HOME
CINEMA NEWS
GALLERY
TV NEWS
REVIEWS
CONTACT US
ರುಚಿಕರ ತಿನಿಸುಗಳಿಗೆ ಓಗರ
ಸ್ವಾದಿಷ್ಟ ಆರೋಗ್ಯಕರಅಡುಗೆಯನ್ನು ದಿಢೀರ್‍ತಯಾರಿಸಲು ಸಾಂಪ್ರದಾಯಿಕ ಮಸಾಲಾ ಮಿಶ್ರಣಗಳ ಶ್ರೀಮಂತ ಪರಂಪರೆಯನ್ನುಓಗರ ಮನೆ ಮನೆಗೆ ತರುತ್ತದೆ. ಇದರಲ್ಲಿತಯಾರಾಗುವ ಸಿದ್ದ ತಿನಿಸುಗಳು ಗ್ರಾಹಕರ ನಾಲಿಗೆಗೆ ರುಚಿಕರವಾಗಿ ಧೀರ್ಘಕಾಲದವರೆಗೂ ಉಳಿಸುತ್ತದೆ. ಶ್ರೀಚಕ್ರ ಫುಡ್ಸ್‍ಅಂಡ್ ಬಿವರೇಜಸ್ (ಪ್ರೈ) ಲಿ.ಸಂಸ್ಥೆಯ ‘ಓಗರ’ ಮಾಲೀಕರಘುನಾಥ್‍ರಾಷ್ಟದಲ್ಲಿಅಂದಾಜು 50 ಸಾವಿರಓಗರ ಮಳಿಗೆ ಸ್ಥಾಪಿಸಲು ನಿರ್ಧರಿಸಲಾಗಿದೆ.ರಾಜ್ಯದಲ್ಲಿ 8 ಸಾವಿರ ಮಳಿಗೆಗಳು, ಅಲ್ಲದೆ ತಮಿಳುನಾಡು, ಮಹಾರಾಷ್ಟ್ರ, ಆಂದ್ರಪ್ರದೇಶ ಸೇರಿದಂತೆ ನಾನಾ ಭಾಗಗಳಲ್ಲಿ ಮಳಿಗೆಗಳನ್ನು ಪ್ರಾರಂಭಿಸಲುಯೋಜನೆರೂಪಿಸಲಾಗಿದೆಎಂದು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಅಮೇರಿಕ, ಬ್ರಿಟನ್, ಆಸ್ಟ್ರೇಲಿಯಾ, ಸಿಂಗಪುರದಲ್ಲಿ ಮಳಿಗೆ ತೆರೆಯಲುಅರ್ಜಿ ನೀಡಲಾಗಿದೆ.ಶ್ರೀಘ್ರದಲ್ಲೆ ಆ ಕಡೆಯಿಂದ ಹಸಿರುನಿಶಾನೆ ಸಿಕ್ಕಿದ ತಕ್ಷಣಅಲ್ಲಿಯೂ ಶಾಖೆ ತೆರೆಯಲಾಗುವುದುಎಂದರು.

ಓಗರ ಉತ್ಪನ್ನಗಳ ರಾಯಭಾರಿಯಾಗಿ ಹಿರಿಯ ನಟಅನಂತನಾಗ್‍ಇರುವುದುತಂಡಕ್ಕೆ ಆನೆ ಬಲ ಬಂದಂತೆಆಗಿದೆ. ನಟನ 71ನೇ ಹುಟ್ಟುಹಬ್ಬದಂದುಎಸ್‍ಆರ್‍ವಿ ಪ್ರಿವ್ಯೂಚಿತ್ರಮಂದಿರದಲ್ಲಿ ನಡೆದ ಸರಳ ಸಮಾರಂಭದಲ್ಲಿಅನಂತನಾಗ್ ಮಾತನಾಡಿಎರಡು ಕಂಪೆನಿಗಳಿಗೆ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದೆ. ಇವರೊಂದಿಗೆ ಮೊದಲಬಾರಿ ವಿದೇಶದಲ್ಲಿಓಗರ ಬಗ್ಗೆ ಅರಿವು ಮೂಡಿಸಲು ಹಾಜರಾಗಿದ್ದೆ. ಈಗ ಆಹಾರಉತ್ಪನ್ನತಯಾರಿಕೆಗೆರಾಯಭಾರಿಯಾಗಿಇರುವುದುಹೆಮ್ಮ ಅನಿಸಿದೆ.ಎಂದು ಹೇಳಿದರು. ಸದ್ಯ ಹದಿನಾರುತರಹದಆಹಾರ ಉತ್ಪನ್ನಗಳು ಲಭ್ಯವಿದ್ದು, ಹದಿಮೂರು ಉತ್ಪನ್ನಗಳು ಸಿದ್ದವಾಗುತ್ತಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಕಂಗೇರಿ ಬಳಿ ಓಗರರೆಸ್ಟೋರೆಂಟ್ ನಿರ್ಮಾಣವಾಗಲಿದೆ.ನಂತರಇತರೆ ಕಡೆಗಳಲ್ಲಿ ರೆಸ್ಟೋರೆಂಟ್‍ನ್ನುಆರಂಭಿಸಲಾಗುತ್ತದೆಎಂಬುದಾಗಿ ಮಾಹಿತಿ ನೀಡಿದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
4/09/19


ಓಗರದಲ್ಲಿ ರುಚಿಕರ ತಿನಿಸುಗಳು
ಹೆಬ್ಬುಲಿ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ರಘುನಾಥ್ ಮತ್ತು ವಾಣ ಶ್ರೀರಘುನಾಥ್ ಸಾರಥ್ಯದ ‘ ಓಗರ’ ಆಹಾರೋತ್ಪನ್ನ ತಯಾರಿಕಾ ಘಟಕವು ಬೆಂಗಳೂರಿನಲ್ಲಿ ಪ್ರಾರಂಭವಾಗುವ ಹಿನ್ನಲೆಯಲ್ಲಿ ಪುರಭವನದಲ್ಲಿ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಸಂಸ್ಥೆಗೆ ಶುಭ ಹಾರೈಸಲು ಆಗಮಿಸಿದ್ದ ಕೇಂದ್ರ ಸಚಿವ ಅನಂತ್‍ಕುಮಾರ್ ಪತ್ನಿ ತೇಜಸ್ವಿನಿಅನಂತಕುಮಾರ್ ಮಾತನಾಡುತ್ತಾ ಅದಮ್ಯ ಚೇತನದ ಮೂಲಕ ಸಾವಿರಾರು ಮಕ್ಕಳ ಹಸಿವು ನಿವಾರಣೆ ಮಾಡಲಾಗುತ್ತಿದ್ದು, ಅಡುಗೆ ಮಾಡುವಾಗ ಒಗ್ಗರಣೆ ಹಾಕುವುದು ತಿಳಿದಿದೆ. ಓಗರ ಪದಕ್ಕೆ ಅನ್ನ ಅಂತ ಗೊತ್ತಾಯಿತು. ಆಹಾರ ದೇವರಸಮಾನ. ಅದು ಪೋಲು ಆಗದಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ. ಪ್ಲಾಸ್ಟಿಕ್ ಬಳಸದೆ ಆಹಾರದ ಪದಾರ್ಥಗಳನ್ನು ಬೇರೆ ವಿಧಾನದಲ್ಲಿ ಹೇಗೆ ಪ್ಯಾಕ್ ಮಾಡುವುದು ಎನ್ನುವುದಕ್ಕೆ ಉತ್ತರ ಸಿಕ್ಕಿಲ್ಲ. ಅದನ್ನು ನಿರ್ಮೂಲನ ಮಾಡಲು ಹೊಸ ಅವಿಷ್ಕಾರದ ಅವಶ್ಯಕತೆ ಇದೆ. ನೀವುಗಳು ಅದನ್ನು ಅನುಷ್ಟಾನ ಮಾಡುತ್ತೀರಿ ಎಂಬ ನಂಬಕೆ ಇದೆ ಎಂದರು.

ಅತಿಥಿಯಾಗಿ ಆಗಮಿಸಿದ್ದ ನಟ ದರ್ಶನ್ ಒಳ್ಳೆ ಆಹಾರ ಪದಾರ್ಥಗಳನ್ನು ತಯಾರು ಮಾಡುತ್ತಿರುವ ಇವರ ಪ್ರಯತ್ನಕ್ಕೆ ಪ್ರತಿಫಲ ಸಿಗಲಿ. ಎಲ್ಲರಿಂದ ಜನಪ್ರಿಯತೆ ಗಳಿಸಲಿ ಎಂದರು. ಮಂತ್ರಾಯಲಯ ಶ್ರೀ ರಾಘವೇಂದ್ರ ಮಠದ ಪೀಠಾಧೀಶರಾದ ಶ್ರೀ,ಶ್ರೀಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರವರು, ಅಧ್ಯಾತ್ಮಿಕ ಚಿಂತಕರುಗಳಾದ ಡಾ.ಭಾನುಪ್ರಕಾಶ್ ಶರ್ಮಾ, ಡಾ.ಪಾವಗಡಪ್ರಕಾಶ್‍ರಾವ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಕೆ.ಎನ್.ವೆಂಕಟನಾರಾಯಣ ಆಗಮಿಸಿ ಆಶಿರ್ವಚನ ನೀಡಿದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-4/02/18
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore