HOME
CINEMA NEWS
GALLERY
TV NEWS
REVIEWS
CONTACT US
ಹೆಸರಿಡದ ಚಿತ್ರಕ್ಕೆ ಮಹೂರ್ತ
ಹೊಸ ತಂಡವೊಂದು ಒಂದು ಕತೆ ಹೇಳ್ಲಾ ಶೀರ್ಷಿಕೆಯೊಂದಿಗೆ ಚಿತ್ರ ಮಾಡಲು ಯೋಜನೆ ಹಾಕಿಕೊಂಡಿತ್ತು. ಆದರೆ ವಾಣಿಜ್ಯ ಮಂಡಳಿಯಲ್ಲಿ ಒಂದು ಕಥೆ ಹೇಳಲಾ ಎನ್ನುವ ಸಿನಿಮಾವು ನೊಂದಣಿಯಾಗಿದ್ದು, ಅಲ್ಲದೆ ಚಿತ್ರೀಕರಣ ಮುಗಿಸಿದೆಯಂತೆ. ಈಗ ಹೆಸರಿಗಾಗಿ ತಲಾಷ್ ಮಾಡುತ್ತಿದ್ದು, ಬುದುವಾರ ಶುಭ ದಿನವಾಗಿದ್ದರಿಂದ ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ದೇವರ ಸನ್ನಿದಿ ಅತಿಥಿ ಗೃಹದಲ್ಲಿ ಸರಳವಾಗಿ ಮಹೂರ್ತ ಆಚರಿಸಿಕೊಂಡಿದೆ. ಮರ್ಡರ್ ಮಿಸ್ಟರಿ ಜೊತೆಗೆ ಲವ್, ಕಾಮಿಡಿ ಅಂಶಗಳು ಇರಲಿದೆ. ಮೂವರು ಹುಡುಗರು ಮೋಜು ಮಸ್ತಿ ಮಾಡುತ್ತಾ ತಂಗಲು ಗೆಸ್ಟ್‍ಹೌಸ್‍ಗೆ ಬರುತ್ತಾರೆ. ಅಲ್ಲಿ ಸಂಕಷ್ಟಕ್ಕೆ ಸಿಲುಕಿ ಒದ್ದಾಡಿ ಇದರಿಂದ ಹೇಗೆ ಹೊರಗೆ ಬರುತ್ತಾರೆ ಎಂಬುದು ಒಂದು ಏಳೆಯ ಕತೆಯಾಗಿದೆ. ಎರಡು ತಮಿಳು ಚಿತ್ರಗಳನ್ನು ನಿರ್ದೇಶಿಸಿರುವ ಕೃಷ್ಣಸಾಯಿ ಚಿತ್ರಕತೆ, ಸಂಭಾಷಣೆ ಬರೆದು ಮೊದಲಬಾರಿ ಆಕ್ಷನ್ ಕಟ್ ಹೇಳುವುದರೊಂದಿಗೆ ಸ್ಯಾಂಡಲ್‍ವುಡ್‍ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ನಾಯಕರುಗಳ ಪೈಕಿ ಶಂಕರ್‍ಗೆ ನಟನೆ ಹೊಸ ಅನುಭವ. ಅಮೋಗ್ ಎರಡನೆ ಪ್ರಯತ್ನ, ಮತ್ತು ಮದನ್ ನಾಲ್ಕು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟೆಕ್ಕಿಯಾಗಿ ಸಂಯುಕ್ತಹೂರನಾಡು, ಸಂಪ್ರದಾಯಸ್ಥ ಹುಡುಗಿ ಪಾತ್ರದಲ್ಲಿ ನಿಮಿಶಾ, ಮೇಘಾ ಅಲಿಯಾಸ್ ಮೇಘನಾದಲ್ಲಿ ಮಲ್ಲು ಆಗಿ ಅಭಿನಯಿಸಿದ್ದ ನೀತು ನಾಯಕಿಯರು. ಇವರೊಂದಿಗೆ ಕೃಷ್ಣಹೆಬ್ಬಾಳೆ, ಮನದೀಪ್‍ರಾಯ್, ವಿಜಯ್‍ಚೆಂಡೂರು ಮುಂತಾದವರ ನಟನೆ ಇದೆ. ಹಾಡುಗಳಿಗೆ ರಾಗ ಹೊಸೆಯುತ್ತಿರುವುದು ಯತೀಶ್‍ಮಹದೇವ್, ಛಾಯಗ್ರಹಣ ಆರ್.ಕೆ.ಪ್ರತಾಪ್ ಅವರದಾಗಿದೆ. ದುಬೈನಲ್ಲಿ ಕೆಲಸ ಮಾಡಿರುವ ಕೌಶಲ್‍ಮಹಾಜನ್, ಪಂಜಾಬ್ ಮೂಲದ ರಾಜ್ ಆನಂದ್ ಬಾಂಬೆಯಲ್ಲಿ ಸೇವೆಸಲ್ಲಿಸಿದ್ದು, ಸದ್ಯಕ್ಕೆ ಇಬ್ಬರು ಬೆಂಗಳೂರು ನಿವಾಸಿಗಳು. ಟು ಸ್ಟೇಟ್ಸ್ ಫಿಲಿಮ್ಸ್ ಸಂಸ್ಥೆ ಮುಖಾಂತರ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
12/04/18



For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore