HOME
CINEMA NEWS
GALLERY
TV NEWS
REVIEWS
CONTACT US
ಹಲವು ತಿರುವುಗಳ ಸುತ್ತ
ಇತಿಹಾಸ, ಮಾಫಿಯಾ ಮತ್ತುಚರಿತ್ರೆ ಈ ಮೂರು ಅಂಶಗಳನ್ನು ಒಳಗೊಂಡ ಚಿತ್ರ ‘ನವರತ್ನ’ ಕತೆಯಾಗಿದೆ. ಅದೊಂದು ಸಾಮ್ರಾಜ್ಯ ವಿಸ್ರರಣೆಯಲ್ಲಿಕಂಡ ಸೋಲು-ಗೆಲುವು, ಅವಮಾನ ಹಾಗೂ ದ್ವೇಷದಕಥನ. ಇದರಲ್ಲಿ ಬರುವಒಂದು ಮುಖ್ಯವಾದತಿರುವು ಮುಂದುವರೆದ ಭಾಗವಾಗಿ ಪರದೆ ಮೇಲೆ ಮೂಡಿದೆ.ಇಂತಹಐತಿಹಾಸಿಕ ಫ್ಲ್ಯಾಷ್‍ಬ್ಯಾಕ್ ಆಸಕ್ತಿ ಹುಟ್ಟಿಸಿದೆ. ಅಲ್ಲೊಂದುಕಾಡು.ಅಲ್ಲಿಗೆಛಾಯಾಚಿತ್ರಕ್ಕಾಗಿ ಹೋಗುವವರುಯಾರು ಮತ್ತೆ ಹಿಂದುರಿಗಿ ಬಂದಿಲ್ಲ. ಆಲ್ಲಿಗೆ ಹೋದವರ ಮಿಸ್ಸಿಂಗ್ ಮಿಸ್ಟ್ರೀ ಪೋಲೀಸರಿಗೆದೊಡ್ಡ ಸಮಸ್ಯೆಆಗಿರುತ್ತದೆ. ಕಥಾನಾಯಕ, ಗೆಳೆಯ ಹಾಗೂ ನಾಯಕಿಅದೇಕಾಡಿಗೆ ಹೋಗುತ್ತಾರೆ.ಅವಳಿಗೆ ಫೋಟೋಗ್ರಫಿ ಮಾಡುವ ಬಯಕೆ.ಅವನಿಗೆ ಇದನ್ನುದಾಟಿ ಬೆಂಗಳೂರಿಗೆ ಹೋಗಬೇಕು ಎನ್ನುವಉದ್ದೇಶÀ. ಅವಳು ಇಲ್ಲಿಯಜಾಗ ಬಿಟ್ಟು ಬರಲು ಮನಸ್ಸಿಲ್ಲ. ಅದೇಕಾಡಿನಲ್ಲಿಗುಟ್ಟಾಗಿ ನಡೆಯುತ್ತಿರುವ ಮಾಫಿಯಾದಂದೆ, ಸರಣಿ ಕೊಲೆ ಇವೆಲ್ಲಕ್ಕೂಕುತೂಹಲಕಾರಿ ಅಂಶಗಳು ವಿರಾಮದ ನಂತರ ತೆರೆದುಕೊಳ್ಳುತ್ತದೆ.

ನಾಯಕ ಪ್ರತಾಪ್‍ರಾಜ್ ನಿರ್ದೇಶನಜವಬ್ದಾರಿಯನ್ನುಚೆನ್ನಾಗಿ ನಿಭಾಯಿಸಿದ್ದಾರೆ.ನಾಯಕಿ ಮೋಕ್ಷಕುಶಾಲ್, ಗೆಳೆಯನಾಗಿ ಅಮಿತ್, ಶರತ್‍ಲೋಹಿತಾಶ್ವ, ಬಲರಾಜವಾಡಿ, ಪವಿತ್ರಾಲೋಕೇಶ್‍ಎಲ್ಲರೂ ನೀಡಿದ ಕೆಲಸವನ್ನು ಶ್ರದ್ದೆಯಿಂದ ನಿರ್ವಹಿಸಿದ್ದಾರೆ.ಅದ್ಬುತ ಮೇಕಿಂಗ್, ದೃಶ್ಯ ವೈಭವಎಲ್ಲವೂಚಿತ್ರಕ್ಕೆ ಪ್ಲಸ್ ಪಾಯಿಂಟ್‍ಆಗಿದೆ. ಮೂರು ಹಾಡುಗಳಿಗೆ ವೆಂಗಿ ಸಂಗೀತ, ಛಾಯಾಗ್ರಹಣರೋಜಿ.ಪಿ.ಜಾನ್-ಲಕ್ಷೀರಾಜ್, ಸಂಕಲನ ವಿಷ್ಣು.ಎಸ್, ಹಿನ್ನಲೆ ಶಬ್ದ ಪ್ರವೀಣ್‍ಪೌಲ್, ಮೂರು ಸಾಹಸಗಳಿಗೆ ರಿಯಲ್‍ಸತೀಶ್‍ಪರವಾಗಿಲ್ಲ.
ನಿರ್ಮಾಣ: ಸಿ.ಪಿ.ಚಂದ್ರಶೇಖರ್
***
ಸಿನಿ ಸರ್ಕಲ್.ಇನ್ ವಿಮರ್ಶೆ
14/02/20
ತೆರೆಗೆ ಸಿದ್ದ ನವರತ್ನ
ಸೆಸ್ಪನ್, ಥ್ರಿಲ್ಲರ್ ಮಾದರಿಯಲ್ಲಿ‘ನವರತ್ನ’ ಚಿತ್ರವುಇರಲಿದೆಇಬ್ಬರು ಹುಡುಗರು ಪ್ರಯಾಣ ಮಾಡುವ ಸಂದರ್ಭದಲ್ಲಿ ಹುಡುಗಿಯೊಬ್ಬಳು ಸೇರಿಕೊಳ್ಳುತ್ತಾಳೆ.ಆಕಸ್ಮಿಕವಾಗಿ ಮೂವರು ಕಾಡಿನೊಳಗೆ ಹೋಗುತ್ತಾರೆ, ಅದರಉದ್ದೇಶ, ಕಾರಣ ಏನು ಎಂಬುದುಒನ್ ಲೈನ್ ಸ್ಟೋರಿಯಾಗಿದೆ.ಇದರಜೊತೆಗೆ ಶೀರ್ಷಿಕೆ, ನಾಯಕ ಹಾಗೂ ನಾಯಕಿಕತೆಯು ಬರಲಿದ್ದುಕ್ಲೈಮಾಕ್ಸ್‍ದಲ್ಲಿಎಲ್ಲವು ಮಿಶ್ರಣಗೊಳ್ಳುವುದು ವಿಶೇಷ. ಪ್ರಾರಂಭದಲ್ಲಿ ಸನ್ನಿವೇಶಗಳು ಗೊಂದಲ ಸೃಷ್ಟಿಸುತ್ತದೆ.ನಂತರದ ಭಾಗದಲ್ಲಿಅದಕ್ಕೆ ಸಮಜಾಯಷಿ ನೀಡಲಾಗಿದೆ.ಶೃಂಗೇರಿ ಬಳಿ ಇರುವ ಕಿಗ್ಗ ಅರಣ್ಯಪ್ರದೇಶ, ಇಂಡೋನೇಶಿಯಾ ಕಾಡು, ಲಡಾಕ್‍ದಲ್ಲಿಚಿತ್ರೀಕರಣ ನಡೆಸಲಾಗಿದೆ.

ಕತೆ,ನಿರ್ದೇಶನ ಮತ್ತು ನಾಯಕ ಪ್ರತಾಪ್‍ರಾಜ್. ವನ್ಯಜೀವಿ ಛಾಯಾಗ್ರಾಹಕಿಯಾಗಿ ನಿರ್ಭಂದಿತಅರಣ್ಯ ಪ್ರದೇಶಕ್ಕೆ ಹೋಗಲು ಬಲವಾದಕಾರಣವಿರುತ್ತದೆ.ಅಂತಹ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ನಾಯಕಿ ಮೋಕ್ಷಾಕುಶಾಲ್. ಗೆಳೆಯನಾಗಿ ಅಮಿತ್ ಮುಂತಾದವರು ನಟಿಸಿದ್ದಾರೆ. ಮೂರು ಹಾಡುಗಳಿಗೆ ವೆಂಗಿ ಸಂಗೀತ, ಛಾಯಾಗ್ರಹಣರೋಜಿ.ಪಿ.ಜಾನ್-ಲಕ್ಷೀರಾಜ್, ಸಂಕಲನ ವಿಷ್ಣು.ಎಸ್, ಹಿನ್ನಲೆ ಶಬ್ದ ಪ್ರವೀಣ್‍ಪೌಲ್, ಮೂರು ಸಾಹಸಗಳಿಗೆ ರಿಯಲ್‍ಸತೀಶ್ ಕೆಲಸ ಮಾಡಿದ್ದಾರೆ. ಸೋದರ ನಾಯಕನಾಗಿರುವ ಸಿನಿಮಾಕ್ಕೆ ಮಂಡ್ಯಾದ ಸಿ.ಪಿ.ಚಂದ್ರಶೇಖರ್ ನಿರ್ಮಾಣ ಮಾಡಿರುವಇದೇ ತಿಂಗಳು ತೆರೆಕಾಣುತ್ತಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
11/02/20

ಯುರೋಪಿಯನ್ ನಿರೂಪಣೆಯಚಿತ್ರ
ಹೊಸಬರ ‘ನವರತ್ನ’ ಚಿತ್ರಕತೆಯುಸೆಸ್ಪನ್ಸ್, ಥ್ರಿಲ್ಲರ್ ಮತ್ತು ಐತಿಹಾಸಿಕ ಹಿನ್ನಲೆಯಾಗಿದೆ. ಶೇಕಡಎಪ್ಪತ್ತರಷ್ಟುಕಾಡಿನಲ್ಲಿ ನಡೆಯುತ್ತದೆ. ಅದಕ್ಕಾಗಿಗರಿಷ್ಟಚಿತ್ರೀಕರಣವನ್ನು ಶೃಂಗೇರಿ ಬಳಿ ಇರುವ ಕಿಗ್ಗ ಅರಣ್ಯ ಪ್ರದೇಶ, ಉಳಿದಂತೆ ಇಂಡೋನೇಶಿಯಾ, ಲಡಾಕ್, ಬೆಂಗಳೂರು ಸುತ್ತಮುತ್ತಇರುವ ಸುಂದರ ತಾಣಗಳಲ್ಲಿ ಐವತ್ತು ದಿನಗಳ ಕಾಲ ಸೆರೆ ಹಿಡಿಯಲಾಗಿದೆ. ಎರಡು ಸಿನಿಮಾಗಳಲ್ಲಿ ನಟಿಸಿದ ಸಂವೇದನೆಯಿಂದನಾಯಕಜೊತೆಗೆ ನಿರ್ದೇಶನದಜವಬ್ದಾರಿಯನ್ನು ಪ್ರತಾಪ್‍ರಾಜ್ ಹೊತ್ತುಕೊಂಡಿದ್ದಾರೆ.ಚಿತ್ರಕತೆ, ಚಿತ್ರೀಕರಣೋತ್ತರ ಕೆಲಸ ಮತ್ತುಯುಎ ಪ್ರಮಾಣ ಪಡೆಯಲುಒಟ್ಟು ಮೂರು ವರ್ಷ ಸಮಯತೆಗೆದುಕೊಂಡಿದೆ. ವೈಲ್ಡ್ ಲೈಫ್ ಫೋಟೋಗ್ರಾಫರ್‍ಆಗಿ ಸಾಧನೆ ಮಾಡಲುನಿರ್ಭಂದಿತಕಾಡಿನ ಸ್ಥಳಕ್ಕೆ ಹೋದಾಗ ಪರಿಪಾಟಲುಗಳನ್ನು ಅನುಭವಿಸುವ ಮೋಕ್ಷಕುಶಾಲ್ ನಾಯಕಿ. ಗೆಳೆಯನಾಗಿ ಅಮಿತ್‍ರಾಜ್ ಹಾಸ್ಯ ಪಾತ್ರ.

ವೆಂಗಿ ಸಂಗೀತ, ಭರತ್.ಕೆ.ಕಡೂರ್ ಸಾಹಿತ್ಯವಿದೆ.ನವೀನ್‍ಕುಮಾರ್ ಸೌಂಡ್‍ಡಿಸೈನರ್, ಸಂಕಲನ, ಪ್ರವೀನ್‍ಪೌಲ್ ಹಿನ್ನಲೆ ಶಬ್ದ, ವಿಷ್ಣು ಸಂಕಲನವಿದೆ.ರಿಗೋ.ಪಿ.ಜಾನ್ ಮತ್ತು ಲಕ್ಷೀರಾಜ್‍ಛಾಯಾಗ್ರಾಹಕರು. ಅದರಲ್ಲೂರಿಗೋಅವರುಕಾಡಿನ ಒಳಗಡೆ ಇರುವ ಜಲಪಾತದಲ್ಲಿಕಷ್ಟಪಟ್ಟುಕ್ಯಾಮಾರದಲ್ಲಿ ಸುಂದರ ದೃಶ್ಯಗಳನ್ನು ತೆಗೆದಕಾರಣತಂಡವು ‘ರಿಜೋ ಫಾಲ್ಸ್’ ಎಂದು ನಾಮಕರಣ ಮಾಡಿದ್ದಾರೆ.ತಾರಗಣದಲ್ಲಿ ಶರತ್‍ಲೋಹಿತಾಶ್ವ, ಬಲರಾಜವಾಡಿ, ಸಿದ್ದರಾಜ್‍ಕಲ್ಯಾಣ್‍ಕರ್, ಸ್ವಾತಿ ಮುಂತಾದವರು ನಟಿಸಿದ್ದಾರೆ. ಮಂಡ್ಯಾದಉದ್ಯಮಿಚಂದ್ರಶೇಖರ್.ಎಸ್.ಪಿ ಸೋದರ ನಾಯಕನಾಗುತ್ತಿರುವಕಾರಣ ನಿರ್ಮಾಣ ಮಾಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
05/10/19


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore