HOME
CINEMA NEWS
GALLERY
TV NEWS
REVIEWS
CONTACT US
ಒಂದಲ್ಲಾ ಎರಡಲ್ಲ ಮರು ಬಿಡುಗಡೆ ಸಾದ್ಯವಿಲ್ಲ
ರಾಮರಾಮರೇ ಖ್ಯಾತಿಯ ಸತ್ಯಪ್ರಕಾಶ್ ನಿರ್ದೇಶನ ಮಾಡಿರುವ ‘ಒಂದಲ್ಲಾ ಎರಡಲ್ಲ’ ಚಿತ್ರವು ಪತ್ರಿಕೆ, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಪ್ರಚಾರದ ಕೊರತೆ, ಅನಾರೋಗ್ಯಕರ ಸ್ಪರ್ಧೆಯಿಂದ ಚಿತ್ರವು ಕಡಿಮೆ ಅವಧಿಯಲ್ಲಿ ಎತ್ತಂಗಡಿಯಾಗಿದೆ. ಸಿನಿಮಾವನ್ನು ಮರುಬಿಡುಗಡೆ ಮಾಡುವಿರಾ ಅಂತ ನಿರ್ಮಾಪಕ ಉಮಾಪತಿಯನ್ನು ಅವರನ್ನು ಕೇಳಿದಾಗ ಹೀಗೆ ಸ್ಪಷ್ಟಪಡಿಸಿದರು. ನನ್ನ ನಿರ್ದೇಶನದ ಚಿತ್ರವು ನಿಮಗೆ ಹಣ ವಾಪಸ್ ತಂದು ಕೊಟ್ಟಿಲ್ಲ. ಹಾಗಾಗಿ ಸಂಭಾವನೆಯನ್ನು ತೆಗೆದುಕೊಳ್ಳುವುದಿಲ್ಲವೆಂದು ಸತ್ಯಪ್ರಕಾಶ್ ತಿಳಿಸಿದ್ದಾರೆ. ಮುಂಗಡ ಹೊರತುಪಡಿಸಿ ಬೇರೆ ಹಣ ನೀಡಿಲ್ಲ. ಕರೆದರೂ ಮುಂದೆ ಒಳ್ಳೆ ಚಿತ್ರ ಮಾಡಿದ ನಂತರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಇಂತಹ ನಿಷ್ಟಾವಂತ ನಿರ್ದೇಶಕರು ಸಿಗುವುದಿಲ್ಲ. ವಿತರಕರ ನಿರಾಸ್ತಕಿಯಿಂದ ಜನರಿಗೆ ತಲುಪಲಿಲ್ಲ. ಸದ್ಯ ಎರಡು ಚಿತ್ರಗಳಲ್ಲಿ ತೊಡಗಿರುವುದರಿಂದ ಮರು ಬಿಡುಗಡೆಗೆ ಮಾಡಲು ಸಮಯವಿಲ್ಲ. ಸ್ಯಾಟಲೈಟ್ ಹಕ್ಕುಗಳು ಮಾರಾಟವಾಗಿಲ್ಲ. ದೇವರು ಬೇರೆ ವ್ಯವಹಾರದಲ್ಲಿ ಲಾಭ ತರಿಸಿದ್ದಾರೆ. ಮುಂದೆ ಅವರಿಗೆ ಅಂತಲೇ ಸಿನಿಮಾ ಮಾಡಲು ಸಿದ್ದ ಎನ್ನುತ್ತಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
7/11/18
ಸಂಬಂದಗಳ ಸರಮಾಲೆ ಒಂದಲ್ಲಾ ಎರಡಲ್ಲಾ
ಅಪ್ಪ ಆಗಲಿಲ್ಲಾ, ಅಪ್ಪ ಅಂತ ಕರೆಸಿಕೊಳ್ಳಲಿಲ್ಲ. ಇವತ್ತು ಅಪ್ಪ ಎಂದು ಕರೆಯಲು ಖುಷಿಯಾಗುತ್ತಿದೆ. ಕಾಲಿನಿಂದ ಒದೆಯುತ್ತಿದ್ದ ನನಗೆ, ಕಾಲು ಮುಟ್ಟಿ ಚಿಕಿತ್ಸೆ ನೀಡಿದ್ದಾರೆಂದು ಡೈಲಾಗ್ ‘ಒಂದಲ್ಲಾ ಎರಡಲ್ಲಾ’ ಚಿತ್ರದ ಒಂದು ಭಾಗದ ಕತೆಯಲ್ಲಿ ಬರುತ್ತದೆ. ದೇಶದ ಕೆಲವು ಭಾಗಗಳಲ್ಲಿ ಹಿಂದೂ-ಮುಸ್ಲಿಂ ನಡುವೆ ಗಲಭೆ, ಘರ್ಷಣೆಗಳು ನಡೆಯುತ್ತಿವೆ. ಮತ್ತೋಂದು ಕಡೆ ಇವರಿಬ್ಬರು ಸೋದರ-ಸೋದರಿಯರಂತೆ ಜೀವನ ನಡೆಸುತ್ತಿರುತ್ತಾರೆ. ಅಂತಹ ಜನಗಳ ಮಧ್ಯೆ ನವಿರಾಗಿ ನಡೆಯುವ ಈ ಚಿತ್ರವು ನೋಡುಗನಿಗೆ ಎರಡು ಗಂಟೆ ಹೋಗುವುದೇ ಗೊತ್ತಾಗುವುದಿಲ್ಲ. ಒಂಬತ್ತು ವರ್ಷದ ಸಮೀರನೆಂಬ ಹುಡುಗ ಮತ್ತು ಬಾನು ಇಬ್ಬರು ಒಬ್ಬರನ್ನ ಒಬ್ಬರು ಬಿಟ್ಟು ಇರುವುದಿಲ್ಲ. ಏನು ಅರಿಯದ ಈತನಿಗೆ ಬಾನು ಎಲ್ಲವು ಆಗಿರುತ್ತದೆ. ಅಪ್ಪ ರಪೀಕ್ ಮ್ಯಕಾನಿಕ್, ತಾತ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದು ಮೆಕ್ಕಾಗೆ ಹೋಗುವ ಬಯಕೆ, ಅಕ್ಕನಿಗೆ ಓದನ್ನು ಮುಂದುವರೆಸುವ ಛಲ. ಬಡತನ ಇವರ ಆಸೆಗೆ ತಣ್ಣೀರು ಹಾಕುತ್ತಲೇ ಇರುತ್ತದೆ. ಪಕ್ಕದಲ್ಲೆ ಇರುವ ರಾಜಣ್ಣ ದಂಪತಿಗಳಿಗೆ ರಫೀಕ್ ಕುಟುಂಬವೆಂದರೆ ಅಭಿಮಾನ. ಕಷ್ಟ ಬಂದಾಗ ಇಬ್ಬರಲ್ಲೂ ತ್ಯಾಗದ ಮನೋಭಾವ. ಮತ್ತೋಂದು ಟ್ರಾಕ್‍ದಲ್ಲಿ ಮಗನ ಹುಟ್ಟುಹಬ್ಬಕ್ಕೆ ಕೇಕ್ ತರಲು ಹೊರಡುವ ತಂದೆಯ ಕಾಮಿಡಿ. ಒಂದೇ ದಿನದಲ್ಲಿ ನಡೆಯುವ ಕತೆಗೆ ಕೊನೆಯಲ್ಲಿ ಎಲ್ಲವು ಸೇರಿಕೊಂಡು ಅರ್ಥಪೂರ್ಣವಾಗಿ ಚಿತ್ರಕ್ಕೆ ತೆರೆ ಬೀಳುತ್ತದೆ. ಬಾನು ಯಾರು ಎಂದು ತಿಳಿಯಲು ನೀವುಗಳು ಚಿತ್ರಮಂದಿರಕ್ಕೆ ಹೋಗಬೇಕು.

ಇಡೀ ಸಿನಿಮಾ ಸಮೀರ ಮತ್ತು ಬಾನು ಸುತ್ತ ಹೋಗುತ್ತದೆ. ಆಕಸ್ಮಿಕವಾಗಿ ಇಬ್ಬರು ಕಾಣೆಯಾದಾಗ ನಡೆಯುವ ಪ್ರಸಂಗಗಳು ಸಂಜೆ ಹೊತ್ತಿಗೆ ಸರಿಹೋಗುವುದನ್ನು ನಿರ್ದೇಶಕ ಡಿ.ಸತ್ಯಪ್ರಕಾಶ್ ಚೆನ್ನಾಗಿ ನಿರೂಪಿಸಿದ್ದಾರೆ. ರಾಮರಾಮರೇ ನಂತರ ಜನರಿಗೆ ಯಾವ ರೀತಿ ಸಿನಿಮಾ ಕೊಡುತ್ತಾರೆಂದು ಕಾದಿದ್ದು ಸಾರ್ಥಕವಾಗಿದೆ. ಒಂದು ರೀತಿಯಲ್ಲಿ ಪುಣ್ಯಕೋಟಿಯ ಮುಂದುವರಿದ ಭಾಗವೆನ್ನಬಹುದು. ಮುಗ್ದನಾಗಿ ಕಾಣಿಸಿಕೊಂಡಿರುವ ಮಾ.ರೋಹಿತ್ ಸಮೀರನಾಗಿ ಇಡೀ ಸಿನಿಮಾವನ್ನು ಹೆಗಲೆ ಮೇಲೆ ಹೊತ್ತುಕೊಂಡಿದ್ದಾನೆ. ಮೊದಲ ಚಿತ್ರವಾದರೂ ಸುಲಲಿತವಾಗಿ ನಟಿಸಿರುವುದು ಪ್ಲಸ್ ಪಾಯಿಂಟ್. ಶಿವಮೊಗ್ಗ, ಮಂಗಳೂರು ರಂಗಭೂಮಿ ಕಲಾವಿದರಿಗೆ ಅವಕಾಶ ನೀಡಿರುವುದು ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ. ತುಳು ಚಿತ್ರರಂಗದ ಹಾಸ್ಯ ನಟ ಸಾಯಿಕೃಷ್ಣಕುಡ್ಲ ತೆಳುವಾಗಿ ನಗಿಸಿ, ಒಂದು ದೃಶ್ಯದಲ್ಲಿ ಪ್ರೇಕ್ಷಕರ ಮನಸ್ಸನ್ನು ಕದಡುತ್ತಾರೆ. ವಾಸುಕಿವೈಭವ್-ನಾಬಿನ್‍ಪಾಲ್ ಸಂಗೀತದಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಹಾಡುಗಳು ಪೂರಕವಾಗಿದೆ. ಮಂಗಳೂರು ಗಲ್ಲಿಗಲ್ಲಿಗಳನ್ನು ಚೆನ್ನಾಗಿ ಸೆರೆಹಿಡಿದಿರುವ ಲಿವಿತ್, ಇದಕ್ಕೆ ಸಾಟಿಯಾಗಿ ಸಂಕಲನ ಮಾಡಿರುವ ಕೆಂಪರಾಜು ಕೆಲಸವನ್ನು ಮೆಚ್ಚಬಹುದು. ಹೆಬ್ಬುಲಿಯಂತ ಬಿಗ್ ಬಜೆಟ್ ಚಿತ್ರ ನಿರ್ಮಿಸಿರುವ ಉಮಾಪತಿ, ಕಡಿಮೆ ವೆಚ್ಚದಲ್ಲಿ ಉತ್ತಮ ಮನರಂಜನೆಯ ಸಿನಿಮಾವನ್ನು ನೀಡಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
****
25/08/18ಆಗಸ್ಟ್ 24ರಂದು ಒಂದಲ್ಲಾ ಎರಡಲ್ಲಾ
ರಾಮರಾಮ ರೇ ಚಿತ್ರದ ನಿರ್ದೇಶಕ ಡಿ.ಸತ್ಯಪ್ರಕಾಶ್ ಅವರ ಎರಡನೆ ಸಿನಿಮಾ ‘ಒಂದಲ್ಲಾ ಎರಡಲ್ಲಾ’ ಸಿನಿಮಾವು ಮಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಿದೆ. ಕತೆಯಲ್ಲಿ ಬಾಲಕ ಅವಶ್ಯಕವಾಗಿದ್ದರಿಂದ 1500 ಮಕ್ಕಳನ್ನು ಅಡಿಷನ್ ಮಾಡಲಾಗಿ ಕೊನೆಗೆ ಪಾಂಡವಪುರದ ರೋಹಿತ್ ಸಿಕ್ಕರು. ಒಂದಲ್ಲಾ ಎರಡಲ್ಲಾ ಪಾತ್ರಗಳು, ಸನ್ನಿವೇಶಗಳು, ವಿಚಿತ್ರ ದೃಶ್ಯಗಳು ಇರಲಿದೆ. ಹಿಂದಿನ ಚಿತ್ರದ ಕಲಾವಿದರು ಇರದೆ, ತಂತ್ರಜ್ಘರು ಮಾತ್ರ ಹಳಬರು. ಬಹುತೇಕ ಹೊಸಬರು ಮತ್ತು ಆಯಾ ಭಾಗದ ರಂಗಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ತುಳು ಚಿತ್ರರಂಗದ ಹಾಸ್ಯನಟ ಸಾಯಿಕೃಷ್ಣಕುಡ್ಲ ನಟಿಸಿದ್ದಾರೆ. ಎಲ್ಲರ ಮನಸ್ಸಿನಲ್ಲಿ ಚಿಕ್ಕ ಹುಡುಗನಿರುತ್ತಾನೆ. ಯಾವಾಗಲೂ ಮಗು ಮನಸ್ಸು ಎಲ್ಲರನ್ನು ಟಚ್ ಮಾಡುತ್ತದೆ. ನಮ್ಮ ನೆಮ್ಮದಿಯ ಬದುಕಿಗೆ ಅತ್ಯವಶ್ಯಕವಾಗಿರುವ ಮುಗ್ದತೆ ಮತ್ತು ಪರರ ನೋವಿಗೆ ಸ್ಪಂದಿಸುವ ಗುಣ, ವಯಸ್ಸು, ಅಂತಸ್ತು, ಹಾಗೂ ವೃತ್ತಿಯನ್ನು ಮೀರಿ ಜಗತ್ತಿನ ಎಲ್ಲರಲ್ಲೂ ಇರಬಹುದೇ ಎಂದು ಇಣಿಕಿನೋಡುವ ಪ್ರಯತ್ನವನ್ನು ಮಾಡಲಾಗಿದೆ.

ನಿರ್ದೇಶಕರು ಸಾಹಿತ್ಯ ರಚಿಸಿರುವ ನಾಲ್ಕು ಹಾಡುಗಳಿಗೆ ರಾಗ ಒದಗಿಸಿರುವ ವಾಸುಕಿವೈಭವ್ ಮೂರು ಗೀತೆಗಳಿಗೆ ಧ್ವನಿಯಾಗಿದ್ದಾರೆ. ನಾಬಿನ್‍ಪಾಲ್ ಹಿನ್ನಲೆ ಸಂಗೀತವಿದೆ. ಚಿತ್ರವು 80+ ಕೇಂದ್ರಗಳಲ್ಲಿ ತೆರೆಕಾಣುವ ಸಾದ್ಯತೆ ಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
7/08/18
ಒಂದಲ್ಲಾ ಎರಡಲ್ಲಾ ನಾಲ್ಕು ಹಾಡುಗಳು
ರಾಮರಾಮ ರೇ ತಂಡದಿಂದ ‘ಒಂದಲ್ಲಾ ಎರಡಲ್ಲಾ’ ಸಿನಿಮಾವೊಂದು ಸಿದ್ದಗೊಂಡಿದೆ. ಮಂಗಳೂರು ಕಡೆಗಳಲ್ಲಿ ಸದ್ದಿಲ್ಲದೆ ಚಿತ್ರೀಕರಿಸಿ ನಡೆಸಿ ಸುದ್ದಿ ಮಾಡಲು ಆಡಿಯೋ ಬಿಡುಗಡೆ ನೆಪ ಮಾಡಿಕೊಂಡು ತಂಡದೊಂದಿಗೆ ಮಾದ್ಯಮದವರನ್ನು ಭೇಟಿ ಮಾಡಿದರು. ಮೊದಲ ಚಿತ್ರದ ನಂತರ ಯಾವ ರೀತಿ ಕತೆ ಬರೆಯಬೇಕೆಂದು ಗೊಂದಲ್ಲಿದಲ್ಲಿ ಇರುವಾಗ ಹೆಬ್ಬುಲಿ ನಿರ್ಮಾಪಕರು ಸಿನಿಮಾ ಮಾಡಿಕೊಡಬೇಕೆಂದು ಕೋರಿಕೊಂಡರು. ಅದರಂತೆ ಸಾಕಷ್ಟು ಸಮಯ ತೆಗೆದುಕೊಂಡರೂ ಅವರು ಒಮ್ಮೆಯಾದರೂ ತಡವಾಗಿದ್ದಕ್ಕೆ ಕಾರಣ ಕೇಳಲಿಲ್ಲ. ಹಾಗೆಯೇ ಸೆಟ್‍ಗೆ ಭೇಟಿ ನೀಡಿದವರಲ್ಲ. ಕತೆಯಲ್ಲಿ ಬಾಲಕ ಅವಶ್ಯಕವಾಗಿದ್ದರಿಂದ 1500 ಮಕ್ಕಳನ್ನು ಅಡಿಷನ್ ಮಾಡಲಾಗಿ ಕೊನೆಗೆ ಪಾಂಡವಪುರದ ರೋಹಿತ್ ಸಿಕ್ಕರು.

. ಒಂದಲ್ಲಾ ಎರಡಲ್ಲಾ ಪಾತ್ರಗಳು, ಸನ್ನಿವೇಶಗಳು, ವಿಚಿತ್ರ ದೃಶ್ಯಗಳು ಇರಲಿದೆ. ಹಿಂದಿನ ಚಿತ್ರದ ಕಲಾವಿದರು ಇರದೆ, ತಂತ್ರಜ್ಘರು ಮಾತ್ರ ಹಳಬರು. ಬಹುತೇಕ ಹೊಸಬರು ಮತ್ತು ಆಯಾ ಭಾಗದ ರಂಗಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ತುಳು ಚಿತ್ರರಂಗದ ಹಾಸ್ಯನಟ ಸಾಯಿಕೃಷ್ಣಕುಡ್ಲ ನಟಿಸಿದ್ದಾರೆ. ಎಲ್ಲರ ಮನಸ್ಸಿನಲ್ಲಿ ಚಿಕ್ಕ ಹುಡುಗನಿರುತ್ತಾನೆ. ಯಾವಾಗಲೂ ಮಗು ಮನಸ್ಸು ಎಲ್ಲರನ್ನು ಟಚ್ ಮಾಡುತ್ತದೆ. ನಮ್ಮ ನೆಮ್ಮದಿಯ ಬದುಕಿಗೆ ಅತ್ಯವಶ್ಯಕವಾಗಿರುವ ಮುಗ್ದತೆ ಮತ್ತು ಪರರ ನೋವಿಗೆ ಸ್ಪಂದಿಸುವ ಗುಣ, ವಯಸ್ಸು, ಅಂತಸ್ತು, ಹಾಗೂ ವೃತ್ತಿಯನ್ನು ಮೀರಿ ಜಗತ್ತಿನ ಎಲ್ಲರಲ್ಲೂ ಇರಬಹುದೇ ಎಂದು ಇಣಿಕಿನೋಡುವ ಪ್ರಯತ್ನವನ್ನು ಮಾಡಲಾಗಿದೆ ಎಂಬುದರ ಮಾಹಿತಿಯನ್ನು ಸತ್ಯಪ್ರಕಾಶ್ ಬಿಚ್ಚಿಟ್ಟರು.

ಕಮರ್ಷಿಯಲ್ ಚಿತ್ರ ನಿರ್ಮಾಣ ಮಾಡಿದ ನಂತರ ಒಳ್ಳೆ ಸಂದೇಶ ಇರುವ ಸಿನಿಮಾ ಮಾಡಲು ಚಿಂತನೆ ನಡೆಸಲಾಯಿತು. ಬೇರಯವರು ಹೆಸರು, ಮನಸ್ಸು ಮತ್ತು ಹಣಕ್ಕೋಸ್ಕರ ಚಿತ್ರ ಮಾಡುತ್ತಾರೆ. ನಾವು ಇದನ್ನು ಬದಿಗೊತ್ತಿ ಉತ್ತಮ ಚಿತ್ರ ಮಾಡಿದ್ದೇವೆ. ಲಿಖಿತ ರೂಪದ ಪ್ರಕಾರ ನಾನು ನಿರ್ಮಾಪಕ. ತಂತ್ರಜ್ಘನಾಗಿ ಸತ್ಯಪ್ರಕಾಶ್ ನಿರ್ಮಾಪಕರಾಗಿದ್ದಾರೆ. ಭಗವಂತ ಕೈ ತುಂಬ ಕೆಲಸ ಕೊಟ್ಟಿರುವಾಗ ಸಿನಿಮಾ ಮಾಡುವುದೇ ಕಾಯಕ. ಮುಂದೆ ದರ್ಶನ್ ನಮ್ಮ ಬ್ಯಾನರ್ ನಟಿಸಲಿದ್ದಾರೆ ಎಂದು ಉಮಾಪತಿ ಹೇಳಿಕೊಂಡರು.
ಸಿಡಿ ಬಿಡುಗಡೆ ಸಮಾರಂಭದಲ್ಲಿ ಕೆ.ಮಂಜು, ಯೋಗಿದ್ವಾರಕೀಶ್, ಶಾಸಕ ರಾಜುಗೌಡ, ವಾಣಿಜ್ಯ ಮಂಡಳಿ ಪದಾದಿಕಾರಿಗಳಾದ ಕರಿಸುಬ್ಬು, ವೀರೇಶ್ ಉಪಸ್ತಿತರಿದ್ದು ತಂಡಕ್ಕೆ ಶುಭ ಹಾರೈಸಿದರು. ಸಂಗೀತ ನಿರ್ದೇಶಕರುಗಳಾದ ವಾಸುಕಿವೈಭವ್-ನಾಬಿನ್‍ಪಾಲ್, ಕಲಾವಿದರು, ರೋಹಿತ್ ಪೋಷಕರು ಇದೇ ಸಂದರ್ಭದಲ್ಲಿ ಹಾಜರಿದ್ದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
24/07/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

/