HOME
CINEMA NEWS
GALLERY
TV NEWS
REVIEWS
CONTACT US
ನವ ಇತಿಹಾಸದ ಗಾನಲಹರಿ
ಹೊಸಬರೇ ಸೇರಿಕೊಂಡು ‘ನವ ಇತಿಹಾಸ’ ಎನ್ನುವ ಸಿನಿಮಾವನ್ನು ಸಿದ್ದಪಡಿಸಿದ್ದಾರೆ. ಸಂಪೂರ್ಣ ಚಿತ್ರವು ಹೆಣ್ಣು ಮಕ್ಕಳ ಮೇಲೆ ಕೇಂದ್ರಿಕೃತವಾಗಿದೆ. ಲಗಾಯ್ತಿನಲ್ಲಿ ಮದುವೆ ಮಾಡಲು ಹೋದಾಗ ಹೆಣ್ಣುಗಳಿಗೆ ಬರವಿರಲಿಲ್ಲ. ಈಗ ಹುಡುಗಿರ ಸಂಖ್ಯೆ ಕಡಿಮೆ ಇದ್ದು, ಅವರನ್ನು ಹುಡುಕೊದರಲ್ಲಿ ಕಾಲ ಕಳೆದುಹೋಗುತ್ತಿದೆ. ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಿ. ಹಾಗೂ ಇದನ್ನು ಮೀರಿ ಮಾಡಿದರೆ ಪರಿಣಾಮ ಎದುರಿಸ ಬೇಕಾಗುತ್ತದೆ. ಆಕೆಯು ಇಲ್ಲದೆ ಹೋದರೆ ಏನಾಗುತ್ತದೆಂದು ಕ್ಲೈಮಾಕ್ಸ್‍ದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಇದರನ್ವಯ ಹುಡ್ಗೀರೇ ಸಿಕ್ತಿಲ್ಲವೆಂದು ಉಪಶೀರ್ಷಿಕೆಯಲ್ಲಿ ಹೇಳಿಕೊಂಡಿದೆ. ಕಮರ್ಷಿಯಲ್ ಅಂಶಕ್ಕೆ ಅನುಗುಣವಾಗಿ ಚಿತ್ರಕ್ಕೆ ಆಕ್ಷನ್, ಸೆಂಟಿಮೆಂಟ್, ಕಾಮಿಡಿಯನ್ನು ಸೇರಿಸಲಾಗಿದೆ.

ವಿಕ್ರಂ ನಾಯಕ, ಕಲ್ಲಿನಕೋಟೆಯ ಅಮೃತ.ವಿ.ರಾಜ್ ನಾಯಕಿ ಮತ್ತು ನಿರ್ಮಾಪಕಿ. ಉಳಿದಂತೆ ಹೊಸಬರಿಗೆ ಅವಕಾಶ ಮಾಡಿಕೊಡಲಾಗಿದೆ. ಶ್ರೀರಜನಿ-ಸಮರ್ಥ್.ಎಂ ಜಂಟಿಯಾಗಿ ಸಿನಿಮಾಕ್ಕೆ ಕತೆ,ಚಿತ್ರಕತೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿರುವುದು ವಿಶೇಷ. ಶ್ರೀರಜನಿ,ಕೇಶವಮೂರ್ತಿ ಸಾಹಿತ್ಯದ ಐದು ಹಾಡುಗಳಿಗೆ ವಿನುಮನಸು ಸಂಗೀತ ಸಂಯೋಜಿಸಿದ್ದಾರೆ. ಈ ಪೈಕಿ ಹಲ್ಲು ಬಿಟ್ಟರೆ ಲವ್ವು ಆಗುತ್ತೆ, ಕೈಕೊಟ್ಟರೆ ನೋವಾಗುತ್ತೆ. ಹುಡುಗಿ ಸಿಕ್ಕರೆ ರೋಮಾನ್ಸು, ದೂರ ಹೋದರೆ ನಿಮಾನ್ಸ್ ಎಂಬಂತಹ ನೊಂದ ಗೀತೆಗೆ ಸಾಲುಗಳು ಪೂರಕವಾಗಿದೆ. ಕೆಪಿಟಿಸಿಎಲ್‍ದಲ್ಲಿ ಕಿರಿಯ ಅಭಿಯಂತರರಾಗಿರುವ ವಸಂತರಾಜ್ ಹೇಗಾದರೂ ಮಗಳನ್ನು ನಾಯಕಿ ಮಾಡುವ ಸಲುವಾಗಿ ಆಕೆಯ ಹೆಸರಿನಲ್ಲೆ ಹಣ ಹೂಡಿದ್ದಾರೆ. ಬಿಡುಗಡೆಗೆ ಸನಿಹವಾಗಿರುವ ಕಾರಣ ಮೊದಲ ಹಂತವಾಗಿ ಆಡಿಯೋ ಸಿಡಿಯನ್ನು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣಗೌಡ, ಲಹರಿ ಸಂಸ್ಥೆಯ ಪರವಾಗಿ ರಜನಿಕಾಂತ್, ಉಮೇಶ್‍ರಾಹುತ್ ಮುಂತಾದವರು ಬಿಡುಗಡೆ ಮಾಡಿ ಶುಭ ಹಾರೈಸಿದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
11/06/19For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore