HOME
CINEMA NEWS
GALLERY
TV NEWS
REVIEWS
CONTACT US
ಮಕ್ಕಳ ಪ್ರತಿಭೆಯನ್ನು ಗೌರವಿಸುವುದು ಪೋಷಕರ ಕರ್ತವ್ಯವಾಗಿದೆ – ಯಶ್
ಯಶ್‍ಗೆ ಮಕ್ಕಳನ್ನು ಕಂಡರೆ ತುಂಬ ಇಷ್ಟವಂತೆ. ಇದನ್ನು ಯಾರು ಹೇಳಿದ್ದಲ್ಲ, ಖುದ್ದು ಅವರೇ ಹೇಳಲು ಕಾರಣವಾಗಿದ್ದು ‘ನಿರ್ಮಲ’ ಚಿತ್ರದ ಮಹೂರ್ತ ಸಮಾರಂಭ. ನಿರ್ಮಾಪಕ, ಛಾಯಗ್ರಾಹಕ ಹೂರತುಪಡಿಸಿ ಕಲಾವಿದರು, ತಂತ್ರಜ್ಗರು ಸಂಪೂರ್ಣ ಮಕ್ಕಳು ಇರುವುದು ವಿಶೇಷ. ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ ಯಶ್ ಮಾತನಾಡುತ್ತಾ ಜವಬ್ದಾರಿ ಎನ್ನುವುದು ಹೇಳಿ ಮಾಡಿಸುವುದು ಅಲ್ಲ, ಅದು ತಮ್ಮಲ್ಲಿ ತಾನಾಗೇ ಬರಬೇಕು. ಓದುವುದರ ಜೊತೆಗೆ ಕೆಲವು ಗುಣಗಳನ್ನು ರೂಡಿಸಿಕೊಳ್ಳಬೇಕು. ಶಾಲೆಯಲ್ಲಿ ವಿದ್ಯೆ ಕಲಿತರೆ, ಅದರ ಆಚೆ ಬದುಕು ಕಲಿಸುತ್ತೆ. ಚಿಕ್ಕ ಚಿಕ್ಕ ವಿಷಯಗಳನ್ನು ಬಿಡಬೇಡಿ. ಸಣ್ಣ ಸಣ್ಣ ಅಂಶಗಳು ನಾಳೆ ದೊಡ್ಡದಾಗುತ್ತದೆ. ಇನ್ನೋಬ್ಬರ ಪ್ರತಿಭೆಯನ್ನು ಗೌರವಿಸಿ. ಕೀಳುರಿಮೆಯನ್ನು ಹೀಗಿನಿಂದಲೇ ತೆಗೆದುಹಾಕಿ. ಲುಕ್ ಕಡೆಗೆ ಗಮನ ಹರಿಸದೆ, ನಿಮ್ಮೊಳಗಿರುವ ಶಕ್ತಿಯನ್ನು ಬೆಳಸಿಕೊಳ್ಳಿ. ತಂದೆ-ತಾಯಿ, ಹಿರಿಯರನ್ನು ಗೌರವಿಸಿ. ಜಾತಿಯನ್ನು ಕಿತ್ತುಹಾಕಿ. ಮುಂದಿನ ತಲೆಮಾರಿಗೆ ಇದು ಇರಬಾರದು ಅಂತ ಮಕ್ಕಳಿಗೆ ಹಿತವಚನ ನೀಡುತ್ತಾ. ರಂಗಭೂಮಿಗೆ ಅಂತಲೇ ಪ್ರತ್ಯೇಕ ಕ್ಲಾಸ್‍ನ್ನು ನಡೆಸುವುದು ಸೂಕ್ತವಾಗಿದೆ ಎಂದು ಮಕ್ಕಳೊಂದಿಗೆ ಹಾಡಿಗೆ ಹೆಜ್ಜೆ ಹಾಕಿದರು ರಾಕಿಂಗ್ ಸ್ಟಾರ್.

ಚಿತ್ರದ ಕುರಿತು ಹೇಳುವುದಾದರೆ ಪ್ರಧಾನ ಮಂತ್ರಿಗಳ ಸ್ವಚ್ಚ ಭಾರತ ಅಭಿಯಾನ ಮುಖ್ಯ ವಿಷಯವನ್ನು ತೆಗೆದುಕೊಂಡು ಇದರ ಜೊತೆಗೆ ಸಾಮಾಜಿಕ ಕಳಕಳಿ ಇರುವ ಅಂಶಗಳನ್ನು ಸೇರಿಸಿಕೊಂಡಿದ್ದಾರೆ. ಇವೆಲ್ಲವನ್ನು ಮಕ್ಕಳು ಹೇಗೆ ಮಾಡುತ್ತಾರೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಅದಕ್ಕಾಗಿ ಮುಗ್ದ ಮನಸುಗಳ ಕನಸು ಎಂದು ಅಡಿಬರಹದಲ್ಲಿ ಹೇಳಲಾಗಿದೆ. ನಿರ್ದೇಶನ ಲೋಹಿತ್‍ಪ್ರಕಾಶ್, ಸಂಗೀತ ವರ್ಣಶ್ರೀಮೂರೂರು, ಸಂಕಲನ ಲೋಹಿತ್‍ಚಂದನ್, ನೃತ್ಯ ಭಾವನಾನಾಯಕ್, ಪ್ರಚಾರ ಕಲೆ ಅಂಕಿತಾನಾಯ್ಡು, ಕಲಾ ನಿರ್ದೇಶನ ಮಿಥಿಲೇಶ್-ಆರ್ಯನ್, ವಸ್ತ್ರಾಲಂಕಾರ ಪುಣ್ಯಶ್ರೀ ಮತ್ತು ಹಿರಿಯರ ಸಾಲಿನಲ್ಲಿ ಛಾಯಗ್ರಹಣ ವಿ.ಪವನ್‍ಕುಮಾರ್, ನಿರ್ಮಾಣ ಬಿ.ಹೆಚ್.ಉಲ್ಲಾಸ್‍ಗೌಡ-ಅವಿನಾಶ್ ಅವರದಾಗಿದೆ. ಉಲ್ಲಾಸ್ ರಂಗಭೂಮಿ ಶಾಲೆಯ ಮಕ್ಕಳು ಚಿತ್ರದಲ್ಲಿ ತಂತ್ರಜ್ಘ, ಕಲಾವಿದರುಗಳಾಗಿ ಗುರುತಿಸಿಕೊಂಡಿದ್ದಾರೆ. ರಾಮನಗರ, ಚೆನ್ನಪಟ್ಟಣ, ಬಿಡದಿ ಕಡೆಗಳಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ಹಾಕಿಕೊಂಡಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
5/06/18
ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳಿಗೋಸ್ಕರ
ಚಂದನವನದಲ್ಲಿ ಬಾ.ಮಾ.ಹರೀಶ್ ಹೆಸರು ಕೇಳದೆ ಇರುವವರು ಯಾರು ಇರುವುದಿಲ್ಲ. ಇವರು ಹದಿನಾರು ವರ್ಷದ ಕೆಳಗೆ ಉಲ್ಲಾಸ್ ಪ್ರೊಡಕ್ಷನ್ ಸಂಸ್ಥೆ ಹುಟ್ಟುಹಾಕಿ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಅದರಂತೆ ನಾಲ್ಕು ವರ್ಷದ ಕೆಳಗೆ ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾ ಎಂಬ ತರಭೇತಿ ಶಾಲೆಯನ್ನು ತೆರೆದು ಹಲವು ವಿದ್ಯಾರ್ಥಿಗಳು ತರಭೇತಿ ಪಡೆದುಕೊಂಡಿದ್ದಾರೆ. ಈಗ ಇಲ್ಲಿನ ವಿದ್ಯಾರ್ಥಿಗಳಿಂದ ‘ನಿರ್ಮಲ’ ಎನ್ನುವ ಮಕ್ಕಳ ಚಿತ್ರವನ್ನು ಪುತ್ರ ಉಲ್ಲಾಸ್ ಹೆಸರಿನಲ್ಲಿ ನಿರ್ಮಾಣ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. ಚಿತ್ರದಲ್ಲಿ ಹಲವಾರು ವಿಶೇಷತೆಗಳು ಇರಲಿದೆ. ಎಂಟನೆ ತರಗತಿ ಓದುತ್ತಿರುವ ರೋಹಿತ್ ಪ್ರೀತಂಶೆಟ್ಟಿ ಅವರಿಂದ ಕೆಲಸ ಮಾಡಿದ ಅನುಭವದಿಂದ ನಿರ್ದೇಶನದ ಪಟ್ಟವನ್ನು ಅಲಂಕರಿಸುತ್ತಿದ್ದಾರೆ. ಪ್ರವೀಣ್ ರೆರ್ಕಾಡಿಂಗ್ ಸ್ಟುಡಿಯೋದಲ್ಲಿ ಕೆಲಸ ಮಾಡಿರುವ ದ್ವಿತೀಯ ಪಿಯುಸಿ ವರ್ಣಶ್ರೀ ಸಂಗೀತ ಸಂಯೋಜನೆ, ಕುಮಾರಿ ಅಂಕಿನನಾಯ್ಡು ಸಂಕಲನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ಇವರುಗಳ ಪೈಕಿ ನುರಿತ ತಂತ್ರಜ್ಘ ಎಂದರೆ ಅದು ಛಾಯಗ್ರಾಹಕ ಪವನ್‍ಕುಮಾರ್. ಬಾಮಾ ಹರೀಶ್ ಮಾತನಾಡಿ ಮೆಜಸ್ಟಿಕ್ ಚಿತ್ರದಿಂದ ಹೊಸಬರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಅದೇ ರೀತಿಯಲ್ಲಿ ಮಗ ನಿರ್ಮಾಪಕನಾಗಿ ಗುರುತಿಸಿಕೊಳ್ಳುತ್ತಿದ್ದಾನೆ. ಮಕ್ಕಳ ಸಿನಿಮಾವನ್ನು ಮಕ್ಕಳೇ ಸಿದ್ದಪಡಿಸುತ್ತಿರುವುದು ಭಾರತದಲ್ಲಿ ಮೊದಲು ಎನ್ನಬಹುದಾಗಿದೆ ಎಂದರು. ತಂಡಕ್ಕೆ ಶುಭ ಹಾರೈಸಲು ಆಗಮಿಸಿದ್ದ ಎಸ್.ವಿ.ಬಾಬು ಯುವ ಪ್ರತಿಭೆಗಳ ಶ್ರಮಕ್ಕೆ ನನ್ನ ಕಡೆಯಿಂದ ಪ್ರೋತ್ಸಾಹ ನೀಡುವುದಾಗಿ ಭರವಸೆ ನೀಡಿದರು. ನಟಿ ಪ್ರೇಮ ಮಾತನಾಡುತ್ತಾ ಯುವ ಪೀಳಿಗೆಯು ಚಿತ್ರರಂಗಕ್ಕೆ ಬರುತ್ತಿರುವುದು ಸ್ವಾಗತಾರ್ಹ. ನೀವುಗಳು ಮೊದಲು ಶಿಕ್ಷಣದ ಕಡೆ ಗಮನಹರಿಸಿ ನಂತರ ರಂಗಕ್ಕೆ ಬರಬೇಕೆಂದು ಕಿವಿಮಾತು ಹೇಳಿದರು. ಮುಗ್ದ ಮನಸುಗಳ ಕನಸು ಎಂದು ಹೇಳಿಕೊಂಡಿರುವ ಚಿತ್ರದ ಪೋಸ್ಟರ್‍ನ್ನು ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್. ಇನ್ ನ್ಯೂಸ್
-11/02/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore