HOME
CINEMA NEWS
GALLERY
TV NEWS
REVIEWS
CONTACT US
ಪ್ರಚಾರದ ಕೊರತೆಯಿಂದ ಒಂಥರಾಗೆ ನಿರಾಸೆ
ಕಳೆದವಾರ ಬಿಡುಗಡೆಯಾದ ಒಂಬತ್ತು ಸಿನಿಮಾಗಳಲ್ಲಿ ‘ಒಂಥರಾ ಬಣ್ಣಗಳು’ ಸೇರಿಕೊಂಡಿತ್ತು. ಕಿರಣ್‍ಶ್ರೀನಿವಾಸ್, ಪ್ರಮೋದ್‍ನಾರಾಯಣ್, ಸೋನುಗೌಡ, ಹಿತಾಚಂದ್ರಶೇಖರ್ ನಟಿಸಿದ್ದರು. ಇದಕ್ಕೆ ಪತ್ರಿಕೆ, ಪ್ರೇಕ್ಷಕರಿಂದ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೂ ಒಂದಷ್ಟು ಜನರಿಗೆ ಚಿತ್ರ ತೆರೆ ಕಂಡಿರುವುದು ಗೊತ್ತಿಲ್ಲವಂತೆ. ಎಲ್ಲೆ ಹೋದರೂ ನಿರ್ದೇಶಕರಿಗೆ ಇದೇ ಪ್ರಶ್ನೆ ಬರುತ್ತಿದೆಯಂತೆ. ಇದರಿಂದ ನಿರ್ಮಾಪಕ ಯೋಗೀಶ್.ಬಿ.ದೊಡ್ಡಿ, ನಿರ್ದೇಶಕ ಸುನಿಲ್‍ಭೀಮರಾವ್ ತಂಡದೊಂದಿಗೆ ಚರ್ಚಿಸಿ ಒಳ್ಳೆ ಚಿತ್ರ ಮೂಲೆ ಗುಂಪಾಗುವುದು ಬೇಡ. ಜನರಿಗೆ ಆದಷ್ಟು ತಲುಪುವಂತೆ ಉತ್ತಮ ರೀತಿಯಲ್ಲಿ ಪ್ರಚಾರ ಮಾಡಬೇಕು. ನಂತರ ಮರು ಬಿಡುಗಡೆ ಮಾಡಲು ನಿರ್ಧಾರ ಮಾಡಿದ್ದಾರೆ. ಹಾಗಂತ ಯಾವಾಗ ಬಿಡುಗಡೆ ಎಂದು ಈಗಲೇ ಹೇಳಲು ಆಗುವುದಿಲ್ಲವಂತೆ. ಇದೇ ರೀತಿಯ ಪ್ರಯತ್ನಗಳು ಎರಡುವಾರದ ಹಿಂದಿನ ಚಿತ್ರ ಲೌಡ್‍ಸ್ಪೀಕರ್ ಆಗಿತ್ತು ಎಂಬುದನ್ನು ನೆನಪು ಮಾಡಿಕೊಳ್ಳಬಹುದು.
ಸಿನಿ ಸರ್ಕಲ್.ಇನ್ ನ್ಯೂಸ್
25/08/18ಭಾವನೆಗಳ ಜೊತೆಗೆ ಕಲರ್‍ಫುಲ್ ಪ್ರಯಾಣ
ಕಂಪೆನಿ ಕೆಲಸದ ಒತ್ತಡದಿಂದ ಬೇಸತ್ತ ಮೂವರು ಗೆಳಯರು ಒಂದು ಲಾಂಗ್ ಡ್ರೈವ್ ಹೋಗೋಣವೆಂದು ನಿರ್ಣಯ ತೆಗೆದುಕೊಳ್ಳುತ್ತಾರೆ. ಒಬ್ಬಾತ ಮಂಗಳೂರು ಎನ್ನುತ್ತಾನೆ. ಮತ್ತೋಬ್ಬ ಬಾದಾಮಿ ಅಂತಾನೆ, ಕೊನೆಯವನು ಹುಬ್ಬಳ್ಳಿಗೆ ಹೋಗೋಣ ಅಂತ ಷರಾ ಬರೆಯುತ್ತಾನೆ. ಯಾರಿಗೂ ಬೇಜಾರು ಆಗಬಾರದೆಂದು ಬಾದಾಮಿ ಮೊದಲು ಹೂರಟು, ನಂತರ ಹುಬ್ಬಳ್ಳಿ ನೋಡಿಕೊಂಡು ಮಂಗಳೂರು ಮೂಲಕ ವಾಪಸ್ಸು ಬರುವುದೆಂದು ನಿರ್ಧರಿಸುತ್ತಾರೆ. ಅಂದುಕೊಂಡಂತೆ ಪಯಣ ಶುರುವಾಗುತ್ತದೆ. ಇವರುಗಳು ಒಂದೊಂದು ಊರಿನ ಹೆಸರನ್ನು ಹೇಳಲು ಕಾರಣವಿದೆ. ಆ ಕಾರಣಗಳ ಹಿಂದೆ ಭಾವನಾತ್ಮಕ ಸಂಬಂದ, ಕನಸುಗಳು ತುಂಬಿಕೊಂಡಿರುತ್ತವೆ. ಅವು ಏನು ಎಂದು ಹೇಳುವುದಕ್ಕೆ ಕಷ್ಟವಾಗುತ್ತದೆ. ಅದಕ್ಕಾಗಿ ನೀವುಗಳು ‘ಒಂಥರಾ ಬಣ್ಣಗಳು’ ಸಿನಿಮಾ ನೋಡಬೇಕಾಗುತ್ತದೆ.

ಇಡೀ ಸಿನಿಮಾ ಪಯಣದಲ್ಲಿ ನಡೆಯುವುದರಿಂದ ಜರ್ನಿಯಲ್ಲಿ ಆರಂಭವಾಗಿ, ಅದರಲ್ಲೆ ಅಂತ್ಯಗೊಳ್ಳುವುದು ವಿಶೇಷ. ಮೂವರೊಂದಿಗೆ ಇಬ್ಬರು ಹುಡುಗಿಯರು ಸೇರಿಕೊಳ್ಳುತ್ತಾರೆ. 3 ಜನಕ್ಕೆ 2 ಹುಡುಗಿಯರು ಇದ್ದರೆ ಪ್ರೀತಿಯಿಂದ ವಂಚಿತನಾಗ ಬೇಕಾಗುತ್ತದೆ ಅನಿಸಿದರೆ ನಿಮ್ಮ ಊಹೆ ನಿಜವೆನಿಸುತ್ತದೆ. ಯಾರಿಗೆ ಯಾರು ಹಿತವರು ಎಂದು ಕ್ಲೈಮಾಕ್ಸ್‍ನಲ್ಲಿ ಸ್ಪಷ್ಟವಾಗಿ ನಿರೂಪಣೆ ಮಾಡಿರುವ ನಿರ್ದೇಶಕ ಸುನೀಲ್‍ಭೀಮರಾವ್ ಕತೆಯನ್ನು ಹೂವನ್ನು ಪೋಣಿಸಿದಂತೆ ಚಿತ್ರಕತೆಯನ್ನು ಅಂದವಾಗಿ ಸೃಷ್ಟಿಸಿದ್ದಾರೆ. ತಮಾಷೆಯಲ್ಲಿ ಸಾಗುವ ಪಯಣ ಗಂಭೀರರೂಪ ಪಡೆದುಕೊಂಡು ಅದಕ್ಕೊಂದು ಅಂತ್ಯವನ್ನು ಹಾಡಲಾಗಿದೆ. ಪ್ರೀತಿ ವಿಚಾರದಲ್ಲಿ ಬಿಚ್ಚಿಕೊಳ್ಳುವ ಅಂಶಗಳು ಹೈಲೈಟ್ ಆಗಿದ್ದು, ಇದನ್ನು ಮತ್ತುಷ್ಟು ವಿಸ್ತಾರ ಮಾಡುವ ಅವಕಾಶ ನಿರ್ದೇಶಕರಿಗೆ ಇತ್ತು.

ಪ್ರತಾಪ್‍ನಾರಾಯಣ್, ಕಿರಣ್‍ಶ್ರೀನಿವಾಸ್ ಮತ್ತು ನವಪ್ರತಿಭೆ ಪ್ರವೀಣ್‍ಜೈನ್, ನಾಯಕಿಯರುಗಳಾಗಿ ಸೋನುಗೌಡ, ಹಿತಾಚಂದ್ರಶೇಖರ್ ಎಲ್ಲರೂ ಕೊಟ್ಟ ಪಾತ್ರವನ್ನು ಕಡಿಮೆ ಆಗದಂತೆ ನಿಭಾಯಿಸಿರುವುದು ಕಂಡು ಬರುತ್ತದೆ. ಲೋಹಿತಾಶ್ವ, ಸಾಧುಕೋಕಿಲ, ಶರತ್‍ಲೋಹಿತಾಶ್ವ, ದತ್ತಣ್ಣ, ಸುಚೇಂದ್ರಪ್ರಸಾದ್ ಕಡಿಮೆ ಅವಕಾಶವಿದೆ. ಮನೋಹರ್‍ಜೋಷಿ ಛಾಯಗ್ರಹಣದಲ್ಲಿ ಕರ್ನಾಟಕದ ಸುಂದರ ತಾಣಗಳನ್ನು ಬಣ್ಣ ಬಣ್ಣಗಳಲ್ಲಿ ತೋರಿಸಿರುವುದು ಪ್ಲಸ್ ಪಾಯಿಂಟ್ ಆಗಿದೆ. ಬಿ.ಜೆ.ಭರತ್ ಸಂಗೀತದಲ್ಲಿ ಹಾಡುಗಳು ಪರವಾಗಿಲ್ಲ.
ನಿರ್ಮಾಣ: ಯೋಗೇಶ್.ಬಿ.ದೊಡ್ಡಿ

ಸಿನಿ ಸರ್ಕಲ್.ಇನ್ ವಿಮರ್ಶೆ
***
18/08/18
ಬಣ್ಣ ಬಣ್ಣದ ಮಾತುಗಳು
‘ಒಂಥರ ಬಣ್ಣಗಳು’ ಚಿತ್ರಕ್ಕೆ ಸುನಿಲ್‍ಭೀಮರಾವ್ ಕತೆ,ಚಿತ್ರಕತೆ,ಸಾಹಿತ್ಯ ರಚಿಸಿ ಸ್ವತಂತ್ರವಾಗಿ ನಿರ್ದೇಶನ ಮಾಡಿದ್ದಾರೆ. ಬಾದಾಮಿ, ಬಾಗಲಕೋಟೆ, ಸಾಗರ, ಪುಣೆ, ಹೊನ್ನಾವರ, ಮಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮೂವರು ಹುಡುಗರು, ಇಬ್ಬರು ಹುಡುಗಿಯರನ್ನು ಬಣ್ಣಗಳಿಗೆ ಹೋಲಿಸಲಾಗಿದೆ. ಸಂಕೀರ್ಣ ಬಣ್ಣಗಳಲ್ಲಿ ಬೇರೆ ರೀತಿಯ ಗುಣಗಳು ಇರುತ್ತವೆ. ಇವರೆಲ್ಲರೂ ಯೋಜನೆ ಹಾಕಿಕೊಂಡು ಗ್ರಾಮೀಣ, ಪಟ್ಟಣಗಳ ಕಡೆಗಳಲ್ಲಿ ಪ್ರಯಾಣ ಮಾಡುತ್ತಾರೆ. ಅಲ್ಲಿ ಒಂದಷ್ಟು ಪ್ರಸಂಗಗಳು ಮೂರು ದಿನದಲ್ಲಿ ನಡೆಯುತ್ತವೆ. ಪ್ರೇಕ್ಷಕ ಸಿನಿಮಾದ ಕೆಲವೊಂದು ಅಂಶಗಳನ್ನು ತೆಗೆದುಕೊಂಡು ಹೋಗುತ್ತಾನೆಂಬ ನಂಬಿಕೆ ಇದೆಯಂತೆ.

ಜಾನಕಿ ಹೆಸರಿನಲ್ಲಿ ಬೆಂಗಳೂರಿಗೆ ಬಂದಾಗ ಗೆಳೆಯರನ್ನು ಭೇಟಿ ಅವರೊಂದಿಗೆ ಟೂರ್ ಮಾಡುವ ಪಾತ್ರ. ಹುಬ್ಬಳ್ಳಿ ಭಾಷೆ ಧಾಟಿಯಲ್ಲಿ ಸೋನುಗೌಡ ಮಾತನಾಡಿರುವುದು ವಿಶೇಷ. ಭಾವನೆಗಳನ್ನು ತೋರ್ಪಡಿಸದೆ, ನೇರವಾಗಿ ಹೇಳುತ್ತೇನೆ. ಹುಡುಗರು ಕೆಲಸ ಮಾಡುವ ಸ್ಥಳದಲ್ಲಿ ತಾನು ಒಬ್ಬಂಟಿಯಾಗಿ ಸವಾಲುಗಳನ್ನು ಎದುರಿಸಿ ಗ್ರೂಪ್ ಲೀಡರ್ ಆಗುವ ಪಾತ್ರದಲ್ಲಿ ಹಿತಚಂದ್ರಶೇಖರ್.

ಸನ್ನಿವೇಶಗಳು ಪ್ರತಿಯೊಬ್ಬರಿಗೆ ಕನೆಕ್ಟ್ ಆಗುತ್ತದೆ. ಯಾವುದೇ ಆಗಲಿ ತಕ್ಷಣಕ್ಕೆ ನಿರ್ದಾರ ತೆಗೆದುಕೊಳ್ಳದೆ ಯೋಚಿಸಿ ಮುಂದಕ್ಕೆ ಹೆಜ್ಜೆ ಇಡುತ್ತಾನೆ. ಜೈ ಹೆಸರಿನಲ್ಲಿ ಕಾಣಿಸಿಕೊಂಡಿರುವುದು ಕಿರಣ್ ಶ್ರೀನಿವಾಸ್. ಬದುಕು,ಗೆಳತನ ಇವುಗಳಿಗೆ ಬೆಲೆ ಕೊಡುವುದು. ಗೆಳಯರಿಗೆ ಕ್ಯಾಟ್ಲೆ ಕೊಡುತ್ತಲೆ ರಾಮ್ ಆಗಿ ನಟನೆ ಮಾಡಿರುವುದು ನವಪ್ರತಿಭೆ ಪ್ರವೀಣ್‍ಕುಮಾರ್.ಜೆ. ಪ್ರತಿ ಪಾತ್ರದಲ್ಲಿ ಹೊಸ ಬಣ್ಣಗಳು ಇರುವಂತೆ ಹೊಸ ರೀತಿಯ ಬಣ್ಣದಲ್ಲಿ ಪರದೆ ಹಂಚಿಕೊಂಡಿರುವುದು ಪ್ರತಾಪ್‍ನಾರಾಯಣ್. ಎಲ್ಲಾ ಪಾತ್ರಗಳನ್ನು ಸುಂದರವಾಗಿ ತೋರಿಸಿರುವುದು ಛಾಯಗ್ರಾಹಕ ಮನೋಹರ್‍ಜೋಷಿ.

ನಿದೇಶಕರು ಬಣ್ಣಗಳಿಗೆ ಶೃಂಗಾರ ಮಾಡಿದಂತೆ, ಅವುಗಳಿಗೆ ನಾಲ್ಕು ಹಾಡುಗಳ ಮೂಲಕ ಸಂಗೀತ ಒದಗಿಸಿರುವುದು ಬಿ.ಜೆ.ಭರತ್. ಯೋಗೀಶ್.ಬಿ.ದೊಡ್ಡಿ ನಿರ್ಮಾಣ ಮಾಡಿರುವ ಚಿತ್ರಕ್ಕೆ ಯು ಪ್ರಮಾಣಪತ್ರ ದೊರಕಿದೆ. ಕೆಆರ್‍ಜಿ ಸ್ಟುಡಿಯೋ ಮುಖಾಂತರ ಸುಮಾರು 80 ಕೇಂದ್ರಗಳಲ್ಲಿ ಇದೇ ತಿಂಗಳು 17ರಂದು ಬಿಡುಗಡೆಯಾಗಲಿದೆ. ಬಿಡುಗಡೆಪೂರ್ವ ಪತ್ರಿಕಾಗೋಷ್ಟಿಯಲ್ಲಿ ಕಲಾವಿದರು ,ತಂತ್ರಜ್ಘರು ಮೇಲ್ಕಂಡ ಎಲ್ಲಾ ಮಾಹಿತಿಗಳನ್ನು ಹಂಚಿಕೊಂಡರು.

ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
7/08/18ಒಂಥರ ಆಡಿಯೋ ರಿಲೀಸ್
ತೀರ ಅಪರೂಪ, ಸೋಜಿಗ ಎನ್ನುವಂತೆ ‘ಒಂಥರ ಬಣ್ಣಗಳು’ ಚಿತ್ರದ ಧ್ವನಿಸಾಂದ್ರಿಕೆಯು ಇಬ್ಬರು ಸ್ಟಾರ್ ನಟರಿಂದ ಎರಡು ಬಾರಿ ಬಿಡುಗಡೆಗೊಂಡಿತು. ಮೊದಲು ಟಗರು ಗುಮ್ಮುತ್ತಲೇ ಹಾಡುಗಳನ್ನು ನೋಡಿ ವೇದಿಕೆಗೆ ಬಂದಿತು. ಶೀರ್ಷಿಕೆ ಕೇಳಿದರೆ ಖುಷಿಯಾಗುತ್ತದೆ. ಸೌಂಡ್ ಚೆನ್ನಾಗಿದೆ. ಪ್ರತಿಯೊಬ್ಬರ ಜೀವನವು ಬೆಳಿಗ್ಗೆ, ಮಧ್ಯಾಹ್ಮ, ರಾತ್ರಿ ಬಣ್ಣಗಳಲ್ಲಿ ಸಾಗುತ್ತದೆ. ಅರ್ಥಪೂರ್ಣ ಹಾಡುಗಳಲ್ಲಿ ವಿಶೇಷತೆ ಇದೆ. ಶೇಕಡ 100ರಷ್ಟು ಒಳ್ಳೆ ಸಿನಿಮಾವೆಂದು ಮನಸಾರೆ ಹೇಳುತ್ತಿದ್ದೇನೆ. ಪ್ರಚಾರಕ್ಕೆ ಎಲ್ಲಿ ಕರೆದರೂ ಬರುತ್ತೇನೆ. ದುಬಾರಿ ಕಾಸ್ಟ್ಯೂಮ್ ಜೋಗಯ್ಯ ಚಿತ್ರದಲ್ಲಿ ಬರುವ ಶೀರ್ಷಿಕೆ ಹಾಡಿಗೆ ಖರ್ಚಾಗಿದೆ. ಶಿವನ ಕುರಿತ ಗೀತೆಯಾಗಿರುವುದರಿಂದ ಮೈಗೆಲ್ಲಾ ವಿಭೂತಿ ಹಚ್ಚಿಕೊಂಡು ಕುಣಿದು ಕುಪ್ಪಳಿಸಲಾಗಿದೆ. 24/7 ಯಾವಾಗಲೂ ಸಿಗುತ್ತೇನೆ. ನಮ್ಮ ಕೈಲಿ ಏನಾಗುತ್ತೋ ಅದನ್ನು ಮಾಡಬೇಕು ಎಂದು ನಿರೂಪಕರ ಪ್ರಶ್ನಗೆ ಉತ್ತರಿಸಿ ಶಿವರಾಜ್‍ಕುಮಾರ್ ನಿರ್ಗಮಿಸಿದರು.

ಗ್ಯಾಪ್‍ನಲ್ಲಿ ತಂಡದ ಮಾತುಗಳು ಕೇಳಿಬಂದವು. ಗಾಯಕರಾದ ವಿಜಯ್‍ಪ್ರಕಾಶ್, ಸಂಚಿತ್‍ಹೆಗ್ಗಡೆ, ಸಂಗೀತ ರವೀಂದ್ರನಾಥ್ ಹಾಡುಗಳಿಗೆ ಜೀವ ತುಂಬಿದ್ದಾರೆ. ರೇ ಕಾರ್ಡ್ ಆಡಿಯೋ ಸಂಸ್ಥೆ ಸ್ವಾಫಿಸಿ ಆಡಿಯೋ ಸಿಡಿಯನ್ನು ಹೂರ ತರಲಾಗುತ್ತಿದೆ ಎಂದರು ಸಂಗೀತ ನಿರ್ದೇಶಕ ಬಿ.ಜೆ.ಭರತ್.

ನಾಯಕರುಗಳಾದ ಕಿರಣ್‍ಶ್ರೀನಿವಾಸ್, ಪ್ರತಾಪ್‍ನಾರಾಯಣ್, ನವ ಪ್ರತಿಭೆ ಪ್ರವೀಣ್ ನಾಯಕಿಯರುಗಳಾದ ಸೋನುಗೌಡ, ಹಿತಾಚಂದ್ರಶೇಖರ್ ಎಲ್ಲರೂ ಚಿತ್ರೀಕರಣ ಅನುಭವಗಳನ್ನು ಹಂಚಿಕೊಂಡು ಸಂತಸ ಪಟ್ಟರು. ಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ ಸುನಿಲ್ ಭೀಮರಾವ್ ಮಾತನಾಡಿ ಬಾದಾಮಿ, ಬಾಗಲಕೋಟೆ, ಮಂಗಳೂರು, ಸಕಲೇಶಪುರ, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಮೂವರು ಹುಡುಗರು, ಇಬ್ಬರು ಹುಡುಗಿಯರನ್ನು ಬಣ್ಣಗಳಿಗೆ ಹೋಲಿಸಲಾಗಿದೆ. ಸಂಕೀರ್ಣ ಬಣ್ಣಗಳು ಬೇರೆ ರೀತಿಯ ಗುಣಗಳು ಇರುತ್ತವೆ. ಇವರೆಲ್ಲರೂ ಯೋಜನೆ ಹಾಕಿಕೊಂಡು ಗ್ರಾಮೀಣ, ಪಟ್ಟಣಗಳ ಕಡೆಗಳಲ್ಲಿ ಪ್ರಯಾಣ ಮಾಡುತ್ತಾರೆ. ಅಲ್ಲಿ ಒಂದಷ್ಟು ಪ್ರಸಂಗಗಳು ನಡೆಯುತ್ತವೆ. ಪ್ರೇಕ್ಷಕ ಸಿನಿಮಾದ ಕೆಲವೊಂದು ಅಂಶಗಳನ್ನು ತೆಗೆದುಕೊಂಡು ಹೋಗುತ್ತಾನೆಂದು ಧೀರ್ಘ ಕಾಲ ಮಾಹಿತಿ ಬಿಚ್ಚಿಟ್ಟರು.

ಮುಂದೆ ಹೆಬ್ಬುಲಿ ಆಗಮನವಾಯಿತು. ಒಂದು ಹಾಡು ನೋಡಿದ ತರುವಾಯ ಮೊದಲು ಹೇಳಿದ್ದೇ ಇವತ್ತಿನ ಕಾರ್ಯಕ್ರಮ ಖಂಡಿತವಾಗಿ ಮರೆತುಹೋಗಿತ್ತು. ಪ್ರತಾಪ್ ಫೋನ್ ಮಾಡಿದಾಗ ತಿಳಿಯಿತು, ಕಿರಣ್‍ಶ್ರೀನಿವಾಸ್, ಪ್ರತಾಪ್ ಇಬ್ಬರು ಸಿಸಿಎಲ್ ನಿಂದ ಪರಿಚಿತರಾಗಿದ್ದಾರೆ. ಅವರಿಗೋಸ್ಕರ ಬಂದಿರುವೆ. ಪ್ರತಾಪ್ ಕ್ರಿಕೆಟ್ ಗೆದ್ದಾಗ, ಸೋತಾಗ, ತಂಡದಲ್ಲಿ ಇಲ್ಲದೆ ಇದ್ದರೂ, ಸೊನ್ನೆ ಹೊಡೆದರೂ, ಸಿಕ್ಸರ್ ಬಾರಿಸಿದರೂ ಅವರ ನೋಟ ಒಂದೇ ತರ ಇರುತ್ತದೆ. ಕಿರಣ್ ಬಾಂಬೆಯಿಂದ ವಾಪಸ್ಸು ಬಂದಿರುವುದು ಒಳ್ಳೆಯದಾಗಿದೆ. ಮಾಂಟೇಜ್ ಹಾಡು ಪರದೆ ಮೇಲೆ ನೋಡಲು ಚೆನ್ನಾಗಿದೆ. ನಿರ್ಮಾಣ ಮಾಡುವುದು ದೊಡ್ಡದೇನಲ್ಲ. ಅದನ್ನು ಜಾಗರೂಕತೆಯಿಂದ ಬಿಡುಗಡೆ ಮಾಡಿದರೆ ಜನರಿಗೆ ತಲುಪತ್ತದೆಂದು ಸುದೀಪ್ ಕಿವಿಮಾತು ಹೇಳಿ ಹೂರಟರು. ನಿರ್ಮಾಪಕ ಯೋಗೇಶ್.ಬಿ.ದೊಡ್ಡಿ ಮಾತನಾಡುವ ಗೋಜಿಗೆ ಹೋಗಲಿಲ್ಲ.

ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
8/05/18

ಪ್ರಯಾಣದಲ್ಲಿ ಬಣ್ಣಗಳ ಆಟ
ಶೀರ್ಷಿಕೆಗಳು ಆಕರ್ಷಣೆಯಾಗಿದ್ದರೆ ಜನಗಳು ಚಿತ್ರಮಂದಿರಕ್ಕೆ ಬರುತ್ತಾರೆಂಬ ಪ್ರಚಲಿತ ಪ್ರತೀತಿಯಾಗಿದೆ. ಅದರಂತೆ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಒಂಥರ ಬಣ್ಣಗಳು’ ಚಿತ್ರತಂಡವು ವಿಷಯವನ್ನು ಹಂಚಿಕೊಳ್ಳಲು ಮಾದ್ಯಮದವರಲ್ಲಿ ಮುಖಾಮುಖಿಯಗಿ ಹಾಜರಿತ್ತು. ಮೊದಲು ಮಾತು ಶುರುಮಾಡಿದ ಸುನಿಲ್‍ಭೀಮರಾವ್ ಸ್ವತಂತ್ರವಾಗಿ ನಿರ್ದೇಶನ ಮಾಡುವ ಮುನ್ನ ಉಪೇಂದ್ರ ಸೇರಿದಂತೆ ಹಲವರಲ್ಲಿ ನಿರ್ದೇಶನದ ತಾಲೀಮು ನಡೆಸಲಾಗಿದೆ. ಚಿತ್ರಕ್ಕೆ ಕತೆ,ಚಿತ್ರಕತೆ, ಸಾಹಿತ್ಯ ಬರೆದು ಪೂರ್ಣ ಪ್ರಮಾಣದಲ್ಲಿ ಆಕ್ಷನ್ ಕಟ್ ಹೇಳಿದ್ದೇನೆ. ಬಾದಾಮಿ, ಬಾಗಲಕೋಟೆ, ಸಾಗರ, ಪುಣೆ, ಹೊನ್ನಾವರ, ಮಂಗಳೂರು ಕಡೆಗಳಲ್ಲಿ ನಿಗದಿತ ದಿನಕ್ಕಿಂತ ಮುಂಚಿತವಾಗಿ ಚಿತ್ರೀಕರಣ ಮುಗಿಸಲಾಗಿದೆ. ಮೂವರು ಹುಡುಗರು, ಇಬ್ಬರು ಹುಡುಗಿಯರನ್ನು ಬಣ್ಣಗಳಿಗೆ ಹೋಲಿಸಲಾಗಿದೆ. ಸಂಕೀರ್ಣ ಬಣ್ಣಗಳು ಬೇರೆ ರೀತಿಯ ಗುಣಗಳು ಇರುತ್ತವೆ. ಇವರೆಲ್ಲರೂ ಯೋಜನೆ ಹಾಕಿಕೊಂಡು ಗ್ರಾಮೀಣ, ಪಟ್ಟಣಗಳ ಕಡೆಗಳಲ್ಲಿ ಪ್ರಯಾಣ ಮಾಡುತ್ತಾರೆ. ಅಲ್ಲಿ ಒಂದಷ್ಟು ಪ್ರಸಂಗಗಳು ನಡೆಯುತ್ತವೆ. ಪ್ರೇಕ್ಷಕ ಸಿನಿಮಾದ ಕೆಲವೊಂದು ಅಂಶಗಳನ್ನು ತೆಗೆದುಕೊಂಡು ಹೋಗುತ್ತಾನೆಂದು ಧೀರ್ಘ ಕಾಲ ಮಾಹಿತಿ ಬಿಚ್ಚಿಟ್ಟರು.

ಜಾನಕಿ ಹೆಸರಿನಲ್ಲಿ ಬೆಂಗಳೂರಿಗೆ ಬಂದಾಗ ಗೆಳೆಯರನ್ನು ಭೇಟಿ ಅವರೊಂದಿಗೆ ಟೂರ್ ಮಾಡುವ ಪಾತ್ರ. ಹುಬ್ಬಳ್ಳಿ ಭಾಷೆ ಧಾಟಿಯಲ್ಲಿ ಮಾತನಾಡಿರುವುದು ವಿಶೇಷ ಎಂದರು ಸೋನುಗೌಡ. ಭಾವನೆಗಳನ್ನು ತೋರ್ಪಡಿಸದೆ, ನೇರವಾಗಿ ಹೇಳುತ್ತೇನೆ. ಹುಡುಗರು ಕೆಲಸ ಮಾಡುವ ಸ್ಥಳದಲ್ಲಿ ತಾನು ಒಬ್ಬಂಟಿಯಾಗಿ ಸವಾಲುಗಳನ್ನು ಎದುರಿಸಿ ಗ್ರೂಪ್ ಲೀಡರ್ ಆಗುವ ಪಾತ್ರವೆಂದು ಹಿತಚಂದ್ರಶೇಖರ್ ಖುಷಿ ಹಂಚಿಕೊಂಡರು.

ಸನ್ನಿವೇಶಗಳು ಪ್ರತಿಯೊಬ್ಬರಿಗೆ ಕನೆಕ್ಟ್ ಆಗುತ್ತದೆ. ಯಾವುದೇ ಆಗಲಿ ತಕ್ಷಣಕ್ಕೆ ನಿರ್ದಾರ ತೆಗೆದುಕೊಳ್ಳದೆ ಯೋಚಿಸಿ ಮುಂದಕ್ಕೆ ಹೆಜ್ಜೆ ಇಡುತ್ತೇನೆ. ಜೈ ಹೆಸರಿನಲ್ಲಿ ಕಾಣ ಸಿಕೊಂಡಿದ್ದೇನೆಂಬ ನುಡಿ ಕಿರಣ್ ಶ್ರೀನಿವಾಸ ಅವರದಾಗಿತ್ತು. ಬದುಕು,ಗೆಳತನ ಇವರುಗಳಿಗೆ ರಾಮ್ ಹೆಸರಿನಲ್ಲಿ ಬೆಲೆ ಕೊಡುತ್ತೇನೆ. ಗೆಳಯರಿಗೆ ಕ್ಯಾಟ್ಲೆ ಕೊಡುತ್ತಲೆ ಇರುತ್ತೇನ. ಸಕಾರಾತ್ಮಕ ಪಾತ್ರವಾಗಿದೆ. ಅವಕಾಶ ಕೊಡಿಸಿದ್ದಕ್ಕೆ ಛಾಯಗ್ರಾಹಕರಿಗೆ ಥ್ಯಾಂಕ್ಸ್ ಎಂದರು ನವಪ್ರತಿಭೆ ಪ್ರವೀಣ್. ಈ ಸಿನಿಮಾ ನನಗೆ ಸುಕೃತ ಎನ್ನಬಹುದು. ಇದರ ಚರ್ಚೆ ಮುಗಿಸಿ ಓಕೆ ಎಂದು ಹೊರಬಂದಾಗ ಎರಡು ಚಿತ್ರಗಳಿಗೆ ಸಹಿ ಮಾಡಿದೆ.. ಶ್ರೀ ಹೆಸರಿನಲ್ಲಿ ತನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ ಎಂಬ ನಂಬಿಕೆ ಇದೆ ಅಂತಾರೆ ಪ್ರತಾಪ್ ನಾರಾಯಣ್.

ನಿದೇಶಕರು ಬಣ್ಣಗಳಿಗೆ ಶೃಂಗಾರ ಮಾಡಿ ಮುಗಿಸಿದ್ದಾರೆ. ಅವುಗಳಿಗೆ ಸಂಗೀತ ಒದಗಿಸುವ ಕೆಲಸ ನನ್ನದಾಗಿದೆ. ನಾಲ್ಕು ಹಾಡುಗಳ ಪೈಕಿ ಎರಡು ಮುಗಿದಿದೆ. ಇನ್ನೆರಡು ತಿಂಗಳಲ್ಲಿ ಆಡಿಯೋ ಬಿಡುಗಡೆ ಎಂದು ಹೇಳಿದ್ದಾರೆ. ನೋಡುವ ಅಂತ ನಕ್ಕರು ಬಿ.ಜೆ.ಭರತ್. ಸ್ಕೈ ಫಿಲ್ಮಿಸ್ ಅಂದರೆ ಸುನಿಲ್, ಕಾರ್ತಿಕ್, ಯೋಗೀಶ್ ಇವರೊಂದಿಗೆ ಹಲವರು ಚಿತ್ರಕ್ಕೆ ಹಣ ಹೊಡಿರುವುದರಿಂದ ವೇದಿಕೆ ಮೇಲೆ ಇವರೆಲ್ಲರ ಪರವಾಗಿ ಯೋಗೀಶ್ ಪರಿಚಯ ಮಾಡಿಕೊಂಡರು. ಯಾವತ್ತು ಬಂದರೂ ಸಿನಿಮಾ ನೋಡಲು ಖುಷಿಯಾಗುತ್ತದೆ ಬಣ್ಣಗಳನ್ನು ಬಣ ್ಣಸಿಕೊಂಡರು ಛಾಯಗ್ರಾಹಕ ಮನೋಹರ್‍ಜೋಷಿ.

ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿಸರ್ಕಲ್ ಡಾಟ್ ಇನ್ ನ್ಯೂಸ್
-27/12/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore