HOME
CINEMA NEWS
GALLERY
TV NEWS
REVIEWS
CONTACT US
ಗೆಲುವಿನ ಹಾದಿಯಲ್ಲಿ ನನ್ನ ಪ್ರಕಾರ
ಸೆಸ್ಪೆನ್ಸ್, ಥ್ರಿಲ್ಲರ್ ‘ನನ್ನ ಪ್ರಕಾರ’ ಚಿತ್ರವನ್ನುನೋಡಿದವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ರಚನೆ, ನಿರ್ದೇಶನ ಮಾಡಿರುವ ವಿನಯ್‍ಬಾಲಾಜಿ ಹೇಳುವಂತೆ ತಮಿಳು, ತೆಲುಗುಡಬ್ಬಿಂಗ್ ಹಕ್ಕುಗಳು ಮಾರಾಟವಾಗಿದೆ. ಹಿಂದಿಯಲ್ಲಿರಿಮೇಕ್ ಮಾಡಲು ಹೆಸರಾಂತ ಸಂಸ್ಥೆಯೊಂದು ಮುಂದೆ ಬಂದಿದೆ. ಹೆಚ್ಚಿನ ವಿವರಗಳು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಮಾದ್ಯಮದಕಡೆಯಿಂದಒಳ್ಳೆ ವಿಮರ್ಶೆ, ಪ್ರೇಕ್ಷಕರುಚಿತ್ರವನ್ನು ನಗಣ್ಯ ಮಾಡದೆಇರುವುದರಿಂದಎಲ್ಲಾ ಕಡೆಗಳಲ್ಲೂ ಬಹುಶ: ತುಂಬಿದ ಪ್ರದರ್ಶನಕಾಣುತ್ತಿದೆಎನ್ನುತ್ತಾರೆ.ಏನೋ ಇದೆಅಂತ ನೋಡಲು ಹೋದವರಿಗೆ ನಿರಾಸೆಉಂಟು ಮಾಡಿಲ್ಲ. 8ನೇ ಬಾರಿ ನೋಡಿದ್ದರೂ, ಬೋರ್‍ಆಗಿಲ್ಲ. ಇದಕ್ಕೆಇನ್ನಷ್ಟು ಸದ್ದು ಮಾಡಲು ಮಾದ್ಯಮದವರ ಪ್ರೋತ್ಸಾಹ ಬೇಕಾಗಿದೆಎಂದು ಮಯೂರಿಕೋರಿದರು.

ಗಣೇಶಚಿಕ್ಕಕೆರೇಲಿ ಬಿದ್ದ,ದೊಡ್ಡಕೆರೇಲಿ ಎದ್ದಎನ್ನುವ ಹಾಗೆ ನಮ್ಮ ಸಿನಿಮಾವುಚಿಕ್ಕದರಲ್ಲಿ ಬಿದ್ದು,ದೊಡ್ಡದರಲ್ಲಿಎದ್ದು ಪ್ರೇಕ್ಷಕರ ಮನಸೂರೆಗೊಳ್ಳುತ್ತಿದೆ.ಕನ್ನಡಿಗರು ಒಳ್ಳೆ ಚಿತ್ರಕ್ಕೆ ಕೈ ಬಿಡೋಲ್ಲಎನ್ನುವುದಕ್ಕೆ ಸಾಕ್ಷಿಇದಾಗಿದೆ. ಹಿಂದಿಯಲ್ಲಿ ಮಾಡುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅಲ್ಲಿಯೂಕರೆ ಬರುವ ಸಾದ್ಯತೆಇದೆಎಂಬುದು ನಿರಂಜನ್‍ದೇಶಪಾಂಡೆಮಾತಾಗಿತ್ತು.

ಶೀರ್ಷಿಕೆ ಎಲ್ಲರೂ ಮಾತನಾಡುವ ಪದಎಂದುತಿಳಿದು ನಿರ್ಮಾಣ ಮಾಡಲಾಗಿದೆ. ನಮ್ಮಜನರುಕಾಪಾಡಿದ್ದಾರೆ.ರಿಮೇಕ್ ಹಕ್ಕುಗಳು ಮಾರಾಟವಾಗಿದ್ದರಿಂದ ಸೇಫ್‍ಆಗಿದ್ದೇನೆ. ಮಲೆಯಾಳಂ ಕುರಿತಂತೆಚರ್ಚೆ ನಡೆಸಿದ ನಂತರ ಮತ್ತೋಬ್ಬರು ನಮಗೆ ನೀಡಿಅಂತ ಬೇಡಿಕೆಇಟ್ಟಿದ್ದಾರೆ.ಮರಾಠಿ.ಭೋಜ್‍ಪುರಿ ಕಡೆಗಳಿಂದಲೂ ಕರೆ ಬರುತ್ತಿದೆ.ವಿತರಕ ದೀಪಕ್‍ಗಂಗಾಧರ್ ಮುಖಾಂತರ ಹೆಚ್ಚಿನ 40 ಕೇಂದ್ರಗಳಲ್ಲಿ ಶುಕ್ರವಾರದಿಂದತೆರೆಕಾಣಲಿದ್ದು, ಮುಂದಿನವಾರದಿಂದಆಸ್ಟ್ರೇಲಿಯಾ, ಜರ್ಮನಿ ಮುಂತಾದ ಕಡೆಗಳಲ್ಲಿ ಬಿಡುಗಡೆ ಮಾಡಲಾಗುವುದುಅಂತ ವಿವರವನ್ನುಗುರುರಾಜ್ ನೀಡಿದರು. ಅರ್ಜುನ್‍ಯೋಗಿ, ಸಂಗೀತ ನಿರ್ದೇಶಕಅರ್ಜುನ್‍ರಾಮು, ಸಂಕಲನಕಾರ ಸತೀಶ್‍ಚಂದ್ರಯ್ಯ, ಛಾಯಾಗ್ರಾಹಕ ಮನೋಹರ್‍ಜೋಷಿ ಸಂತಸ ಹಂಚಿಕೊಂಡರು. ಚಿತ್ರೀಕರಣದಿಂದ ನೇರವಾಗಿ ಗೋಷ್ಟಿಗೆ ಆಗಮಿಸಿದ ಕಿಶೋರ್‍ಗೆ ಮಾತನಾಡಲು ಅವಕಾಶ ಸಿಗಲಿಲ್ಲ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
3/09/19
ಕುತೂಹಲಗಳ ಸರಮಾಲೆಯಲ್ಲಿ ನನ್ನ ಪ್ರಕಾರ
‘ನನ್ನ ಪ್ರಕಾರ’ ಚಿತ್ರದಲ್ಲಿ ಥ್ರಿಲ್ಲರ್ ಅಂಶಗಳು ಸಾಕಷ್ಟು ಇರುವುದು ನೋಡುಗನಿಗೆ ಆಸಕ್ತಿ ಹುಟ್ಟಿಸುತ್ತದೆ. ವಿಸ್ಮಯ ಸಾವಿನ ಅಪರಾಧಿ ಸಿಕ್ಕಾಗ, ಆತ ಇವಳಲ್ಲ ಎನ್ನುತ್ತಾನೆ. ತನಿಖಾಧಿಕಾರಿ ಮತ್ತಷ್ಟು ಆಳಕ್ಕೆ ಹೋದಾಗ ಅಲ್ಲಿ ವಿಸ್ಮಯಸುರೇಶ್ ಎಂಬುವಳು ಮರ್ಡರ್ ಆಗಿರುತ್ತಾರೆ. ಹಾಗಾದರೆ ಇವರಿಬ್ಬರು ಕೊಲೆಯಾಗಲು ಕಾರಣಗಳಾದರೂ ಏನು, ಯಾವ ಲಾಭಕ್ಕಾಗಿ ಇದೆಲ್ಲಾ ನಡೆಯುತ್ತೆ, ಪದೇ ಪದೇ ತನಿಖೆಯ ವ್ಯಾಪ್ತಿಗೆ ಮಿಸ್ ಆಗುವ ಅಂಶವಾದರೂ ಯಾವುದು ಅಂತ ತಿಳಿಯಲು ಚಿತ್ರ ನೋಡಬೇಕು. ಇದೊಂದು ಕ್ರೈಮ್, ಥ್ರಿಲ್ಲರ್ ಸ್ಟೋರಿ ಆಗಿರುವುದರಿಂದ ಇಡೀ ಸಿನಿಮಾ ಸಾವನ್ನು ಬಗೆಯುವ ಕೆಲಸವಾಗಿದೆ. ಹಾಗಂತ ಅನಾವಶ್ಯಕ ಸನ್ನಿವೇಶಗಳು, ಕಾಮಿಡಿ ತುರುಕಿಲ್ಲ. ಎಷ್ಟು ಬೇಕೋ ಅಷ್ಟನ್ನು ಮಾತ್ರ ಸೇರಿಸಿರುವುದು, ಜೊತೆಗೆ ಮನಸ್ಸನ್ನು ಘಾಸಿ ಮಾಡಲು ಒಂಚೂರು ಸೆಂಟಿಮೆಂಟ್ ಇದೆ. ಚಿತ್ರರಂಗಕ್ಕೆ ಹೊಸಬರ ಆಗಮನದಿಂದ ವಿನೂತನ ಕತೆಗಳು ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಅದೇ ಸಾಲಿಗೆ ನಿರ್ದೇಶಕ ವಿನಯ್ ಬಾಲಾಜಿ ನಿಪುಣತೆ ಪರದೆ ಮೇಲೆ ಕಾಣಿಸುತ್ತದೆ.

ಇನ್ಸ್‍ಪೆಕ್ಟರ್ ಅಶೋಕ್ ಆಗಿ ಕಿಶೋರ್ ಇಡೀ ಚಿತ್ರಕ್ಕೆ ಜೀವಾಳ. ಹೈ ವೋಲ್ಟೇಜ್‍ನಂತೆ ಪೋಲೀಸ್ ಸ್ಟೈಲ್‍ನಲ್ಲಿ ಎಂಟ್ರಿ ಕೊಟ್ಟು ದುರುಳರೊಂದಿಗೆ ಹೊಡೆದಾಡುತ್ತಾರೆ. ಮುಂದೆಲ್ಲಾ ಅವರದು ಸೌಮ್ವ ಚಹರೆ. ಬೇಕಾದ ಸಂದರ್ಭದಲ್ಲಿ ಏನು ಬೇಕೋ ಅದರಂತೆ ಎಕ್ಸ್‍ಪ್ರಶನ್ ಕೊಡುತ್ತಾ ಪ್ರೇಕ್ಷಕರನ್ನು ಸೀಟಿನಲ್ಲಿ ಕೂರಿಸುವ ಕಲೆ ಅವರಿಗೆ ಹೊಸತೇನು ಅಲ್ಲ. ಇವರ ನಂತರದ ಸ್ಥಾನ ಮಯೂರಿಗೆ ಸಲ್ಲುತ್ತದೆ. ಸಖತ್ ಆಗಿ ಕುಕ್ಕಾ ಸೇದುತ್ತಾ ಸಹಜವಾದ ಅಭಿನಯ, ಮತ್ತೋಂದು ಕಡೆ ಮುಗ್ದಳಾಗಿ ಎರಡು ಶೇಡ್‍ನಲ್ಲಿ ಗಮನ ಸೆಳೆಯುತ್ತಾರೆ. ಪತ್ನಿಯಾಗಿ ಪ್ರಿಯಾಮಣಿ ವೈದ್ಯೆಯಾಗಿ ತನಿಖೆಯಲ್ಲಿ ಸಹಾಯ ಮಾಡುತ್ತಾರಷ್ಟೇ. ನಿರಂಜನ್‍ದೇಶ್‍ಪಾಂಡೆ, ಅರ್ಜುನ್‍ಯೋಗಿ, ಪ್ರಮೋದ್‍ಶೆಟ್ಟಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅರ್ಜುನ್‍ರಾಮು ಸಂಯೋಜಿಸಿರುವ ಹಾಡುಗಳಿಗಿಂತ ಹಿನ್ನಲೆ ಸಂಗೀತ ಅದ್ಬುತವಾಗಿದೆ.
ನಿರ್ಮಾಣ: ಗುರುರಾಜ್
ಸಿನಿ ಸರ್ಕಲ್.ಇನ್ ವಿಮರ್ಶೆ
***
23/08/19

ನನ್ನ ಪ್ರಕಾರ ಹಾಡುಗಳು ಹೂರಬಂತು
‘ನನ್ನ ಪ್ರಕಾರ’ ಚಿತ್ರದ ಧ್ವನಿಸಾಂದ್ರಿಕೆಯನ್ನು ದರ್ಶನ್ ಅನಾವರಣಗೊಳಿಸಿದರು. ನಂತರ ನಿರೂಪಕಿ ಕೇಳಿದ ಮೂರು ಪ್ರಶ್ನಗಳಿಗೆ ದರ್ಶನ್ ಪ್ರಕಾರ ಉತ್ತರ ನೀಡಿದರು. ಯಾವ ಪೌರಾಣಿಕ ಸಿನಿಮಾ ಮಾಡುವ ಬಯಕೆ ಇದೆ. ಮದಕರಿನಾಯಕ. ಸುಯೋಧನ ಪಾತ್ರವು 1970ರಲ್ಲಿ ಬಂದರೆ ಯಾರು ಅದಕ್ಕೆ ಸೂಕ್ತ ಅನಿಸುತ್ತಿದ್ದರು. ಖಂಡಿತ ಡಾ.ರಾಜ್‍ಕುಮಾರ್. ಕೊನೆಯದಾಗಿ ಕಾದಂಬರಿ, ಸಾಮಾಜಿಕ, ಪೌರಾಣಿಕ ಇವುಗಳಲ್ಲಿ ಯಾವ ಜಾನರ್ ಸಿನಿಮಾ ಬರಬೇಕೆಂದು ಬಯಸುವಿರಾ? ಎಲ್ಲಾ ತರಹದ ಒಳ್ಳೆ ಚಿತ್ರಗಳು ಬರಬೇಕು. ಕುರುಕ್ಷೇತ್ರವನ್ನು ಅಭಿಮಾನಿಗಳು ಗೆಲ್ಲಿಸಿದ್ದಾರೆ. ಅದರಂತೆ ಈ ಚಿತ್ರವು ಎಲ್ಲರಿಗೂ ಹೆಸರು ತಂದುಕೊಡಲಿ ಎಂದರು.

ಇನ್ಸ್‍ಪೆಕ್ಟರ್ ಆಗಿ ಸತ್ಯದ ಅನ್ವೇಷಣೆಯಲ್ಲಿ ತನಿಖೆ ನಡೆಸುವಾಗ ಬೇರೆ ರೀತಿಯ ಸತ್ಯಗಳು ಅನಾವರಣಗೊಳ್ಳುತ್ತದೆ. ಕೊನೆಗೆ ನಿಜವಾದ ಸತ್ಯ ಯಾವುದೆಂದು ಚೆನ್ನಾಗಿ ತಿಳಿಯಲಿದೆ. ಕಾರಿಗೆ ಬೆಂಕಿ ಹತ್ತಿಕೊಳ್ಳುವುದು, ಇದಕ್ಕೆ ಕಾರಣ ಯಾರು, ಏನಾಯ್ತು, ಇದೆಲ್ಲದರ ಹಿಂದಿನ ಮರ್ಮವೇನು? ಇದರ ಜಾಡನ್ನು ಹುಡುಕಿಕೊಂಡು ಹೋಗುವಾಗ ಒಂದು ಗುಂಪು ದಾರಿ ತಪ್ಪಿಸುವ ಕೆಲಸ ಮಾಡುತ್ತದೆ. ಮುಂದೇನು ಎಂಬುದು ಥ್ರಿಲ್ಲರ್ ಮಾದರಿಯಲ್ಲಿ ಬರುತ್ತದೆಂದು ಕಿಶೋರ್‍ಹೇಳಿದರು.

ಬಡತನದ ಬಿಕ್ಕಲ ಹುಡುಗನಾಗಿ ಅರ್ಜುನ್‍ಯೋಗಿ, ಜೋಡಿಯಾಗಿ ಮಯೂರಿ ಮಾಡಬಾರದ್ದನ್ನು ಮಾಡಿದ್ದೇನೆ. ಕಾಲೇಜು ಹುಡುಗಿಯಾಗಿ ಮನರಂಜನೆ ಬೇಕೆಂದು ಹೋದಾಗ ಏನು ಆಗ್ತಾಳೆ ಅದನ್ನು ಚಿತ್ರ ನೋಡಿ ಎಂದರು. ನಿರಂಜನ್‍ದೇಶಪಾಂಡೆ, ಸಂಗೀತ ನಿರ್ದೇಶಕ ಅರ್ಜುನ್‍ರಾಮು, ಛಾಯಾಗ್ರಾಹಕ ಮನೋಹರ್‍ಜೋಷಿ ಚುಟುಕು ಸಮಯ ತೆಗೆದುಕೊಂಡರು. ಪ್ರಿಯಾಮಣಿ ಇಂಗ್ಲೇಡ್‍ನಲ್ಲಿ ಇರುವ ಕಾರಣ ಗೈರುಹಾಜರಿದ್ದರು. ಚಿತ್ರಕ್ಕೆ ಬಂಡವಾಳ ಹೂಡಿರುವುದು ಗುರುರಾಜ್.ಎಸ್. ಇವರೊಂದಿಗೆ ಕಿರಣ್‍ತಲಸಿಲ, ಜಗದೀಶ್, ಗೋವಿಂದ, ವೆಂಕಟೇಶ, ಬಂದುವರದರಾಜಲು ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಶಾಸಕ ಜಮೀರ್‍ಅಹ್ಮದ್‍ಖಾನ್ ಮುಂತಾದವರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಇದೇ ಸಂದರ್ಭದಲ್ಲಿ ನಿರ್ಮಾಪಕರು ನೆರೆ ಹಾವಳಿಗೆ ಐವತ್ತು ಸಾವಿರ ನೀಡಿದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
15/08/19


ನನ್ನ ಪ್ರಕಾರ ಸೀಕ್ವೆಲ್‍ದಲ್ಲಿ ಬರಲಿದೆ ?
ತೋತಾಪುರಿಚಿತ್ರವುಎರಡು ಚಿತ್ರಗಳಾಗಿ ಬರುತ್ತಿರುವಂತೆ, ‘ನನ್ನ ಪ್ರಕಾರ’ ಸಿನಿಮಾವು ಸೀಕ್ವೆಲ್‍ದಲ್ಲಿ ಬರಲಿದೆಎಂದು ನಿರ್ದೇಶಕ ವಿನಯ್‍ಬಾಲಾಜಿ ಸುದ್ದಿಗೋಷ್ಟಿಯಲ್ಲಿ ಮಾಹಿತಿಯನ್ನುತೆರೆದಿಟ್ಟರು. ಜುಲೈದಲ್ಲಿ ಬಿಡುಗಡೆಯಾಗುತ್ತಿರುವುದರಿಮದಅದಕ್ಕೂ ಮೊದಲೇ ಮುಂದುವರೆದ ಭಾಗ ಬರುತ್ತಿರುವುದಾಗಿ ಹೇಳಿದ್ದಾರೆ.ನಾಲ್ಕು ಕತೆಗಳು ಒಂದಕ್ಕೊಂದು ಸಂಬಂದವಿರುವುದಿಲ್ಲ. ಒಂದೊಂದು ಸನ್ನಿವೇಶಗಳು ಒಂದದಾಗ ಅವು ದಾರಿ ಮಾಡಿಕೊಡುವುದನ್ನು ಸಿನಿಮಾದಲ್ಲಿತೋರಿಸಲಾಗಿದೆ.ಸತ್ಯದಅನ್ವೇಷಣೆಯಲ್ಲಿತನಿಖೆ ನಡೆಸುವಾಗ ಬೇರೆರೀತಿಯ ಸತ್ಯಗಳು ಅನಾವರಣಗೊಳ್ಳುತ್ತದೆ. ಕೊನೆಗೆ ನಿಜವಾದ ಸತ್ಯಯಾವುದೆಂದುಚೆನ್ನಾಗಿತಿಳಿಯಲಿದೆ. ಕಾರಿಗೆ ಬೆಂಕಿ ಹತ್ತಿಕೊಳ್ಳುವುದು, ಇದಕ್ಕೆಕಾರಣಯಾರು, ಏನಾಯ್ತು, ಇದೆಲ್ಲದರ ಹಿಂದಿನ ಮರ್ಮವೇನು?ಇದರಜಾಡನ್ನು ಹುಡುಕಿಕೊಂಡು ಹೋಗುವಾಗ ಒಂದು ಗುಂಪು ದಾರಿತಪ್ಪಿಸುವ ಕೆಲಸ ಮಾಡುತ್ತದೆ. ಮುಂದೇನುಎಂಬುದುಥ್ರಿಲ್ಲರ್ ಮಾದರಿಯಲ್ಲಿ ಬರುತ್ತದೆಂದುಇನ್ಸ್‍ಪೆಕ್ಟರ್ ಪಾತ್ರದಾದಿ ಕಿಶೋರ್ ಹೇಳುತ್ತಾರೆ.

ವೈದ್ಯೆಯಾಗಿಪ್ರಿಯಾಮಣಿಮದುವೆ ನಂತರ ಪತಿಗೆತನಿಖೆಯಲ್ಲಿ ಸಹಕಾರ ನೀಡುತ್ತಾರಂತೆ. ಬಡತನದ ಬಿಕ್ಕಲ ಹುಡುಗನಾಗಿಅರ್ಜುನ್‍ಯೋಗಿ, ಜೋಡಿಯಾಗಿ ಮಯೂರಿ ಮಾಡಬಾರದ್ದನ್ನು ಮಾಡಿದ್ದೇನೆ. ಕಾಲೇಜು ಹುಡುಗಿಯಾಗಿ ಮನರಂಜನೆ ಬೇಕೆಂದು ಹೋದಾಗ ಏನು ಆಗ್ತಾಳೆಅದನ್ನುಚಿತ್ರ ನೋಡಿಎಂದರು.ಉಳಿದಂತೆ ನಿರಂಜನ್‍ದೇಶಪಾಂಡೆ, ವೈಷ್ಣವಿ, ಸಬ್‍ಇನ್ಸ್‍ಪೆಕ್ಟರ್ ಆಗಿ ಪ್ರಮೋದ್‍ಶೆಟ್ಟಿ, ಅಶೋಕ್‍ತಮ್ಮ ಪಾತ್ರದ ಪರಿಚಯ ಮಾಡಿಕೊಂಡರು. ಹಾಡುಗಳಿಗೆ ಸಂಗೀತ ಒದಗಿಸಿರುವುದು ಅರ್ಜುನ್‍ರಾಮು. ಚಿತ್ರಕ್ಕೆ ಬಂಡವಾಳ ಹೂಡಿರುವುದುಗುರುರಾಜ್.ಎಸ್. ಇವರೊಂದಿಗೆ ಕಿರಣ್‍ತಲಸಿಲ, ಜಗದೀಶ್, ಗೋವಿಂದ, ವೆಂಕಟೇಶ, ಬಂದುವರದರಾಜಲು ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
28/06/19For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore