HOME
CINEMA NEWS
GALLERY
TV NEWS
REVIEWS
CONTACT US
ಪಾನಿ ಪುರಿ ಸ್ವಲ್ಪ ಖಾರ, ಸಾಧಾರಣ ರುಚಿ
ಹಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ಬ್ಯಾಂಕ್ ರಾಬರಿ ಮಾಡುವುದನ್ನು ನೋಡಿದ್ದೇವೆ. ಅದನ್ನು ಕನ್ನಡದಲ್ಲಿ ನೋಡುವ ಬಯಕೆ ಇದ್ದಲ್ಲಿ ‘ಪಾನಿಪುರಿ’ ಚಿತ್ರವನ್ನು ವೀಕ್ಷಿಸಬಹುದು. ಕತೆಯಲ್ಲಿ ಹೊಸತನ ಇಲ್ಲದೆ ಹೋದರೂ ಒಮ್ಮೆ ನೋಡುವಂತಿದೆ. ಪ್ರಾರಂಭದಲ್ಲಿ ಆಮೆಯಂತೆ ಸಾಗುವ ಸನ್ನಿವೇಶಗಳು ವಿರಾಮದ ನಂತರ ರಾಜಧಾನಿ ಎಕ್ಸೆಪ್ರೆಸ್‍ನಂತೆ ಹೋಗುತ್ತದೆ. ರಾಜ್, ವಿಕ್ಕಿ, ಅಪ್ಪು ಮೂವರು ಗೆಳಯರಿಗೆ, ತನ್ವಿ, ಸೋನು, ಪೂರ್ವಿ ಗೆಳತಿಯರು. ಒಂದು ಹಂತದಲ್ಲಿ ವಿಕ್ಕಿ ಮತ್ತು ಪೂರ್ವಿಗೆ ಹಣದ ಸಮಸ್ಯೆ ಉಂಟಾಗುತ್ತದೆ. ಇದನ್ನು ಸ್ನೇಹಿತರಿಗೆ ಹೇಳಿದಾಗ ಒಬ್ಬೊಬ್ಬರು ಒಂದೊಂದು ಐಡಿಯಾ ಕೊಡುತ್ತಾರೆ. ಇವೆಲ್ಲಾ ಆಗದ ಕೆಲಸ ಎಂದುಕೊಂಡು ಕೊನೆಗೆ ಬ್ಯಾಂಕ್ ಹಣ ಲೂಟಿ ಮಾಡುವ ಕಾರ್ಯಕ್ಕೆ ಕೈ ಹಾಕುತ್ತಾರೆ. ಈ ಸಮಯದಲ್ಲಿ ಏನೆಲ್ಲಾ ಪ್ರಯೋಗ ಮಾಡುತ್ತಾರೆ, ರಾಬರಿಯಲ್ಲಿ ಅವರು ಸಪಲರಾಗುತ್ತಾರಾ ಎಂಬುದು ಸಸ್ಪೆನ್ಸ್. ಈಗಿನ ಯುವಜನಾಂಗಕ್ಕೆ ಹಣ ಕದ್ದರೆ ಬದುಕನ್ನು ಸುಂದರವಾಗಿ ಅನುಭವಿಸಬಹುದೆಂದು ಹೇಳಿರುವುದು ಖೇದದ ವಿಷಯವಾಗಿದೆ.

ವೈಭವ್, ಮೈತ್ರಿ ಜಗದೀಶ್, ಸಂಜಯ್ ನಾಯಕರುಗಳಾಗಿ ಪಾತ್ರಕ್ಕೆ ತಕ್ಕಮಟ್ಟಿಗೆ ನ್ಯಾಯ ಒದಗಿಸಿದ್ದಾರೆ. ಕರ್ವ ಖ್ಯಾತಿ ಅನು, ಅಕ್ಷತಾ, ದರ್ಶಿನಿ ನಾಯಕಿಯರಾಗಿ ಕಾಡಿನಲ್ಲಿ ಓಡಿರುವುದೇ ಸಾಧನೆ ಎನ್ನಬಹುದು. ಮೂಕರಾಗಿ ಪೆಟ್ರೋಲ್‍ಪ್ರಸನ್ನ, ರೋಬೋ ಗಣೇಶ್ ಗಮನ ಸೆಳೆಯುತ್ತಾರೆ. ಲೂಸ್ ಮಾದ ಹಾಡೊಂದರಲ್ಲಿ ಕಾಣ ಸಿಕೊಂಡು ಆ ಕ್ಷಣಕ್ಕೆ ನೆನಪಿಗೆ ಬರುತ್ತಾರೆ. ಸಂತೋಷ್‍ಬಾಗಲಕೋಟೆ ಸಂಗೀತದಲ್ಲಿ ಎರಡು ಹಾಡುಗಳು ಇಂಪಾಗಿದೆ. ಆನಂದ್‍ದಿಂಡವಾರ ಛಾಯಗ್ರಹಣ, ವಿಕ್ರಮ್ ಸಾಹಸ ಪೂರಕವಾಗಿದೆ. ನವೀನ್‍ಕುಮಾರ್ ನಿರ್ದೇಶನದ ಚಿತ್ರಕ್ಕೆ ಪುಟ್ಟರಾಜು ಹಣ ಹೊಡಿರುವುದು ಮೊದಲ ಪ್ರಯತ್ನದಲ್ಲೆ ಅಲ್ಪಮಟ್ಟಿಗೆ ಯಶಸ್ಸನ್ನು ಗಳಿಸಿದ್ದಾರೆ ಎಂದು ಹೇಳಬಹುದು.
-20/11/17
ಚಿತ್ರಮಂದಿರದಲ್ಲಿ ಪಾನಿಪುರಿ
ಬದುಕು ಸುಂದರವಾಗಿರಲು ಒಳ್ಳೆ ಕೆಲಸ ಮಾಡಿದರೆ ಒಳ್ಳೇದು ಆಗುತ್ತೆ. ಕೆಟ್ಟ ದಾರಿಗೆ ಹೋದಲ್ಲಿ ಜೀವನ ನಶ್ವರ. ಏಕ್‍ದಂ ಶ್ರೀಮಂತನಾಗಲು ಸರಿಯಾದ ದಾರಿಯಲ್ಲೆ ಸಾಗದೆ ಇದ್ದಲ್ಲಿ ಅವಘಡಗಳು ಕಟ್ಟಿಟ್ಟ ಬುತ್ತಿ. ಇವೆಲ್ಲಾವನ್ನು ‘ಪಾನಿಪುರಿ ಎನ್ನುವ ಥ್ರಿಲ್ಲರ್ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಬ್ಯಾಂಕ್ ರಾಬರಿ ಇರುವುದರಿಂದ ಸೆನ್ಸಾರ್‍ನವರು ಎ ಪ್ರಮಾಣ ಪತ್ರ ನೀಡಿದ್ದಾರೆ. ಕತೆ ಚಿತ್ರಕತೆ ಬರೆದು ನಿರ್ದೇಶನ ಮಾಡಿರುವುದು ಕೆ.ಪಿ.ನವೀನ್‍ಕುಮಾರ್. ಗೆಳೆತನ, ಫ್ರಂಡ್‍ಶಿಪ್ ಕುರಿತಾದ ಕಾಲೇಜು ಕತೆಯಲ್ಲಿ ಮೂವರು ಹುಡುಗರು,ಹುಡುಗಿಯರು ಗೆಳಯನಿಗೆ ಕಷ್ಟ ಬಂದಾಗ ಇವರೆಲ್ಲರೂ ಸೇರಿಕೊಂಡು ಬ್ಯಾಂಕ್ ದರೋಡೆ ಮಾಡಲು ಹೋದಾಗ ಕಷ್ಟದ ಸುಳಿಗೆ ಸಿಲುಕಿಕೊಂಡು ಹೇಗೆ ಹೊರಗೆ ಬರುತ್ತಾರೆ ಎಂಬುದು ಸಿನಿಮಾದ ತಿರುಳು. ಅತಿಥಿ ಪಾತ್ರದಲ್ಲಿ ಯೋಗಿ ಕಾಣ ಸಿಕೊಂಡಿದ್ದಾರೆ. ಕಳೆದ ಸುದ್ದಿಗೋಷ್ಟಿಯಲ್ಲಿ ನಾಯಕಿಯರ ಅಸಹಕಾರದಿಂದ ಚಿತ್ರ ಮುಗಿಯುವುದು ತಡವಾಯಿತು. ಪ್ರಚಾರಕ್ಕೆ ಬಾರದೆ ಕಾರಣ ಹೇಳುತ್ತಿದ್ದಾರೆಂದು ನಿರ್ದೇಶಕರು ಖೇದ ವ್ಯಕ್ತಪಡಿಸಿದ್ದರು.

ಸೋಮವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮೂವರು ನಾಯಕಿಯರ ಪೈಕಿ ದರ್ಶಿತಾ, ಅಕ್ಷತಾ ಹಾಜರಿದ್ದು, ನಾವೇನು ತೊಂದರೆ ನೀಡಿಲ್ಲ. ಭಿನ್ನಾಭಿಪ್ರಾಯದಿಂದ ಇವೆಲ್ಲವು ನಡೆದಿದೆ. ಮದುವೆ ಹಬ್ಬದಂತೆ ನಾವೆಲ್ಲರು ಬಂದಿದ್ದೇವೆ ಎಂದು ಆರೋಪಕ್ಕೆ ತೆರೆ ಏಳೆದರು. ವೈಭವ್, ಸಂಜಯ್ ಪಾತ್ರದ ಪರಿಚಯಮಾಡಿಕೊಂಡರು. ಡೈಲಾಗ್ ಇಲ್ಲದೆ ಖಳನಾಯಕನಾಗಿ ನಟಿಸಿರುವ ರೋಬೋಗಣೇಶ್ ಮುಂದಿನ ಬಾರಿ ಒಳ್ಳೆ ಪಾತ್ರ ಕೊಡಿ ಎಂದು ಅವಲತ್ತು ಮಾಡಿಕೊಂಡರು. ಹಂಸಲೇಖಾ ಶಿಷ್ಯ ಸಂತೋಷ್‍ಬಾಗಲಕೋಟೆ ಐದು ಹಾಡುಗಳಿಗೆ ರಾಗ ಸಂಯೋಜಿಸಿದ್ದಾರೆ. ಪುಟ್ಟರಾಜು ಮೊದಲಬಾರಿ ನಿರ್ಮಾಣ ಮಾಡಿರುವ ಸಿನಿಮಾವು ಮುಂದಿನ ವಾರ ಬಿಡುಗಡೆಯಾಗಲಿದೆ.
-8/11/17

PANI PURI TO START ROLLING FROM MAY 5
T
he shoot for the film Pani Puri will commence on May 5. The film is being directed by K P Naveen Kumar who had earlier directed Jinke Mari. The film is produced by Putta Raju.

Speaking to journalists on Friday evening, Naveen Kumar said he had made several rounds to producers’ offices to do this film. He said he had even approached many heroes with the story but none of them was willing to listen to his story.

Naveen said Pani Puri is a youthful subject that happens on college campus. The film has all the ingredients of fun, love, fights and entertainment. He said while the first half happens in the college campus, the story takes a turn in the second half.

Naveen said he had trained up all the actors during the last one month and expressed confidence that everyone is ready to go before the camera.

The director said the film will be shot in Srirangapatna, Mysuru, Bengaluru and Kukke Subramanya. The film has three heroes and three heroines. Vybhav, son of former film PRO Ramakrishna, Jagadish (who had acted opposite Puneeth in Prithvi) and debutant Sanjay are the heroes. Anu, Darshita and Akshatha are the three heroines. All the three girls have acted in a few movies.

Music is scored by S P Verma. 
-2/05/2015

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

\