HOME
CINEMA NEWS
GALLERY
TV NEWS
REVIEWS
CONTACT US
ರೈತರ ಹೋರಾಟದ ನರಗುಂದ ಬಂಡಾಯ
1980, ನರಗುಂದ ಪ್ರದೇಶದಲ್ಲಿ ಬಂಡಾಯ ಭುಗಿಲೆದ್ದು ಯುವಕ ವೀರಪ್ಪಬಸೆಪ್ಪಕಡ್ಲಿಕೊಪ್ಪ ಪೋಲೀಸರ ಗುಂಡೇಟನ್ನು ಎದುರುಸಿ ಸಿಂಹಪುರುಷ ಎನಿಸಿಕೊಂಡು ವೀರ ಮರಣಕ್ಕೆ ಶರಣಾಗಿದ್ದ. ಇದರ ಘಟನೆಯನ್ನು ಹೆಕ್ಕಿಕೊಂಡ ‘ನರಗುಂದ ಬಂಡಾಯ’ ಎನ್ನುವ ಸಿನಿಮಾವು ಘಟನೆಗಳು ನಡೆದ ಸ್ಥಳಗಳಾದ ನವಲಗುಂದ, ನರಗುಂದ, ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಿದೆ. ಕತೆ ಬರೆದು ನಿರ್ಮಾಣ ಮಾಡುತ್ತಿರುವ ಸಿದ್ದೇಶ್‍ವಿರಕ್ತಮಠ ಹೇಳುವಂತೆ ರಂಗುರಂಗು ಹಾಡಿಗೆ ಹದಿನೆಂಟು ಲಕ್ಷ ಖರ್ಚು ಮಾಡಲಾಗಿದೆ. 1854ರಿಂದ ಇಲ್ಲಿಯವರೆವಿಗೂ ರೈತಾಪಿ ವರ್ಗದ ಸಮಸ್ಯೆ ಬಗೆಹರಿದಿಲ್ಲ. ಅಂದು ಗೋಲಿಬಾರ್‍ನಲ್ಲಿ 23 ಹೆಣಗಳು ಹುರುಳಿ ಕರ್ನಾಟಕದ ಜಲಿಯನ್ ವಾಲಬಾಗ್ ಆಗಿತ್ತು. ಸದ್ಯ ಮಹದಾಯಿ ಹೋರಾಟ ನಡೆಯುತ್ತಿದ್ದು, ಇದನ್ನು ಸಹ ಬಳಸಿಕೊಳ್ಳಲಾಗುವುದು ಎಂದರು.

ನಾನು ನವಲಗುಂದ ಸ್ಥಳದಿಂದ ಬಂದವನಾಗಿದ್ದರಿಂದ ಚಿತ್ರಕ್ಕೆ ನಿರ್ದೇಶನ ಮಾಡಲು ಅವಕಾಶ ಸಿಕ್ಕಿದ್ದು ಸುಕೃತ ಎನ್ನಬಹುದು. ಬಹುಶ: ಇದು ಎರಡನೆ ಸಂಗೋಳ್ಳರಾಯಣ್ಣ ಆಗಬಹುದು. ಅದರಲ್ಲಿ ಯುದ್ದ, ಇದರಲ್ಲಿ ಹೊಡೆದಾಟ ಇದೆ. ಕ್ಲೈಮಾಕ್ಸ, ಎರಡು ಹಾಡು, ಬಾಕಿ ಇದೆ. ದೃಶ್ಯಗಳು ಚೆನ್ನಾಗಿ ಬರಲೆಂದು ರಾಜಿಯಾಗದೆ ನಿರ್ಮಾಪಕರು ಹಣ ಖರ್ಚು ಮಾಡುತ್ತಿದ್ದಾರೆ. ರೈತರಿಗೆ ಮುಂದೆ ತೊಂದರೆಯಾಗಬಾರದು, ಇದೇ ಕೊನೆಯಾಗಬೇಕಂಬ ಸಂದೇಶವನ್ನು ಹೇಳಲಾಗಿದೆ ಎಂಬುದು ನಾಗೇಂದ್ರಮಾಗಡಿ ನುಡಿ.
ಈ ಸಿನಿಮಾವು ರೈತರ ಹೋರಾಟದ ಕತೆಯಾಗಿದೆ. ರೈತ ಎಲ್ಲಾ ಕಡೆಯಿಂದ ಮೋಸ ಹೋಗುತ್ತಿದ್ದಾನೆ. ದೇಶದಲ್ಲ ರೈತ, ಯೋಧ ಇಬ್ಬರು ಮಾತ್ರ ನಾಯಕರು ಎನ್ನುತ್ತಾರೆ ಸಂಭಾಷಣೆಗಾರ ಕೇಶವಾದಿತ್ಯ. ಪ್ರಚಲಿತ ಯುವಜನಾಂಗಕ್ಕೆ ನರಗುಂದ ವಿಷಯವು ತಿಳಿದಿಲ್ಲ. ಇದನ್ನು ನೋಡಿದ ಮೇಲೆ ಎಲ್ಲವು ಗೊತ್ತಾಗುತ್ತದೆ. ವೀರಪ್ಪ ಮಾತನಾಡಿದ ಶೈಲಿಯಲ್ಲಿ ಡೈಲಾಗ್ ಹೇಳಲಾಗಿದೆ. ನೀರಿಗಾಗಿ ಹೋರಾಟ ಮಾಡುವುದು ಮೂಲಭೂತ ಹಕ್ಕು. ಇದಕ್ಕೆ ನಾವುಗಳು ಬಂಡಾಯ, ಚಳುವಳಿ ಮಾಡುತ್ತಿದ್ದೇವೆ ಅಂತ ಪಾತ್ರದ ಪರಿಚಯ ಮಾಡಿಕೊಂಡರು ನಾಯಕ ರಕ್ಷಿತ್.

ಜಬರ್‍ದಸ್ತ್ ಡೈಲಾಗ್‍ನ್ನು ತೊಡೆತಟ್ಟಿಕೊಂಡು ಹೇಳಿರುವುದು ಖುಷಿಯಾಗಿದೆ. ಹಳ್ಳಿ ಹುಡುಗಿಯಾಗಿ ಪ್ರತಿಭೆ ತೋರಿಸಲು ಅವಕಾಶ ಸಿಕ್ಕಿದೆ. ಇದು ರೈತರಿಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲಾ ವರ್ಗದವರು ನೋಡಲೇ ಬೇಕಾದ ಚಿತ್ರ ಎಂಬುದಾಗಿ ಬಣ ್ಣಸಿಕೊಂಡಿದ್ದು ನಾಯಕಿ ಶುಭಾಪೂಂಜಾ.

ಕಲಾವಿದರಾದ ನೀನಾಸಂಅಶ್ವಥ್, ಮೂಗುಸುರೇಶ್, ಸುರೇಶ್‍ರೈ, ಹುಲಿವಾನ್ ಗಂಗಾಧರಯ್ಯ ನಾವುಗಳು ರೈತರೆಂಬ ಒಕ್ಕರೂಲ ಮಾತಾಗಿತ್ತು. ಸಾಹಸ ಕೌರವವೆಂಕಟೇಶ್, ನೃತ್ಯ ತ್ರಿಭುವನ್, ಸಂಗೀತ ನಿರ್ದೇಶಕ ಯಶೋವರ್ಧನ್, ನಿರ್ಮಾಪಕರ ಹಿತೈಷಿ ಶೇಕರ್‍ಯಲವಿಗಿ, ಜಿಲ್ಲಾ ಪಂಚಾಯತ್ ಸದಸ್ಯ ಕಿರಿಲಿಂಗಪ್ಪಕವಿತಾಳ ಉಪಸ್ತಿತರಿದ್ದು ಚುಟುಕು ಮಾತನಾಡುವಲ್ಲಿಗೆ ಧೀರ್ಘ ಕಾಲದ ಗೋಷ್ಟಿಗೆ ಮಂಗಳ ಹಾಡಲಾಯಿತು.
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-14/01/17


NARAGUNDA BANDAYA TO MOUNT SETS ON AUGUST 18
H
at-trick director Nagendra Magadi is set to make a comeback after a gap of six years. Nagendra Magadi’s last film was Hori that was released in 2011. Now, he has been assigned to direct Naragunda Bandaaya, a film based on farmers’ agitation in Dharwad and Raichur districts in 1980s.

If all goes well, the muhurat function of film Naragunda Bandaya will be held on August 18 at Kanteerava Studios. Siddesh Viraktamath, basically a theatre artiste, has written the script apart from being producer for this film. State award winner Keshavaditya has been assigned to write dialogues for Naragunda Bandaaya.

“I am from Navalgund taluk. I was studying 4th standard when this incident taken place. Two farmers – Veerappa Kadlikoppa of Chikkanaragund village in Naragund taluk of Gadag district (then in Dharwad district) and Basappa Lakkundi of Alagawadi village in Navalgund taluk in Dharwad district were killed in police firing on July 21, 1980,’’ said director Nagendra Magadi.

He said that he would consider directing film Naragunda Bandaaya as a great achievement in his career. “The title of this film was launched at Raichur. Thousands of people attended the function and extended support to this film,’’ he said.
Till now, the director has finalized Rakshit and Shubha Poonja as the lead pair in this film.

“I am lucky to have this opportunity. Acting in tele serials was not my cup of tea. I nourished an ambition of becoming a hero since my childhood. I agreed to act in this film when director Nagendra Magadi Sir has narrated the script of this film in 13 minutes. I am practicing dialogues with North Karnataka diction. I will complete the shooting of ongoing tele serial and may act in one more tele serial before focusing on Kannada films,’’ says Rakshith.

Thanking director and producer for selecting her to play the heroine role in this film, Shubha Poonja said that she got this opportunity after a long gap. “I am playing the role of a village girl who falls in love with the hero in this film. My role is very important in this film. Now, I am practicing dialogues in North Karnataka diction,’’ Shubha said with a smile.
-16/07/17


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore