HOME
CINEMA NEWS
GALLERY
TV NEWS
REVIEWS
CONTACT US
ಪ್ರೀತಿ ಪ್ರೇಮ ಬದನೇಕಾಯಿ ಮಸಾಲಾ
ಪ್ರೇಮï(ಕೃಷ್ಣ ಚೈತನ್ಯ) ಹಾಗೂ ಪ್ರೀತಿ(ನಿಧಿ ಕುಶಾಲಪ್ಪ) ಇಬ್ಬರ ನಡುವೆ ನಡೆಯುವ ಪ್ರೀತಿ, ಪ್ರೇಮದ ಕಲಹ, ಪ್ರೇಮಾಂಕುರ ಇವಿಷ್ಟರ ನಡುವೆ ನಡೆಯುವ ಕಥೆಯನ್ನು ಹೇಳುವುದೇ ಪ್ರೀತಿ ಪ್ರೇಮ ಚಿತ್ರದ ಕಥಾವಸ್ತು. ತಾನೊಬ್ಬ ವಿವಾಹಿತ, ಪತ್ನಿ ಹೆರಿಗೆಗಾಗಿ ಅಮೆರಿಕಾದಲ್ಲಿz್ದÁಳೆ ಎಂದು ಮನೆ ಮಾಲೀಕನಿಗೆ ಸುಳ್ಳು ಹೇಳಿ ಅಪಾರ್ಟ್‍ಮೆಂಟ್ ಒಂದಕ್ಕೆ ತನ್ನ ಸ್ನೇಹಿತನೊಂದಿಗೆ ಬಾಡಿಗೆಗೆ ಬರುತ್ತಾನೆ. ಆ ಮಾಲೀಕನ ಮಗಳಾದ ಪ್ರೀತಿಗೆ ತನ್ನನ್ನು ಪ್ರೀತಿಸು ಎಂದು ಸದಾ ಬೆದರಿಕೆ ಹಾಕುತ್ತಿರುವ ಕಿಶೋರ್, ಆತನ ಕಾಟದಿಂದ ಬೇಸತ್ತ ಪ್ರೀತಿ, ತಮ್ಮ ಫ್ಲಾಟ್‍ನಲ್ಲೇ ವಾಸವಿರುವ ಪ್ರೇಮ್‍ನನ್ನು ಹೊರಗಡೆ ಹೋಗುವಾಗ ತನ್ನ ಜೊತೆ ಕರೆದುಕೊಂಡು ಹೋಗುತ್ತಾಳೆ. ಇದೇ ಸಂದರ್ಭದಲ್ಲಿ ಪ್ರೇಮ್, ಪ್ರೀತಿಯನ್ನು ಲವ್ ಮಾಡುತ್ತಾನೆ. ಆದರೆ ಪ್ರೀತಿಗೆ ಲವ್ ಬಗ್ಗೆ ಆಸಕ್ತಿಯೇ ಇರುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿರುವ ಇವರಿಬ್ಬರ ನಡುವೆ ಪ್ರೀತಿ ಚಿಗುರೊಡೆಯಿತೇ, ಇಲ್ಲವೇ ಬಾಡಿ ಹೋಯಿತೇ ಎಂದು ಹೇಳುವುದೇ ಈ ವಾರ ಬಿಡುಗಡೆಯಾಗಿರುವ ಪ್ರೀತಿ ಪ್ರೇಮ ಚಿತ್ರದ ಕಥಾವಸ್ತು.
ಉಪೇಂದ್ರರ ಗರಡಿಯಲ್ಲಿ ಪಳಗಿದ ಅಭಿಮಾನಿಯೊಬ್ಬನ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಬಗ್ಗೆ ಒಂದಷ್ಟು ನಿರೀಕ್ಷೆಗಳಿದ್ದದ್ದು ಸುಳ್ಳಲ್ಲ. ಕಾಶಿ ಆಕ್ಷನ್-ಕಟ್ ಹೇಳಿರುವ ಈ ಚಿತ್ರದ ಕೆಲವೆಡೆ ಉಪೇಂದ್ರ ಅವರ ಚಿತ್ರಗಳ ಛಾಯೆ ಕಂಡುಬಂದಿದೆ. ‘ಪ್ರೀತಿ ಪ್ರೇಮ’ ಪುಸ್ತಕದ ಬದನೇಕಾಯಿ ಎಂದು ಚಿತ್ರದ mõÁ್ಯಗ್‍ಲೈನ್‍ನಲ್ಲಿ ಹೇಳಿದ್ದರೂ, ಚಿತ್ರದ ಕ್ಲೈಮ್ಯಾಕ್ಸ್‍ನಲ್ಲಿ ನಿಜವಾದ ಪ್ರೀತಿ ಯಾವತ್ತೂ ಗೆಲ್ಲುತ್ತದೆ ಎಂದು ನಿರೂಪಿಸಿದ್ದಾರೆ.

ಕೆಲ ಹರೆಯದ ಹುಡುಗ, ಹುಡುಗಿಯರು ತಮ್ಮ ಸ್ವಾರ್ಥ ಸಾಧನೆಗಾಗಿ ಪ್ರೀತಿ-ಪ್ರೇಮದ ವಿಷಯದಲ್ಲಿ ಏನೆಲ್ಲಾ ನಾಟಕ ಹೆಣೆಯುತ್ತಾರೆ, ಅಂಥವರ ನಡುವೆಯೂ ನಿಜವಾದ ಪ್ರೇಮಿಗಳಿದ್ದಾರೆಂಬುದನ್ನು ಎರಡು ಕಥೆಗಳ ಮೂಲಕ ಹೇಳುವ ಪ್ರಯತ್ನವನ್ನು ನಿರ್ದೇಶಕ ಕಾಶಿ ಮಾಡಿದ್ದಾರೆ. ಅವರ ಕಥಾನಿರೂಪಣೆಯ ಜೊತೆಗೆ ಭರತ್ ಬಿ.ಜೆ. ಅವರ ಹಿನ್ನೆಲೆ ಸಂಗೀತ ಕೂಡ ಸಾಥ್ ನೀಡಿದೆ. ಸಾಯಿ ಸರ್ವೇಶ್ ಅವರ ಸಾಹಿತ್ಯ ಹಾಗೂ ಸಂಗೀತ ಸಂಯೋಜನೆಯ ರಿಂಗ್ ರಿಂಗ್ ಪ್ರೀತಿ ಪ್ರೇಮ ಎಂಬ ಹಾಡು ಕೇಳುವಂತಿದೆ. ನಾಯಕ ಪೇಮ್ ಹಾಗೂ ಪ್ರೀತಿಯ ಮಧ್ಯೆ ಆಗಾಗ ಘರ್ಷಣೆ ನಡೆದು, ಆ ಕಲಹವೇ ಒಂದು ಹಂತದಲ್ಲಿ ಪ್ರೀತಿಯಾಗಿ ಮಾರ್ಪಾಡಾಗುವ ಸಂದಭರ್Àದಲ್ಲಿ ಅಲ್ಲೊಂದು ತೊಡಕು ಹುಟ್ಟಿಕೊಳ್ಳುತ್ತದೆ. ಅದು ಮತ್ತೆ ನಾಯಕಿ ಪ್ರೀತಿ, ಪ್ರೇಮ್‍ನನ್ನು ದ್ವೇಷಿಸುವಂತಾಗಲು ಕಾರಣವಾಗುತ್ತದೆ. ಮತ್ತೆ ಅವರಿಬ್ಬರ ನಡುವೆ ಪ್ರೀತಿ ಚಿಗುರೊಡೆಯಿತೇ, ಇಲ್ಲವೇ ಎಂಬುದನ್ನು ಚಿತ್ರದ ಕೊನೆಯ 15 ನಿಮಿಷಗಳಲ್ಲಿ ಅನಿರೀಕ್ಷಿತವಾದ ತಿರುವಿನ ಮೂಲಕ ಹೇಳುವ ಪ್ರಯತ್ನವನ್ನು ಕಾಶಿ ಮಾಡಿದ್ದಾರೆ. ಬೆಂಗಳೂರಿನ ಅಪಾರ್ಟ್‍ಮೆಂಟ್ ಒಂದರಲ್ಲಿ ಈ ಚಿತ್ರದ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ಕಳಸದಲ್ಲಿ ಚಿತ್ರೀಕರಿಸಿದ ಹಾಡು ಸೊಗಸಾಗಿ ಮೂಡಿಬಂದಿದೆ. ನಾಯಕ ಕೃಷ್ಣ ಚೈತನ್ಯ ಹಾಗೂ ನಿಧಿ ಕುಶಾಲಪ್ಪ ಇಬ್ಬರ ಜೋಡಿ ತೆರಯಮೇಲೆ ಸೊಗಸಾಗಿ ಮೂಡಿಬಂದಿದೆ. ಲವರ್‍ಬಾಯ್ ಆಗಿ ಕಾಣ ಸಿಕೊಂಡಿರುವ ಕೃಷ್ಣಚೈತನ್ಯ ಈ ಚಿತ್ರದ ನಿರ್ಮಾಪಕರೂ ಹೌದು. ನಾಯಕಿ ನಿಧಿ ಕುಶಾಲಪ್ಪ ಕಾಲೇಜು ಹುಡುಗಿಯಾಗಿ, ಆರÀಂಭದಲ್ಲಿ ನಾಯಕನ ಜೊತೆ ಸದಾ ಜಗಳವಾಡುತ್ತಾ ಕೊನೆಗೆ ಆತನ ಪ್ರೀತಿಯ ಬಲೆಯಲ್ಲಿ ಬೀಳುವ ಪಾತ್ರದಲ್ಲಿ ಕಾಣ ಸಿಕೊಂಡಿದ್ದಾರೆ.
18/02/17

PREETHI PREMA’ AUDIO RELEASED, DUE ON FEB 17
T
he audio of the film ‘Preethi Prema’ was released at a function held this week in Bengaluru. The film is all set to release on February 17 all over Karnataka. Krishna Chaitanya has produced the film who has also played the main lead. Kashi Vishwanath has directed the film. Ravikumar is the cameraman. The film is a remake of Telugu hit Ee Rojullo. The film stars Nidhi Kushalappa, Swathi and Girish in other roles. Bharath B J and J B have scored the music.  

Director Kashi said he was inspired by Upendra’s dialogue Bari Pustakada Badanekai and used it as a tagline with the film’s title. He said the story happens in an apartment with elements of love and comedy. The director said it is a family entertainer. The songs are shot in Chikkamagaluru and Kalasa.

Nidhi Kushalappa said Preethi Prema is a family entertainer with comedy and hungama. She said she plays a bubbly college student who constantly gets into fights with the hero. She said the film is meant for all of them to watch and have fun.

Uday Mehta appears in a guest role in the film as a film producer. He said the quality of film made is good and that he is happy to be part of the film.

Swathi said she plays the second heroine as a bold girl in the movie. She said she had earlier worked in a short film and teleserials.

Krishna Chaitanya also spoke and said he was passionate about films.
-9/02/17
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore