರೀತು, ಪೂಜಾ, ಸುರೇಖಾ, ಮಾಸ್ಟರ್ ಸಂಜೀವ್, ಮಾಸ್ಟರ್ ಕಶ್ಯಪ್, ಗುರುರಾಜ್, ರಾಜೀವ್ ಮುಂತಾದವರ ತಾರಾಬಳಗವಿದೆ.
-21/10/17

ಮಹೂರ್ತ ಆಚರಿಸಿಕೊಂಡ ಪುನಾರಂಭ
ಒಂದು ಬಾರಿ ಬಣ್ಣ ಹಚ್ಚಿದ ಕೂಡಲೆ ಅಷ್ಟು ಸುಲಭವಾಗಿ ಬಿಡುವಂತಿಲ್ಲ ಎಂಬುದಕ್ಕೆ ಸಾಕ್ಷಿ ಡಾ.ವಿಜಯ್‍ಕುಮಾರ್. ಇವರದು ವೃತ್ತಿಯಲ್ಲಿ ವೈದ್ಯ, ಅಂಶಕಾಲಿಕದಲ್ಲಿ ನಟ. ಹಲವು ವರ್ಷಗಳ ಕಾಲ ಅನೇಕ ಚಿತ್ರಗಳಲ್ಲಿ ಅಭಿನಯಿಸಿ, ನಂತರ ನಟನೆಗೆ ಗುಡ್‍ಬೈ ಹೇಳಿ ನಂಬಿದಂತಹ ಕಾಯಕದಲ್ಲೆ ವಿದೇಶದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದರು. ಗ್ಯಾಪ್ ತೆಗೆದುಕೊಂಡು ತಾಯ್ನಾಡಿಗೆ ಬಂದು ‘ಪುನಾರಂಭ’ ಎನ್ನುವ ಚಿತ್ರಕ್ಕೆ ಕತೆ,ಚಿತ್ರಕತೆ,ಸಂಭಾಷಣೆ ಜೊತೆಗೆ ಮೊದಲಬಾರಿ ನಿರ್ದೇಶನ ಮಾಡಲಿದ್ದು ನಾಯಕನಾಗಿ ಅಭಿನಯಿಸಲು ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಅದೇ ರೀತಿ ಪೋಷಕಪಾತ್ರಗಳಲ್ಲಿ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣ ಸಿಕೊಂಡಿರುವ ಕೆ.ಗಣೇಶ್‍ರಾವ್ ಕೇಸರ್ಕರ್ ನಾಯಕನ ಗೆಳಯನ ಪಾತ್ರದಲ್ಲಿ ನಟನೆ ಮತ್ತು ನಿರ್ದೇಶನದಲ್ಲಿ ಸಹಕಾರಿಯಾಗಿದ್ದಾರೆ. ಕತೆಯ ಕುರಿತು ಹೇಳುವುದಾದರೆ ನಾಯಕ ಒಂದು ಕನಸಿನ ಯೋಜನೆಯನ್ನು ಶುರು ಮಾಡುತ್ತಾನೆ. ಮುಂದೆ ಅಡಚಣೆಗಳು ಒದಗಿಬಂದಾಗ ಹಣಕಾಸಿನ ಒತ್ತಡಗಳಿಂದ ಜರ್ಜರಿತ ನಾಗುತ್ತಾನೆ. ಇದರಿಂದ ಕುಟುಂಬದ ಮೇಲೆ ಪರಿಣಾಮ ಬೀರಿದಾಗ, ಅದನ್ನು ಹೇಗೆ ಎದುರಿಸಿ ಹೊರಗೆ ಬರುತ್ತಾನೆ ಎಂಬುದು ಒಂದು ಏಳೆಯ ಸಿನಿಮಾದ ತಿರುಳು. ಹಣ ಇದ್ದರೂ, ಇಲ್ಲದಿದ್ದರೂ ಕಷ್ಟ ಎಂಬುದನ್ನು ತೋರಿಸಲಾಗಿದೆ. ಮತ್ತೋಂದು ಸನ್ನಿವೇಶದಲ್ಲಿ ಡ್ರಗ್ಸ್ ಕುರಿತ ದೃಶ್ಯಗಳು ಬರಲಿದ್ದು ವಿದ್ಯಾರ್ಥಿ ಸಮುದಾಯಕ್ಕೆ ಸಂದೇಶವನ್ನು ಹೇಳುವ ಪ್ರಯತ್ನವನ್ನು ಮಾಡಿದ್ದಾರೆ.

ಮಡಕೇರಿಯಲ್ಲಿ ಯಾರು ನೋಡದ ಸ್ಥಳದಲ್ಲಿ 50 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ. ಉಳಿದಂತೆ ಅಡಿಷನ್ ನಡೆಸಿ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮಿಸ್ ಕರ್ನಾಟಕ 16 ಐಶ್ವರ್ಯದಿನೇಶ್ ನಾಯಕಿ. ಕತೆಗೆ ತಿರುವು ಕೊಡುವ ಪಾತ್ರದಲ್ಲಿ ವೈಷ್ಣವಿ, ಖಳನಾಯಕಿಯಾಗಿ ಪ್ರೀತೂಪೂಜ, ಗೌರಿಶ್ರೀ ಇನ್ಸೆಪೆಕ್ಟರ್ ಹೆಂಡತಿ, ಶ್ವೇತಾಗೌಡ ನಾಯಕನ ಅಕ್ಕ. ಇವರುಗಳೊಂದಿಗೆ ಹಿರಿಯ ಕಲಾವಿದರಾದ ಶಂಕರ್‍ಅಶ್ವಥ್, ಶೋಭರಾಜ್, ರಿಚರ್ಡ್‍ಲೂಯಿಸ್, ಲಯೇಂದ್ರ ನಟನೆ ಇದೆ. ಡಾ.ನಾಗೇಂದ್ರಪ್ರಸಾದ್‍ರವರ ಸಾಹಿತ್ಯ ಹಾಗೂ ಸಂಗೀತ, ಛಾಯಗ್ರಹಣ ಎಂ.ಮುತ್ತುರಾಜ್, ಸಾಹಸ ಸೂರ್ಯಪ್ರಕಾಶ್ ಅವರದಾಗಿದೆ. ವೈದ್ಯರ ಪತ್ನಿ ಡಾ.ರೂಪಕುಮಾರ್ ನಿರ್ಮಾಪಕಿಯಾಗಿ ಚಂದನವನದಲ್ಲಿ ಗುರುತಿಸಿಕೊಂಡಿದ್ದಾರೆ. ಮಹೂರ್ತ ಸಮಾರಂಭಕ್ಕೆ ಶಾಸಕ ಅಶ್ವಥ್‍ನಾರಾಯಣ ಸೇರಿದಂತೆ ಸಿನಿಪಂಡಿತರು ಆಗಮಿಸಿ ತಂಡಕ್ಕೆ ಶುಭಹಾರೈಸಿದರು.
-Cine Circle News
-18/08/17For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore