HOME
CINEMA NEWS
GALLERY
TV NEWS
REVIEWS
CONTACT US
ಹೊಸ ರೂಪದೊಂದಿಗೆ ನಿಷ್ಕರ್ಷ
ಸೂಪರ್ ಹಿಟ್‍ಚಿತ್ರ ‘ನಿಷ್ಕರ್ಷ’ 1994ರಲ್ಲಿ ಬಿಡುಗಡೆಗೊಂಡು ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿತು.ಡಾ.ವಿಷ್ಣುವರ್ಧನ್, ಅನಂತನಾಗ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದರು.ಈಗ ಚಿತ್ರಕ್ಕೆ ಪ್ರಸಕ್ತತಂತ್ರಜ್ಘಾನದ ಸ್ಪರ್ಶ ನೀಡಲಾಗಿದೆ.ಇದರನ್ವಯಮಾಹಿತಿ ನೀಡಲು ನಿರ್ಮಾಪಕಿವನಜಾ.ಬಿ.ಪಾಟೀಲ್ ಮಾದ್ಯಮದವರನ್ನು ಭೇಟಿ ಮಾಡಿದ್ದರು. ಬಿ.ಸಿ.ಪಾಟೀಲ್ ಮಾತನಾಡುತ್ತಾಒಂದು ದಿನ, ಒಂದೇ ಸ್ಥಳದಲ್ಲಿ ನಡೆಯುವಕತೆಯಾಗುವುದರಿಂದ ವೆಚ್ಚ ಕಡಿಮೆಯಾಗುತ್ತದೆಂದು ಭಾವಿಸಲಾಗಿತ್ತು. ಆ ಕಾಲಕ್ಕೆ ಅರವತ್ತು ಲಕ್ಷಖರ್ಚಾಗಿತ್ತು.56 ದಿವಸದಚಿತ್ರೀಕರಣ ನಡೆದಿತ್ತು.ವರಾತ ಮಾಡಿನಿರ್ದೇಶಕರಿಂದಖಳನಟನ ಪಾತ್ರದಲ್ಲಿ ಕಾಣಿಸಿಕೊಂಡಂತೆ ಮುಂದೆಅಂತಹುದೆ ಅವಕಾಶಗಳು ಒದಗಿಬಂತು. ವಿಷ್ಣುರವರ ಸಂಭಾವನೆ ಏಳೂವರೆ ಲಕ್ಷದಲ್ಲಿ ನಮ್ಮ ಕಷ್ಟ ನೋಡಿಒಂದು ಲಕ್ಷಕಡಿಮೆತೆಗೆದುಕೊಂಡರು.ಚಿತ್ರವು ಈಗಿನ ಟೆಕ್ನಾಲಜಿಗೆ ಅಳವಡಿಸಿಕೊಂಡು ಎಂದಿನಂತೆ ಸಂಗೀತ, ಕಲಾವಿದರಧ್ವನಿಯನ್ನು ಉಳಿಸಿಕೊಳ್ಳಲಾಗಿದೆ. ಸಾಹಸ ಸಿಂಹನ ಹುಟ್ಟುಹಬ್ಬಕ್ಕೆಅಭಿಮಾನಿಗಳಿಗೆ ಉಡುಗೊರೆಯಾಗಿಕೊಡಲಾಗುವುದುಎಂದರು.

ಬೆಳದಿಂಗಳಬಾಲೆ ಮಾಡುವ ಸಂದರ್ಭದಲ್ಲಿ ಪೋಲೀಸ್ ಇಲಾಖೆಗೆ ಗೌರವಕೊಡುವಂತ ಸಿನಿಮಾ ಮಾಡಬೇಕಂದು ಯೋಚಿಸಿದ್ದೆ ನಿಷ್ಕರ್ಷಕತೆ ಹೊಳೆಯಿತು.ಮಣಿಪಾಲ್ ಸೆಂಟರ್‍ನ ಹನ್ನೊಂದನೇ ಮಹಡಿಯಲ್ಲಿರುವ ಸರ್ಕಾರಿಕಚೇರಿಯನ್ನು ಬ್ಯಾಂಕ್ ಆಗಿ ಪರಿವರ್ತಿಸಿ ಭಾನುವಾರ ಹೂರತುಪಡಿಸಿ ಉಳಿದ ದಿನದಂದುರಾತ್ರಿಚಿತ್ರೀಕರಣ ನಡೆಸಲಾಯಿತು. ವಿಷ್ಣು ಸರ್ 45 ನಿಮಿಷ ನಂತರ ಬರುತ್ತಾರೆಂದುಅವರಿಗೆ ತಿಳಿದಿರಲಿಲ್ಲ. ಹೀಗೆ ಪಾರಿವಾಳ ತರಿಸಿದ್ದು, ಡೈಲಾಗ್ ಮೂಲಕವೇ ಅತ್ಯಾಚಾರ ನಡೆಸಿದ್ದು, ಡಿಲಿವರಿದೃಶ್ಯ ಸೆರೆ ಹಿಡಿದುದನ್ನು ನಿರ್ದೇಶಕ ಸುನಿಲ್‍ಕುಮಾರ್‍ದೇಸಾಯಿ ನೆನಪು ಮಾಡಿಕೊಳ್ಳುತ್ತಾ ಹೋದರು.ಸುಮನ್‍ನಗರ್‍ಕರ್, ಗುರುಕಿರಣ್, ನಿರ್ಮಾಪಕಿ, ಸೌಮ್ಯಾಪಾಟೀಲ್, ಡಿಜಿಟಲ್ ಮಾಡಿರುವಈಶ್ವರ್ ಅನುಭವಗಳನ್ನು ಹೇಳಿಕೊಂಡರು. ಚಿತ್ರವು ಸೆಪ್ಟಂಬರ್ 20ರಂದು ಸುಮಾರು ನೂರು ಕೇಂದ್ರಗಳಲ್ಲಿ, ಹಾಗೆಯೇ ಹಿಂದಿಯಲ್ಲಿತೆರೆಕಾಣಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
5/09/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore