HOME
CINEMA NEWS
GALLERY
TV NEWS
REVIEWS
CONTACT US
ತಿರುವುಗಳ ತ್ರಿಕೋನ ಪ್ರೀತಿ
ಶುರುವಿನಲ್ಲಿ ಪ್ರೀತಿ ಹುಟ್ಟಿಕೊಂಡು ಯಾವುದೋ ಕಾರಣಕ್ಕೆ ಒಡೆದುಹೋಗಿ, ಮತ್ತೆಲ್ಲೋ ಒಂದು ಹಂತಕ್ಕೆ ಹೋಗಿ ನಿಂತಿರುತ್ತದೆ. ಅದು ಯಾವ ಹಂತಕ್ಕೆ ಹೋಗುತ್ತೆ, ಕ್ಲೈಮಾಕ್ಸ್ ಏನಾಗುತ್ತೆ ಎಂಬುದನ್ನು ‘ಓ ಪ್ರೇಮವೇ’ ಸಿನಿಮಾ ನೋಡಬಹುದಾಗಿದೆ. ಒಬ್ಬಳು ಪ್ರೀತಿ ಮಾಡಿ ದೊರ ಹೋಗಿ ಮರಳಿರುತ್ತಾಳೆ, ಕಷ್ಟದಲ್ಲಿರುವ ಸಂಗಾತಿ. ಇಬ್ಬರಿಗೂ ಆತನನ್ನು ಕಂಡರೆ ತುಂಬ ಇಷ್ಟ. ಅದರಿಂದ ಇದನ್ನು ತ್ರಿಕೋನ ಪ್ರೇಮ ಕತೆ ಎನ್ನಬಹುದು. ಪ್ರಚಲಿತ ಹುಡುಗರ ಜೀವನ ಹೇಗಿರುತ್ತೆ? ಅದರಂತೆ ಹುಡುಗಿಯರ ಕಲರ್‍ಫುಲ್ ಕನಸುಗಳು, ಆಸೆ-ಆಕಾಂಕ್ಷೆ, ಹುಡುಗರ ಚೆಲ್ಲು ಚಲ್ಲಾದ ತಲ್ಲಣಗಳನ್ನು ಸೂಕ್ಷವಾಗಿ ತೋರಿಸಿದ್ದಾರೆ. ಕತೆಯ ಕುರಿತು ಹೇಳುವುದಾದರೆ ನಾಯಕಿ ಮಧ್ಯಮ ವರ್ಗದ ಹುಡುಗಿ. ಆತ ಕಾರ್ ಡೀಲರ್. ಅವಳಿಗೆ ಶ್ರೀಮಂತ ಹುಡುಗನನ್ನು ಮದುವೆಯಾಗಿ ಸುಖದಿಂದ ಇರಬೇಕೆಂಬ ಬಯಕೆ. ದಿನಕ್ಕೊಂದು ಕಾರಿನಲ್ಲಿ ಬರುವ ಆತನ ಮೇಲೆ ಲವ್ ಬೀಳುತ್ತದೆ. ಮುಂದೆ ಆತ ಕಾರ್ ಡೀಲರ್ ಅಂತ ಗೊತ್ತಾಗಿ ಅವನಿಂದ ದೂರವಾಗುತ್ತಾಳೆ. ನಂತರ ಒಂದು ಶ್ರೀಮಂತ ಹುಡುಗಿ ಎಂಟ್ರಿ ಕೊಡುತ್ತಾಳೆ. ಅದರಿಂದ ಇಬ್ಬರ ಸಂಬಂದ ಏನಾಗುತ್ತೆ ಎಂಬುದು ಸಾರಾಂಶ.

ಮನೋಜ್‍ಕುಮಾರ್ ನಾಯಕ ಮತ್ತು ನಿರ್ದೇಶಕನ ಸ್ಥಾನವನ್ನು ಅಲಂಕರಿಸಿರುವುದರಿಂದ ಕೆಲವೊಂದು ಸಣ್ಣ ತಪ್ಪುಗಳು ಗಮನಕ್ಕೆ ಬಂದಿರುವುದಿಲ್ಲ. ಮೊದಲ ಪ್ರಯತ್ನವಾಗಿರುವುದರಿಂದ ಊಫಿ ಮಾಡಬಹುದು. ಜೀವನ ಮಾಡೋಕೆ ದುಡ್ಡು ಬೇಕು, ಬರೀ ದುಡ್ಡಿನಿಂದ ಜೀವನ ಆಗೋದಿಲ್ಲ, ಪ್ರೀತಿಗೆ ಬಿದ್ದವರು, ಪ್ರೀತಿಗೆ ಬೀಳಬೇಕೆಂದಿರುವವರು ತಿಳಿದುಕೊಳ್ಳಬೇಕಾದ ಸಾಕಷ್ಟು ಸನ್ನಿವೇಶಗಳನ್ನು ನಿರ್ದೇಶಕರು ಸೇರಿಸಿರುವುದು ಪ್ಲಸ್ ಪಾಯಿಂಟ್ ಆಗಿದೆ. ಮನೋಜ್ ಫೈಟ್, ಡ್ಯಾನ್ಸ್ ಇಷ್ಟವಾದರೆ, ಸೆಂಟಿಮೆಂಟ್ ದೃಶ್ಯಗಳಲ್ಲಿ ಇನ್ನು ಪಳಗಬೇಕಿದೆ. ನಿಕ್ಕಿಗುಲ್ರಾಣಿ ನಾಯಕಿಯಾಗಿ ಹಾಡುಗಳಲ್ಲಿ ಮುದ್ದಾಗಿ ಕಾಣುತ್ತಾರೆ. ಉಪನಾಯಕಿ ಅಪೂರ್ವ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಜಿಪುಣ ಅಪ್ಪನಾಗಿ ರಂಗಾಯಣರಘು, ನಗಿಸಲು ಸಾಧುಕೋಕಿಲ, ಪ್ರಶಾಂತ್‍ಸಿದ್ದಿ , ಬುಲೆಟ್‍ಪ್ರಕಾಶ್ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಕೆಲವು ನಿಮಿಷ ಬಂದರೂ ಹುಚ್ಚುವೆಂಕಟ್ ಶಿಳ್ಳೆ ಗಿಟ್ಟಿಸುತ್ತಾರೆ. ಆನಂದ್‍ರಾಜ್‍ವಿಕ್ರಂ-ರಾಹುಲ್‍ದೇವ್ ಸಂಗೀತದಲ್ಲಿ ಗರಿಗೆದರಿ, ಹುಸಿನಗೆ ಮೆಲೋಡಿ ಗೀತೆಗಳು ನೆನಪಿನಲ್ಲಿ ಉಳಿಯುತ್ತದೆ. ಕಿರಣ್‍ಹಂಪಾಪುರ ಕ್ಯಾಮಾರ ಸ್ವಿಟ್ಜರ್‍ಲ್ಯಾಂಡ್ ರಮಣೀಯ ತಾಣಗಳು ಕಣ್ಣಿಗೆ ತಂಪು ಕೊಡುತ್ತದೆ.
ನಿರ್ಮಾಣ: ಸಿ.ಟಿ.ಚಂಚಲಕುಮಾರಿ
ಸಿನಿ ಸರ್ಕಲ್.ಇನ್ ನ್ಯೂಸ್
16/03/18

ಬಿಡುಗಡೆ ಭಾಗ್ಯ ಕಂಡ ಓ ಪ್ರೇಮವೇ
ಯುಎಫ್‍ಓ, ಕ್ಯೂಬ್ ಅವರೊಂದಿಗಿನ ಚರ್ಚೆ ಒಂದು ಹಂತದಲ್ಲಿ ಫಲಕಾರಿಯಾಗುತ್ತದೆ ಎಂಬ ಭರವಸೆ ಬಂದಿರುವುದರಿಂದ ಏಕಾಏಕಿ ವಾಣ ಜ್ಯ ಮಂಡಳಿಯವರು ಹದಿನಾರರಂದು ಸಿನಿಮಾಗಳನ್ನು ಬಿಡುಗಡೆ ಮಾಡಬಹುದೆಂದು ಹೇಳಿರುವ ಪ್ರಯುಕ್ತ ನಾಲ್ಕು ಚಿತ್ರಗಳು ಶುಕ್ರವಾರದಂದು ತೆರೆಕಾಣುತ್ತಿದೆ. ಇದರಿಂದ ವಿಚಲಿತಗೊಂಡ ‘ಓ ಪ್ರೇಮವೇ’ ತಂಡದ ನಾಯಕ, ನಿರ್ಮಾಪಕಿ, ಸಂಗೀತ ನಿರ್ದೇಶಕರು ಮಾದ್ಯಮದವರನ್ನು ಭೇಟಿ ಮಾಡಿ ಅಳಲನ್ನು ಹೇಳುತ್ತಾ ಹೋದರು. ನಿರ್ದೇಶನ ಮತ್ತು ನಾಯಕನಾಗಿ ಕಾಣ ಸಕೊಂಡಿರುವ ಮನೋಜ್‍ಕುಮಾರ್ ದುಗಡವನ್ನು ಹೇಳಿಕೊಳ್ಳಲಾಗದಿದ್ದರೂ ಅವರ ಆನನವು ಎಲ್ಲವನ್ನು ಹೇಳುತ್ತಿತ್ತು. ಅವರು ಮಾತನಾಡುತ್ತಾ ಬೇಜಾರು, ದುಖ: ಆಗುತ್ತಿದೆ. ಯಾರಲ್ಲಿ ಹೇಳುವುದು. ವಾಣ ಜ್ಯ ಮಂಡಳಿಯವರು ತಿಳಿಸಿದಂತೆ ಶುಕ್ರವಾರದಂದು ಜನರಿಗೆ ತೋರಿಸಲು ಸಜ್ಜಾಗಿದ್ದರೂ ಪ್ರಚಾರದ ಕೊರತೆ ಇದೆ. ಹಾಗಂತ ಮುಂದಕ್ಕೆ ಹೋದರೆ ಮುಂದಿನ ವಾರ 11 ಚಿತ್ರಗಳು ತೆರೆಕಾಣಲಿದೆ ಎಂಬ ಸುದ್ದಿ ಬಂದಿದೆ. ಏನೇ ಆದರೂ ಮುಂದೆ ನುಗ್ಗೋಣವೆಂದು ಧೈರ್ಯ ಮಾಡಿ, 100 ಕೇಂದ್ರಗಳಲ್ಲಿ ತೆರೆಗೆ ತರುವ ಯೋಜನೆ ಇದೆ. ತಮಿಳುನಾಡಿದಲ್ಲಿ ಇಂತಹುದೆ ಪರಿಸ್ಥಿತಿ ಇದೆಯಂತೆ. ಕತೆಯ ಕುರಿತು ಹೇಳುವುದಾದರೆ ಪ್ರೀತಿ, ಪ್ರೇಮ ಶಾಶ್ವತ ಎಂದು ಹೇಳಲಾಗಿದೆ. ಪ್ರೀತಿ ವಿಷಯಗಳ ಕುರಿತ ಸಿನಿಮಾಗಳು ಹಿಟ್ ಆಗಿದೆ. ರವಿಚಂದ್ರನ್ ಅಭಿಮಾನಿಯಾಗಿ ಅವರಿಗೆ ಟ್ರೈಲರ್, ಹಾಡು ತೋರಿಸದಾಗ ಚೆನ್ನಾಗಿ ಬಂದಿದೆ ಅಂತ ಶುಭ ಹಾರೈಸಿದ್ದಾರೆ. ಬೆಂಗಳೂರಿನ ಜೋಡಿಯೊಬ್ಬರ ಕತೆಯನ್ನು ಸಿನಿಮಾದಲ್ಲಿ ಬಳಸಲಾಗಿದೆ. ಮುಂದಿನ ಸಾರಿ ಅವರನ್ನು ಪರಿಚಯಿಸಲಾಗುವುದು ಎಂದರು.

ನಾಲ್ಕು ಬಾರಿ ಪತ್ರಕರ್ತರನ್ನು ಭೇಟಿ ಮಾಡಿದ ತಂಡದಲ್ಲಿ ನಿಕ್ಕಿಗುಲ್ರಾಣ ಗೈರುಹಾಜರಿ ಇತ್ತು. ದರ್ಶನ್ ಟ್ರೈಲರ್ ನೋಡಿ ಖುಷಿ ವ್ಯಕ್ತಪಡಿಸಿದ್ದಾರೆ. ಗರಿಗೆದರಿ, ಹುಸಿನಗೆ ಹಾಡುಗಳು ಟಾಪ್ ಸ್ಥಾನದಲ್ಲಿದೆ. ಸ್ವಿರ್ಟರ್‍ಲ್ಯಾಂಡ್, ಬೆಂಗಳೂರು, ಮೈಸೂರು, ಸಕಲೇಶಪುರ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮದ್ಯಮ ವರ್ಗದಲ್ಲಿ ಜೀವನ ಸಾಗಿರುವ ಆಕೆಗೆ ರಾಜನ ತರಹ ಇರುವ ಹುಡುಗ ಸಿಗಬೇಕೆಂದು ಬಯಸುತ್ತಾಳೆ. ಮುಂದೆ ಹಣವೊಂದೆ ಬದುಕು ಅಲ್ಲ. ಪ್ರೀತಿಗಿಂತ ಬೇರೊಂದು ಇಲ್ಲ ಅಂತ ಮನವರಿಕೆಯಾಗುವ ಪಾತ್ರದಲ್ಲಿ ನಟಿಸಿದ್ದೇನೆ ಎಂದು ನಾಯಕಿ ಮಾತುಗಳು ದೊಡ್ಡ ಪರದೆ ಮೇಲೆ ಬಿತ್ತರಗೊಂಡಿತು. ಮಗನಿಗೆ ಇಂಥ ಅವಕಾಶ ಸಿಗುರುವುದಿಲ್ಲವೆಂದು ತೆರೆಗೆ ತರಲು ಹುರಿದುಂಬಿಸಿದ್ದೇನೆ. ಮಾಧ್ಯಮದ ಪ್ರೋತ್ಸಾಹ ಬೇಕೆಂದು ಅವಲತ್ತು ಮಾಡಿಕೊಂಡರು ನಿರ್ಮಾಪಕಿ ಸಿ.ಟಿ. ಚಂಚಲಕುಮಾರಿ. ನಾಯಕ ಅಂತ ನೋಡದೆ ಆಕಾಶವಾಣ , ಟಿವಿ ಚಾಲನ್‍ಗಳು, ಫ್ಲೆಕ್ಸ್‍ಗಳನ್ನು ನಿಂತು ಅಳವಡಿಸಿರುವ ಮನೋಜ್‍ಕುಮಾರ್ ಕೆಲಸಕ್ಕೆ ಪ್ರತಿಫಲ ಸಿಗುತ್ತದೆಂಬ ಆಶಾಭಾವನೆ ಇದೆ ಎನ್ನುತ್ತಾರೆ ಸಂಗೀತ ನಿರ್ದೇಶಕ ಆನಂದ್‍ರಾಜ್‍ವಿಕ್ರಮ್ . ಈಗಾಗಲೇ ಪುನೀತ್‍ರಾಜ್‍ಕುಮಾರ್, ಯೋಗರಾಜಭಟ್, ಸಿಂಪಲ್‍ಸುನಿ, ಶಶಾಂಕ್ ಅವರುಗಳು ಚಿತ್ರದ ಕುರಿತು ಧನಾತ್ಮಕ ಅಂಶಗಳನ್ನು ಹೇಳಿರುವುದು ಪ್ಲಸ್ ಪಾಯಿಂಟ್ ಆಗಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
15/03/18

ಚಿತ್ರದ ಪ್ರಚಾರಕ್ಕೆ ನಾಯಕಿ ಗೈರು ಹಾಜರಿ
ಹೊಸಬರಿಗೆ ಪ್ರೋತ್ಸಾಹ ನೀಡುತ್ತಿರುವ ದರ್ಶನ್ ‘ಓ ಪ್ರೇಮವೇ’ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಶುಭ ಹಾರೈಸಿರುವ ತುಣುಕುಗಳು ಯುಟ್ಯೂಬ್‍ನಲ್ಲಿ ಹರಿದಾಡುತ್ತಿದೆ. ಕತೆ,ಚಿತ್ರಕತೆ,ನಿರ್ದೇಶನ ಜೊತೆಗೆ ನಾಯಕನಾಗಿ ಅಭಿನಯಿಸಿರುವ ಮನೋಜ್‍ಕುಮಾರ್ ಸಮೀಕ್ಷೆ ಮಾಡಿರುವಂತೆ ಪ್ರಚಲಿತ ಪ್ರೇಕ್ಷಕರು ಬುದ್ದಿವಂತರು. ಮೂರು ನಿಮಿಷದ ತುಣುಕುಗಳನ್ನು ನೋಡಿ ನಿರ್ಧಸಿರಿ ಚಿತ್ರ ನೋಡಲು ಬರುತ್ತಾರೆ. ವ್ಯಾಟ್ಸ್‍ಪ್, ದುಡ್ಡು ಇವುಗಳನ್ನು ನಂಬಿಕೊಂಡು ಜೀವನ ಸಾಗಿಸಬೇಡಿ. ತ್ರಿಕೋನ ಪ್ರೇಮಕತೆಯಲ್ಲಿ ಪ್ರೀತಿ ಶಾಶ್ವತವಾಗಿರುತ್ತದೆ ಎಂಬುದು ಒಂದು ಏಳೆಯ ಸಾರಾಂಶ. ಸ್ವಿಟ್ವರ್‍ಲ್ಯಾಂಡ್‍ನಲ್ಲಿರುವ ಜನಿವಾ, ಜರ್ಮಟ್‍ನಲ್ಲಿ ಎರಡು ಹಾಡುಗಳನ್ನು ಚಿತ್ರೀಕರಣ ನಡೆಸಲಾಗಿದೆ. ನಾಯಕಿ ನಿಕ್ಕಿಗುಲ್ರಾಣ ಅವರಿಗೆ ನಮ್ಮ ಕಡೆಯಿಂದ ಬಾಕಿ ಯಾವುದು ಉಳಿಸಿಕೊಂಡಿಲ್ಲ. ಅವರು ಯಾಕೆ ಬರುತ್ತಿಲ್ಲ ಅಂತ ತಿಳಿದಿಲ್ಲವಲೆಂದು ಮಾದ್ಯಮದ ಎದುರು ಅಸಹಾಯಕತೆಯನ್ನು ತೋರ್ಪಸಿದರು. ಮುಂದಿನ ತಿಂಗಳು ಬಿಡುಗಡೆಯಾಗುತ್ತಿರುವ ಕಾರಣ ಈ ವಾರದಿಂದಲೇ ಜಿಲ್ಲೆಯಾದ್ಯಂತ ಪ್ರವಾಸ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎನ್ನುತ್ತಾರೆ.

ಛಾಯಗ್ರಾಹಕ ಕಿರಣ್‍ಹಂಪಾಪುರ ಅವರಿಗೆ ಮೊದಲು ಕರೆ ಬಂದಾಗ ಸಣ್ಣ ಚಿತ್ರ ಮಾಡಬಹುದೆಂಬ ಆಲೋಚನೆ ಮಾಡಿಕೊಂಡಿದ್ದಾರೆ. ಸನ್ನಿವೇಶಕ್ಕೆ ಅನುಗುಣವಾಗಿ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುವುದು. ಫೈಟ್, ಹಾಡುಗಳಿಗೆ ತಾನು ಕೇಳಿದ ಕ್ಯಾಮಾರಗಳನ್ನು ಒದಗಿಸಿದಾಗ ಇವರಿಗೆ ಚಿತ್ರದ ಮೇಲೆ ಆಸಕ್ತಿ ತಿಳಿದು ಖುಷಿಯಾಗಿದೆ. ವಿದೇಶದಲ್ಲಿ ಚಿತ್ರೀಕರಣ ಮಾಡುವುದು ತ್ರಾಸದ ಕೆಲಸ ಎನ್ನುವುದು ಅನುಭವವಾಗಿದೆಯಂತೆ. ತಾರಗಣದಲ್ಲಿ ಸಾಧುಕೋಕಿಲ, ರಂಗಾಯಣರಘು, ಅಪೂರ್ವ, ಹುಚ್ಚವೆಂಕಟ್, ಪ್ರಶಾಂತ್‍ಸಿದ್ದಿ ಮುಂತಾದವರು ನಟಿಸಿದ್ದಾರೆ. ಜಯಂತ್‍ಕಾಯ್ಕಣ , ಚೇತನ್‍ಕುಮಾರ್, ಕವಿರಾಜ್ ಸಾಹಿತ್ಯದ ಆರು ಹಾಡುಗಳಿಗೆ ಆನಂದ್‍ರಾಜವಿಕ್ರಂ-ರಾಹುಲ್‍ದೇವ್ ಸಂಗೀತ ಸಂಯೋಜಿಸಿದ್ದಾರೆ. ಸಿ.ಟಿ.ಚಂಚಲನಕುಮಾರಿ ಮಗನ ಸಲುವಾಗಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್. ಇನ್ ನ್ಯೂಸ್
-11/02/18


ದರ್ಶನ್‍ರಿಂದ ಓ ಪ್ರೇಮವೇ ಟ್ರೈಲರ್ ಬಿಡುಗಡೆ
ಪ್ರಸಕ್ತ ಸ್ಟಾರ್ ಕಲಾವಿದರು ಹೊಸ ಚಿತ್ರಗಳಿಗೆ ಪ್ರೋತ್ಸಾಹ ಕೊಡುತ್ತಿರುವುದು ಆರೋಗ್ಯಕರ ಬೆಳವಣ ಗೆಯಾಗಿದೆ. ಅದರಂತೆ ‘ಓ ಪ್ರೇಮವೆ’ ಚಿತ್ರದ ಆಡಿಯೋ ಸಿಡಿಯನ್ನು ಪುನೀತ್‍ರಾಜ್‍ಕುಮಾರ್ ಅನಾವರಣಗೊಳಿಸಿ ಶುಭ ಹಾರೈಸಿದ್ದರು. ಕತೆಯ ಕುರಿತು ಹೇಳುವುದಾದರೆ ವ್ಯಾಟ್ಸ್‍ಪ್, ದುಡ್ಡು ಇವುಗಳನ್ನು ನಂಬಿಕೊಂಡು ಜೀವನ ಸಾಗಿಸಬೇಡಿ. ತ್ರಿಕೋನ ಪ್ರೇಮಕತೆಯಲ್ಲಿ ಪ್ರೀತಿ ಎಂಬುದು ಶಾಶ್ವತವಾಗಿರುತ್ತದೆ ಎಂಬುದು ಒಂದು ಏಳೆಯ ಸಾರಾಂಶ. ಸ್ವಿಟ್ವರ್‍ಲ್ಯಾಂಡ್‍ನಲ್ಲಿರುವ ಜನಿವಾ, ಜರ್ಮಟ್‍ನಲ್ಲಿ ಎರಡು ಹಾಢುಗಳನ್ನು ಚಿತ್ರೀಕರಣ ನಡೆಸಲಾಗಿದೆ. ನಾಯಕ, ನಿರ್ದೇಶಕ ಮನೋಜ್‍ಕುಮಾರ್, ನಾಯಕಿ ನಿಕ್ಕಿಗುಲ್ರಾಣ ಉಳಿದಂತೆ ಸಾಧುಕೋಕಿಲ, ರಂಗಾಯಣರಘು, ಅಪೂರ್ವ, ಹುಚ್ಚವೆಂಕಟ್, ಪ್ರಶಾಂತ್‍ಸಿದ್ದಿ ಮುಂತಾದವರು ನಟಿಸಿದ್ದಾರೆ.

ಜಯಂತ್‍ಕಾಯ್ಕಣ , ಚೇತನ್‍ಕುಮಾರ್, ಕವಿರಾಜ್ ಸಾಹಿತ್ಯದ ಆರು ಹಾಡುಗಳಿಗೆ ಆನಂದ್‍ರಾಜವಿಕ್ರಂ-ರಾಹುಲ್‍ದೇವ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಟ್ರೈಲರ್‍ನ್ನು ಛಾಲೆಜಿಂಗ್ ಸ್ಟಾರ್ ದರ್ಶನ್ ಅವರು ಶನಿವಾರ ಬಿಡುಗಡೆ ಮಾಡಲಿದ್ದಾರೆ. ಮಗನ ಭವಿಷ್ಯದ ಸಲವಾಗಿ ಸಿ.ಟಿ.ಚಂಚಲನಕುಮಾರಿ ನಿರ್ಮಾಣ ಮಾಡಿರುವ ಚಿತ್ರವು ಸದ್ಯದಲ್ಲೆ ತೆರೆಕಾಣಲಿದೆ.
ಸಿನಿ ಸರ್ಕಲ್. ಇನ್ ನ್ಯೂಸ್
-9/02/18

ಚಿತ್ರರಂಗ-ರಾಜಕೀಯ ಒಂದೇ ನಾಣ್ಯದ ಎರಡು ಮುಖಗಳು
ಲಂಡನ್ ಫಿಲಿಂ ಅಕಾಡೆಮಿಯಲ್ಲ ತರಭೇತಿ ಪಡೆದುಕೊಂಡಿರುವ ಮನೋಜ್ ಎಂಬುವರು ಕತೆ,ಚಿತ್ರಕತೆ, ನಿರ್ದೇಶನ ಜೊತೆಗೆ ನಾಯಕನಾಗಿ ನಟಿಸಿರುವ ಚಿತ್ರದ ಧ್ವನಿಸಾಂದ್ರಿಕೆಯು ಅಶೋಕ ಹೋಟೆಲ್‍ನಲ್ಲಿ ಸರಳವಾಗಿ ಅನಾವರಣಗೊಂಡಿತು. ಸಿಡಿ ಬಿಡುಗಡೆ ಮಾಡಿದ ಪುನೀತ್‍ರಾಜ್‍ಕುಮಾರ್ ಐದು ಹಾಡುಗಳು ಚೆನ್ನಾಗಿ ಇರಲಿದ್ದು ಕೇಳುವಂತಿದೆ. ರವಿ ಸರ್ ಪ್ರೇರಣೆಯಿಂದ ಚಿತ್ರ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ ತಂಡಕ್ಕೆ ಒಳ್ಳೆಯದಾಗಲಿ ಎಂದು ನಿರ್ಗಮಿಸಿದರು. ನಿರ್ಮಾಪಕರು ಹಾಸನ ಕಡೆಯವರಾದ ಕಾರಣ ಅಪರೂಪ ಎನ್ನುವಂತೆ ರಾಜಕೀಯ ಧುರೀಣ ಹೆಚ್.ಡಿ.ರೇವಣ್ಣ ಪತ್ನಿ ಭವಾನಿರೇವಣ್ಣ, ಪುತ್ರ ಪ್ರಜ್ವಲ್‍ರೇವಣ್ಣ ಆಗಮಿಸಿದ್ದು ವಿಶೇಷವಾಗಿತ್ತು. ಸಿನಿಮಾ ಬಗ್ಗೆ ತನಗೇನು ತಿಳಿದಿಲ್ಲ. ಚಿತ್ರಮಂದಿರಕ್ಕೆ ಹೋಗುವುದು ಕಡಿಮೆ. ಮಕ್ಕಳನ್ನು ಪ್ರೋತ್ಸಾಹಿಸಿವುದು ನಮ್ಮೆಲ್ಲರ ಕರ್ತವ್ಯ. ಅವರ ಪ್ರಯತ್ನಕ್ಕೆ ನಾವೆಲ್ಲರೂ ಕೈಜೋಡಿಸಬೇಕು ಎಂದು ಭವಾನಿರೇವಣ್ಣ ಹೇಳಿದರು.

ಸ್ಪುರದ್ರೂಪಿ ಪ್ರಜ್ವಲ್‍ರೇವಣ್ಣ ನಮ್ಮ ಜಿಲ್ಲೆಯಲ್ಲಿ ನಟ ಖಾಲಿ ಇದ್ದಾರೆ. ಅದರಂತೆ ಮನೋಜ್ ಆ ಜಾಗವನ್ನು ತುಂಬಲಿದ್ದಾರೆ. ನಾನು ರಾಜಕೀಯದಲ್ಲಿ ಬೆಳೆಯುವಂತೆ, ಅವರು ಚಿತ್ರರಂಗದಲ್ಲಿ ಎತ್ತರಕ್ಕೆ ಸಾಗಲಿ. ಮುಂದೆ ಚುನಾವಣೆ ಪ್ರಚಾರಕ್ಕೆ ಬರುಲು ಈಗಲೇ ಸಮಯ ಮೀಸಲಿಡಬೇಕು. ಛಲ ಇದ್ದರೆ ಯಾರು ಬೇಕಾದರೂ ಆಕಾಶ ಮುಟ್ಟಬಹುದು. ಪೋಸ್ಟರ್ ಬಗ್ಗೆ ತನಗೇನು ತಿಳಿದಿಲ್ಲ. ರಿಯಲ್‍ನಲ್ಲಿ ಯಾರನ್ನು ಪ್ರೀತಿಸಿಲ್ಲ. ಮುಂದೆ ಇದನ್ನು ಮಾಡಿದರೆ ಹೇಳುವುದಾಗಿ ಪ್ರಶ್ನೆಯಿಂದ ಜಾರಿಕೊಂಡರು ಪ್ರಜ್ವಲ್‍ರೇವಣ್ಣ. ರಾಹುಲ್‍ದೇವ್-ಆನಂದ್‍ರಾಜ್‍ವಿಕ್ರಮ್ ಜಂಟಿಯಾಗಿ ಸಂಗೀತ ನೀಡಿದ್ದು ಮೊದಲ ಬಾರಿ ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್ ಎಂದರು. ನಿರ್ಮಾಪಕಿ ಚಂಚಲಕುಮಾರಿ ಮಾತನಾಡಿ ಪುನೀತ್‍ರಾಜ್‍ಕುಮಾರ್, ಪ್ರಜ್ವಲ್‍ರೇವಣ್ಣ ಹಾರೈಸಿದ್ದಕ್ಕೆ ಸಿನಿಮಾವು ಪವರ್‍ನಿಂದ ಪ್ರಜ್ವಲಿಸಲಿ. ಮಗ ಮೊಗ್ಗಿನಮನಸು ಚಿತ್ರದಲ್ಲಿ ನಟಿಸಿದ ನಂತರ ತಾನು ಪೂರ್ಣ ಪ್ರಮಾಣದ ನಟನಾಗಬೇಕೆಂದು ವಿದೇಶದಲ್ಲಿ ತರಭೇತಿ ಪಡೆದುಕೊಂಡು ಚಿತ್ರ ಮಾಡಿದ್ದಾನೆ ಅವನ ಕನಸನ್ನು ನನಸು ಮಾಡಿದ್ದೇನೆ, ಉಳಿದಿದ್ದು ಮಾದ್ಯಮದವರ ಸಹಕಾರ ಬೇಕು ಎಂದರು.

ರಾಜಕೀಯಕ್ಕಿಂತ ಸಿನಿಮಾ ಮಾಡುವುದು ಕಷ್ಟದ ಕೆಲಸವೆಂದು ಮನೋಜ್ ಕೆಲಸ ಮಾಡುವಾಗ ತಿಳಿಯಿತು. ಚಿತ್ರರಂಗ-ರಾಜಕೀಯ ರೈಲಿನ ಎರಡು ಹಳಿಗಳು ಇದ್ದಂತೆ. ಅವನ ಶ್ರಮ ನೋಡಿದಾಗ ಖುಷಿಯಾಗುತ್ತದೆ. ಮಗನ ಭವಿಷ್ಯ ಉದ್ದಾರವಾಗಲು ತಂದೆಯಾಗಿ ನನ್ನ ಕರ್ತವ್ಯ ನಿಭಾಯಿಸಿದ್ದಾನೆ ಎಂದು ಹೇಳಿದ್ದು ಮಾಜಿ ಸಚಿವ ಕುಮಾರಸ್ವಾಮಿ. ಅವಸಾನದಲ್ಲಿ ಮನೋಜ್‍ಕುಮಾರ್ ಮೈಕ್ ತೆಗೆದುಕೊಂಡು ಈ ರೀತಿ ಹೇಳಿದರು. ಒಂಬತ್ತು ವರ್ಷದ ಕನಸು ನನಸಾಗಿದೆ. ಕಾಲೇಜಿನಲ್ಲಿ ಓದುವಾಗಲೇ ಸಂಗೀತ ನಿರ್ದೇಶಕರ ಪ್ರತಿಭೆಯನ್ನು ಗುರುತಿಸಿದ್ದೆ. ವ್ಯಾಟ್ಸ್‍ಪ್, ದುಡ್ಡು ಇವುಗಳನ್ನು ನಂಬಿಕೊಂಡು ಜೀವನಸಾಗಿಸಬೇಡಿ. ತ್ರಿಕೋನ ಪ್ರೇಮಕತೆಯಲ್ಲಿ ಪ್ರೀತಿ ಎಂಬುದು ಶಾಶ್ವತವಾಗಿರುತ್ತದೆ ಎಂಬುದನ್ನು ಹೇಳಹೊರಟಿದ್ದೇನೆ. ರವಿ ಸರ್ ಅಭಿಮಾನಿಯಾಗಿದ್ದರಿಂದ ಅವರ ಸಿನಿಮಾ ಟೈಟಲ್‍ನ್ನು ಇಡಲಾಗಿದೆ. ಸ್ವಿಟ್ವರ್‍ಲ್ಯಾಂಡ್‍ನಲ್ಲಿರುವ ಜನಿವಾ, ಜರ್ಮಟ್‍ನಲ್ಲಿ ಎರಡು ಹಾಢುಗಳನ್ನು ಚಿತ್ರೀಕರಣ ನಡೆಸಿದ್ದೇವೆ. ಮುಂದಿನ ವರ್ಷ ಬಿಡುಗಡೆ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ. ಕಲಾವಿದರಾದ ಪ್ರಶಾಂತ್‍ಸಿದ್ದಿ, ಕರಿಸುಬ್ಬು, ಸಿನಿಪಂಡಿತರು, ಹಿತೈಷಿಗಳು ಸಿಡಿ ಬಿಡುಗಡೆಗೆ ಸಾಕ್ಷಿಯಾಗಿದ್ದರು. ಇದಕ್ಕೂ ಮುನ್ನ ತೋರಿಸಲಾದ ಹಾಡಿನ ತುಣುಕುಗಳಲ್ಲಿ ಸುಂದರ ತಾಣವು ಕಣ ್ಣಗೆ ತಂಪು ನೀಡಿತು.
-17/12/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore