HOME
CINEMA NEWS
GALLERY
TV NEWS
REVIEWS
CONTACT US
ಆರೆಂಜ್ ಸಿಹಿ ಸ್ವಲ್ಪ ಹುಳಿ
ನಾಯಕಿ ಬೇರೊಬ್ಬನೊಂದಿಗೆ ನಿಶ್ಚಿತಾರ್ಥವಾಗಿರುವಾಗ ನಾಯಕ ಅವಳನ್ನು ಪ್ರೀತಿಸುವುದು, ನಾಯಕಿಗೆ ಮದುವೆ ಇಷ್ಟವಿಲ್ಲದಿರುವಾಗ ಮನೆ ಬಿಟ್ಟು ಹೋದಾಗ ಪರಸ್ಥಳದಲ್ಲಿ ನಾಯಕ ಭೇಟಿಯಾಗುವ ಕತೆಗಳು ಸಾವಿರಾರು ಬಂದಿದೆ. ಅದರಂತೆ ‘ಆರೆಂಜ್’ ಚಿತ್ರದ ಕತೆಯು ಹಳೆಯದಾಗಿದ್ದರೂ ಹೊಸತರದ ಸನ್ನಿವೇಶಗಳು ಇದಕ್ಕೆ ತಕ್ಕಂತೆ ಹಾಸ್ಯದ ಹೊನಲು ಸಿನಿಮಾ ಪೂರ್ತಿ ಆವರಿಸಿಕೊಂಡಿರುವುದು ಒಂದು ಮಟ್ಟದಲ್ಲಿ ಪ್ರೇಕ್ಷಕನಿಗೆ ರುಚಿ ಅನಿಸುತ್ತದೆ. ಚಿತ್ರದಲ್ಲಿ ಮನೆ ಬಿಟ್ಟು ಓಡಿ ಬಂದಿರುವ ರಾಧ (ಪ್ರಿಯಾಆನಂದ್)ಗೆ ಆಕಸ್ಮಿಕವಾಗಿ ರೈಲಿನಲ್ಲಿ ಸಂತೋಷ್ (ಗಣೇಶ್) ಭೇಟಿಯಾಗುತ್ತದೆ. ಕಳ್ಳನೆಂದು ಮುಚ್ಚಿಟ್ಟುಕೊಂಡು ಅವಳೊಂದಿಗೆ ಬೆರೆಯುವಷ್ಟರಲ್ಲಿ ಮಿಸ್ ಆಗಿ ಇಬ್ಬರು ಬೇರೆಯಾಗುತ್ತಾರೆ. ಅವನಿಗೆ ಅವಳಲ್ಲಿರುವ ಒಂದು ವಸ್ತು ಸಿಗುತ್ತದೆ. ಅದನ್ನು ತಲುಪಿಸಲು ರಾಂಪುರದಲ್ಲಿರುವ ಆಕೆಯ ಮನೆಗೆ ಹೋಗುತ್ತಾನೆ. ಅಲ್ಲ ಯಾವ ಕಾರಣಕ್ಕೆ ತಂಗುತ್ತಾನೆ. ಆ ವಸ್ತು ಯಾವುದು? ಯಾವ ಕಾರಣಕ್ಕೆ ಕಳ್ಳನಾಗಿರುತ್ತಾನೆ, ಮನೆಯಲ್ಲಿ ಏನು ಮಾಡುತ್ತಾನೆ ಎಂಬುದನ್ನು ನಾವು ಹೇಳುವುದಕ್ಕಿಂತ ಹಣ್ಣಿನ ರುಚಿ ಸವಿಯಲು ಚಿತ್ರಮಂದರಕ್ಕೆ ಹೋಗಬೇಕು.

2018ರಲ್ಲಿ ಗಣೇಶ್ ಒಂದೇ ಚಿತ್ರ ಬಿಡುಗಡೆಯಾಗಿದ್ದು, ನಟನೆಯಲ್ಲಿ ಅವರ ಅಭಿಮಾನಿಗಳಿಗೆ ಬೇಸರ ತರಿಸದೆ ಜಬರ್‍ದಸ್ತ್ ಸ್ಟೆಪ್ಸ್, ಫೈಟ್, ಡೈಲಾಗ್ ಹೇಳುತ್ತಾ ಖುಷಿ ಪಡಿಸಿದ್ದಾರೆ. ರಾಜಕುಮಾರದಲ್ಲಿ ನಟಿಸಿದ್ದ ಪ್ರಿಯಾಆನಂದ್ ಎರಡನೆ ಬಾರಿ ನಾಯಕಿಯಾಗಿ ನಟಿಸಿ ಗ್ಲಾಮರಸ್ ಡ್ರೆಸ್‍ನಲ್ಲಿ ಚೆಂದ ಕಾಣಿಸುತ್ತಾರೆ. ನಾಯಕಿಯ ತಂದೆ ಹುಲಿವೀರಯ್ಯನಾಗಿ ಅವಿನಾಶ್, ಪದ್ಮಜರಾವ್, ಪೂರ್ತಿ ಸಿನಿಮಾವನ್ನು ಹೆಗೆಲ ಮೇಲೆ ಹೊತ್ತ್ತುಕೊಂಡು ನಗಿಸಿರುವ ಸಾಧುಕೋಕಿಲ ಒಂದು ಕಡೆ ಬೋರ್ ಅನಿಸಿದರೂ ಇವರ ಜೊತೆಯಾಗಿ ಬರುವ ರಂಗಾಯಣರಘು ಅಭಿನಯ ಪ್ರೇಕ್ಷಕನ ಹಲ್ಲು ತೋರಿಸುವಂತೆ ಮಾಡಿದೆ. ಖಳನಾಯಕ ದೇವಗಿಲ್‍ಗೆ ಹೆಚ್ಚು ಅವಕಾಶವಿಲ್ಲದೆ, ಹೊಡೆಸಿಕೊಳ್ಳುವುದರಲ್ಲೆ ಸಮಯ ಕಳೆದಿದ್ದಾರೆ. ಸ್ವಲ್ಪ ಹೊತ್ತು ಕಾಣಿಸುವ ರವಿಶಂಕರ್‍ಗೌಡ್ ಕಚಗುಳಿ ಇಡುತ್ತಾರೆ. ಎಸ್.ಎಸ್. ಥಮನ್ ಸಂಗೀತದಲ್ಲಿ ಎರಡು ಹಾಡುಗಳು ಮೈಕೈನ್ನು ಕುಲಿಕಿಸುತ್ತವೆ. ಪ್ರಶಾಂತ್‍ರಾಜ್ ನಿರ್ದೇಶನದ ಚಿತ್ರದಲ್ಲಿ ಸಂತೋಷ್ ರೈಪಾತಜೆ ಛಾಯಗ್ರಹಣ ಸುಂದರ ತಾಣಗಳನ್ನು ನೋಡಬಹುದು. ಆರೆಂಜ್ ತಿನ್ನುವವರಿಗೆ ರುಚಿ ಸಿಗುವುದು ಖಚಿತ.
ನಿರ್ಮಾಣ: ನವೀನ್
ರೇಟಿಂಗ್: ***
ಸಿನಿ ಸರ್ಕಲ್.ಇನ್ ವಿಮರ್ಶೆ
9/12/18
ಬಿಡುಗಡೆ ಮುಂಚೆ ಲಾಭದಲ್ಲಿ ಆರೆಂಜ್
‘ಆರೆಂಜ್’ ಚಿತ್ರ ಶುರುವಾದಾಗಿನಿಂದಲೂ ಮಾದ್ಯಮದವರನ್ನು ಭೇಟಿ ಮಾಡದ ತಂಡವು ಈಗ ಶುಕ್ರವಾರದಂದು ಸುಮಾರು 300 ಕೇಂದ್ರಗಳಲ್ಲಿ ಬಿಡುಗಡೆ ಆಗುತ್ತಿರುವ ಕಾರಣ ಮೊದಲ ಮತ್ತು ಕೊನೆಯ ಬಾರಿ ಸುದ್ದಿಗೋಷ್ಟಿಯನ್ನು ಏರ್ಪಾಟು ಮಾಡಲಾಗಿದೆ ಅಂತ ನಿರ್ದೇಶಕ ಪ್ರಶಾಂತ್‍ರಾಜ್ ಮೈಕ್‍ಗೆ ಕೆಲಸ ಕೊಟ್ಟರು. ಮಾತು ಮುಂದುವರೆಸುತ್ತಾ ಜೂಮ್ ಬಿಡುಗಡೆ ಮುಂಚೆ ಗಣೇಶ್ ಚಿತ್ರ ನೋಡಿ ಚೆನ್ನಾಗಿ ಮಾಡಿದ್ದೀರಾ. ಕತೆ ಕೇಳದೆ ನಿಮ್ಮದೆ ಸಂಸ್ಥೆಯಲ್ಲಿ ಮತ್ತೋಂದು ಸಿನಿಮಾ ಮಾಡಿ ಅಂತ ಹಸಿರು ನಿಶಾನೆ ನೀಡಿದರು. ಅದರಿಂದ ಎರಡನೆ ಕತೆ ಹೇಳಿದ್ದು ಆರೆಂಜ್ ಆಯಿತು. ಅವರು ಎಲ್ಲದರಲ್ಲೂ ತಲೆತೂರದೆ, ಬೇಕಿದ್ದ ವಿಷಯದಲ್ಲಿ ಮಾತ್ರ ಆಳವಾಗಿ ಚರ್ಚೆಗೆ ಕೂರುತ್ತಿದ್ದರು. ಸಂಗೀತ ಒದಗಿಸಿರುವ ಎಸ್.ಎಸ್.ಥಮನ್ ನಾಲ್ಕು ಹಾಡುಗಳು ಹಿಟ್ ಆಗಿರುವುದು ಪ್ಲಸ್ ಪಾಯಿಂಟ್ ಆಗಿದೆ. ಎರಡು ಗೀತೆಗಳಿಗೆ ಸಾಹಿತ್ಯ ನನ್ನದಾಗಿದ್ದು, ಉಳಿದವಕ್ಕೆ ಕವಿರಾಜ್ ರಚಿಸಿದ್ದಾರೆ. ಸಂಗತಿಗಳನ್ನು ಒಳ್ಳೆ ರೀತಿಯಲ್ಲಿ ಅನುಭವಿಸುವ ಚಿತ್ರವಾಗಿದೆ. ಹಣ್ಣಿನಿಂದ ಶುರುವಾಗುವ ಕತೆಯ ಪಯಣ ಎಲ್ಲೆಲ್ಲಿ ಕರೆದುಕೊಂಡು ಹೋಗುತ್ತದೆ. ಶೀರ್ಷಿಕೆಗೆ ನ್ಯಾಯ ಒದಗಿಸಲಾಗಿದೆ. ಪಕ್ಕಾ ಸ್ವಮೇಕ್ ಕತೆಯಾಗಿದೆ. ಅಮೆಜಾನ್‍ರವರು ಒಳ್ಳೆ ಮೊತ್ತಕ್ಕೆ ಸಿನಿಮಾವನ್ನು ಖರೀದಿ ಮಾಡಿದ್ದಾರೆ. ಅದರಂತೆ ವಾಹಿನಿಯು ಗರಿಷ್ಟ ಹಣ ನೀಡಿ ಹಕ್ಕುಗಳನ್ನು ಪಡೆದುಕೊಂಡಿದ್ದು, ಗಾಂದಿನಗರದ ಅನುಭವಿ ವಿತರಕರು ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡುತ್ತಿದ್ದಾರೆ. ಮುಂದಿನ ವಾರ ವಿದೇಶದ ಜನರಿಗೆ ತೋರಿಸುವ ಇರಾದೆ ಇದೆ ಎಂದು ನಿರ್ದೇಶಕರು ಒಂದೇ ಗುಕ್ಕಿನಲ್ಲಿ ಹೇಳುವಾಗ ಅವರ ಆನನದಲ್ಲಿ ಸಂತಸ ತುಂಬಿತ್ತು.

ಕುಟುಂಬ ಸಮೇತ ನೋಡಬಹುದಾದ ಚಿತ್ರವಂದು ಬಣ್ಣನೆ ಮಾಡಿಕೊಂಡ ಗಣೇಶ್, ಕತೆಯಲ್ಲಿ ಪ್ರೀತಿ, ಮನುಷ್ಯತ್ವಕ್ಕೆ ಬೆಲೆ ಕೊಡುವ ಸನ್ನಿವೇಶಗಳು ಇರಲಿದೆ. ನೋಡುಗನಿಗೆ ಸನ್ನಿವೇಶಗಳು ಅರ್ಥವಾದರೂ ಪಾತ್ರಗಳಿಗೆ ತಿಳಿಯದೆ ಗೊಂದಲದಲ್ಲಿ ಇರುತ್ತಾರೆ. ಹಣ್ಣನ್ನು ತೆಗೆದುಕೊಂಡು ಸಿಕ್ಕಿಹಾಕಿಕೊಂಡಾಗ ಅದರಿಂದ ಹೇಗೆ ಹೊರಗೆ ಬರುತ್ತಾನೆ ಎಂಬುದು ಒಂದು ಏಳೆಯ ಕತೆಯಾದರೂ, ಚಿತ್ರಕತೆ ದೊಡ್ಡದಾಗಿದೆ. ಪಾತ್ರಗಳು ಗಂಭೀರವಾದರೂ ಪ್ರೇಕ್ಷಕನಿಗೆ ಮುದ ನೀಡುತ್ತದೆ. ಡಬ್ಬಿಂಗ್ ಮಾಡುವಾಗ ನೋಡಿದ್ದೆ. ನಿರ್ಮಾಪಕರು ಚಿತ್ರ ತೋರಿಸಿಲ್ಲ. ನಾಳೆ ತೋರಿಸುವ ನಿರೀಕ್ಷೆ ಇದೆ ಅಂತ ಅವರನ್ನು ನೋಡುತ್ತಾ ಮಾತಿಗೆ ವಿರಾಮ ಹಾಕಿದರು ಆರೆಂಜ್ ನಾಯಕ.

ರಾಜಕುಮಾರ ನಂತರ ಯಾವ ಸಿನಿಮಾ ಮಾಡಬೇಕೆಂದು ಗೊಂದಲದಲ್ಲಿ ಇದ್ದೆ. ಆಗ ಬಂದ ಕತೆಯೇ ಇದಾಗಿತ್ತು. ತಂಡದೊಂದಿಗೆ ಇರುವುದು ಖುಷಿ ನೀಡಿತು ಅಂತಾರೆ ನಾಯಕಿ ಪ್ರಿಯಾಆನಂದ್.
ಸಿನಿ ಸರ್ಕಲ್.ಇನ್ ನ್ಯೂಸ್
6/12/18


ಡಿಸೆಂಬರ್ ಗಣೇಶ್‍ಗೆ ಅದೃಷ್ದದ ಸಂಕೇತ
ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರಗಳು ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾದವು ಬಹುತೇಕ ಹಿಟ್ ಆಗಿದೆ. ಅದರಂತೆ ನಿರ್ದೇಶಕ ಪ್ರಶಾಂತ್‍ರಾಜ್ ಅವರ ‘ಆರೆಂಜ್’ ಚಿತ್ರಕ್ಕೆ ರಾಜಕುಮಾರ ಖ್ಯಾತಿಯ ಪ್ರಿಯಾಆನಂದ್ ನಾಯಕಿ. ಸಿನಿಮಾದಲ್ಲಿ ಗಣೇಶ್ ವಿಭಿನ್ನ ಹೇರ್‍ಸ್ಟೈಲ್‍ನಲ್ಲಿ ಹಲವು ಗೆಟಪ್‍ಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷವಾಗಿದೆ. ಚೆನೈ, ಹೈದರಬಾದ್, ಬೆಂಗಳೂರು, ಯರೋಪ್ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಎಸ್.ಎಸ್.ತಮನ್ ಸಂಗೀತದಲ್ಲಿ ಹಾಡುಗಳು ವೈಃರಲ್ ಆಗಿರುವುದು ಪ್ಲಸ್ ಪಾಯಿಂಟ್ ಆಗಿದೆ. ಸಂತೋಷ್‍ರೈಪಾತಾಜೆ ಕ್ಯಾಮಾರ, ರವಿವರ್ಮ ಸಾಹಸ, ರವಿಚಂದ್ರನ್ ಸಂಕಲನವಿದೆ. ನವೀನ್ ನಿರ್ಮಾಣ ಮಾಡಿರುವ ಚಿತ್ರವು ಮುಂದಿನ ತಿಂಗಳು ಏಳರಂದು ವಿಶ್ವದಾದ್ಯಂತ ಜನರಿಗೆ ತೋರಿಸಲು ಸಜ್ಜಾಗಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
18/11/18
For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore