HOME
CINEMA NEWS
GALLERY
TV NEWS
REVIEWS
CONTACT US
ಅವಕಾಶಗಳ ನಿರೀಕ್ಷೆಯಲ್ಲಿ ನಿಖಿತಾರಮ್ಯಾಸತೀಶ್
ಓದುತ್ತಿರುವುದು ಇಂಜಿನಿಯರಿಂಗ್. ಭವಿಷ್ಯದಲ್ಲಿ ನಟಿಯಾಗಬೇಕೆಂಬ ಬಯಕೆ. ಇವರೇ ಅಪ್ಪಟ ಕನ್ನಡದ ಹುಡುಗಿ ‘ನಿಖಿತಾರಮ್ಯಾಸತೀಶ್’. 5.8” ಎತ್ತರದ ಚೆಲುವೆಗೆ ಹತ್ತಿರದ ಸಂಬಂದಿ ರೇಣುಕುಮಾರ್ ಚಿತ್ರ ನಿರ್ದೇಶಕ ಹಾಗೂ ಸ್ಟುಡಿಯೋ ಮಾಲೀಕರು. ಕೆಲವು ಸಿನಿಮಾದ ಕೆಲಸಕಾರ್ಯಗಳು ಇವರ ಸ್ಟುಡಿಯೋದಲ್ಲಿ ನಡೆಯುತ್ತಿರುವಾಗ ತಂತ್ರಜ್ಘರು, ಕಲಾವಿದರು ಬರುವುದು ಸಹಜ. ಶಾಲಾ ರಜಾ ದಿನಗಳಲ್ಲಿ ಇಲ್ಲಿಗೆ ಭೇಟಿ ನೀಡಿದಾಗ, ಬರುವವರನ್ನು ನೋಡುತ್ತಾ ತನಗೂ ಕಲಾವಿದೆ ಆಗಬೇಕೆಂಬ ಸಣ್ಣದೊಂದು ಆಸೆ ಅಂದೇ ಚಿಗುರಿದೆ. ನಂತರ ಅಪ್ಪ ಸತೀಶ್, ಅಮ್ಮ ಲತಾಸತೀಶ್‍ಗೆ ಮನದ ಆಸೆಯನ್ನು ತಿಳಿಸಿದ್ದಾರೆ. ಮಗಳ ಆಸೆಯನ್ನು ಚಿವುಟದೆ ಮುಂದುವರೆಸು ಅಂತ ಹೇಳಿದ್ದಾರೆ. ನಂತರ ಕಾಲೇಜು ಚಟುವಟಿಕೆಗಳಲ್ಲಿ ಭಾಗವಹಿಸಿ ಅಲ್ಲಿಯೂ ಸೈ ಅನಿಸಿಕೊಂಡಿದ್ದಾರೆ. ಸದ್ಯ ‘ಮಿಸ್ ಟೂರಿಸಂ ಇಂಟರ್‍ನ್ಯಾಷನಲ್ ಇಂಡಿಯಾ 2018’ ಸ್ಫರ್ಧೆಯಲ್ಲಿ 300 ಸ್ಪರ್ಧಿಗಳ ಪೈಕಿ ಇವರು ಆಯ್ಕೆಯಾಗಿರುವುದು ಕರ್ನಾಟಕಕ್ಕೆ ಹೆಮ್ಮೆಯಾಗಿದೆ.

ಅಲ್ಲದೆ ಡಿಸೆಂಬರ್‍ದಲ್ಲಿ ನಡೆಯುವ ದೆಹಲಿಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಂಸ್ಕ್ರತಿ, ಪ್ರವಾಸೋದ್ಯಮ ಪ್ರೋತ್ಸಾಹಿಸುವ ಕುರಿತಂತೆ 60 ದೇಶದ ಸುಂದರಿಯರು ಭಾಗವಹಿಸುತ್ತಿದ್ದಾರೆ. ಇದರ ಕಿರೀಟ ತಮ್ಮದಾಗಿಸಿಕೊಳ್ಳುವುದು ಇವರ ಗುರಿಯಾಗಿದೆ. ಇದರ ಮಧ್ಯೆ ಕೇರಳದ ಕಲತಿ ವಿದ್ಯೆ, ಪುಣೆಯಲ್ಲಿ ತರಭೇತಿ, ರೇಣು ಅವರಿಂದ ನಟನೆ ಬಗ್ಗೆ ಕಲಿಕೆ ಇವೆಲ್ಲವನ್ನು ಪಡೆದುಕೊಂಡು ನಟಿಯಾಗಬೇಕೆನ್ನುವ ಅರ್ಹತೆಗೆ ಪಾತ್ರರಾಗಿದ್ದಾರೆ. ಈಗಾಗಲೇ ಮಲಯಾಳಂ ಚಿತ್ರದಲ್ಲಿ ನಟಿಸಲು ಅವಕಾಶ ಬಂದಿದ್ದರೂ ಒಲ್ಲೆ ಎಂದಿದ್ದಾರೆ. ಏನೇ ಆದರೂ ನಮ್ಮ ನೆಲದಲ್ಲೆ ಪರಿಚಯಗೊಳ್ಳಬೇಕೆಂಬ ಬಯಕೆಯಲ್ಲಿರುವ ಇವರಿಗೆ ಆರತಿ, ರಾಧಿಕಾಪಂಡಿತ್ ಇಷ್ಟೆ ನಟಿಯಂತೆ. ಚಂದನವನದಲ್ಲಿ ಹೊಸ ಪ್ರತಿಭೆಗಳು ಬರುತ್ತಿರುವ ಸಾಲಿಗೆ ನಿಖಿತಾರಮ್ಯಾಸತೀಶ್ ಸೇರ್ಪಡೆಯಾಗಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
1/12/18
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore