HOME
CINEMA NEWS
GALLERY
TV NEWS
REVIEWS
CONTACT US

ಪರ್ಚಂಡಿ ಹಾಡುಗಳ ಸಮಯ
ಹೊಸ ಚಿತ್ರ ‘ಪರ್ಚಂಡಿ’ಗೆ ಹಠ ಅರ್ಥ ಕೊಡುತ್ತದೆ. ಬಿಡುಗಡೆಗೆ ಸನಿಹವಾಗಿರುವುದರಿಂದ ಸುದ್ದಿ ಮಾಡುವ ಸಲುವಾಗಿ ಆಡಿಯೋ ಲೋರ್ಕಾಪಣೆ, ನಿರ್ಮಾಪಕರ ಹುಟ್ಟುಹಬ್ಬ ನೆಪ ಮಾಡಿಕೊಂಡು ಮಾಧ್ಯಮದರನ್ನು ತಂಡವು ಭೇಟಿ ಮಾಡಿತು. ಎರಡು ಹಾಡುಗಳು, ಟ್ರೈಲರ್ ತೋರಿಸಿದ ತರುವಾಯ ಮೈಸೂರು ಮೂಲದ ನಿರ್ಮಾಪಕ ಕೆ.ಸಿಶಿವಾನಂದ್ ಮಾತು ಶುರು ಮಾಡಿ 40 ವರ್ಷದ ಕೆಳಗೆ ಗ್ರಾಮಾಂತರ ಭಾಗದ ಜನರ ಜೀವನ, ಉಡುಗೆ, ಉದ್ಯೋಗ ಎಲ್ಲವನ್ನು ವಿಸ್ತಾರವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಇಂದಿನ ಯುಗದ ಜನರ ತಾತಂದಿರು ವೃತ್ತಿ ಜೀವನ ವ್ಯವಸಾಯ. ಇದನ್ನು ತಿಳಿಯದವರಿಗೆ ಅರಿವು ಮೂಡಿಸಲಾಗಿದೆ. ಗ್ರಾಮ-ಪಟ್ಟಣಗಳ ವ್ಯತ್ಯಾಸಗಳಲ್ಲಿ ಗ್ರಾಮ ಜೀವನ ಆರೋಗ್ಯಕರವಾಗಿದೆ ಎಂಬುದನ್ನು ಕ್ಲೈಮಾಕ್ಸ್‍ನಲ್ಲಿ ಹೇಳಲಾಗಿದೆ ಎಂಬುದರ ವ್ಯಾಖ್ಯಾನ ಬಿಚ್ಚಿಟ್ಟರು. ಸಾಹಸ ನಿರ್ದೇಶನ ಮಾಡಿರುವ ಜಾನಿಗೆ 25 ವರ್ಷದ ಅನುಭವದಲ್ಲಿ ಸಿಹಿ ಕೊಡುವುದರೊಂದಿಗೆ ಪೂರ್ತಿ ಸಂಭಾವನೆಯನ್ನು ಚುಕ್ತ ಮಾಡಿದ್ದಾರೆಂದು ಹೊಗಳಿದರು. ಇವರ ಮಾತಿಗೆ ದಸ್‍ಕತ್ ಹಾಕಿದ ನೃತ್ಯ ನಿರ್ದೇಶಕ ಜಗ್ಗು ಅವಕಾಶ ನೀಡಬೇಕೆಂಬ ಉದ್ದೇಶದಿಂದ ಹಾಡಿಗೆ ಡ್ಯಾನ್ಸ್ ಅವಶ್ಯಕತೆ ಇಲ್ಲದಿದ್ದರೂ ಕೆಲಸ ನೀಡಿದರು ಎಂಬುದು ಅವರ ಖುಷಿಯ ನುಡಿ.

ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣ ಸಿಕೊಂಡಿದ್ದ ಮಹೇಶ್‍ದೇವ್ ನಾಯಕನಾಗಿ ಬದುಕನ್ನು ಬದಲಾವಣೆ ಮಾಡಿಸಿದ ನಿರ್ಮಾಪಕರಿಗೆ ಧನ್ಯವಾದ ಅರ್ಪಿಸಿದರು. ತೀರ್ಥಹಳ್ಳಿಯ ಕಲ್ಪನಾ ನಾಯಕಿಯಾಗಿ ಚಪ್ಪಲಿ ಬಳಸದೆ, ಒಂದೇ ಧಿರಿಸಿನಲ್ಲಿ ನಟನೆ ಮಾಡಿರುವುದು ಛಾಲೆಂಜಿಂಗ್ ಆಗಿತ್ತು ಎಂದರು. ಗೆಳಯನಾಗಿ ಕುಡುಕ,ಕಿರಿಕ್ ಮಾಡುವ ಪಾತ್ರದಲ್ಲಿ ಕುರಿರಂಗ ಜೋಡಿಯಾಗಿ ಅಭಿನಯಿಸಿದ ನಟಿಗೆ ಕಾಲೇಳೆದರು. ಇದನ್ನು ನಯವಾಗಿ ತಿರಸ್ಕರಿಸಿದರು ನೇತ್ರ . ಸ್ಟಾರ್ ಗಾಯಕರನ್ನು ಕರೆಸುವ ಬದಲು, ಗಾಯಕರನ್ನು ಸ್ಟಾರ್ ಮಾಡುವ ಉದ್ದೇಶದಿಂದ ಅವಕಾಶ ನೀಡಿದ್ದಾರೆಂದು ಸಂತಸ ವ್ಯಕ್ತಪಡಿಸಿದ್ದು ಸರಿಗಮಪದಲ್ಲಿ ಬಹಹುತೇಕ ವಿಜೇತರಾಗುವ ಗಾಯಕ ಹರ್ಷ. ಗತಕಾಲದಲ್ಲಿ ದ್ವೇಷ ಇರೋರು ಸುಮ್ಮನೆ ಇರ್ತಾರೆ. ಮಧ್ಯದಲ್ಲಿ ಕಿಚ್ಚು ಹಚ್ಚುವವರು ಇದಕ್ಕೆ ಪ್ರಚೋದನೆ ಕೊಡ್ತಾರೆ. ಕತೆಯಲ್ಲಿ ನಾಯಕ ನಾಯಕಿ ಹಠದಿಂದ ಪ್ರೀತಿಗೆ ಬಿದ್ದು, ಭಾವನೆಗಳಿಂದ ಏನಾಗ್ತದೆ ಅಂತ ಸಿನಿಮಾ ನೋಡಿದರೆ ತಿಳಿಯುತ್ತೆ ಎನ್ನುತ್ತಾರೆ ಮೊದಲಬಾರಿ ನಿರ್ದೇಶನ ಮಾಡಿರುವ ಜೂಮ್ ರವಿ. ಎರಡು ಹಾಡುಗಳಿಗೆ ಸಂಗೀತ ಸಂಯೋಜಿಸಿರುವ ವಿನಯ್‍ರಂಗದೋಳ್ ಅನ್ನದಾತರಿಂದ ಕೆಲಸ ಸಿಕ್ಕಿತು ಅಂತ ಸಂತೋಷ ವ್ಯಕ್ತಪಡಿಸಿದರು. ಸಣ್ಣ ಪಾತ್ರ ಮಾಡಿರುವ ನಿರ್ಮಾಪಕರ ಹಿರಿಯ ಸಹೋದರ ವಾಸುದೇವಮೂರ್ತಿ ಹಾಗೂ ತಾಯಿ ಕಮಲಮ್ಮ ಸಿಡಿಯನ್ನು ಬಿಡುಗಡೆ ಮಾಡಿದರು. ಇದೇ ತಿಂಗಳ ಕೊನೆವಾರದಂದು ಚಿತ್ರವು ತೆರೆಕಾಣುವ ಸಾದ್ಯತೆ ಇದೆ.
-10/07/17

PARACHANDI’ COMPLETES SHOOT
K
annada film ‘Parachandi’ set against a rural backdrop has completed its shoot in Kollegala and has used the town’s slang to the hilt in the movie. The film is produced by K C Shivanand who  has taken over the reins of a film that had been stopped. The movie is directed by Zoom Ravi. The film has Vinay Rangadhol’s music and Raj Kadur’s camera work. The film stars Mahesh Dev, Kalpana, Kuri Ranga Bond and Nethra in key roles. Vasudeva Rao, the producer’s brother is keen in five shades in his role in the film.  

Zoom Ravi told reporters that the film’s title relates to the stubbornness of a child. The film is based on an incident that happened in 1957 in a family. When two stubborn lovers are in love what happened takes a fictitious turn in the narrative, he said. The hero and heroine have worn just one costume throughout the movie while all the artistes have worked bare foot during the entire shoot proceedings, he said.  

The director said the film has two songs and eight fights. He said for the first time the fights have been composed along with the dialogue narration. Mahesh Dev plays the hero who is an atheist while Kalpana who has come from the small screen plays a pious village girl. Kuri Ranga Bond said he has been paired with a girl for the first time in a movie. He is paired with Nethra in the movie. 
-20/03/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

/