HOME
CINEMA NEWS
GALLERY
TV NEWS
REVIEWS
CONTACT US
ಸಿನಿಮಾ ಎನ್ನುವುದು ಜೂಜು ಇದ್ದಂತೆ – ಎಸ್.ಎ.ಚಿನ್ನೆಗೌಡ
ಒಂದು ಚಿತ್ರವು ಗೆದ್ದರೆ ನಿರ್ಮಾಪಕರು ಉಸಿರಾಡುತ್ತಾರೆ. ಮೊದಲ ಪ್ರದರ್ಶನದಲ್ಲಿ ಅದರ ಬಂಡವಾಳ ತಿಳಿಯುತ್ತದೆ. ಇದು ಒಂಥರ ಜೂಜು ಇದ್ದಂತೆ. ಬಂದರೆ ಬಂತು, ಹೋದರೆ ಹೋಯ್ತು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೆಗೌಡ ಹೊಸಬರ ‘ನೃತ್ಯಂ’ ಸಿನಿಮಾದ ಧ್ವನಿಸಾಂದ್ರಿಕೆಯನ್ನು ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು. ಅವರು ಹೇಳುವಂತೆ ಮಕ್ಕಳ ಕೈಲಿ ನಟನೆ ಮಾಡಿಸುವುದು ಕಷ್ಟದ ಕೆಲಸ. ಅವರಲ್ಲಿ ಪ್ರತಿಭೆ ಇರುತ್ತದೆ. ಅದನ್ನು ಕಂಡುಹಿಡಿದು ತೋರಿಸುವ ಜವಬ್ದಾರಿ ನಿರ್ದೇಶಕರಾಗಿರುತ್ತದೆ. ನಿರ್ಮಾಪಕರಿಗೆ ಒಳ್ಳೆಯದಾಗಬೇಕೆಂದು ತಂಡಕ್ಕೆ ಶುಭ ಹಾರೈಸಿದರು. ಕತೆಯಲ್ಲಿ ಸ್ಲಂನಲ್ಲಿರುವ ಮಕ್ಕಳು ಕಿಂಡಲ್ ಮಾಡುತ್ತಾ ಕಾಲ ಕಳೆಯುತ್ತಿರುತ್ತಾರೆ. ಒಂದು ಹಂತದಲ್ಲಿ ಡ್ಯಾನ್ಸ್‍ನ್ನು ಕಲಿತು ಹೇಗೆ ಸಾಧನೆ ಮಾಡುತ್ತಾರೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಮೈಸೂರಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಐದು ಮಕ್ಕಳಲ್ಲಿ ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಮಹೇಂದ್ರ , ಪ್ರಥಮ್‍ಲಾಡ್, ಗಗನ್‍ಲಾಡ್, ತೇಜು, ಶಶಿ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಡಿಂಪಲ್, ಮಿಥಾಲಿ ಇನ್ನು ಹಲವು ಮಕ್ಕಳು ತಾರಗಣದಲ್ಲಿ ಇದ್ದಾರೆ. ಮನೋಹರ್, ಮಂಜುಕವಿ, ರವಿಕುಮಾರ್.ಎಂ ಮತ್ತು ದಿವಾಕರ್ ಸಾಹಿತ್ಯ ಐದು ಹಾಡುಗಳಿಗೆ ಅತಿಶಯಜೈನ್ ಸಂಗೀತವಿದೆ. ಕತೆ,ಚಿತ್ರಕತೆ, ನೃತ್ಯ ಮತ್ತು ನಿರ್ದೇಶನವನ್ನು ವಹಿಸಿಕೊಂಡಿರುವುದು ಮೈಸೂರುರಾಜು. ಇದೇ ಊರಿನ ಸಗಟು ಹಾಲು ವ್ಯಾಪಾರ ಮಾಡುತ್ತಿರುವ ಪ್ರವೀಣ್‍ಲಾಡ್ ಮಕ್ಕಳ ಚಿತ್ರ ಮಾಡುವ ಪಸೆಯಿಂದ ನಿರ್ಮಾಣ ಮಾಡಿದ್ದಾರೆ. ಸಿನಿಮಾವು ಮುಂದಿನ ತಿಂಗಳು ಬಿಡುಗಡೆಯಾಗುವ ಸಾದ್ಯತೆ ಇದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
8/09/18




For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore