HOME
CINEMA NEWS
GALLERY
TV NEWS
REVIEWS
CONTACT US
ಯಶಸ್ಸಿನ ಹಾದಿಯಲ್ಲಿ ನಟಸಾರ್ವಭೌಮ
ಬಿಡುಗಡೆ ಹಿಂದಿನ ರಾತ್ರಿಯಿಂದಲೇ ಅದ್ದೂರಿ ಪ್ರದರ್ಶನ ಕಂಡಿರುವ ‘ನಟಸಾರ್ವಭೌಮ’ ಗುರುವಾರ ಮೊದಲ ಷೋ ನಂತರ ಸಂತೋಷಕೂಟವನ್ನು ನಿರ್ಮಾಪಕರು ಏರ್ಪಾಟು ಮಾಡಿದ್ದರು. ಚಿತ್ರೀಕರಣ ಶುರುವಾದಾಗಿನಿಂದ ತೆರೆಗೆ ಬರುವ ತನಕ ಚಿತ್ರದ ಮಾಹಿತಿ ನೀಡಲಾಗಿದೆ. ಈಗ ಚಿತ್ರಕ್ಕೆ ಬಂಡವಾಳ ಹೂಡುವವರು ಹೆಚ್ಚಾಗಿದ್ದು, ವಿತರಕರು ಕಡಿಮೆ ಇದ್ದಾರೆ. ನಿರ್ಮಾಪಕರ ಅರ್ಧ ಭಾಗವಾದರೂ ವಿತರಕರುಗಳು ಇದ್ದರೆ ಕನ್ನಡ ಚಿತ್ರರಂಗ ಬೆಳೆಯಲು ಸಾಧ್ಯವಾಗುತ್ತದೆಂದು ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಅಭಿಪ್ರಾಯಪಟ್ಟರು. ನಿರ್ಮಾಪಕರ ಹಿಂದಿನ ಚಿತ್ರದಲ್ಲಿ ಕೆಲಸ ಮಾಡಿದ್ದು, ಅವರ ಶಿಷ್ಟಚಾರ ಅದ್ಬುತವಾಗಿತ್ತು. ರಸ್ತೆ, ಅಂಗಡಿಯಲ್ಲಿ ಚಿತ್ರೀಕರಣ ಮಾಡಿದರೆ ಬರುವುದಿಲ್ಲವೆಂದು ಹೇಳಿದ್ದೆ. ಒಳ್ಳೆ ಜಾಗದಲ್ಲಿ ಸೆರೆಹಿಡಿದಿದ್ದಾರೆ. ಪುನೀತ್ ಯಾರಿವನು ಚಿತ್ರದ ಅಪ್ಪುನಂತೆ ಈಗಲೂ ಅನಿಸುತ್ತಾನೆ. ಡ್ಯಾನ್ಸ್ ಚೆನ್ನಾಗಿ ಮಾಡುತ್ತಾನೆ. ನಮ್ಮಂತ ಕಲಾವಿದರು ನಿಮ್ಮಂದಿಲೇ ಬೆಳೆದಿರುವುದು. ಇಂತಹ ನಿರ್ಮಾಪಕರು ಕನ್ನಡ ಚಿತ್ರರಂಗಕ್ಕೆ ಬರಬೇಕೆಂದು ಬಿ.ಸರೋಜದೇವಿ ಹೇಳಿದರು.

ನಿರ್ದೇಶಕ ಪವನ್‍ಒಡೆಯರ್ ಮಾತನಾಡಿ ಅವಕಾಶ ನೀಡಿದ್ದಕ್ಕೆ ನಿರ್ಮಾಪಕರಿಗೆ ಧನ್ಯವಾದಗಳು. ಚಿತ್ರವನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದ್ದಕ್ಕೆ ಪ್ರೇಕ್ಷಕರಿಗೆ ಥ್ಯಾಂಕ್ಸ್. ಕಾಲೇಜು ದಿನಗಳಲ್ಲಿ ಅವರ ನಿರ್ಮಾಣದ ಚಿತ್ರಗಳ ಹಾಡಿಗೆ ಹೆಜ್ಜೆ ಹಾಕುತ್ತಿದ್ದೆ. ಇಂದು ಅದೇ ಸಂಸ್ಥೆಗೆ ನಿರ್ದೇಶನ ಮಾಡಿರುವುದು ಖುಷಿ ತಂದಿದೆ. ಪುನೀತ್ ಸರ್ ಜೊತೆ ಎರಡನೆ ಬಾರಿ ಕೆಲಸ ಮಾಡುವ ಸುಯೋಗ ಒದಗಿಬಂತು ಅಂತಾರೆ. ಬೆಳಿಗ್ಗೆಯಿಂದಲೇ ಕರೆಗಳು ಬಂದು ಹಿಟ್ ಎಂದು ಹೇಳುತ್ತಿದ್ದಾರೆ. ಒಂದೂವರೆ ವರ್ಷದ ನಂತರ ಪುನೀತ್ ಹಬ್ಬದ ಊಟ ನೀಡಿದ್ದಾರೆ. ಇಂತಹ ಸಕ್ಸಸ್ ಚಿತ್ರದಲ್ಲಿ ನಾನು ಭಾಗಿಯಾಗಿರುವುದು ಸುಕೃತ ಎನ್ನಬಹುದು. ಪುನೀತ್ ಅವರನ್ನು ಪಾತ್ರದಲ್ಲಿ ಅಪ್ಪಾಜಿ ಎಂದು ಕರೆಯುತ್ತಿದ್ದೆ. ಇನ್ನು ಮುಂದೇ ಅದೇ ಹೆಸರಿನಲ್ಲಿ ಕರೆಯುತ್ತೇನೆಂದು ರವಿಶಂಕರ್ ದೊಡ್ಡ ಮಾತನಾಡಿದರು.

ಹೈದರಾಬಾದ್ ಕರ್ನಾಟಕ ಹೂರತುಪಡಿಸಿ ವಿಶಾಲ ಕರ್ನಾಟಕಕ್ಕೆ ಹಕ್ಕುಗಳನ್ನು ಪಡೆದುಕೊಂಡಿದ್ದೇವೆ. ಕುರುಬರರಾಣಿ ಚಿತ್ರದ ನಂತರ ನಿರ್ಮಾಪಕರನ್ನು ಇದೇ ಸಂದರ್ಭದಲ್ಲಿ ಭೇಟಿ ಮಾಡಿ ಕೋರಿಕೊಂಡಾಗ ಸೂಕ್ತವಾಗಿ ಸ್ಪಂದಿಸಿದ್ದಾರೆ. ಇಂದು ಒಟ್ಟಾರೆ 1538 ಪರದೆಗಳಲ್ಲಿ ಜನರು ವೀಕ್ಷಿಸಿದ್ದಾರೆ. 40 ವರ್ಷದ ಅನುಭವದಲ್ಲಿ, ಈ ರೀತಿ ಯಶಸ್ಸು ಕಂಡಿರುವುದು ಮೊದಲು ಎನ್ನಬಹುದು. ರಾಜ್ಯಾದ್ಯಂತ 300 ಕೇಂದ್ರಗಳಲ್ಲಿ ತೆರೆ ಕಂಡಿದೆ ಅಂತ ವಿತರಕ ಮೋಹನ್‍ದಾಸ್‍ಪೈ ಮಾಹಿತಿ ನೀಡಿದರು. ಕೆಜಿಎಫ್ ದೊಡ್ಡ ಮಟ್ಟದ ಯಶಸ್ಸು ವಿದೇಶದಲ್ಲಿ ಆಗಿದ್ದರಿಂದ ಕನ್ನಡ ಚಿತ್ರಗಳಿಗೆ ಬೇಡಿಕೆ ಬಂದಿದೆ. ಇಂದಿನಿಂದ ಅಮೇರಿಕಾದಲ್ಲಿ 46, ಆಸ್ತ್ರೇಲಿಯಾ 26 ಪ್ರದರ್ಶನಗಳು. ಮುಂದಿನವಾರದಿಂದ ಯೊರೋಪ್, ಜರ್ಮನಿ, ಲಂಡನ್, ಇಂಡೋನೇಷಿಯಾ, ಜಪಾನ್, ಸಿಂಗಪೂರ್, ಕೆನಡಾ ಹಾಗೂ ಚೊಚ್ಚಲಬಾರಿ ರಷ್ಯಾದಲ್ಲಿ ಬಿಡುಗಡೆ ಆಗುತ್ತಿದೆ ಎಂದು ವಿದೇಶದಲ್ಲಿ ಬಿಡುಗಡೆ ಜವಬ್ದಾರಿ ಹೊತ್ತುಕೊಂಡಿರುವ ಮದನ್-ಹೇಮ ನುಡಿಯಾಗಿತ್ತು.

ಕೊನೆಯಾಗಿ ಮೈಕ್ ತೆಗೆದುಕೊಂಡ ಪುನೀತ್‍ರಾಜ್‍ಕುಮಾರ್ ತಮ್ಮ ಮಾತಿನಲ್ಲಿ ಪದ್ಮವಿಭೂಷಣ ಬಿ.ಸರೋಜದೇವಿ ನಮ್ಮ ಚಿತ್ರದಲ್ಲಿ ನಟಿಸಿದ್ದು ತೂಕ ಬಂದಿದೆ. ರಾಕ್‍ಲೈನ್ ಬ್ಯಾನರ್‍ದಲ್ಲಿ 3, ನಿರ್ದೇಶಕರೊಂದಿಗೆ 2, ರವಿಶಂಕರ್ ಅವರೊಂದಿಗೆ 4 ಚಿತ್ರಗಳಲ್ಲಿ ನಟಿಸಲಾಗಿದೆ. ಎಲ್ಲಾ ಕಡೆಗಳಿಂದಲೂ ಚೆನ್ನಾಗಿದೆ ಎಂಬ ಅಭಿಪ್ರಾಯಗಳು ಬರುತ್ತಿವೆ. ಇದಕ್ಕೆಲ್ಲಾ ಕಾರಣ ಅಭಿಮಾನಿ ದೇವರುಗಳು. ಪೈರಸಿ ನಿರ್ಮೂಲನ ಮಾಡಿದರೆ ಗಳಿಗೆ ಚೆನ್ನಾಗಿ ಬರುತ್ತದೆ. ಯಾವುದೇ ಭಾಗದಲ್ಲಿ ಇಂತಹುದು ಕಂಡುಬಂದಲ್ಲಿ ದೂರು ಕೊಡಿ ಎಂದರು. ನೃತ್ಯ ನಿರ್ದೇಶಕ ಭೂಷಣ್, ಛಾಯಾಗ್ರಾಹಕ ವೈದಿ.ಎಸ್, ಸಂಕಲನಕಾರ ಮಹೇಶ್‍ರೆಡ್ಡಿ, ಕಡಿಮೆ ಮಾತನಾಡಿದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
8/02/19For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore