HOME
CINEMA NEWS
GALLERY
TV NEWS
REVIEWS
CONTACT US
ಸೊಗಸಾದ ಕತೆಗೆ ಚುರುಕಾದ ತಿರುವುಗಳು
ಸೆಸ್ಪನ್ಸ್, ಥ್ರಿಲ್ಲರ್ ಚಿತ್ರ ‘ಆಪರೇಶನ್ ನಕ್ಷತ್ರ’ ಕತೆಯಲ್ಲಿ ಎಲ್ಲಿಯವರೆವಿಗೂ ಮೋಸ ಮಾಡುವವರು ಇರುತ್ತಾರೋ, ಅಲ್ಲಿಯವರೆಗೂ ಇದೆಲ್ಲವೂ ನಡೆಯುತ್ತಲೇ ಇರುತ್ತದೆ. ನಿಸ್ವಾರ್ಥ ಮುಖವಾಡಗಳ ಮಧ್ಯೆ ಸ್ವಾರ್ಥ ಮನಸ್ಸು ಇದ್ದವರಿಗೆ ದುಡ್ಡು ಬಂದಾಗ ಏನಾಗುತ್ತಾರೆ ಎಂಬುದನ್ನು ಚಿತ್ರ ನೋಡಿದಾಗ ಗೊತ್ತಾಗುತ್ತದೆ. ಹಣವೇ ಮುಖ್ಯ ಎಂದುಕೊಂಡವರ ಮೈಂಡ್‍ಗೇಮ್ ಹಾಗೂ ಥ್ರಿಲ್ಲರ್ ಪಯಣವನ್ನು ಹೇಳಲಿದ್ದು ವಿರಾಮದ ತರುವಾಯ ಯಾರು ಯಾರನ್ನು ಏತಕ್ಕಾಗಿ ಕೊಲ್ಲುತ್ತಾರೆಂದು ವಿವರಗಳು ಪಾತ್ರಗಳ ಮೂಲಕ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಶ್ರೀಮಂತ ಉದ್ಯಮಿಯ ಮಗಳು ಸತ್ತು ಹೋದಳೆಂದು ಅಂದುಕೊಂಡರೆ ಬದುಕಿರುತ್ತಾಳೆ. ಉದ್ಯಮಿಗೆ ಎರಡನೆ ಪತ್ನಿಯ ಸ್ವಾರ್ಥ ಬುದ್ದಿಯಿಂದ ಕುಟುಂಬ ಏನಾಗುತ್ತದೆ. ಕತೆ ಬರೆದು ನಿರ್ದೇಶನ ಮಾಡಿರುವ ಮಧುಸೂದನ್.ಕ.ಆರ್ ಶ್ರಮ ಪರದೆ ಮೇಲೆ ಕುತೂಹಲ ಮೂಡಿಸುವಲ್ಲಿ ಯಶಸ್ಸು ಕಂಡಿದ್ದಾರೆ.

ನಾಯಕಿಯರಾದ ಯಜ್ಘಾಶೆಟ್ಟಿ, ಅದಿತಿಪ್ರಭುದೇವ ಗನ್ ಹಿಡಿದು ನಟನೆಯಲ್ಲಿ ಮಿಂಚಿದ್ದಾರೆ. ನಾಯಕ ನಿರಂಜನ್‍ಒಡೆಯರ್ ಇಬ್ಬರ ಪ್ರೇಮಿಯಾಗಿ ಗಮನ ಸೆಳೆಯುತ್ತಾರೆ. ನವಪ್ರತಿಭೆ ಲಿಖಿತ್‍ಸೂರ್ಯ ಪೋಲೀಸ್ ಅಧಿಕಾರಿಯಾಗಿ ಪಾತ್ರಕ್ಕೆ ಮೋಸ ಮಾಡಿಲ್ಲ. ವೀರಸಮರ್ಥ್ ಸಂಗೀತ, ವಿಜಯಭರಮಸಾಗರ ಸಾಹಿತ್ಯದ ಎರಡು ಹಾಡುಗಳು ಪರವಾಗಿಲ್ಲ. ಕಾಮಿಡಿಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ ನಗಿಸಿ, ಅಳಿಸುತ್ತಾರೆ. ಪ್ರ್ರಶಾಂತ್‍ನಟನ, ಶ್ರೀನಿವಾಸಪ್ರಭು.ದೀಪಕ್‍ರಾಜ್‍ಶೆಟ್ಟಿ, ವಿಕ್ಟರಿವಾಸು ನೀಡಿದ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ. ಛಾಯಾಗ್ರಹಣ ಶಿವಸೀನು, ಸಂಕಲನ ಅರ್ಜುನ್‍ಕಿಟ್ಟು ಇವರದು ಚಿತ್ರದಲ್ಲಿ ಕಾಣಿಸುತ್ತದೆ.

ನಿರ್ಮಾಣ:ಎನ್.ನಂದಕುಮಾರ್,ಅರವಿಂದಮೂರ್ತಿ,ಟಿ.ಎಸ್.ರಾಧಕೃಷ್ಣ,ಸಿ.ಎಸ್.ಕಿಶೋರ್‍ಮೇಗಳಮನೆ
ಸಿನಿ ಸರ್ಕಲ್.ಇನ್ ವಿಮರ್ಶೆ
***
12/07/19

ನಕ್ಷತ್ರಕ್ಕೆ ಶುಕ್ರವಾರದಂದುಆಪರೇಶನ್ ಶುರು
ಕುತೂಹಲ ಹುಟ್ಟಿಸುವ‘ಆಪರೇಶನ್ ನಕ್ಷತ್ರ’ ಚಿತ್ರವನ್ನುಇಂಟರ್‍ನೆಟ್ ಮೂವಿ ಡೇಟಾ ಬೇಸ್ (ಐಎಂಡಿಬಿ ) ಸಂಸ್ಥೆಯು ಈ ವರ್ಷದಲ್ಲಿ ಹತ್ತುಕನ್ನಡ ಚಿತ್ರಗಳನ್ನು ಉತ್ತಮ ಸಿನಿಮಾವೆಂದು ಹೇಳಿಕೊಂಡಿದ್ದು, ಅದರಲ್ಲಿಇದು ಸೇರಿದೆ. ಎರಡನೆಯದಾಗಿಟೀಸರ್,ಟ್ರೈಲರ್ ವೀಕ್ಷಿಸಿರುವಟಾಲಿವುಡ್ ನಿರ್ಮಾಪಕರೊಬ್ಬರುರಿಮೇಕ್ ಮಾಡಲುಉತ್ಸುಕರಾಗಿದ್ದಾರೆ. ಸಿನಿಮಾಕುರಿತು ಹೇಳುವುದಾದರೆ ನಾವು ಒಬ್ಬರಿಗೆಯಾಮಾರಿಸಿದರೆ, ಬೇರೆಯವರಿಂದ ನಾವುಗಳು ಯಾವರೀತಿ ಮೋಸ ಹೋಗುತ್ತೇವೆ. ಎಲ್ಲಿಯವರೆವಿಗೂ ಮೋಸ ಮಾಡುವವರುಇರುತ್ತಾರೋ, ಅಲ್ಲಿಯವರೆಗೂಇದೆಲ್ಲವೂ ನಡೆಯುತ್ತಲೇಇರುತ್ತದೆ. ನಿಸ್ವಾರ್ಥ ಮುಖವಾಡಗಳ ಮಧ್ಯೆ ಸ್ವಾರ್ಥ ಮನಸ್ಸುಇದ್ದವರಿಗೆದುಡ್ಡು ಬಂದಾಗಏನಾಗುತ್ತಾರೆಎಂಬುದು ಸಿನಿಮಾದ ಸಾರಾಂಶವಾಗಿದೆ. ಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವುದು ಮಧುಸೂಧನ್.ಕೆ.ಆರ್. ಮೈಂಡ್‍ಗೇಮ್‍ಕತೆಯಲ್ಲಿನಾಲ್ಕು ಪಾತ್ರಗಳು ಜೀವಾಳವಾಗಿದೆ. ಕೆಲವೊಂದು ಘಟನೆಗಳು ಅವರ ಬದುಕಿನಲ್ಲಿ ಬಂದಾಗ, ಅವರುಗಳ ಮನಸ್ಥಿತಿ ಹೇಗಿರುತ್ತದೆ. ಇದನ್ನುಯಾವರೀತಿಯಲ್ಲಿಎದುರಿಸುತ್ತಾರೆಂದುಕಾಲ್ಪನಿಕವಾಗಿತೋರಿಸಲಾಗಿದೆ.

ನಿರಂಜನ್‍ಒಡೆಯರ್, ಅದಿತಿಪ್ರಭುದೇವ, ಯಜ್ಘಾಶೆಟ್ಟಿ, ಲಿಖಿತ್ ಸೂರ್ಯಇವರೆಲ್ಲರಿಗೂಎರಡು ಶೇಡ್‍ಗಳು ಇರಲಿದೆ.ಉಳಿದಂತೆ ಕಾಮಿಡಿಕಿಲಾಡಿಗಳು ಖ್ಯಾತಿಯಗೋವಿಂದೇಗೌಡ, ಪ್ರಶಾಂತ್‍ನಟನ, ಶ್ರೀನಿವಾಸಮೂರ್ತಿ,ದೀಪಕ್‍ರಾಜ್‍ಶೆಟ್ಟಿ, ವಿಕ್ಟರಿವಾಸು ಮುಂತಾದವರು ಅಭಿನಯಿಸಿದ್ದಾರೆ. ವಿಜಯಭರಮಸಾಗರ ಸಾಹಿತ್ಯದಎರಡು ಗೀತೆಗಳಿಗೆ ವೀರಸಮರ್ಥರಾಗ ಸಂಯೋಜಿಸಿದ್ದು, ಎನ್.ನಂದಕುಮಾರ್,ಅರವಿಂದಮೂರ್ತಿ, ಟಿ.ಎಸ್.ರಾಧಕೃಷ್ಣ ಹಾಗೂ ಸಿ.ಎಸ್.ಕಿಶೋರ್‍ಮೇಗಳಮನೆ ಜಂಟಿಯಾಗಿನಿರ್ಮಾಣ ಮಾಡಿದ್ದಾರೆ. ವಿಜಯ್ ಫಿಲಿಂಸ್ ಮೂಲಕ ಜುಲೈ ಹದಿನೈದರಂದು 80 ಕೇಂದ್ರಗಳಲ್ಲಿ ತೆರೆಗೆ ಬರಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
8/07/19


ಹೊಸತನದಆಪರೇಶನ್ ನಕ್ಷತ್ರ
ಟೆಂಟ್ ಸಿನಿಮಾದ ವಿದ್ಯಾರ್ಥಿಯಾಗಿದ್ದ ಮಧುಸೂಧನ್ ‘ಆಪರೇಶನ್ ನಕ್ಷತ್ರ’ ಚಿತ್ರಕ್ಕೆಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಸಿನಿಮಾದಕುರಿತಂತೆನಾವು ಒಬ್ಬರಿಗೆಯಾಮಾರಿಸಿದರೆ, ಬೇರೆಯವರಿಂದ ನಾವುಗಳು ಯಾವರೀತಿ ಮೋಸ ಹೋಗುತ್ತೇವೆ. ಎಲ್ಲಿಯವರೆವಿಗೂ ಮೋಸ ಮಾಡುವವರುಇರುತ್ತಾರೋ, ಅಲ್ಲಿಯವರೆಗೂಇದೆಲ್ಲವೂ ನಡೆಯುತ್ತಲೇಇರುತ್ತದೆ. ನಿಸ್ವಾರ್ಥ ಮುಖವಾಡಗಳ ಮಧ್ಯೆ ಸ್ವಾರ್ಥ ಮನಸ್ಸುಇದ್ದವರಿಗೆದುಡ್ಡು ಬಂದಾಗಏನಾಗುತ್ತಾರೆಎಂಬುದನ್ನುತೋರಿಸಲಾಗಿದೆ. ಮೈಂಡ್‍ಗೇಮ್‍ಕತೆಯಾಗಿದ್ದು, ನಾಲ್ಕು ಪಾತ್ರಗಳು ಜೀವಾಳವಾಗಿದೆ. ಕೆಲವೊಂದು ಘಟನೆಗಳು ಅವರ ಬದುಕಿನಲ್ಲಿ ಬಂದಾಗ, ಅವರುಗಳ ಮನಸ್ಥಿತಿ ಹೇಗಿರುತ್ತದೆ. ಇದನ್ನುಯಾವರೀತಿಯಲ್ಲಿಎದುರಿಸುತ್ತಾರೆಂದುಕಾಲ್ಪನಿಕವಾಗಿತೋರಿಸಲಾಗಿದೆ.

ಮುಖ್ಯ ಪಾತ್ರದಲ್ಲಿ ನಿರಂಜನ್‍ಒಡೆಯರ್, ಅದಿತಿಪ್ರಭುದೇವ, ಯಜ್ಘಾಶೆಟ್ಟಿ, ಲಿಖಿತ್ ಸೂರ್ಯ.ಇವರೊಂದಿಗೆಅಮಾಯಕನಾಗಿ ಮೋಸಹೋಗುವ ಕಾಮಿಡಿಕಿಲಾಡಿಗಳು ಖ್ಯಾತಿಯಗೋವಿಂದೇಗೌಡ, ಭ್ರಷ್ಟಆಯುಕ್ತರಾಗಿ ಪ್ರಶಾಂತ್‍ನಟನ, ಶ್ರೀನಿವಾಸಮೂರ್ತಿ,ದೀಪಕ್‍ರಾಜ್‍ಶೆಟ್ಟಿ, ವಿಕ್ಟರಿವಾಸುಮುಂತಾದವರು ಅಭಿನಯಿಸಿದ್ದಾರೆ. ಹಿರಿಯ ಪತ್ರಕರ್ತ ವಿಜಯಭರಮಸಾಗರ ಸಾಹಿತ್ಯದಎರಡು ಗೀತೆಗಳಿಗೆ ವೀರಸಮರ್ಥರಾಗ ಸಂಯೋಜಿಸಿದ್ದು, ಮೊದಲ ಪ್ರಯತ್ನಎನ್ನುವಂತೆಕ್ರಾಕ್ ಮಾದರಿಯಲ್ಲಿ ಸಂಗೀತ ಒದಗಿಸಿರುವುದು ವಿಶೇಷ. ಟೀಸರ್‍ನ್ನು ಶ್ರೀಮುರಳಿ, ಟ್ರೈಲರ್‍ನ್ನುಗಣೇಶ್ ಮತ್ತು ಪೋಸ್ಟರ್‍ನ್ನುರಕ್ಷಿತ್‍ಶೆಟ್ಟಿ ಲೋಕಾರ್ಪಣೆ ಮಾಡಿರುವುದುತಂಡಕ್ಕೆಖುಷಿಯಾಗಿದೆ.ಛಾಯಾಗ್ರಹಣ ಶಿವಸೀನು, ಸಂಕಲನ ಅರ್ಜುನ್‍ಕಿಟ್ಟು ನಿರ್ವಹಿಸಿದ್ದಾರೆ. ಗೆಳಯರುಗಳಾದ ಎನ್.ನಂದಕುಮಾರ್,ಅರವಿಂದಮೂರ್ತಿ, ಟಿ.ಎಸ್.ರಾಧಕೃಷ್ಣ ಹಾಗೂ ಸಿ.ಎಸ್.ಕಿಶೋರ್‍ಮೇಗಳಮನೆ ಜಂಟಿಯಾಗಿಫೈವ್ ಸ್ಟಾರ್ ಸಂಸ್ಥೆ ಹುಟ್ಟುಹಾಕಿಇದರ ಮೂಲಕ ಸಿನಿಮಾಕ್ಕೆ ಹಣ ಹೂಡಿದ್ದಾರೆ. ಪ್ರಚಾರದ ಮೊದಲಹಂತವಾಗಿಚಿತ್ರದ ತುಣುಕುಗಳನ್ನು ಲೋಕಾರ್ಪಣೆ ಮಾಡಲಾಯಿತು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
10/06/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore