HOME
CINEMA NEWS
GALLERY
TV NEWS
REVIEWS
CONTACT US
ಹೊಸಬರ ನಾವೆಲ್ರೂ
ಹೊಸಬರ ‘ನಾವೆಲ್ರೂ’ ಚಿತ್ರದಕತೆಯಲ್ಲಿಪ್ರಸಕ್ತಯುವಕರುಜೀವನವನ್ನುಅರ್ಧಅರ್ಥ ಮಾಡಿಕೊಂಡಿರುತ್ತಾರೆ. ಅದಕ್ಕಾಗಿ ಹಾಫ್ ಬಾಯಲ್ಡ್‍ಅಂತಅಡಿಬರಹದಲ್ಲಿ ಹೇಳಿಕೊಂಡಿದೆ. ನಮ್ಮದುಡಿಮೆ ನಮಗೆ ಸಿಗೋದಿಲ್ಲ. ಯುವಕರಿಗೆ ಹೇಳೋರು, ಕೇಳೋರು, ತಿದ್ದೋರುಇಲ್ಲದಿದ್ದರೆಅವರುಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ಹೀಗೆ ನಾಲ್ಕು ಹುಡುಗರಜೀವನದಲ್ಲಿ ಏನು ನಡೆಯುತ್ತೆ?ಯಾವತರಹಇರುತ್ತಾರೆ?ಇಂತಹ ಅಂಶಗಳನ್ನು ಚಿತ್ರವು ಒಳಗೊಂಡಿದೆ.ತೆಲುಗುಚಿತ್ರ ‘ಬಾಹುಬಲಿ’ಗೆ ಕೆಲಸ ಮಾಡಿರುವಇಬ್ಬರುತಂತ್ರಜ್ಘರಾದ ಸಹ ಛಾಯಾಗ್ರಾಹಕಕುಶೇಂದ್ರರೆಡ್ಡಿ ಮತ್ತು ನೃತ್ಯ ನಿರ್ದೇಶಕ ಪ್ರೇಮ್‍ರಕ್ಷಿತ್‍ಒಂದು ಹಾಡಿಗೆಕೋರಿಯೋಗ್ರಾಫ್ ಮಾಡುವುದಾಗಿ ಹೇಳಿ, ನಂತರ ಗೀತೆಗಳು ಚೆನ್ನಾಗಿರುವುದಕ್ಕೆ ಮೂರು ಹಾಡುಗಳಿಗೆ ಕಲಾವಿದರನ್ನು ಕುಣಿಸಿರುವುದು ವಿಶೇಷ.

ಮುಖ್ಯ ಪಾತ್ರದಲ್ಲಿದೀಪಕ್, ಹಂಪೇಶ್‍ಅರಸೂರು, ಮಂಜುಬದ್ರಿ ಮತ್ತು ಸುನಿಲ್‍ಕುಮಾರ್. ನಾಯಕಿಯರುಗಳಾಗಿ ಮಾತಂಗಿಪ್ರಸನ್ನ, ವಿನ್ಯಾಶೆಟ್ಟಿಇವರಿಬ್ಬರಿಂದಲೇಕತೆಗೆತಿರುವುಕೊಡುತ್ತದೆ. ಡವ್‍ರಾಜಚಿಕ್ಕಪ್ಪನಾಗಿತಬಲನಾಣಿ ನಟಿಸುವುದರಜೊತೆಗೆ ಸಂಭಾಷಣೆ ಬರೆದಿದ್ದಾರೆ. ಉಳಿದಂತೆ ಪವನ್‍ಕುಮಾರ್, ದೇವರಾಜ್‍ಕಾಪಿಕರ್, ಅನಂತ್ ಮುಂತಾದವರು ನಟಿಸಿದ್ದಾರೆ.ಬಿ.ಶಿವರಾಜ್‍ವೆಂಕಟಾಚ್ಚ ನಿರ್ದೇಶಕರಾಗಿ ಹೊಸ ಅನುಭವ. ಚೇತನ್‍ಕುಮಾರ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ವಿಜೇತ್‍ಕೃಷ್ಣ ಸಂಗೀತವಿದೆ.ದಾವಣಗೆರೆಯಸಿನಿಮಾ ಮೋಹಿ, ರವಿಚಂದ್ರನ್‍ಅಭಿಮಾನಿ ಕೆ.ಅಮೀರ್‍ಅಹಮದ್‍ಯುವಕರ ಆಸೆಗೆ ಕೊಡೆಯಾಗಿ ನಿಂತುಕೊಂಡು ಮೂರುಕೋಟಿಖರ್ಚು ಮಾಡುವದರೊಂದಿಗೆ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾವುಇದೇ 24ರಂದು ತೆರೆಗೆ ಬರಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
10/01/20For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore