HOME
CINEMA NEWS
GALLERY
TV NEWS
REVIEWS
CONTACT US
ಹೊಸ ಕೌರವದಲ್ಲಿ ಗ್ರಾಮೀಣ ಸೊಗಡು ಮುಂದುವರಿದೆ
‘ಒನ್ಸ್ ಮೋರ್ ಕೌರವ’ ಚಿತ್ರದ ಕತೆ ಊರಿನಲ್ಲೋಂದು ರಕ್ತಚರಿತ್ರೆ. ಹೊಸದಾಗಿ ವರ್ಗಾವಣೆಯಾಗಿ ಬರುವ ಇನ್ಸೆಪೆಕ್ಟರ್‍ಗೆ ಈ ಊರು ರಕ್ತದೋಕುಳಿಯಾಗಿದೆ. ಇಲ್ಲಿನವರ ಸಹವಾಸ ಕಷ್ಟ ಎಂದು ಸಹಾಯಕ ಹೇಳುತ್ತಾನೆ. ಆತ ನಂಬದೆ ಕೆಲಸದಲ್ಲಿ ತನ್ಮಯನಾಗುತ್ತಾನೆ. ಮುಂದೆ ತಾತ ಕೂಡ ಇದನ್ನೆ ಹೇಳಿದಾಗ ಏನೇ ಆದರೂ ಊರ ಬಿಟ್ಟ ಹೋಗಬಾರದೆಂದು ನಿರ್ಧಾರ ಮಾಡುತ್ತಾನೆ. ಪ್ರಾರಂಭದಲ್ಲಿ ಪೋಲೀಸ್ ಕತೆಯೆಂತೆ ಕಂಡು ಬಂದರೂ ಇದರ ಹೊರತಾಗಿ ಬೇರೆಯದೆ ಕಥನ ತೆರೆದುಕೊಳ್ಳುತ್ತದೆ. ಇವೆಲ್ಲಾ ಘಟನೆಗಳ ತಿಳಿದುಕೊಳ್ಳುವ ಕುತೂಹಲ ಇದ್ದಲ್ಲಿ ಒಮ್ಮೆ ಚಿತ್ರ ನೋಡಬಹುದು. ಗ್ರಾಮೀಣ ಸೊಗಡಿನ ಸಿನಿಮಾವಾಗಿರುವುದರಿಂದ ಊರಗೌಡ, ತುಂಟಾಟ, ಅವ್ಯವಹಾರ ಎಲ್ಲವು ಬಂದು ಹೋಗುತ್ತದೆ. ಸೇಡು ಇರುವ ಚಿತ್ರಗಳು ಸಾಕಷ್ಟು ಬಂದಿವೆ. ಆದರೆ ಹಳ್ಳಿ ಚಿತ್ರಗಳನ್ನು ನಿರ್ದೇಶಿಸಿ ಹೆಸರು ಮಾಡಿರುವ ಎಸ್.ಮಹೇಂದರ್ ತಮ್ಮ ಶೈಲಿಯಲ್ಲಿ ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಹೊಸ ನಾಯಕ ನಟನಾಗಿರುವುದರಿಂದ ಇವರನ್ನು ಬಿಲ್ಡಪ್ ರೀತಿಯಲ್ಲಿ ತೋರಿಸದೆ ಸನ್ನವೇಶಕ್ಕೆ ತಕ್ಕಂತೆ ಅಗತ್ಯ ಡೈಲಾಗ್, ಫೈಟ್ ಸೇರಿಸಿರುವುದು ಕಂಡು ಬರುತ್ತದೆ. ಎಷ್ಟೇ ಶ್ರದ್ದೆ ವಹಿಸಿದರೂ ಕೆಲವೊಂದು ತಪ್ಪುಗಳು ಅರಿವಿಲ್ಲದಂತೆ ನಡೆಯುತ್ತದೆ. ಅದರಂತೆ ನಿರ್ದೇಶಕರು ಎರಡು ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು.

ವೇಗವಾಗಿ ಹೋಗುವಾಗ ಮದ್ಯೆ ಹಂಪ್ಸ್ ಬಂದಂತೆ ನಾಟಕದ ಸನ್ನಿವೇಶಗಳು ಕತೆಗೆ ಧಕ್ಕೆಯುಂಟು ಮಾಡಿದೆ. ಇತ್ತೀಚೆಗೆ ಬರುತ್ತಿರುವ ಡಬ್ಬಲ್ ಮೀನಿಂಗ್ ಚಿತ್ರಗಳ ಪೈಕಿ ಇದರಲ್ಲಿ ಯಾವುದೆ ಇಂತಹ ಅಂಶಗಳು ಇರದೆ ಇರುವುದು ಮನಸ್ಸಿಗೆ ನೆಮ್ಮದಿ ತರಿಸುತ್ತದೆ. ನಿರ್ಮಾಪಕನಾಗಿ ಯಶಸ್ಸು ಕಂಡಿರುವ ನರೇಶ್‍ಗೌಡ ನಾಯಕನಾಗಿ ಕಷ್ಟಪಟ್ಟು ಅಭಿನಯಿಸಿರುವುದು ಎಲ್ಲಾ ಕಡೆ ಕಾಣುತ್ತದೆ. ಹಳ್ಳೀ ಹುಡುಗಿ, ಇಂಗ್ಲೀಷ್ ವ್ಯಾಮೋಹ ಪಡುವ ಅನುಷಾ ನಟನೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳ ಬಾಗಿಲು ತೆರೆಯಲಿದೆ. ಶೀರ್ಷಿಕೆ ಹೆಸರನ್ನು ದೇವರಾಜ್‍ಗೆ ಹೋಲಿಸಿದ್ದು, ಅವರು ಹುಲಿಯಪ್ಪನಾಗಿ ಫ್ಲಾಶ್‍ಬ್ಯಾಕ್‍ನಲ್ಲಿ ಬಂದು ಹೋಗುತ್ತಾರೆ. ಜೋಡಿಯಾಗಿ ಅನುಪ್ರಭಾಕರ್ ಇವರೊಂದಿಗೆ ಹಿರಿಯ ಕಲಾವಿದರಾದ ಶಿವರಾಂ, ಉಮೇಶ್ ಕೊಟ್ಟ ಕೆಲಸವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಕೆ.ಕಲ್ಯಾಣ್ ರಚಿಸಿರುವ ಏಳು ಗೀತೆಗಳಲ್ಲಿ ಕೆಲವು ಹಾಡುಗಳು ಕೇಳಬಲ್. ಇದರ ಕ್ರೆಡಿಟ್‍ನ್ನು ಸಂಗೀತ ನಿರ್ದೇಶಕ ಶ್ರೀಧರ್‍ಸಂಭ್ರಮ್‍ಗೆ ಕೊಡಬೇಕು. ಹಳ್ಳಿ ವಾತವರಣ ಮರೆತಿದ್ದರೆ ನೆನಪಿಸಿಕೊಳ್ಳಲು ಕೌರವ ನೋಡಿ ಕಣ್ತುಂಬಿಕೊಳ್ಳಬಹುದು.
-4/11/17
ಹೊಸ ಕೌರವನಿಗೆ ಬಿಡುಗಡೆಯ ಖುಷಿ
‘ಒನ್ಸ್ ಮೋರ್ ಕೌರವ’ ಚಿತ್ರ ತೆರೆಗೆ ಬರುವ ಹಂಚಿನಲ್ಲಿ ಇರುವುದರಿಂದ ಚಿತ್ರತಂಡವು ಕೊನೆ ಬಾರಿ ಮಾದ್ಯಮದವರನ್ನು ಭೇಟಿ ಮಾಡಿತು. ನರೇಶ್‍ಗೌಡ ನಿರ್ಮಾಪಕ, ನಾಯಕನಾಗಿರುವುದರಿಂದ ಸಂತಸ,ಭಯ ಆಗುತ್ತಿದೆ ಎಂದು ಹೇಳಿಕೊಂಡರು. ಮಾತು ಮುಂದುವರೆಸುತ್ತಾ ಹುಬ್ಬಳ್ಳಿ ಕೇಂದ್ರದವರು ಒಳ್ಳೆ ಮೊತ್ತ ನೀಡಲು ಮುಂದೆ ಬಂದಿದ್ದಾರೆ. ಈ ವಾರ ದೊಡ್ಡ ಸಿನಿಮಾಗಳು ಇಲ್ಲದಿರುವುದರಿಂದ ನಿಮಗ ಅದೃಷ್ಟ ಕಾದಿದೆ ಅಂತ ವಿತರಕ ಜಯಣ್ಣ ಹೇಳಿರುವುದು ಧೈರ್ಯ ಬಂದಿದೆ. ನಾಯಕನಾಗಿ ಮೊದಲ ಚಿತ್ರ. ಪ್ರಾಮಾಣ ಕ ಪೋಲೀಸ್ ಅಧಿಕಾರಿ ಹಳ್ಳಿಗೆ ವರ್ಗ ಆದಾಗ ಅಲ್ಲಿ ವಾತವರಣವನ್ನು ಹೇಗೆ ನಿಭಾಯಿಸುತ್ತಾನೆ ಎಂಬುದನ್ನು ನಿರ್ದೇಶಕರು ಚೆನ್ನಾಗಿ ತೋರಿಸಿದ್ದಾರೆ. ಅಭಿಮಾನಿಯೊಬ್ಬರು ಆಟೋರಿಕ್ಷಾದ ಮೇಲೆ ಚಿತ್ರದ ಕಲಾವಿದರು, ತಂತ್ರಜ್ಘರ ಫೋಟೋಗಳನ್ನು ಹಾಕಿಕೊಂಡು ಕೌರವ ತೇರು ಅಂತ ಶುಕ್ರವಾರದಂದು ಮೆರವಣ ಗೆಯಲ್ಲಿ ನನ್ನನ್ನು ಮುಖ್ಯ ಚಿತ್ರಮಂದಿರಕ್ಕೆ ಕರೆತರಲಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಮಾದ್ಯಮದವರ ಪ್ರೋತ್ಸಾಹ ಬೇಕು ಎಂದರು. ಹಳಬರ-ಹೊಸಬರ ಸಂಗಮ, ನವಿರಾದ ಪ್ರೇಮಕತೆ ಎಲ್ಲವನ್ನು ಹೇಳಲಾಗಿದೆ. ದೇವರಾಜ್, ಅನುಪ್ರಭಾಕರ್ ಅವರ ಪಾತ್ರಕ್ಕೆ ತೂಕ ಇದೆ. ಹಳ್ಳಿಯಲ್ಲಿ ನಾಟಕ ಶುರುವಾಗಿ ಕೊನೆಗೊಳ್ಳುವ ಹೊತ್ತಿಗೆ ಸಿನಿಮಾ ಮುಗಿಯುತ್ತದೆ. ಇನ್ನೆನಿದ್ದರೂ ಪ್ರೇಕ್ಷಕರು ಮೆಚ್ಚಿಕೊಂಡರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ ಎನ್ನುತ್ತಾರೆ ನಿರ್ದೇಶಕ ಎಸ್.ಮಹೇಂದರ್.

ರಾಜ್ಯೋತ್ಸವ ದಿವಸವನ್ನು ನಾವು ಎಂಬುವವರು ಒಂದು ಅಂತ ಬಣ್ಣಸಿಕೊಂಡ ಸಾಹಿತಿ ಕೆ.ಕಲ್ಯಾಣ್ ಗ್ರಾಮೀಣ ಸೊಗಡಿನ ಹಸಿರು ವಾತವರಣದಲ್ಲಿ ಚಿತ್ರೀಕರಣ ನಡೆಸಿರುವುದು ಪ್ಲಸ್ ಪಾಯಿಂಟ್. ನಿರ್ದೇಶಕ ದ್ರೋಣ, ನಿರ್ಮಾಪಕ ಪ್ರಾಣ, ಸಂಗೀತಗಾರ ಗಾನ, ನಮಗೆಲ್ಲಾ ಧ್ಯಾನ. ಮಾತೆಲ್ಲಾ ಬಾಗಿನ ಮನಸ್ಸೆಲ್ಲಾ ಗ್ರಾಮೀಣ ಕತೆಯಾಗಿದೆ. ದಾಸ್ಯ,ಹಾಸ್ಯ,ಲಾಸ್ಯ ಎಲ್ಲವು ತುಂಬಿದ ಸುಂದರ ಚಿತ್ರವೆಂದರು. ಸಾಹಿತಿಗಳು ಶಬ್ದಮಣ ಯಂತೆ ಎಲ್ಲವನ್ನು ಹೇಳಿದ್ದಾರೆ. ಅವರ ಜೊತೆ ಕೆಲಸ ಮಾಡಬೇಕೆಂಬ ತುಡಿತ ಇತ್ತು. ಇದರಿಂದ ಆಸೆ ಈಡೇರಿದೆ. ಏಳು ಅಪ್ಪಟ ಮಣ ್ಣನ ಸೊಗಡು ಗೀತೆಯನ್ನು ನೀಡಿದ್ದಾರೆ ಅಂತ ಸಂತಸಪಟ್ಟರು ಸಂಗೀತ ನಿರ್ದೇಶಕ ಶ್ರೀಧರ್‍ಸಂಭ್ರಮ್. ಕನ್ನಡದ ಮೇಲೆ ಅಭಿಮಾನ ಇದ್ದರೂ ಇಂಗ್ಲೀಷ್ ಕಲಿಯುವ ವ್ಯಾಮೋಹ ಇರುವ ಹಳ್ಳಿ ಹುಡುಗಿಯಾಗಿ ಬ್ರೇಕ್ ನೀಡಲಿದೆ ಎನ್ನುವ ಆಶಾಭಾವನೆಯಲ್ಲಿದ್ದೇನೆ ಎಂಬುದು ನಾಯಕಿ ಅನುಷಾ ಮಾತು. ನೃತ್ಯ ನಿರ್ದೇಶಕ ಮಾಲೂರು ಶ್ರೀನಿವಾಸ್, ಛಾಯಗ್ರಾಹಕ ಕೃಷ್ಣಕುಮಾರ್ ಉಪಸ್ತಿತರಿದ್ದರು. ರಾಜ್ಯದ 150 ಕೇಂದ್ರಗಳಲ್ಲಿ ಹೊಸ ಕೌರವ ದರ್ಶನ ಮಾಡಲಿದ್ದಾನೆ.
-31/10/17
ಬಿಡುಗಡೆ ಖುಷಿಯಲ್ಲಿ ಒನ್ಸ್ ಮೋರ್ ಕೌರವ
‘ಒನ್ಸ್ ಮೋರ್ ಕೌರವ’ ಚಿತ್ರದ ಟ್ರೈಲರ್, ಹಾಡುಗಳನ್ನು ಅಮೇರಿಕಾದಲ್ಲಿರುವ ಕನ್ನಡಿಗರು ಇಷ್ಟಪಟ್ಟಿರುವುದು, ನಾಯಕ,ನಿರ್ಮಾಪಕ ಅಲ್ಲಿನ ಜನರನ್ನು ಉದ್ದೇಶಿಸಿ ಮಾತನಾಡಿದ್ದು ಪರದೆ ಮೇಲೆ ಬಿತ್ತರಗೊಂಡವು. ನಿರ್ದೇಶಕ ಎಸ್.ಮಹೇಂದರ್ ಚಿತ್ರದ ಕುರಿತು ಈ ರೀತಿ ವಿವರಣೆ ನೀಡಿದರು. ಹಳೇ, ಹೊಸ ಕಲಾವಿದರ ಸಂಗಮ ಎನ್ನಬಹುದು. ಫ್ಲಾಶ್ ಬ್ಯಾಕ್‍ನಲ್ಲಿ ಬರುವ ದೃಶ್ಯಗಳಿಗೆ ಹಳಬರು, ಈ ಕಡೆ ಹೊಸಬರು ಕಾಣ ಸಿಕೊಂಡಿದ್ದಾರೆ. 25 ಚಿತ್ರಗಳನ್ನು ಚಿತ್ರೀಕರಿಸಿರುವ ಮೇಲುಕೋಟೆ, ಕಾವೇರಿ ತೀರ, ಮುಡುಕುತೋರೆ, ಕರಿಘಟ್ಟ ಸ್ಥಳಗಳಲ್ಲಿ ಶೂಟ್ ಮಾಡಲಾಗಿದೆ. ಕರಿಘಟ್ಟವನ್ನು ಮಹೇಂದರ್ ಕಾಶ್ಮೀರ ಅಂತಲೂ ಕರೆಯುತ್ತಾರೆ. ಎಲ್ಲಾ ಪಾತ್ರಗಳಿಗೂ ಅದರದೆ ಆದ ಪ್ರಾಮುಖ್ಯತೆ ಇದೆ. ಹಳ್ಳಿಯಲ್ಲಿ ನಾಟಕ ಶುರುವಾಗಿ ಕೊನೆಗೊಳ್ಳುವ ಹೊತ್ತಿಗೆ ಸಿನಿಮಾ ಮುಗಿಯುತ್ತದೆ. ಹಾಡುಗಳು ಕತೆಗೆ ಪೂರಕವಾಗಿದೆ. ಗ್ರಾಮೀಣ ಸೊಗಡಿಗೆ ತಕ್ಕಂತೆ ಬಿ.ಎ.ಮಧು ಚೆನ್ನಾಗಿ ಕತೆ ರೂಪಿಸಿದ್ದಾರೆ. ಹಿಂದಿನ ಕೌರವಕ್ಕೂ ಇದಕ್ಕೂ ಸಂಬಂದವಿಲ್ಲ. ಯುಎ ಪ್ರಮಾಣ ಪತ್ರ ಬಂದಿದೆ ಎಂದು ಹೇಳಿಕೊಂಡರು. ನಿರ್ದೇಶಕರ ಚಿತ್ರದಲ್ಲಿ ಕೆಲಸ ಮಾಡಬೇಕೆಂಬ ಪಸೆ ಇದರಿಂದ ಸಾಕಾರಗೊಂಡಿದೆ. ಸಾಹಿತಿ ಕಲ್ಯಾಣ್ ಗುರುತರಹ. ಅವರ ಪದಗಳಿಗೆ ಸಂಗೀತ ಒದಗಿಸಿದ್ದು ಖುಷಿ ತಂದು ಕೊಟ್ಟಿತು. ಮನಸ್ಸು, ಹೃದಯದಿಂದ ಕೆಲಸ ಮಾಡಿದ್ದೇನೆ ಎನ್ನುತ್ತಾರೆ ಶ್ರೀಧರ್‍ಸಂಭ್ರಮ್.

ಈ ಚಿತ್ರದಿಂದ ಒಳ್ಳೆ ಬ್ರೇಕ್ ಸಿಗುತ್ತದೆ ಎಂದು ನಿರ್ದೇಶಕರು ಹೇಳಿದ್ದಾರೆ. ಉತ್ತಮ ಪಾತ್ರ ಮಾಡಿರುವುದಕ್ಕೆ ಖುಷಿ ಇದೆ. ಕನ್ನಡದ ಮೇಲೆ ಅಭಿಮಾನ ಇದ್ದರೂ ಇಂಗ್ಲೀಷ್ ಕಲಿಯುವ ವ್ಯಾಮೋಹ ಇರುವ ಹಳ್ಳಿ ಹುಡುಗಿಯಾಗಿ ಕಾಣ ಸಿಕೊಂಡಿದ್ದೇನೆ ಎಂದರು ನಾಯಕಿ ಅನುಷಾರಂಗನಾಥ್. ಯಾರು ಬೈಯಬಾರದಂತ ಸಿನಿಮಾ ಮಾಡಬೇಕೆಂಬ ಆಸೆ ಇತ್ತು. ನಿರ್ದೇಶಕರು ಕೊನೆವರೆಗೂ ಕತೆ ಹೇಳಲಿಲ್ಲ. ಬಂದು ನಟಿಸಿ ಎಂದಷ್ಟೇ ಹೇಳಿದ್ದರು. ನಾವಿಕದಿಂದ ಆಹ್ವಾನ ಬಂದ ಕಾರಣ ಅಲ್ಲಿನ ಜನರನ್ನು ಭೇಟಿ ಮಾಡುವ ಸುಸಂದರ್ಭ ಒದಗಿಬಂತು. ಟ್ರೈಲರ್ ನೋಡಿ ನಾವೇ ರಿಲೀಸ್ ಮಾಡುತ್ತೇವೆಂದು ಕರೆಗಳು ಬರುತ್ತಿವೆ. ಅಪ್ಪನ ಪಾತ್ರದಲ್ಲಿ ದೇವರಾಜ್ ಸರ್ ಇದ್ದರೂ ಮುಖಾಮುಖಿ ಭೇಟಿಯಾಗುವುದಿಲ್ಲ. ಮಗ ಚಿನ್ಮಯ್ ಜ್ಯೂ.ಕೌರವನಾಗಿ ಅಭಿನಯಿಸಿದ್ದಾನೆ. ದಡ ಸೇರಿಸುವ ಜವಬ್ದಾರಿ ಮಾದ್ಯಮದವರು ಎಂದು ಕೇಳಿಕೊಂಡರು ಮೊದಲಬಾರಿ ನಾಯಕ,ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ನರೇಶ್‍ಗೌಡ. ನೃತ್ಯ ನಿರ್ದೇಶಕ ಮಾಲೂರುಶ್ರೀನಿವಾಸ್, ಹಾರರ್ ಸ್ಟಾರ್ ಅಂತ ಕರೆಸಿಕೊಂಡಿರುವ ವಿಜಯ್‍ಚೆಂಡೂರು, ಹರ್ಷಅರ್ಜುನ್, ದಿಲೀಪ್‍ಗೌಡ ಉಪಸ್ತಿತರಿದ್ದು ಚುಟುಕು ಮಾತನಾಡಿದರು. ಮುಂದಿನ ತಿಂಗಳು 10ರಂದು ರಾಜ್ಯಾದ್ಯಂತ ಜಯಣ್ಣ ಸಂಸ್ಥೆ ಮುಖಾಂತರ ಬಿಡುಗಡೆಯಾಗಲಿದೆ.
-20/09/17ONCE MORE KAURAVA’ AUDIO LAUNCHED
C
hallenging Star Darshan released the music of S Mahendar’s upcoming film ‘Once More Kaurava’ at a crowded and a grand function held in Bengaluru. The audiences were treated to a music and dance programme which was anchored by Anupama Bhat. The film is produced by Naresh Gowda who has also performed in the lead role. The film is directed by S Mahendar and written by B A Madhu. K Kalyan has penned the lyrics and Sridhar Sambram has scored the music. Krishna Kumar is the cameraman.

Earlier, Naresh Gowda told reporters that he had sought Darshan’s permission to put the actor’s photo along with himself in the poster to which the challenging star obliged. He wished to launch his movie’s music at a public place because he said he is unknown to the people and Darshan’s presence will give him some mileage. He said he found it tough to handle production and act as well in the movie but added that he just about managed to do both.

He said he was angry with Mahendar and his team but expressed his apologies to them. Naresh Gowda said he found it difficult to work under Mahendar’s direction as the director was particular about every word was pronounced. He said he plans to release the film in July.

Director Mahendar said the film has four action sequences and seven songs although the audio will contain only six songs. Anand Audio has acquired the music rights of the film. The film will be distributed through Jayanna Combines. The film has been shot in Mysuru, Srirangapatna and its surroundings which are his favourite locales, Mahendar said. He said the heroine has enough scope to perform in her role and capacity which she has acquitted quite well. Krishna Kumar’s camera work is a plus for the film, he said.

Lyricist K Kalyan said the director’s faith and producer’s self-confidence were strong enough to make this film possible. He said there was no scope for clichés but enough to showcase the richness of Kannada language. He said he had penned lyrics to the tunes to a story which is an emotional love story. He said he had penned all the seven songs.

Music composer Sridhar Sambram said he had grown up from K Kalyan’s music bank and under Hamsalekha’s guidance. He said he started composing the tunes for the movie from scratch and zero and hoped that the tunes will be liked by all. He said his wish of scoring music in a Mahendar’s film had come true with this film.

Cameraman Krishna Kumar said the nativity, colour and atmosphere which was found in Karpoorada Gombe’ in his combination with Mahendar could be experienced by the  audiences in this film as well.

Dialogue writer Madhu said good songs, nativity, good script and a good producer are all indicative of a successful venture in the coming days.

Anusha said she plays a strong character and a girl who loves Kannada but wants to learn English as well. She said Male Bille and Kannale are her favourite songs in the film. She said she was not sure if will give another opportunity of this kind both in terms of her role and the team in which she worked. 
-12/08/17ONCE MORE KAURAVA’ COMPLETES SHOOT
K
annada film ‘Once More Kaurava’ has completed shoot and is eyeing a release in April. The film is directed by S Mahendar who is close to completing three decades as a director in Kannada cinema. The film is produced by Naresh Gowda who is also playing the lead role. The film stars Anusha, Shivaram, Bank Janardhan, Umesh, Srinivas Gowda, Jadhav and Vijay Chendur among others. B A Madhu has penned the dialogues. K Kalyan has penned the lyrics for all the songs and Sridhar Sambram has scored the music.

Producer Naresh Gowda told reporters that after doing a negative role in Mahendar’s earlier film Mahakali it provided for him an inspiration to act in the film as a lead. He said he plays a police officer and added that theatre artistes have been introduced to don negative roles.

Writer B A Madhu said Kaurava reminds us of B C Patil who became a popular name. He said the film also gave him a break. He said he had worked with Mahendar in at least 30 films and so it was decided to start on Kaurava 2 about three years back. He said Patil had to do it but due to circumstances it is portrayed by another actor. He clarified that this film had nothing to do with Kaurava whatsoever and it is just the title on which the film is based.

Madhu said the film is a village story about a police officer who enters the village and helps the villagers. The film has seven songs and Krishna Kumar’s camera work is the plus point of the film, he said.

Music composer Sridhar Sambram said he is glad to have got an opportunity to work with Mahendar and lyricist Kalyan.

Kalyan said he had got the opportunity and the platform to work through this film. He said Sridhar’s tunes will touch people’s hearts and will become a milestone in Kannada cinema.

Choreographer Malur Srinivas said he had adopted a different pattern of dance for the songs. Senior comedian Umesh said he plays harmonium master in the film and has given him satisfaction. He said the film reminded him of the earlier days and that the scenes have been designed to get all senior actors together.

Bank Janardhan said Mahendar knew to use the actors well. Srinivas Gowda said he expects to get a good break in films with this one. Vijay Chendur said Mahendar gave his actors space to work.

Anusha said she plays a talkative girl with English words interspersed in her dialogues. She plays a bold and a strong character which was quite a challenging role. She said she initially faced difficulty in getting into the role but eventually got into it. She said Kannalle song is her favourite.

Director Mahendar said he wanted to have a new team for the film as he wanted to get updated with the present. He said he didn’t want to be in the hangover of his earlier films. He praised heroine Anusha as she suited the role perfectly and had also worked hard. He said Naresh Gowda had got a good start with this sincere attempt.

The director clarified that the story made for B C Patil stands and can be taken up later. He said Once More Kaurava is a village story that has been traditionally, culturally and commercially been done with a touch of humour. 
-9/01/17
S MAHENDAR LAUNCHES ‘ONCE MORE KAURAVA
D
irector S Mahendar is back with a sequel to 'Kaurava' titled ‘Once More Kaurava’ that mounted the sets on Thursday. Mahendar had directed Kaurava with B C Patil and Prema in the lead many years back.

Once More Kaurava is being produced by Naresh Gowda who is also playing the lead role in the film. Anusha of Soda Buddi is the heroine of the film. Naresh Gowda had acted as a villain in Mahakali that starred Malashri in the lead and which was also directed by Mahendar.

Once More Kaurava is written by B A Madhu and Sridhar Sambram will be scoring the music. Krishna Kumar is the cameraman.
-24/09/16


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore