HOME
CINEMA NEWS
GALLERY
TV NEWS
REVIEWS
CONTACT US
ಮೇ 18ಕ್ಕೆ ಮುನ್ಸಾಮಿ ಬರುವುದು ಪಕ್ಕಾ
ಹಾಸ್ಯ ಚಿತ್ರ ‘ಓಳ್ ಮುನ್ಸಾಮಿ’ ಇದೇ ಶುಕ್ರವಾರದಂದು ಬಿಡುಗೆಡೆಯಾಗಬೇಕಿತ್ತು. ಅನಿವಾರ್ಯ ಕಾರಣಗಳಿಂದ ಒಂದು ವಾರ ಮುಂದಕ್ಕೆ ಹೋಗಿದೆ. ಹಿರಿಯ ನಟ ಕಾಶಿನಾಥ್ ಅನಾರೋಗ್ಯವಿದ್ದರೂ ತೋರ್ಪಡಿಸದೆ ನಟಿಸಿ, ಇತರೆ ಕಲಾವಿದರನ್ನು ಹುರಿದುಂಬಿಸುತ್ತಿದ್ದರು. ಸ್ವಾಮೀಜಿ ಪಾತ್ರವಾಗಿರುವುದರಿಂದ ಅಲ್ಲಿಗೆ ಬರುವ ಭಕ್ತರಿಗೆ ಮೊದಲು ಲಾಲಿಪಪ್ ನೀಡುತ್ತಿದ್ದರು. ಕುಲು ಮನಾಲಿಯಲ್ಲಿ ಯಾರು ಕ್ಯಾಮಾರ ಇಡದ ಜಾಗದಲ್ಲಿ ಸೆರೆಹಿಡಿಯಲಾಗಿದೆ. ಒಂದು ವಿಶೇಷ ಗೀತೆಯನ್ನು ಅವರಿಗಂತಲೇ ಬರೆಯಲಾಗಿತ್ತು. ಚಿತ್ರೀಕರಣ ನಡೆಸಲು ಹೇಳಿದಾಗ, ಮಾರನೆ ದಿನ ಬರುತ್ತೇನೆಂದು ಹೇಳಿದಂತೆ, ನಮ್ಮಲ್ಲರನ್ನು ಅಗಲಿದ್ದಾರೆ. ಸಮಾಜದಲ್ಲಿ ಆಗುವ ಬದಲಾವಣೆಯನ್ನು ಸಂದೇಶದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ನಿರ್ದೇಶಕ ಆನಂದ್‍ಪ್ರಿಯಾ. ಕತೆ ಬರೆದಾಗ ಮೊದಲು ಅವರ ಮನಸ್ಸಿನಲ್ಲಿ ಕಂಡುಬಂದಿದ್ದು ಕಾಶಿ ಸರ್.. ಅದರಂತೆ ಅವರನ್ನು ಮನವೊಲಿಸಿ ಎಲ್ಲಾ ಕೆಲಸವನ್ನು ಮುಗಿಸಿದ್ದಾರೆ. .

ನಾಯಕನಾಗಿ ನಿರಂಜನ್‍ಒಡೆಯರ್, ನಾಯಕಿ ಅಖಿಲಾಪ್ರಕಾಶ್, ಗೌತಂರಾಜು ಇವರೊಂದಿಗೆ ಶಿವಮೊಗ್ಗದ ರಂಗಭೂಮಿ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ. ಮೂರು ಹಾಡುಗಳಿಗೆ ಸತೀಶ್‍ಬಾಬು ಸಂಗೀತ ಸಂಯೋಜನೆ ಇದೆ. ಛಾಯಗ್ರಹಣ ನಾಗಾರ್ಜುನ್.ಡಿ ಅವರದಾಗಿದೆ. ಸಮೂಹ ಟಾಕೀಸ್ ಮುಖಾಂತರ ಸಿದ್ದಗೊಂಡಿರುವ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ಕೇಶವ್ (ಗೌಡ) ಮತ್ತು ಕಿರಣ್.ಕೆ.ಪಿ ಇದ್ದಾರೆ. ಕಾಶಿನಾಥ್ ಕೊನೆ ಚಿತ್ರವಾಗಿದ್ದರಿಂದ ತಂಡವು ಸಿನಿಮಾವನ್ನು ಅವರಿಗೆ ಅರ್ಪಿಸಿದೆಯಂತೆ.
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-04/05/18

ಕಾಶಿನಾಥ್ ನೆನಪಿನಲ್ಲಿ ಹಾಡುಗಳ ಅನಾವರಣ
ಹಿರಿಯ ನಟ ಕಾಶಿನಾಥ್ ಅಭಿನಯಿಸಿದ ಕೊನೆ ಚಿತ್ರ ‘ಓಳ್ ಮುನ್ಸಾಮಿ’ ಚಿತ್ರದ ಧ್ವನಿಸಾಂದ್ರಿಕೆ ಅವರ ನೆನಪಿನೊಂದಿಗೆ ಬಿಡುಗಡೆಗೊಂಡಿತು . ವೇದಿಕೆ ಮೇಲೆ ಆಸೀನರಾದವರೆಲ್ಲರೂ ಅವರೊಂದಿಗಿನ ಒಡನಾಟವನ್ನು ಹೇಳಿಕೊಂಡರು. ಪೋಷಕಪಾತ್ರದಲ್ಲಿ ಕಾಣಿಸಿಕೊಂಡಿರುವ ಗೌತಂರಾಜು ಪ್ರತಿ ಸನ್ನಿವೇಶದಲ್ಲಿ ಅವರ ಕಾಲಿಗೆ ನಮಸ್ಕಾರ ಮಾಡುವ ದೃಶ್ಯವಿದ್ದು, ಅದು ನನ್ನ ಪಾಲಿಗೆ ಬಂದ ಸುಕೃತ ಅಂತ ಬಣ್ಣಸಿಕೊಂಡರು. ಒಂದು ದೃಶ್ಯದಲ್ಲಿ ಸರ್ ಅವರನ್ನು ಬೈಯ್ಯ ಬೇಕಾಗಿತ್ತು. ಯೋಚನೆ ಮಾಡುತ್ತಿರುವಾಗ ಪಾತ್ರದಲ್ಲಿ ತಲ್ಲೀನನಾಗಬೇಕಾದರೆ ನೀವು ಆ ರೀತಿ ಮಾಡಬೇಕೆಂದು ಹುರಿದುಂಬಿಸಿದರು ಎಂದರು ನಾಯಕ ನಿರಂಜನ್‍ಒಡೆಯರ್. ಸಂಪ್ರದಾಯಸ್ಥ ಹಳ್ಳಿಹುಡುಗಿ ಪಾತ್ರ. ಮೈನಸ್ ಡಿಗ್ರಿ ಉಷ್ಣಾಂಶವಿರು ಕುಲು ಮನಾಲಿಯಲ್ಲಿ ಹಾಡಿನ ಚಿತ್ರೀಕರಣ ನಡೆಸಲಾಗಿದೆ. ಕಾಶಿಸರ್ ಸೆಟ್‍ನಲ್ಲಿ ನಮಗೆ ಸ್ಪೂರ್ತಿಯಾಗಿದ್ದರು ಅಂತಾರೆ ನಾಯಕಿ ಅಖಿಲಾಪ್ರಕಾಶ್.

ಮೊದಲಬಾರಿ ಸರ್ ಅವರನ್ನು ಭೇಟಿ ಮಾಡಿ ಕತೆಯನ್ನು ಹೇಳಿದಾಗ ಇಂತಹ ಪಾತ್ರ ಮಾಡಿಲ್ಲವೆಂದು ಖುಷಿ ಪಟ್ಟರು. ತನ್ನನ್ನು ನಿರ್ದೇಶನದ ವಿಭಾಗದಲ್ಲಿ ಸೇರಿಕೊಂಡರೆ ನಟಿಸುವುದಾಗಿ ಷರತ್ತು ವಿಧಿಸಿದರು. ಅದರಂತೆ ಚಿತ್ರೀಕರಣ ಸಂದರ್ಭದಲ್ಲಿ ಸಾಕಷ್ಟು ಸಲಹೆಗಳನ್ನು ನೀಡುತ್ತಿದ್ದರು. ಅನಾರೋಗ್ಯವಿದ್ದರೂ ತೋರ್ಪಡಿಸದೆ ನಟಿಸಿ, ಇತರೆ ಕಲಾವಿದರನ್ನು ಹುರಿದುಂಬಿಸುತ್ತಿದ್ದರು. ಸ್ವಾಮೀಜಿ ಪಾತ್ರವಾಗಿರುವುದರಿಂದ ಅಲ್ಲಿಗೆ ಬರುವ ಭಕ್ತರಿಗೆ ಮೊದಲು ಲಾಲಿಪಪ್ ನೀಡುತ್ತಿರುವುದರ ಕಾರಣ, ಇಂದು ಆಗಮಿಸಿದವರಿಗೆ ಅದನ್ನೆ ಕೊಡಲಾಗಿದೆ. ಕುಲು ಮನಾಲಿಯಲ್ಲಿ ಯಾರು ಕ್ಯಾಮಾರ ಇಡದ ಜಾಗದಲ್ಲಿ ಸೆರೆಹಿಡಿಯಲಾಗಿದೆ. ಒಂದು ವಿಶೇಷ ಗೀತೆಯನ್ನು ಸರ್ ಅವರಿಗೆ ಬರೆಯಲಾಗಿದ್ದು, ಚಿತ್ರೀಕರಣ ನಡೆಸಲು ಹೇಳಿದಾಗ, ಮಾರನೆ ದಿನ ಬರುತ್ತೇನೆಂದು ಹೇಳಿದಂತೆ, ನಮ್ಮಲ್ಲರನ್ನು ಅಗಲಿದ್ದಾರೆ. ಸಮಾಜದಲ್ಲಿ ಆಗುವ ಬದಲಾವಣೆಯನ್ನು ಸಂದೇಶದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ ಎಂಬುದರ ಮಾಹಿತಿ ನೀಡಿದರು ನಿರ್ದೇಶಕ ಆನಂದ್‍ಪ್ರಿಯಾ.

ನಿರ್ದೇಶಕರು ಲೀಡಿಂಗ್ ಸ್ಟಾರ್ ಎಂದು ಬಿರುದು ನೀಡಿದಂತೆ ಇಂದು ಬೇರೆ ಚಿತ್ರಗಳಲ್ಲಿ ನಟಿಸಲು ಡೇಟ್ಸ್‍ಗಳು ಭರ್ತಿಯಾಗಿದೆ. ನಾಯಕನಾಗುವ ಗುಣಗಳು ಇಲ್ಲದಿದ್ದರೂ ಸಾಮಾನ್ಯ ವ್ಯಕ್ತಿಯು ಹೀರೋ ಆಗಬಹುದೆಂದು ತೋರಿಸಿದ ಸಾಧಕ ಕಾಶಿನಾಥ್ ನಮ್ಮ ಜೊತೆಗೆ ಇಲ್ಲದಿರುವುದು ಬೇಸರ ಆಗುತ್ತದೆ. ಒಂದು ಮನೆಯಲ್ಲಿ ಯಜಮಾನ ಇಲ್ಲದೆ ಇದ್ದಾಗ ಪರಿಸ್ಥಿತಿ ಹೇಗಿರುತ್ತದೆ ಅಂತ ಅಪ್ಪ ತೀರಿಕೊಂಡಾಗ ಅದೆಲ್ಲಾವನ್ನು ಅನುಭವಿಸಿದ್ದೇನೆ. ನಿರ್ಮಾಪಕರಿಗೆ ದುಡ್ಡ ಬಂದರೆ ಅದು ಲಾಭ ಅಂತ ಅರ್ಥ ಕೊಡುತ್ತದೆ ಎಂದು ಸಿಡಿ ಬಿಡುಗಡೆ ಮಾಡಿ ಹೇಳಿದರು ವಿನೋಧ್‍ಪ್ರಭಾಕರ್. ಮೂರು ಹಾಡುಗಳಿಗೆ ಸಂಗೀತ ಸಂಯೋಜಿಸಿರುವ ಸತೀಶ್‍ಬಾಬು, ಸಹ ನಿರ್ಮಾಪಕ ಕೇಶವ್‍ಗೌಡ, ಮುಂತಾದವರು ಉಪಸ್ತಿತರಿದ್ದರು. ಸಮೂಹ ಟಾಕೀಸ್ ಮುಖಾಂತರ ಸಿನಿಮಾ ಮೋಹಿಗಳು ನಿರ್ಮಾಣ ಮಾಡಿರುವ ಚಿತ್ರವು ಮುಂದಿನ ತಿಂಗಳು ತೆರೆಕಾಣಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-22/03/18

ಓಳ್ ಮುನ್ಸಾಮಿದಲ್ಲಿ ಕಾಶಿನಾಥ್ ಶ್ರದ್ದಾಂಜಲಿ
ಕಳೆದವಾರ ನಮ್ಮನ್ನು ಅಗಲಿದ ಹಿರಿಯ ನಟ ಕಾಶಿನಾಥ್ ನಟಿಸಿದ ಕಡೆಯ ಚಿತ್ರ ‘ಓಳ್ ಮುನ್ಸಾಮಿ’. ಇದರನ್ವಯ ಚಿತ್ರತಂಡವು ಕಾಶಿನಾಥ್ ನೆನಪುಗಳನ್ನು ಮಾದ್ಯಮದ ಮುಂದೆ ಹಂಚಿಕೊಂಡಿತು. ಮೈಕ್ ತೆಗೆದುಕೊಂಡ ನಿರ್ದೇಶಕ ಆನಂದ್‍ಪ್ರಿಯಾ ಸಿನಿಮಾ ಶುರುವಾದಾಗಿನಿಂದ ಅವರೊಂದಿಗೆ ಒಂದು ವರ್ಷದ ಒಡನಾಟವಿತ್ತು. ಕತೆ ಬರೆದು ಮುಗಿಸಿ, ಈ ಪಾತ್ರಕ್ಕೆ ಯಾರು ಎಂದು ಯೋಚಿಸುವಾಗ ನಿರ್ಮಾಪಕರು ಅವರೇ ಸೂಕ್ತವೆಂದು ಹೇಳಿದ್ದು ಸರಿ ಅನಿಸಿತು. ಮೊದಲಬಾರಿ ಭೇಟಿ ನೀಡಿ ರೀಡಿಂಗ್ ಕೊಟ್ಟಾಗ ಒಂದು ವಾರ ಸಮಯ ಕೊಡಿ ಅಂತ ಹೇಳಿ ಎರಡೇ ದಿನಕ್ಕೆ ಬರಲು ಹೇಳಿದರು. ಅದರಂತೆ ಹೋದಾಗ ಸ್ವಾಮಿ ಪಾತ್ರ ಮಾಡುತ್ತಿರುವುದು ಇದೇ ಮೊದಲು. ನಿರ್ದೇಶನ ತಂಡದಲ್ಲಿ ನನ್ನನ್ನು ಸೇರಿಸಿಕೊಳ್ಳುವುದಾದರೆ ನಟಿಸುವುದಾಗಿ ಆರೋಗ್ಯಕರ ಷರತ್ತು ವಿಧಿಸಿದರು. ನಂತರ ಮೂಡಿಗೆರೆ ಸುತ್ತಮುತ್ತ 30 ದಿನಗಳ ಕಾಲ ಚಿತ್ರೀಕರಣ ನಡೆಸಲಾಯಿತು. ಸೆಟ್‍ನಲ್ಲಿ ನಾನು ಸೀನಿಯರ್ ಎಂದುಕೊಳ್ಳದೆ ನಾವು ಹೇಳಿದಂತೆ ಪಾತ್ರದಲ್ಲಿ ತಲ್ಲೀನರಾಗುತ್ತಿದ್ದರು. ಅವರನ್ನು ಸ್ಟೈಲಿಶ್ ಆಗಿ ಕಬಾಲಿ, ಬಾಂಡ್ ರೀತಿಯಲ್ಲಿ ತೋರಿಸಲು ವಿಶೇಷವಾದ ಸಾಹಿತ್ಯವನ್ನು ಬರೆಯಲಾಗಿತ್ತು. ಇಹಲೋಕ ತ್ಯಜಿಸುವ ಮುನ್ನದಿನ ದೂರವಾಣ ಯಲ್ಲಿ ಮಾತನಾಡಿ ಎಲ್ಲವನ್ನು ತಿಳಿಸಲಾಗಿ ಆಯಿತು ಮುಂದುವರೆಸಿ ಎಂದು ಸಂತೋಷದಿಂದ ಹೇಳಿದ್ದರು. ಮಾರನೆ ದಿವಸ ಅವರಿಲ್ಲವೆಂದು ಕರೆ ಬಂದಾಗ ನಂಬಲಿಕ್ಕೆ ಆಗಲಿಲ್ಲವೆಂದು ಹೇಳುವಾಗ ನಿರ್ದೇಶಕರ ಕಣ್ಣು ತುಂಬಿದ ನೀರು ಕಟ್ಟೆಯನ್ನು ದಾಡಿ ಕೆನ್ನೆಯನ್ನು ತೋಯಿಸುತ್ತಿತ್ತು.

ಗೌತಂ ಮಾತನಾಡುತ್ತಾ ಚಂದನವನವನ್ನು ಬೇರೆ ಆಯಾಮಕ್ಕೆ ತೆಗೆದುಕೊಂಡ ಹೋದ ಧೀಮಂತ ನಟ. ಅವರೊಂದಿಗೆ ಸಿನಿಮಾ ಪೂರ್ತಿ ತೆರೆ ಹಂಚಿಕೊಳ್ಳುವ ಸೌಭಾಗ್ಯ ಸಿಕ್ಕದ್ದು ಸುಕೃತ ಎನ್ನಬಹುದು. ಭವಿಷ್ಯದ ಚಿತ್ರರಂಗ ಹೇಗಿರುತ್ತೆ ಅಂತ ಅವರಿಗೆ ತಿಳಿದಿತ್ತು. ಅವರದೇ ನಾಯಕತ್ವದಲ್ಲಿ ಮುನ್ಸಾಮಿಮಠ ಚಿತ್ರ ಮಾಡುವ ಬಗ್ಗೆ ನಿರ್ಮಾಪಕರು ಒಲವು ತೋರಿಸಿದ್ದರು. ಅವರ ಚಿತ್ರಗಳು ಡಬ್ಬಿಂಗ್ ಆಗುತ್ತಿತ್ತೆ ಹೊರತು ಅವರಂತಹ ನಟ ಇಲ್ಲದೆ ರಿಮೇಕ್ ಮಾಡಲು ಸಾದ್ಯವಾಗುತ್ತಿರಲಿಲ್ಲ ಎಂದರು.

ನಾನೊಬ್ಬ ಚಿಕ್ಕ ಕಲಾವಿದನೆಂದು ಭಾವಿಸದೆ ನನ್ನೊಂದಿಗೆ ಗೆಳಯನಂತೆ ವರ್ತಿಸುತ್ತಿದ್ದರು. ಕೆಲವು ಸಲ ಅವರು ಬೇಗನೆ ರೆಡಿಯಾಗಿ, ನನಗೆ ಬೇಗ ಬರಲು ಹೇಳುತ್ತಿದ್ದರು. ವಿಪರೀತ ಕೆಮ್ಮು ಇದ್ದರೂ ಕ್ಯಾಮಾರ ಮುಂದೆ ನಿಂತಾಗ ತನ್ನ ಕೆಲಸವನ್ನು ತಲ್ಲೀನವಾಗಿ ತೋರಿಸಿದ್ದರು. ಅಂತಹ ನಟ ಇಲ್ಲದೆ ಇರುವುದು ದುಖ:ದ ವಿಷಯ ಅಂತಾರೆ ನಿರಂಜನ್‍ಒಡೆಯರ್. ನಿರ್ಮಾಪಕ ಕೇಶವಗೌಡ, ಶಿವಮೊಗ್ಗದ ರಂಗಭೂಮಿ ಕಲಾವಿದರು ಕಾಶಿನಾಥ್ ಜೊತೆ ನಟಿಸಿದ ಅನಭವಗಳನ್ನು ಹೇಳಿಕೊಂಡರು. ಸಿನಿಮಾಕ್ಕೆ ಸಂಬಂದಿಸಿದಂತೆ ಎರಡು ಹಾಡುಗಳು ಬಾಕಿ ಇದ್ದು, ಮುಂದಿನ ತಿಂಗಳು ಕೊನೆವಾರ ಬಿಡುಗಡೆ ಮಾಡಲು ಯೋಜನೆ ಹಾಕಲಾಗಿದೆಯಂತೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-28/01/18

ಸತ್ಯ ಹೇಳೋನು ಓಳ್ ಮುನ್ಸಾಮಿ
ಚೌಕದಲ್ಲಿ ಮುದ್ದಿನ ಅಪ್ಪನಾಗಿ ನಟಿಸಿದ್ದ ಕಾಶೀನಾಥ್ ಈಗ ಓಳ್ ಬಿಡುತ್ತಿದ್ದಾರೆ. ಹಾಗಂತ ರಿಯಲ್‍ನಲ್ಲಿ ಅಲ್ಲ, ಅದು ರೀಲ್‍ನಲ್ಲಿ ಎಂಬುದು ಓದುಗರ ಗಮನಕ್ಕೆ ಇರಲಿ. ಅವರು ‘ಓಳ್ ಮುನ್ಸಾಮಿ’ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸದ್ದಿಲ್ಲದೆ 28 ದಿನಗಳ ಕಾಲ ಸಕಲೇಶಪುರ, ಬೇಲೂರು, ಗುತ್ತಿ, ಬೇವಿನಗುಡ್ಡ ಮುಂತಾದ ಕಡೆ ಚಿತ್ರೀಕರಣ ನಡೆಸಿ ಮೂರು ಹಾಡುಗಳನ್ನು ಉಳಿಸಿಕೊಂಡಿದೆ. ಸದ್ದು ಮಾಡಲು ಮೊದಲ ಬಾರಿ ಮಾದ್ಯಮದ ಮುಂದೆ ತಂಡವು ಹಾಜರಿತ್ತು. ಕತೆ,ಸಾಹಿತ್ಯ, ನಿರ್ದೇಶನ ಮಾಡಿರುವ ಆನಂದ್‍ಪ್ರಿಯಾ ಮಾತು ಶುರುಮಾಡಿ ಚಿತ್ರಕ್ಕೆ ಸೂಕ್ತ ಸ್ಥಳಗಳನ್ನು ಹುಡುಕಲು ಹಳ್ಳಿಗಳಿಗೆ ಭೇಟಿ ನೀಡಿದಾಗ ಪ್ರತಿಯೊಂದು ಜಾಗದಲ್ಲಿ ಓಳ್ ಬಿಡುವ ಮುನ್ಸಾಮಿ ಇದ್ದರು. ಇದನ್ನೆ ಸಿನಿಮಾಗೆ ಬಳಸಿಕೊಂಡರೆ ಹೇಗೆ ಎಂದು ತಂಡದೊಡನೆ ಚರ್ಚೆ ನಡೆಸಿದಾಗ ಎಲ್ಲರು ಸಹಮತಿ ವ್ಯಕ್ತಪಡಿಸಿದರು. ಈಗ ಸತ್ಯ ಹೇಳಿದ್ರೆ ಇವನು ಓಳ್ ಬಿಡುತ್ತಿದ್ದಾನೆ. ಅದೇ ಸುಳ್ಳು ಮಾತನಾಡಿದರೆ ನಿಜ ಅಂತ ನಂಬುತ್ತಾರೆ. ಸಮಾಜದ ನ್ಯೂನತೆಗಳನ್ನು ಸತ್ಯ ಹೇಳಿ ತಿದ್ದುವ ಪಾತ್ರವನ್ನು ಕಾಶೀ ಸರ್ ಮಾಡಿದ್ದಾರೆ. ಪ್ರತಿಯೊಂದು ಸ್ಥಳವನ್ನು ತದೇಕಚಿತ್ತದಿಂದ ಹುಡುಕಿರುವುದರಿಂದ ಎಲ್ಲವು ಹೊಸತಾಗಿದೆ ಎಂದು ಚಿತ್ರದ ಹೂರಣ ಬಿಚ್ಚಿಟ್ಟರು.

ಅನುಭವ, ಅಜಗಜಾಂತರ, ಆನಂತರಅವಾಂತರ,ಚೌಕ ಅದಕ್ಕಿಂತಲೂ ಭಿನ್ನ ರೂಪದಲ್ಲಿ ಮೊದಲಬಾರಿ ಕಾಣ ಸಿಕೊಂಡಿರುವುದು ಖುಷಿ ನೀಡಿದೆ. ಚಿತ್ರಕತೆಯನ್ನು ಚೆನ್ನಾಗಿ ಸಿದ್ದಪಡಿಸಿದ್ದಾರೆ. ಸುಳ್ಳು ಹೇಳೋರು ಒಳ್ಳೆಯವರು, ಸತ್ಯ ನುಡಿದವರು ಕೆಟ್ಟವರು ಎನ್ನುವಂತ ಕಾಲದಲ್ಲಿ ಪಾತ್ರವನ್ನು ಜನರ ಮೂಲಕ ನೋಡ್ತೀನಿ ಎಂದರು ಕಾಶೀನಾಥ್. ಹಳ್ಳಿ ಹುಡುಗ ಮುನ್ಸಾಮಿ ಜೊತೆ ಶೀತಲ ಸಮರ ಮಾಡುವ ನಾಸ್ತಿಕನ ಪಾತ್ರ ಅಂತಾರೆ ನಾಯಕ ನಿರಂಜನ್‍ದೇಶಪಾಂಡೆ. ಹಳ್ಳಿ ಹುಡುಗಿಯಾಗಿ ಅಖಿಲಾಪ್ರಕಾಶ್ ನಾಯಕಿ. ಇವಳ ಅಪ್ಪನಾಗಿ ರಂಗಭೂಮಿಯ ಶಿವಮೊಗ್ಗ ರಾಮಣ್ಣ, ಹಾಗೂ ನಾಯಕನ ತಂದೆಯಾಗಿ ಗೌತಂ ಅಭಿನಯಿಸಿದ್ದಾರೆ. ಮೂರು ಹಾಡುಗಳಿಗೆ ಸತೀಶ್‍ಬಾಬು ಸಂಗೀತ ಸಂಯೋಜಿದ್ದೇನೆ ಎಂಬುದು ಅವರ ನುಡಿ. ಟ್ರೈಲರ್ ಬಿಡುಗಡೆ ಮಾಡಿದ ನೀನಾಸಂ ಸತೀಶ್ ಕಾಶಿ ಸರ್ ಸಿನಿಮಾಗಳ ಸ್ಕ್ರಿಪ್ಟ್ ತುಂಬಾ ಚೆನ್ನಾಗಿರುತ್ತದೆ. ಅದರಿಂದಲೇ ಎಲ್ಲವು ಹಿಟ್ ಆಗಿತ್ತು. ಅವರ ಸಿನಿಮಾಗಳು ಸೆಕ್ಸ್, ಡಬ್ಬಲ್ ಮೀನಿಂಗ್ ಇರುತ್ತದೆಂದು ಕೆಲವರು ಹೇಳುತ್ತಾರೆ. ನಿಜ ಜೀವನದ ಕತೆಗಳನ್ನು ಅವರು ಸಿನಿಮಾದಲ್ಲಿ ತೋರಿಸಿರುವುದು ಶೀರ್ಷಿಕೆಗಳಲ್ಲಿ ತಿಳಿದಿದೆ. ನಿರ್ಮಾಪಕರಿಗೆ ಬಂಡವಾಳ ವಾಪಸ್ಸು ಬರಲಿ ಎಂದರು. ಸಿನಿಮಾ ಮೋಹಿಗಳಾದ ಸಮಾನ ಮನಸ್ಕರು ಸೇರಿಕೊಂಡು ಸಮೂಹ ಟಾಕೀಸು ಮುಖಾಂತರ ನಿರ್ಮಾಣ ಮಾಡಿರುವ ಚಿತ್ರವು ಮುಂದಿನ ತಿಂಗಳು ಬಿಡುಗಡೆಯಾಗುವ ಸಾದ್ಯತೆ ಇದೆ.
-7/07/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore