HOME
CINEMA NEWS
GALLERY
TV NEWS
REVIEWS
CONTACT US
ರಾತ್ರಿ ಪಯಣ, ಮೂರು ಪಾತ್ರಗಳು
ನಾಯಕ, ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಯುವ ನಟ ರಾಕೇಶ್‍ಅಡಿಗ ‘ಜೋಶ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದರು. 13 ಚಿತ್ರಗಳಲ್ಲಿ ನಟಿಸಿದ ಅನುಭವದಿಂದ ‘ನೈಟ್ ಔಟ್’ ಸಿನಿಮಾದ ಮೂಲಕ ಪೂರ್ಣ ಪ್ರಮಾಣದಲ್ಲಿ ನಿರ್ದೇಶಕರಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಅವರು ಹೇಳುವಂತೆ ನಟನಾಗುವ ಮುಂಚೆ ಶಾಲಾ,ಕಾಲೇಜು ದಿನಗಳಲ್ಲಿ ರಂಗಭೂಮಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರಿಂದ ಅಂದೇ ನಿರ್ದೇಶನ ಮಾಡುವ ಬಯಕೆ ಇತ್ತು. ಅದು ಈಗ ಈಡೇರಿದೆಯಂತೆ.
ಚಿತ್ರದ ಕುರಿತು ಹೇಳುವುದಾದರೆ ಆರು ಗಂಟೆ ಕತೆಯಲ್ಲಿ ನಡೆಯಲಿದ್ದು, ಇಬ್ಬರು ಬಾಲ್ಯದ ಗೆಳೆಯರು ಆಟೋದಲ್ಲಿ ರಾತ್ರಿ ಹೊತ್ತು ಪ್ರಯಾಣ ಮಾಡುವಾಗ ಅವರು ಮನಸ್ಥಿತಿಗಳ ಬಗ್ಗೆ ಸಂಭಾಷಣೆಯಲ್ಲಿ ಎಲ್ಲವು ತೆರೆದುಕೊಂಡಾಗ ಫ್ಲಾಶ್‍ಬ್ಯಾಕ್‍ಗೆ ಹೋಗುತ್ತದೆ. ಅದರಲ್ಲಿ ಹುಡುಗಿಯೊಬ್ಬಳ ಪ್ರವೇಶವಾಗುತ್ತದೆ. ಯಾವ ಕಾರಣಕ್ಕೆ ಭೇಟಿಯಾದರು, ಏತಕ್ಕಾಗಿ ಪ್ರಯಾಣ ಮಾಡಿದರು, ಎಲ್ಲಿಗೆ ಹೋಗ್ತಾರೆ ಎಂಬುದನ್ನು ಕುತೂಹಲ ಮಾದರಿಯಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಪ್ರೇಕ್ಷಕ ಮುಂದಿನ ದೃಶ್ಯ ಊಹೆ ಮಾಡದಂತೆ ಸನ್ನಿವೇಶಗಳು ಬರುವುದು ಪ್ಲಸ್ ಪಾಯಿಂಟ್ ಆಗಿದೆ.

ಆಟೋ ಚಾಲಕನಾಗಿ ಭರತ್ ನಾಯಕನಾಗಿ ಮೊದಲ ಅನುಭವ. ಸಣ್ಣ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಕ್ಷಯ್ ಗೆಳೆಯನಾಗಿ ಮುಖ್ಯ ಪಾತ್ರ. ಹಳ್ಳಿಯಿಂದ ಬೆಂಗಳೂರಿಗೆ ಓದಲು ಬರುವ ಹುಡುಗಿಯಾಗಿ ಶೃತಿಗೊರಾಡಿಯಾ ನಾಯಕಿ. ಬೆಂಗಳೂರು, ಹೆಸರುಘಟ್ಟ ಮತ್ತು ಕನಕಪುರ ರಸ್ತೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಾಲ್ಕು ಹಾಡುಗಳಿಗೆ ಸಮೀರ್‍ಕುಲಕರ್ಣೀ ರಾಗ ಒದಗಿಸಿದ್ದಾರೆ. ಛಾಯಗ್ರಹಣ ಅರುಣ್.ಕೆ.ಅಲೆಕ್ಸಾಂಡರ್, ಸಂಕಲನ ರಿತ್ವಿಕ್, ನೃತ್ಯ ಭಾರ್ಗವ ನಿರ್ವಹಿಸಿದ್ದಾರೆ. ಅಮೇರಿಕಾ ನಿವಾಸಿ ಕನ್ನಡಿಗರಾದ ನವೀನ್‍ಕೃಷ್ಣ-ಲಕ್ಷೀನವೀನ್ ನಿರ್ದೇಶಕರ ನಂಬಿಕೆ ಮೇಲೆ ಹಣ ಸುರಿದಿದ್ದಾರೆ. ಸದ್ಯ ಚಿತ್ರೀಕರಣೊತ್ತರ ಕೆಲಸಗಳು ನಡೆಯುತ್ತಿದ್ದು, ಫೆಬ್ರವರಿಯಲ್ಲಿ ಜನರಿಗೆ ತೋರಿಸಲು ತಂಡವು ಯೋಜನೆ ಹಾಕಿಕೊಂಡಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
11/10/18


For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore