HOME
CINEMA NEWS
GALLERY
TV NEWS
REVIEWS
CONTACT US
ನುಗ್ಗೇಕಾಯಿ ಸವಿಯಲು,ನೋಡಲು ಚೆಂದ
‘ನುಗ್ಗೇಕಾಯಿ’ ಶೀರ್ಷಿಕೆ ಕೇಳಿದಾಕ್ಷಣ ಇದೊಂದು ಆ ರೀತಿಯ ಸಿನಿಮಾ ಅಂದುಕೊಂಡರೆ ನಿಮ್ಮ ಊಹೆ ತಪ್ಪಾಗುತ್ತದೆ. ಮಕ್ಕಳು ಅಪ್ಪ-ಅಮ್ಮನಿಗೆ ನೋವು ಕೊಡುತ್ತಾರೆ. ಮುಂದೆ ಅದೇ ಮಕ್ಕಳಿಂದ ಸುಖವನ್ನು ಪಡೆಯುವುದು ಕ್ಲೈಮಾಕ್ಸ್‍ಗೆ ಬರುತ್ತದೆ. ಇದರ ಮಧ್ಯೆ ಏನೇನು ನಡೆಯುತ್ತದೆ ಎಂಬುದನ್ನು ತಿಳಿಯಬೇಕಾದಲ್ಲಿ ನೀವು ಚಿತ್ರಮಂದಿರಕ್ಕೆ ಬರಬೇಕಾಗಿದೆ. ನಾಯಕನ ಪೆಟ್ ನೇಮ್ ನುಗ್ಗೇಕಾಯಿ ಆಗಿರುವುದರಿಂದ ಸಿನಿಮಾ ಪೂರ್ತಿ ಇದನ್ನು ಹೇಳುತ್ತಿದ್ದು, ಅಲ್ಲಲ್ಲಿ ತುಂಟತನದ ಡೈಲಾಗ್‍ಗಳು ಬರುತ್ತವೆ. ಇದರ ಆಚೆ ಯುವ ಮನಸ್ಸುಗಳನ್ನು ಜಾಗೃತಗೊಳಿಸುವ ಕೆಲಸ ಮಾಡಿರುವುದು ಕತೆಗೆ ಗಟ್ಟಿತನವನ್ನು ನೀಡಿದೆ. ಅಪ್ಪನು ತನ್ನ ಯೌವ್ವನದ ದಿನಗಳನ್ನು ಗೆಳಯನ ಜೊತೆಯಲ್ಲಿ ಹೇಳುತ್ತಾ ಹೋದಂತೆ, ಮಗ ಅಪ್ಪನಂತೆ ತೆರೆ ಮೇಲೆ ಮಾಡುತ್ತಾ ಹೋಗುವುದು ಕಾಣಸಿಗುತ್ತದೆ. ಮಧ್ಯೆ ಒಂದಷ್ಟು ಕುಚೇಷ್ಟಗಳು, ಪ್ರೀತಿಯಲ್ಲಿ ಬಿದ್ದು ಸಂಸಾರಕ್ಕ ಬಿದ್ದಾಗ ಚಿತ್ರದ ಓಟ ವೇಗ ಪಡೆದುಕೊಳ್ಳುತ್ತದೆ. ಮಕ್ಕಳು, ಪತ್ನಿಯೊಂದಿಗೆ ಸುಖವಾಗಿರುವಾಗಲೇ ಬ್ಯುಸಿನಸ್ ಅಂತ ಗೆಳತಿ ಪರಿಚಯವಾಗಿ ಆಕೆ ಇವನ ಪಾಲಿಗೆ ಖಳನಾಯಕಿ ಆಗುತ್ತಾಳೆ. ಸಂಸಾರದ ಆಚೆಗೆ ಕಾಮ ಬಯಸಿದಾಗ. ಬಲಿಯಾಗುವ ಪತ್ನಿ. ಅಪ್ಪ ಮಾಡಿದ ತಪ್ಪನ್ನು ಮಗ ಮಾಡಬಾರದು ಎಂದು ಬುದ್ದಿವಾದ ಹೇಳುವುದನ್ನು ಸಂದೇಶದ ಮೂಲಕ ತೋರಿಸಿರುವುದು ಅರ್ಥ ಕೊಡುತ್ತದೆ.

ಅಪ್ಪನಾಗಿ ಸುಚೇಂದ್ರಪ್ರಸಾದ್ ನಟನೆಯಲ್ಲಿ ಸೂಪರ್. ನಾಯಕ ಮಧುಸೂಧನ್ ಅಭಿನಯದಲ್ಲಿ ಇನ್ನು ಪಳಗಬೇಕಾಗಿದೆ. ಮೊದಲ ಸಿನಿಮಾವಾಗಿದ್ದರಿಂದ ವೂಫಿ ಮಾಡಬಹುದು. ನಾಯಕಿ ಎಸ್ತರ್‍ನರೋನ ಸಂಭಾಷಣೆಯಲ್ಲಿ ಸುದಾರಣೆ ಕಂಡುಕೊಳ್ಳಬೇಕಿದೆ. ಬಿರಾದಾರ್, ಬ್ಯಾಂಕ್‍ಜನಾರ್ಧನ್ ನಗಿಸಿದ್ದಾರೆ. ಉಳದಿಂತೆ ವಿಲನ್ ಆಗಿ ಕ್ರಿಷ್ಟಿನಾಜಾಯ್, ಜನಿಫರ್‍ಆಂಟನಿ, ರಂಜಿತ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸುರೇಶ್ ಸಂಗೀತದಲ್ಲಿ ಹಾಡುಗಳು ಪರವಾಗಿಲ್ಲ. ಸೂರ್ಯಕಾಂತ್‍ಹೊನ್ನಾಳಿ ಛಾಯಗ್ರಹಣ, ಶಿವಪ್ರಸಾದ್‍ಯಾದವ್ ಸಂಕಲನ, ಮಾದೇಶ್‍ಮುತ್ತಪ್ಪ ಸಂಭಾಷಣೆ ಕೆಲಸ ತೃಪ್ತಿ ನೀಡಿದೆ. ಎ.ವೇಣುಗೋಪಾಲ್ ನಿರ್ದೇಶನದ ಸಾರಥ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಕತೆ ಬರೆದು ನಿರ್ಮಾಣ ಮಾಡಿರುವ ಪ್ರೀತ್.ಎಸ್.ಹೆಗಡೆ ತರಕಾರಿ ವಿಶೇಷತೆಗಳ ಬಗ್ಗೆ ಚೆನ್ನಾಗಿ ತೋರಿಸಿರುವುದು ಎದ್ದು ಕಾಣುತ್ತದೆ.
-11/11/17

ತೆರೆಗೆ ಸಿದ್ದ ನುಗ್ಗೇಕಾಯಿ
ಚಿತ್ರದ ಹೆಸರು ‘ನುಗ್ಗೇಕಾಯಿ’. ಶೀರ್ಷಿಕೆ ಕೇಳಿದಾಕ್ಷಣ ಇದೊಂದು ಹಸಿಬಿಸಿ ಸಿನಿಮಾ ಅನ್ನಿಸಬಹುದು. ಕತೆ ಬರೆದು ನಿರ್ಮಾಣ ಮಾಡಿರುವ ಪ್ರೀತ್.ಎಸ್.ಹೆಗ್ಗಡೆ ಹೇಳುವಂತೆ ಜನರ ಮನಸ್ಸಿನಲ್ಲಿ ಉಂಟಾಗುವ ಕಾಮಕ್ಕೆ ಸಂಬಂದಪಟ್ಟ ಭಾವನೆಗಳ ಸನ್ನಿವೇಶಗಳು ಇರುವುದಿಲ್ಲ. ಅದಕ್ಕೆ ಬದಲಾಗಿ ಹದಿಹರೆಯದ ಕಾಮದಾಕರ್ಷಣೆಯಲ್ಲಿ ವಿದ್ಯಾರ್ಥಿ ಜೀವನದಲ್ಲೆ ಹರೆಯದ ಹುಚ್ಚಾಟಕ್ಕೆ ಬಲಿಯಾಗಿ, ಭವಿಷ್ಯವನ್ನು ದುರಂತವಾಗಿಸಿಕೊಳ್ಳುವ ಯುವ ಸಮೂಹವನ್ನು ಎಚ್ಚರಿಸುವ ಪ್ರಯತ್ನ ಮಾಡಲಾಗಿದೆ. ಫೇಸ್‍ಬುಕ್, ಟ್ವಿಟರ್ ಹಾದಿ ತಪ್ಪಿಸುತ್ತಿದೆ. ಉಕ್ಕುವ ಪ್ರಾಯದೊಂದಿಗೆ ಕಾಲೇಜು ಜೀವನಕ್ಕೆ ಕಾಲಿಡುವ ಯುವಕ-ಯುವತಿಯರ ಮೋಜಿನ ಬಯಕೆಗಳು ಎಷ್ಟು ಮಾರಕ, ಹರೆಯದ ದೌರ್ಬಲ್ಯಗಳ ಅನಾಹತಕ್ಕೆ ಅಂಕುಶವಾಗಲಿದೆ. ಯೌವ್ವನದಲ್ಲಿ ಕಾಮದ ಹುಚ್ಚಾಟಗಳಿಗೆ ಮನಸ್ಸು ಕೊಟ್ಟರೆ ನಾಳೆ ಅವನ ಮಕ್ಕಳು ತನ್ನ ದಾರಿಯ ಕಡೆ ನಡೆದರೆ ದುರಂತವೆ ಆಗುತ್ತದೆ ಎಂಬುದನ್ನು ಟೈಟಲ್ ಮೂಲಕ ಹೇಳಲಾಗಿದೆ ಎನ್ನುತ್ತಾರೆ. ಮಗಳು ಪಬ್ ಸಂಸ್ಕ್ರತಿಯನ್ನು ರೂಡಿಸಿಕೊಂಡಾಗ ಪರಿತಪಿಸುವ ತಂದೆಯಗಿ ಸುಚೇಂದ್ರಪ್ರಸಾದ್ ನಟನೆ ಹೈಲೈ ಟ್ ಆಗಿದೆಯಂತೆ.

ಮಧುಸೂಧನ್ ನಾಯಕ, ಎಸ್ತರ್‍ನರೋನ ನಾಯಕಿ. ಲೆಕ್ಚರರ್ ಆಗಿ ಪ್ರೀತಿಯ ಹಿಂದೆ ಬೀಳುವ ಪಾತ್ರಕ್ಕೆ ಬಣ್ಣ ಹಚ್ಚಿರುವುದು ಬ್ಯಾಂಕ್ ಜನಾರ್ಧನ್. ಚಿತ್ರದಲ್ಲಿ ನಾಯಕನಿಗೆ ಅಡ್ಡ ಹೆಸರನ್ನು ಇದನ್ನೆ ಕರೆಯುವುದರಿಂದ ಶೀರ್ಷಿಕೆಯನ್ನು ಇಡಲಾಯಿತು ಅಂತ ಸಮಜಾಯಷಿ ಉತ್ತರ ಕೊಡುತ್ತಾರೆ ಚಿತ್ರಕತೆ,ನಿರ್ದೇಶನ ಮಾಡಿರುವ ಎ.ವೇಣುಗೋಪಾಲ್. ನಾಲ್ಕು ಹಾಡುಗಳಿಗೆ ಬಿವಿಎನ್.ಸುರೇಶ್ ಸಂಗೀತ ಸಂಯೋಜನೆ ಇದೆ. ನವೆಂಬರ್ 10 ರಂದು ಜನರಿಗೆ ತೋರಿಸಲು ನಿರ್ಮಾಪಕರು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
-26/10/17For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore