HOME
CINEMA NEWS
GALLERY
TV NEWS
REVIEWS
CONTACT US
ಪೆಟ್ಟಾ ಕನ್ನಡದಲ್ಲಿ ರಜನಿಕಾಂತ್ ಧ್ವನಿ ?
ಅದ್ದೂರಿ ಚಿತ್ರ ‘ಪೆಟ್ಟಾ’ ಏಕಕಾಲಕ್ಕೆ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಪೊಂಗಲ್ ಹಬ್ಬದ ಸಲುವಾಗಿ ಇದೇ 10ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರವು ಕನ್ನಡಕ್ಕೆ ಡಬ್ಬಿಂಗ್ ಆಗುತ್ತಿದೆ. ರಜನಿಕಾಂತ್ ತಮ್ಮ ಪಾತ್ರಕ್ಕೆ ಧ್ವನಿ ನೀಡಲಿದ್ದಾರೆಂದು ಸುದ್ದಿ ಹರಿಡಿತ್ತು. ಕರ್ನಾಟಕದ ವಿತರಣೆ ಹಕ್ಕುಗಳನ್ನು ಪಡೆದುಕೊಂಡಿರುವ ಜಾಕ್‍ಮಂಜು ವಿಷಯವನ್ನು ಖಚಿತ ಪಡಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿ ರಜನಿಕಾಂತ್ ಕನ್ನಡವನ್ನು ಸುಲಲಿತವಾಗಿ ಮಾತನಾಡುವುದರಿಂದ ಅವರಿಂದಲೇ ಡಬ್ ಮಾಡಿಸುವ ಬಗ್ಗೆ ಕೋರಲಾಗಿದೆ. ಅಲ್ಲಿಂದ ಸಕರಾತ್ಮಕ ಸ್ಪಂದೆನೆ ಸಿಗಬಹುದೆಂಬ ವಿಶ್ವಾಸವಿದೆ. ಇಷ್ಟೋ ಚಿತ್ರಗಳು ಅದೇ ಭಾಷೆಯಲ್ಲಿ ತೆರೆಕಂಡಿದ್ದರೂ ಕೆಲವೊಂದು ಪಂಚಿಂಗ್, ಕಾಮಿಡಿ ಡೈಲಾಗ್‍ಗಳು ಇಲ್ಲಿನವರಿಗೆ ಅರ್ಥವಾಗದೆ ವಂಚಿತರಾಗುತ್ತಿದ್ದಾರೆ. ಇದರಿಂದ ಡಬ್ಬಿಂಗ್ ಸಿನಿಮಾಗಳು ಬಂದಲ್ಲಿ ಕನ್ನಡಿಗರಿಗೆ ಅನುಕೂಲವಾಗುತ್ತದೆಂದು ಮಾದ್ಯಮದ ಪ್ರಶ್ನೆಯನ್ನು ಸಮರ್ಥಿಸಿಕೊಂಡರು.

ಬಾಷಾ, ಅರುಣಾಚಲಂ, ಪಡೆಯಪ್ಪ ಚಿತ್ರಗಳ ರಜನಿಸಂ ಇದರಲ್ಲಿ ನೋಡಬಹುದು. ಅವರ ಸ್ಟೈಲ್, ಸಾಮಥ್ರ್ಯ, ಭಾವನೆಗಳು ಕಾಣಲಿದೆ. ಪಿಜ್ಜಾ, ಜಿಗರ್‍ಥಂಡಾ ಚಿತ್ರಗಳನ್ನು ನೋಡಿ ಕರೆಸಿಕೊಂಡು ಹಾರೈಸುತ್ತಾ, ಉತ್ತಮ ಕತೆ ಇದ್ದರೆ ಬನ್ನಿ ಎಂದು ಹೇಳಿದ್ದರು. ಹಿಂದಿನ ಸಿನಿಮಾಗಳಿಗೆ ಕತೆಗಾಗಿ ಕಲಾವಿದರನ್ನು ಆಯ್ಕೆ ಮಾಡಲಾಗಿತ್ತು. ಮೂರು ವರ್ಷ ಸಮಯ ತೆಗೆದುಕೊಂಡು ರಜನಿ ಸರ್ ಅವರಿಗಾಗಿಯೇ ಕತೆ ಬರಯಲಾಗಿದೆ. 5-6 ಪಾತ್ರಗಳು ಮುಖ್ಯವಾಗಿ ಬರುತ್ತವೆ. ವಿಜಯ್‍ಸೇತುಪತಿ ಮುಖ್ಯ ಖಳನಟನಾಗಿ ಕಾಣಿಸಿಕೊಂಡಿದ್ದಾರೆ. ಹಾಸ್ಟಲ್ ವಾರ್ಡೆನ್ ಆಗಿ ವಿದ್ಯಾರ್ಥಿಗಳೊಂದಿಗಿನ ಸಂಬಂದದ ಸನ್ನಿವೇಶಗಳು ಇದೆ. ಡಾರ್ಜಿಲಿಂಗ್, ಲಕ್ನೋ, ವಾರನಾಸಿ, ಚೆನ್ನೈ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕಳೆದ ತಿಂಗಳು 2.0 ಬಿಡುಗಡೆಯಾಗಿದ್ದು, ಸಣ್ಣ ಗ್ಯಾಪ್‍ನಲ್ಲಿ ಮತ್ತೋಂದು ಸಿನಿಮಾ ಬರುತ್ತಿರುವುದು ತೊಂದರೆ ಆಗುವುದಿಲ್ಲ. 80ರಲ್ಲಿ ಮನ್ನನ್ ಮತ್ತು ಬಾಷಾ ಚಿತ್ರಗಳು ಕಡಿಮೆ ಅಂತರದಲ್ಲಿ ತೆರೆ ಕಂಡಾಗ ಅಭಿಮಾನಿಗಳು ಖುಷಿ ಪಟ್ಟಿದ್ದರು. ಅದರಂತೆ ಇದು ಆಗಲಿದೆ. 2.50 ಗಂಟೆಯ ಚಿತ್ರದಲ್ಲಿ ರಜನಿ ಸರ್ ಅವರನ್ನು ಕಣ್ತುಂಬಿಕೊಳ್ಳಬಹುದೆಂದು ನಿರ್ದೇಶಕ ಕಾರ್ತಿಕ್‍ಸುಬ್ಬರಾಜ್ ಹೇಳಿದರು.

ಕೆಲವು ಪ್ರಾಂತ್ಯಗಳಲ್ಲಿ ಬಿಡುಗಡೆ ಮಾಡುತ್ತಿರುವ ಸೈಯದ್‍ಸಲಾಂ ಉಪಸ್ತಿತರಿದ್ದರು. ಸಿಮ್ರಾನ್, ತ್ರಿಶಾ ನಾಯಕಿಯರು. ಸನ್ ಮೂವೀಸ್ ಸಂಸ್ಥೆಯು ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
9/01/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore