HOME
CINEMA NEWS
GALLERY
TV NEWS
REVIEWS
CONTACT US
ಅವಮಾನ ಪ್ರೀತಿಸಿದರೆ ಗೆಲುವು ಖಚಿತ
ಕೆಲವು ತಿಂಗಳಗಳ ಹಿಂದೆ ‘ಪಿರಂಗಿಪುರ’ ತಂಡವು ಮಾದ್ಯಮದವರನ್ನು ಭೇಟಿ ಮಾಡಿ ಸಿನಿಮಾದ ಕುರಿತು ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿತ್ತು. ಈಗ ಸ್ಥಳಗಳ ಭೇಟಿ, ಕಲಾವಿದರಿಗೆ ತರಭೇತಿ, ಸೆಟ್ ಕಲಾಕೃತಿ, ಮೇಕಪ್, ಚರ್ಚೆ ಹೀಗೆ ಹಲವು ವಿಭಾಗಗಳಲ್ಲಿ ತೊಡಗಿಕೊಂಡು ಚಿತ್ರೀಕರಣ ಶುರು ಮಾಡುವ ಮುನ್ನ ಮತ್ತೊಮ್ಮೆ ಮಾದ್ಯಮದ ಮುಂದೆ ಹಾಜರಾಗಿತ್ತು. ರಚನೆ, ನಿರ್ದೇಶನ, ನಿರ್ಮಾಪಕ ಜನಾರ್ಧನ್.ಪಿ.ಜಾನಿ ಹೇಳುವಂತೆ 6 ಪಾತ್ರಗಳ ಸುತ್ತ ಕತೆ ಸಾಗುತ್ತದೆ. ಒಂದೊಂದಾಗಿ ಅವುಗಳ ವಿವರವನ್ನು ಜನರಿಗೆ ತೋರಿಸುವ ಇರಾದೆ ಇದೆ. ಅದರಂತೆ ನಾಯಕಿ, ನಾಯಕನ ಗೆಳೆಯ ಉಪಯೋಗಿಸುವ ಎರಡು ವಿಭಿನ್ನ ರೀತಿಯ ಕಾರುಗಳ ಪೋಸ್ಟರ್‍ನ್ನು ಅನಾವರಣಗೊಳಿಸಲಾಗಿದೆ. ಎರಡು ವರ್ಷದ ಶ್ರಮದಲ್ಲಿ ಬೆಂಗಳೂರಿನಿಂದ ರಾಜಸ್ತಾನದವರೆಗೆ 70 ಜನರು 50 ದಿನಗಳ ಪ್ರಯಾಣ ಮಾಡಲಾಗುವುದು. ಸಂಚಾರಿವಿಜಯ್ ಮೂರು ಗೆಟಪ್‍ಗಳಲ್ಲಿ ಕಾಣ ಸಿಕೊಳ್ಳುತ್ತಾರೆ. ಅದರಲ್ಲಿ ಒಂದು ವಯಸ್ಸಾದ ಪಾತ್ರವಾಗಿರವುದರಿಂದ ಮೇಕಪ್‍ಗೆ 5 ಗಂಟೆ ಮೀಸಲಿಡಬೇಕಾಗಿದೆ. ಕಲ್ಪನೆಯ ಊರಿಗೆ ಪಿರಂಗಿಪುರ ಹೆಸರನ್ನು ಇಡಲಾಗಿದೆ. ಬೆಂಗಳೂರು-ರಾಜಸ್ಥಾನ ಮಾರ್ಗದ ಮದ್ಯೆ ಸಿಗಲಿರುವ ಊರಿಗೆ ಇಲ್ಲಿಂದ ಹೋದಾಗ ಏನಾಗುತ್ತೆ ಎಂಬುದನ್ನು ಸಿನಿಮಾ ಹೇಳುತ್ತದೆ. ಮರುಭೂಮಿಯಲ್ಲಿ ಸನ್ನವೇಶಗಳು ಅಗತ್ಯವಾಗಿರುವುದರಿಂದ ಅಲ್ಲಿಯೆ ಸೆಟ್ ಹಾಕಲಾಗಿದೆ. ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಶೂಟ್ ಮಾಡಲು ಅನುಮತಿ ಸದ್ಯದಲ್ಲೆ ಸಿಗಲಿದೆ ಎಂದು ನಿರ್ದೇಶಕರು ವಿವರಗಳನ್ನು ಹೇಳುತ್ತಾ ಹೋದರು.

ಚೇಸಿಂಗ್ 25 ನಿಮಿಷ ಇರಲಿದ್ದು, ಅದು ಹೈಲಟ್ ಆಗಲಿದೆ ಎಂದು ಹೇಳಿದರು ಸಂಚಾಯಿವಿಜಯ್. ಈಗ ಬರುತ್ತಿರುವ ಹೊಸ ನಿದೇಶಕರುಗಳು ತರಾತುರಿಯಲ್ಲಿ ಚಿತ್ರ ಮುಗಿಸಿರುವುದರಿಂದ ಜನರಿಗೆ ತಲುಪುವುದು ಕಷ್ಟವಾಗುತ್ತದೆ. ಆದರೆ ಜನಾರ್ಧನ್‍ರವರು ಎರಡು ವರ್ಷಗಳ ಕಾಲ ಸಂಪೂರ್ಣ ತಯಾರಿ ನಡೆಸಿರುವುದರಿಂದ ಉತ್ತಮ ಸಿನಿಮಾವಾಗಬಹುದೆಂಬ ನಂಬಿಕೆ ಇದೆ. ತಂಡದಲ್ಲಿ ಚಿತ್ರಕಲಾ ಪರಿಷತ್, ಸಾಹಿತ್ಯ, ರಂಗಭೂಮಿ ವಿದ್ಯಾರ್ಥಿಗಳು ಇರುವುದು ಪ್ಲಸ್ ಪಾಯಿಂಟ್. ಅವಮಾನವನ್ನು ಪ್ರೀತಿಸಿದರೆ ಭವಿಷ್ಯದಲ್ಲಿ ದೊಡ್ಡದು ಸಿಗುತ್ತೆ. ತಂಡವು ಅಲೆಮಾರಿಗಳಂತೆ ಇರಲಿದ್ದು, ಇದಕ್ಕೆ ಸಂಚಾರಿ ವಿಜಯ್ ಸಾತ್ ನೀಡಿದ್ದರೆ, ಚಲನದಲ್ಲಿ ಧನ್ಯತೆ,ಮುಕ್ತಿ,ಲಾಭ, ಭಾಗ್ಯ ಇವೆಲ್ಲವು ಸಿಗಲಿದೆ. ಭೂಮಿ ಮೇಲೆ ಇಲ್ಲದ ಊರನ್ನು ಸೃಷ್ಟಿಸಿರುವ ಇವರಿಗೆ ಮಾಲ್ಗುಡಿ ಡೇಸ್‍ನಂತೆ ಹೆಸರು ತಂದುಕೊಡಲಿ ಅಂತ ಚಂದನವನದ ಮೇಷ್ಟ್ರು ನಾಗತ್ತಿಹಳ್ಳಿ ಚಂದ್ರಶೇಖರ್ ಹೊಸ ಪ್ರಯತ್ನಕ್ಕೆ ಶುಭಹಾರೈಸಿದರು. ಅಂದ ಹಾಗೆ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಚಿತ್ರವು ಸಿದ್ದಗೊಳ್ಳುತ್ತಿದೆ.
-15/05/17
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore