HOME
CINEMA NEWS
GALLERY
TV NEWS
REVIEWS
CONTACT US
ಅಭಿಮಾನಿಗಳಿಗೆ ಖುಷಿ ಪಡಿಸುವ ಒಡೆಯ
ತಮಿಳು ‘ವೀರಂ’ ರಿಮೇಕ್ ಆಗಿದ್ದರೂ ಇಲ್ಲಿನ ನೇಟಿವಿಟಿಗೆ ತಕ್ಕಂತೆ ‘ಒಡೆಯ’ ಸಿನಿಮಾ ಬದಲಾಗಿದೆ. ಇಡೀ ಕತೆಯು ಗಜೇಂದ್ರ (ದರ್ಶನ್) ಸುತ್ತ ಸಾಗುವುದರಿಂದ ಸಿನಿಮಾಪೂರ್ತಿ ಇವರೇ ಆವರಿಸಿಕೊಂಡಿದ್ದಾರೆ. ನಾಯಕ ಟ್ರಾನ್ಸ್‍ಪೋರ್ಟ್ ಮತ್ತು ಟ್ರೇಡಿಂಗ್ ಕಂಪೆನಿಯ ಯಜಮಾನ. ರೈತರ ಪರ ನಿಲ್ಲುವ, ಅನ್ಯಾಯದ ವಿರುದ್ದ ಸಿಡಿದೇಳುತ್ತಿರುತ್ತಾನೆ. ತಮ್ಮಂದಿರು ಅಂದರೆ ಪ್ರಾಣ. ಮದುವೆ ಆದರೆ ಇವರುಗಳ ಮೇಲೆ ಪ್ರೀತಿ ಕಡಿಮೆಯಾಗುತ್ರದೆಂದು ಹುಡುಗಿಯರಿಂದ ದೂರ ಇರುತ್ತಾನೆ. ತನ್ನ ಹಾಗೆ ಇವರು ಇರಬೇಕೆಂದು ಬಯಸಿರುತ್ತಾನೆ. ಆದರೆ ಅಣ್ಣನಿಗೆ ಗೊತ್ತಾಗದಂತೆ ಪ್ರೀತಿಯಲ್ಲಿ ಬಿದ್ದು, ಇದರಿಂದ ಬಚಾವ್ ಆಗಲು ಅಣ್ಣದ ಬಾಲ್ಯದ ಗೆಳತಿ ಶಾಕಾಂಬರಿದೇವಿಯನ್ನು (ಸನಾತಿಮ್ಮಯ್ಯ) ಚೂ ಬಿಡುತ್ತಾರೆ. ಇದರಿಂದ ಒಂದಷ್ಟು ಅವಘಡಗಳು ಎದುರಾಗುತ್ತದೆ. ಇದರ ಮಧ್ಯೆ ರೈತರಿಗೆ ಅನ್ಯಾಯ ಮಾಡುವ (ಶರತ್‍ಲೋಹಿತಾಶ್ವ), ಹಾಗೆಯೇ ನಾಯಕಿಯ ಕುಟುಂಬಕ್ಕೆ ತೊಂದರೆ ಕೊಡುವವನು ಹುಟ್ಟಿಕೊಂಡಿರುತ್ತಾನೆ. ಇವೆಲ್ಲಾವನ್ನು ಹೇಗೆ ಬಗೆಹರಿಸುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. 163 ನಿಮಿಷದ ಚಿತ್ರದಲ್ಲಿ ಮಾಸ್ ಅಂಶಗಳು ಇರುವುದರಿಂದ ದರ್ಶನ್ ಅಭಿಮಾನಿಗಳಿಗೆ ಬಾಡೂಟ ಸಿಕ್ಕಂತೆ ಆಗಿದೆ.

ಎಣಿಸಲಾಗದಷ್ಟು ಸಹಕಲಾವಿದರು ಇರುವುದು ವಿಶೇಷ. ಕಿರಿಯ ಸೋದರರುಗಳಾಗಿ ಪಂಕಜ್, ನಿರಂಜನ್, ಯಶಸ್. ನಗಿಸಲು ರವಿಶಂಕರ್‍ಗೌಡ, ಚಿಕ್ಕಣ್ಣ, ಸಾಧುಕೋಕಿಲ, ಅಬ್ಬರಿಸಲು ರವಿಶಂಕರ್,ಶರತ್‍ಲೋಹಿತಾಶ್ವ, ತಣ್ಣನೆ ತಂಗಾಳಿಯಾಗಿ ದೇವರಾಜ್. ಲವರ್‍ಗಳಾಗಿ ನೇಹಾಪಾಟೀಲ್, ಶೃತಿ ಎಲ್ಲರ ಸಂಗಮದಿಂದ ಪ್ರೇಕ್ಷಕನಿಗೆ ಮೊಬೈಲ್ ನೋಡದಂತೆ ದೃಶ್ಯಗಳು ಅದ್ಬುತವಾಗಿ ಮೂಡಿಬಂದಿದೆ. ಇದಕ್ಕೆ ಪೂರಕವಾಗಿ ಎಂ.ಡಿ.ಶ್ರೀಧರ್ ನಿರ್ದೇಶನ, ಇಂಪಾದ ಹಾಡುಗಳಿಗೆ ರಾಗ ಒದಗಿಸಿರುವ ಅರ್ಜುನ್‍ಜನ್ಯಾ ಸಂಗೀತ, ಕಣ್ಣಿಗೆ ತಂಪು ಕೊಡುವ ಕೆ.ಕೃಷ್ಣಕುಮಾರ್ ಕ್ಯಾಮಾರ ಕೆಲಸ, ಪಂಚಿಂಗ್ ಸಂಭಾಷಣೆ ಬರೆದಿರುವ ಪ್ರಶಾಂತ್‍ರಾಜಪ್ಪ, ಹೊಡೆದಾಟಗಳನ್ನು ಮಾಡಿಸಿರುವ ವಿಜಯ್‍ಹೈದರಾಬಾದ್-ವಿನೋದ್ ಎಲ್ಲವು ಅಚ್ಚುಕಟ್ಟಾಗಿದೆ. ಒಡೆಯ ಪೈಸಾ ವಸೂಲ್ ಸಿನಿಮಾ ಎಂದರೆ ತಪ್ಪಾಗಲಾರದು.
ನಿರ್ಮಾಣ: ಎನ್.ಸಂದೇಶ್
***1/2
ಸಿನಿ ಸರ್ಕಲ್.ಇನ್ ವಿಮರ್ಶೆ
12/12/19

ಒಡೆಯನ ಹಾಡುಗಳು
ಅದ್ದೂರಿ ಚಿತ್ರ ‘ಒಡೆಯ’ ಹಾಡುಗಳು ಅನಾವರಣಗೊಂಡಿತು. ಪೂರ್ಕಿ, ಬುಲ್‍ಬುಲ್ ನಂತರ ನಿರ್ದೇಶನ ಮಾಡಿರುವ ಎಂ.ಡಿ.ಶ್ರೀಧರ್ ಮಾತನಾಡಿ ದರ್ಶನ್ ವೃತ್ತಿ ಪರತೆಯನ್ನು ನೆನಪು ಮಾಡಿಕೊಂಡು, ದ್ವಿತಿಯಾರ್ಧದಲ್ಲಿ ಸಾಧುಕೋಕಿಲ ಚೆನ್ನಾಗಿ ನಗಿಸುತ್ತಾರೆ ಅಂತ ಮೈಕ್‍ನ್ನು ಕೆಳಗಿಟ್ಟರು. ದರ್ಶನ್ ಸರ್ ತಾಯಿ ಅವರಿಂದ ಅವಕಾಶ ಸಿಕ್ಕಿತು. ಈ ಜನ್ಮ ಇರುವ ತನಕ ಅವರ ಋಣಿಯಾಗಿರುತ್ತನೆಂದು ನಾಯಕಿ ಸನಾತಿಮ್ಮಯ್ಯ ಖುಷಿ ಹಂಚಿಕೊಂಡರು. ಸಂಗೀತ ನಿರ್ದೇಶಕ ಅರ್ಜುನ್‍ಜನ್ಯಾ, ಛಾಯಾಗ್ರಾಹಕ ಕೆ. ಕೃಷ್ಣಕುಮಾರ್, ಆನಂದ್ ಆಡಿಯೋದ ಶ್ಯಾಂ, ಯಶಸ್‍ಸೂರ್ಯ, ಚಿಕ್ಕಣ್ಣ, ಸೋದರರ ಪಾತ್ರ ಮಾಡಿರುವ ಪಂಕಜ್, ಸಮರ್ಥ್, ಸೂರ್ಯ, ಮಾಜಿ ಸಚಿವ ರಾಮಚಂದ್ರಗೌಡ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣಯ್ಯ ಕಡಿಮೆ ಸಮಯ ತೆಗೆದುಕೊಂಡರು.

ರಿಮೇಕ್ ಆದರೂ ನಮ್ಮ ನೇಟಿವಿಟಿಗೆ ತಕ್ಕಂತೆ ಬದಲಾವಣೆ ಮಾಡಿಕೊಂಡಿದೆ. 52ನೇ ಚಿತ್ರವಾಗಿದ್ದು, ಸಂದೇಶ್ ಪ್ರೊಡಕ್ಷನ್‍ದಲ್ಲಿ ಮೂರನೆ ಬಾರಿ ನಟಿಸಿದ್ದೇನೆ. ನಿರ್ಮಾಪಕರು ಹಿಂದಿನ ಎರಡು ಚಿತ್ರಗಳಲ್ಲಿ ಆಸಕ್ತಿ ತೋರಿಸಿರಲಿಲ್ಲ. ಇದರಲ್ಲಿ ಪೂರ್ಣ ಗಮನಹರಿಸಿ ಕಷ್ಟಪಟ್ಟು ಮೈಸೂರಿನ ವ್ಯವಹಾರವನ್ನು ಬದಿಗಿಟ್ಟು, ಎಷ್ಟು ಸಾದ್ಯವೋ, ಎಲ್ಲಲ್ಲಿ ಉದ್ದವಾಯಿತು ಅನಿಸಿದರೆ ಅದನ್ನು ತೆಗೆದುಹಾಕಲು ಸಲಹೆ ನೀಡುತ್ತಿದ್ದರು. ಬೇರೆ ಕಡೆಯ ಉದ್ಯಮಗಳಲ್ಲಿ ಮಾಲೀಕರಿಗೆ ನೌಕರರು ಹೆದರುತ್ತಾರೆ. ಅದು ಸಾಫ್ಟ್‍ವೇರ್ ಕಂಪನಿ, ಮಾದ್ಯಮಗಳಲ್ಲಿ ಇರಬಹುದು. ಆದರೆ ದುಡ್ಡು ಹಾಕಿದವರು ನಟರ ಎದುರು ನಮ್ಮ ಕೆಲಸ ಮುಗಿಸಿಕೊಡಿರೆಂದು ಭಿಕ್ಷೆ ಬೇಡುವ ಉದ್ಯಮವಾಗಿದೆ. ಆದರೂ ನಿರ್ಮಾಪಕರು ಚಿ ತೂ ಅನ್ನಿಸಿಕೊಂಡು ಸಿನಿಮಾ ಮುಗಿಸಿದ್ದಾರೆ. ಅವರಿಗೆ ಒಳ್ಳೆಯದಾಗಬೇಕು ಎಂದರು.

ಮೂರನೇ ಬಾರಿ ದರ್ಶನ್ ಸಿನಿಮಾ ನಿರ್ಮಾಣ ಮಾಡಲಾಗಿದೆ. ಹಿಂದಿನ ಎರಡು ಚಿತ್ರಗಳು ಅಪ್ಪನ ಹೆಸರಿನಲ್ಲಿತ್ತು. ದರ್ಶನ್ ಈ ಬಾರಿ ನನ್ನ ಹೆಸರು ಬಳಸಿದರೆ ಮಾತ್ರ ಮಾಡುತ್ತ್ತೆನೆಂದು ಹೇಳಿದ ಕಾರಣ ಸಂದೇಶ್ ಪ್ರೊಡಕ್ಷನ್ ಎಂದು ಹೇಳಲಾಗಿದೆ. ನಿಜವಾಗಿಯೂ ತಂದೆಯವರೇ ಪೂರ್ಣ ಪ್ರಮಾಣದ ನಿರ್ಮಾಪಕರು. ನಾಲ್ಕನೇ ಬಾರಿ ಅವರು ನಮ್ಮ ಸಂಸ್ಥೆಯಲ್ಲಿ ನಟಿಸಲಿದ್ದಾರೆಂದು ಸಂದೇಶ್ ಹೇಳಿದರು. ಸಿನಿಮಾವು ಇದೇ ಹನ್ನೆರಡರಂದು ತೆರೆ ಕಾಣಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
1/12/19

ಡಿಸೆಂಬರ್‍ಗೆಒಡೆಯನಓಟ ಶುರು
ದರ್ಶನ್ ಅಭಿಮಾನಿಗಳಿಗೆ ಸಂತಸದ ಸುದ್ದಿ, ಬಹು ನಿರೀಕ್ಷಿತ ‘ಒಡೆಯ’ ಚಿತ್ರವು ಮುಂದಿನ ತಿಂಗಳು ಹನ್ನೆರಡರಂದು ವಿಶ್ವದಾದ್ಯಂತತೆರೆಕಾಣಲಿದೆ.ಸೂಪರ್ ಹಿಟ್ ತಮಳಿನ ‘ವೀರಂ’ ರಿಮೇಕ್‍ಆಗಿದೆ.ಯಜಮಾನನಿಗೆ ಮೈಸೂರು ಮೂಲದ ಸನಾತಿಮ್ಮಯ್ಯ ನಾಯಕಿ. ಐದು ಮಂದಿ ಸಹೋದರರಕತೆಯಲ್ಲಿಯಶಸ್‍ಸೂರ್ಯ, ಎಸ್.ನಾರಾಯಣ್ ಪುತ್ರ ಪಂಕಜ್, ನಿರಂಜನ್, ಸಮರ್ಥಇವರೊಂದಿಗೆ ನೇಹಾಪಾಟೀಲ್ ಮುಂತಾದವರು ಅಭಿನಯಿಸಿದ್ದಾರೆ. ಬುಲ್‍ಬುಲ್‍ಖ್ಯಾತಿಯ ಎಂ.ಡಿ.ಶ್ರೀಧರ್ ನಿರ್ದೇಶನವಿದೆ. ಜಯಂತ್‍ಕಾಯ್ಕಣಿ, ಡಾ.ನಾಗೇಂದ್ರಪ್ರಸಾದ್, ಕವಿರಾಜ್ ಸಾಹಿತ್ಯದ ಹಾಡುಗಳಿಗೆ ಅರ್ಜುನ್‍ಜನ್ಯಾ ಸಂಗೀತ ಸಂಯೋಜಿಸಿದ್ದಾರೆ. ಎ.ವಿ.ಕೃಷ್ಣಕುಮಾರ್‍ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಪ್ರಶಾಂತ್‍ರಾಜಪ್ಪ ಸಂಭಾಷಣೆ,ಈಶ್ವರಿಕುಮಾರ್ ಕಲೆ, ಮೋಹನ್-ಕಲೈ ನೃತ್ಯ, ವಿಜಯ್‍ಹೈದರಬಾದ್-ವಿನೋದ್ ಸಾಹಸವಿದೆ. ಎನ್.ಸಂದೇಶ್‍ಅವರು ಸಂದೇಶ್ ಪ್ರೊಡಕ್ಷನ್ ಮೂಲಕ ನಿರ್ಮಾಣ ಮಾಡಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
23/11/19
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ಒಡೆಯ' ಚಿತ್ರಕ್ಕೆ ಸ್ವಿಜರ್‍ಲ್ಯಾಂಡ್‍ನಲ್ಲಿ ಹಾಡುಗಳ ಚಿತ್ರೀಕರಣ
ಸಂದೇಶ್ ನಾಗರಾಜ್ ಅರ್ಪಿಸುವ, ಸಂದೇಶ್ ಪೆÇ್ರಡಕ್ಷನ್ಸ್ ಲಾಂಛನದಲ್ಲಿ ಎನ್.ಸಂದೇಶ್ ಅವರು ನಿರ್ಮಿಸುತ್ತಿರುವ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ಒಡೆಯ` ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಹತ್ತು ದಿನಗಳ ಕಾಲ ಸ್ವಿಜರ್ ಲ್ಯಾಂಡ್‍ನಲ್ಲಿ ನಡೆದಿದೆ. ದರ್ಶನ್ ಹಾಗೂ ರಾಘವಿ ತಿಮ್ಮಯ್ಯ ಅಭಿನಯಿಸಿದ ಈ ಹಾಡುಗಳನ್ನು ಜಿಮಿಜಿಪ್ ಹಾಗೂ ಎರಡು ಕ್ಯಾಮೆರಾಗಳನ್ನು ಬಳಸಿ ಅದ್ದೂರಿಯಾಗಿ ಚಿತ್ರಿಸಿಕೊಳ್ಳಲಾಗಿದೆ. ಕಲೈ ಅವರು ಈ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಸುಮಾರು ಐವತ್ತು ಜನರ ತಂಡ ಸ್ವಿಜರ್‍ಲ್ಯಾಂಡ್‍ಗೆ ಪಯಣ ಬೆಳೆಸಿತ್ತು. ಈ ಹಾಡುಗಳ ಚಿತ್ರೀಕರಣದೊಂದಿಗೆ `ಒಡೆಯ` ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಡಿಸೆಂಬರ್‍ನಲ್ಲಿ ಚಿತ್ರ ತೆರೆಗೆ ಬರಲಿದೆ.

ಎಂ.ಡಿ.ಶ್ರೀಧರ್ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿದೆ. ಜಯಂತ ಕಾಯ್ಕಿಣಿ, ಡಾ||ವಿ.ನಾಗೇಂದ್ರಪ್ರಸಾದ್, ಕವಿರಾಜ್ ಹಾಗೂ ಬಹದ್ದೂರ್ ಚೇತನ್ ಕುಮಾರ್ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಕೆ.ಕೃಷ್ಣಕುಮಾರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಕಲೈ ನೃತ್ಯ ನಿರ್ದೇಶನ ಹಾಗೂ ವಿಜಯ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಪ್ರಶಾಂತ್ ರಾಚಪ್ಪ ಸಂಭಾಷಣೆ ಬರೆದಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾಯಕಿಯಾಗಿ ರಾಘವಿ ತಿಮ್ಮಯ್ಯ ಅಭಿನಯಿಸಿದ್ದಾರೆ. ಯಶಸ್ ಸೂರ್ಯ, ಪಂಕಜ್, ನಿರಂಜನ್, ಸಮರ್ಥ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
24/10/19

ನಿರ್ಮಾಪಕರ ಹುಟ್ಟುಹಬ್ಬದಂದು ಒಡೆಯ ಮಹೂರ್ತ
ವಿವಾದ ಹುಟ್ಟುಹಾಕಿದ್ದ ‘ಒಡೆಯರ್’ ಚಿತ್ರವು ಈಗ ‘ಒಡೆಯ’ ಹೆಸರಿನಲ್ಲಿ ಮೈಸೂರಿನ ನಿರ್ಮಾಪಕರ ಮನೆಯಲ್ಲಿ ಸರಳವಾಗಿ ಮಹೂರ್ತ ಆಚರಿಸಿಕೊಂಡಿತು. ಅಂಬರೀಷ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಚಾಲನೆ ನೀಡಿ ಮಾತನಾಡುತ್ತಾ, ದರ್ಶನ್ ಒಡೆಯನಾಗಿದ್ದು ಅವನ ಅರ್ಹತೆಗೆ ಸೂಕ್ತವಾಗಿದೆ. ಅವನು ಹೇಗೆ ಬೆಳದುಬಂದ, ಎಷ್ಟು ಕಷ್ಟಪಟ್ಟ ಎಂಬುದನ್ನು ಅಳೆದು,ತೂಗಿ ಅದು ಲಕ್‍ನಿಂದ ಆದುದಲ್ಲ. ಅದರಲ್ಲಿ ಅಪಾರ ಶ್ರಮವಿದೆ. ಸಂದೇಶ್ ಬ್ಯಾನರ್ ದೊಡ್ಡ ಪ್ರೊಡಕ್ಷನ್ ಹೌಸ್ ಆಗಿದ್ದು, 25 ಚಿತ್ರಗಳು ತೆರೆಗೆ ಬಂದಿವೆ. ತಂಡಕ್ಕೆ ಒಳ್ಳೆಯದಾಗಲಿ ಎಂದರು.

ಒಡೆಯರ್ ಟೈಟಲ್ ರಿಜಿಸ್ಟರ್ ಮಾಡಿಸಿಲ್ಲವೆಂದು ಮೊದಲು ಸ್ಪಷ್ಟಪಡಿಸಿದ ದರ್ಶನ್, ಮೈಸೂರಿನ ಮಹಾರಾಣಿ ಪ್ರಮೋದದೇವಿ ತಮ್ಮದೇನು ಅಭ್ಯಂತರವೇನು ಇಲ್ಲವೆಂದು ಹೇಳಿದ್ದು ಅವರ ದೊಡ್ಡ ಗುಣ. ನಮಗೆ ರಾಜಮನೆತನದ ಮೇಲೆ ಅಪಾರವಾದ ಗೌರವವಿದೆ. ನವಗ್ರಹ ಸಿನಿಮಾದಲ್ಲಿ ಚಿನ್ನದ ಅಂಬಾರಿ ಕಳವು ಮಾಡುವ ದೃಶ್ಯಕ್ಕೆ ರಾಜವಂಶಸ್ಥರ ಒಪ್ಪಿಗೆ ಪಡೆಯಲಾಗಿತ್ತು. ಅರಮನೆಗೆ ಸಂಬಂದಪಟ್ಟ ಯಾವುದೇ ವಿಷಯವಾದರೂ ಒಪ್ಪಿಗೆ ಪಡೆದು ಮುನ್ನೆಡೆಯುತ್ತೇವೆ. ನಾನು ಮಾಸ್ ಹೀರೋ ಅಲ್ಲ. ಎಲ್ಲಾ ರೀತಿಯ ಪಾತ್ರಗಳನ್ನು ಮಾಡಬಲ್ಲೆ. ಫ್ಯಾಮಿಲಿ ಸೆಂಟಿಮೆಂಟ್ ಇರುವ ತಾರಕ್ ದೊಡ್ಡ ಯಶಸ್ಸು ಕಾಣಲಿಲ್ಲ. ಹಾಗಂತ ಮಾಸ್ ಸಿನಿಮಾ ಮಾತ್ರ ಮಾಡುತ್ತೇನೆ ಎಂದು ಹೇಳುವುದು ಸರಿಯಲ್ಲ. ಇದನ್ನು ಒಪ್ಪಿಕೊಳ್ಳಲು ಕತೆ ಮುಖ್ಯ ಕಾರಣವಾಗಿದೆ. ಚಿತ್ರ ಬಿಡುಗಡೆ ತಡವಾಗುತ್ತಿರುವುದನ್ನು ಒಪ್ಪಿಕೊಳ್ಳುತ್ತೇನ. ಅದಕ್ಕೆ ಸಕಾರಣವು ಇದೆ. ಕುರುಕ್ಷೇತ್ರದಲ್ಲಿ ಹೆಚ್ಚು ಗ್ರಾಫಿಕ್ಸ್ ಕೆಲಸ ಇರುವುದರಿಂದ ವಿಳಂಬವಾಗುತ್ತದೆ. ಅದು ನೋಡಿದ ನಂತರ ಎಲ್ಲವು ತಿಳಿಯಲಿದೆ ಎನ್ನುವುದು ಒಡೆಯನ ನುಡಿ.

ತಮಿಳಿನ ವೀರಂ ಚಿತ್ರದ ಕತೆಯನ್ನು ಕನ್ನಡಕ್ಕೆ ಅಳವಡಿಸಲಾಗಿದೆ. ನಾಯಕಿ ಸದ್ಯದಲ್ಲೆ ಆಯ್ಕೆಯಾಗಲಿದ್ದಾರೆ. ಉಳಿದಂತೆ ದೇವರಾಜ್, ಚಿಕ್ಕಣ್ಣ, ರವಿಶಂಕರ್, ಸಾಧುಕೋಕಿಲ ಮುಂತಾದವರು ನಟಿಸುತ್ತಿದ್ದಾರೆ. ಸೆಪ್ಟಂಬರ್ 10ರಿಂದ ಮೈಸೂರು, ಬೆಂಗಳೂರು, ಹೈದರಾಬಾದ್ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಸಂಗೀತ ಅರ್ಜುನ್‍ಜನ್ಯಾ, ಛಾಯಗ್ರಹಣ ಕೆ.ಕೃಷ್ಣಕುಮಾರ್ ನಿರ್ವಹಿಸುತ್ತಿದ್ದಾರೆಂದು ಮಾಹಿತಿ ನೀಡಿದ್ದು ನಿರ್ದೇಶಕ ಎಂ.ಡಿ.ಶ್ರೀಧರ್.

ಇದೇ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಸಂದೇಶ್‍ನಾಗರಾಜ್ 72ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಪುತ್ರ ಸಂದೇಶ್ ನಿರ್ಮಾಣದ ಎರಡನೆ ಚಿತ್ರವಾಗಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
18/08/18
ಒಡೆಯರ್ ಚಿತ್ರಕ್ಕೆ ಮಹೂರ್ತ ಫಿಕ್ಸ್
ದರ್ಶನ್ ಅಭಿನಯದ ‘ಒಡೆಯರ್’ ಚಿತ್ರ ಅನೌನ್ಸ್ ಆದ ನಂತರ ಕೆಲವು ಸಂಘಟನೆಗಳು ದೂರು ನೀಡಿ ಶೀರ್ಷಿಕೆಯನ್ನು ಬದಲಿಸಬೇಕೆಂದು ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. ಟೈಟಲ್ ಬಗ್ಗೆ ಮೈಸೂರಿನ ರಾಜಮಾತೆ ಪ್ರಮೋದಾದೇವಿ ನಮ್ಮದೇನು ಅಭ್ಯಂತರವಿಲ್ಲವೆಂದು ಹೇಳಿಕೆ ನೀಡಿದ್ದರಿಂದ ವಿವಾದ ತಣ್ಣಗಾಗಿದೆ. ಆಗಸ್ಟ್ 16 ಸಂದೇಶ್‍ನಾಗರಾಜ್ ಹುಟ್ಟುಹಬ್ಬವಾಗಿದ್ದರಿಂದ ಅಂದೇ ಮಹೂರ್ತ ಸಮಾರಂಭ, ಹಘೂ ಸತ್ಯನಾರಾಯಣ ಪೂಜೆಯನ್ನು ನಿರ್ಮಾಪಕ ಎನ್.ಸಂದೇಶ್ ಅವರು ಸಂದೇಶ್‍ನಿಲಯ, ಇಂದಿರಾನಗರ, ಮೈಸೂರು ಇಲ್ಲಿ ಏರ್ಪಾಟು ಮಾಡಿದ್ದಾರೆ. ತಮಿಳಿನ ವೀರಂ ಚಿತ್ರದ ರಿಮೇಕ್‍ಗೆ ಕನ್ನಡದಲ್ಲಿ ಎಂ.ಡಿ.ಶ್ರೀಧರ್ ನಿರ್ದೇಶನ ಮಾಡುತ್ತಿದ್ದಾರೆ. ಪೊರ್ಕಿ, ಬುಲ್‍ಬುಲ್ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ಶ್ರೀಧರ್ ಅವರಿಗೆ ಇದು ಹ್ಯಾಟ್ರಿಕ್ ಸಿನಿಮಾವಾಗಿದೆ. ನಾಯಕಿ, ಕಲಾವಿದರು, ತಂತ್ರಜ್ಘರ ಆಯ್ಕೆ ಪ್ರಕ್ರಿಯೆ ಶುರುವಾಗಿ ಸದ್ಯದಲ್ಲೆ ಎಲ್ಲವನ್ನು ತಿಳಿಸುವುದಾಗಿ ನಿರ್ದೇಶಕರು ಹೇಳಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
3/08/17
For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore