HOME
CINEMA NEWS
GALLERY
TV NEWS
REVIEWS
CONTACT US
7.1 ತಂತ್ರಜ್ಘಾನದಲ್ಲಿ ನಾಗರಹಾವು
ಡಿಸೆಂಬರ್ 29, 1972ರಲ್ಲಿ ತೆರೆಕಂಡು ಅಭೂತಪೂರ್ವ ಯಶಸ್ಸುಗಳಿಸಿದ್ದ ‘ನಾಗರಹಾವು’ ಚಿತ್ರವು 45 ವರ್ಷಗಳ ನಂತರ 7.1 ಹಾಗೂ ಸಿನಿಮಾಸ್ಕೋಪ್‍ನಲ್ಲಿ ಮರುಸೃಷಿಸಿಕೊಂಡು ತೆರೆಗೆ ಬರಲು ಸಜ್ಜಾಗಿದೆ. ಅದರಂತೆ ಚಿತ್ರದಲ್ಲಿ ನಟಿಸಿದ ಕಲಾವಿದರು ಬಿಡುಗಡೆಪೂರ್ವ ಪತ್ರಿಕಾಗೋಷ್ಟಿಯಲ್ಲಿ ನೆನಪುಗಳನ್ನು ಹೇಳುತ್ತಾ ಹೋದರು. ಸಿನಿಮಾ ನೋಡುತ್ತಿದ್ದರೆ ಅಪ್ಪ, ವಿಷ್ಣುವರ್ಧನ್, ಪುಟ್ಟಣ್ಣಕಣಗಾಲ್ ಜೀವಂತವಾಗಿ ಕಣ್ಣ ಮುಂದೆ ಬರುತ್ತಾರೆ. ಈಗಿನ ಸಿನಿಮಾದಲ್ಲಿ ನಾಯ್ಸ್ ಇದೆ. ಅಂದು ವಾಯ್ಸ್ ಮೂಲಕ ಹೆಸರು ಮಾಡಿತ್ತು. ತಂಡದಲ್ಲಿ ಶ್ರದ್ದೆ, ಭಕ್ತಿ, ಆಸೆಗಳು ಎದ್ದು ಕಾಣುತ್ತಿತ್ತು. ಪ್ರತಿ ಪಾತ್ರಗಳು ಮುಖ್ಯವಾಗಿದ್ದವು. ಸ್ಥಳಗಳು ಮಾತಾಡಿಸುತ್ತಿದ್ದವು. ಅಂತಹ ಸಿನಿಮಾ ಮತ್ತೋಮ್ಮೆ ಹುಟ್ಟಿ ಬರೋಲ್ಲ. ಇಂತಹ ದಿಗ್ಗಜರ ವಾಸನೆಯಿಂದ ಬೆಳದ ನಾನು ನಟನಾಗಿದ್ದೆನೆ. ಈಶ್ವರಿ ಸಂಸ್ಥೆಗೆ ಇದೇ ವರ್ಷ 50 ತುಂಬಲಿದೆ. ಲೆಜೆಂಡ್ ಸಿನಿಮಾವನ್ನು ಮರುಸೃಷ್ಟಿ ಮಾಡಿ ಜನರ ಮಡಿಲಿಗೆ ಬಿಡುತ್ತಿದ್ದೇವೆ ಎಂದು ರವಿಚಂದ್ರನ್ ಹೇಳಿದರು.

ಅಂದು ವಿಷ್ಣುವರ್ಧನ್, ಅಂಬರೀಷ್ ಹೇಗೆ ಆಯ್ಕೆಯಾದರೋ ಗೊತ್ತಿಲ್ಲ. ಇಂತಹ ಸಿನಿಮಾಗಳು ನೂರಾರು ವಾರ ಓಡಬೇಕು ಎಂಬುದು ಲೀಲಾವತಿ ಮಾತಾಗಿತ್ತು. ಕಲ್ಪನಾ ಮಾಡಬೇಕಿದ್ದ ಪಾತ್ರವನ್ನು ನಾನು ಮಾಡಿದೆ. ಇಂದು ದೊಡ್ಡ ಪರದೆ ಮೇಲೆ ನೋಡಿದಾಗ ಒನಕೆ ಓಬವ್ವನಾಗಿ ನಾನೇನಾ ಮಾಡಿದ್ದು ಅಂತ ಸೋಜಿಗವಾಗುತ್ತದೆ. ಆಗ 25ನೇ ವಾರದ ಫಲಕ ತೆಗೆದುಕೊಂಡಿದ್ದೆ. ಅದನ್ನು ಮತ್ತೋಮ್ಮೆ ಪಡೆಯಬೇಕು. ಅದಕ್ಕೆ ಜನರು ಚಿತ್ರ ನೋಡಬೇಕು ಎಂದರು ಜಯಂತಿ. ಮರೆಯಲಾರದ ಘಟನೆಯನ್ನು ಹೇಳಿ ನಗಿಸಿದರು ಲೋಕನಾಥ್.

ಕಲಿಯುಗ ಇರುವವರೆವಿಗೂ ನಾಗರಹಾವು ಬದುಕಿರುತ್ತೆ ಎಂದು ಬಣ್ಣನೆ ಮಾಡಿದ್ದು ಭಾರತಿವಿಷ್ಣುವರ್ಧನ್. ಪುಟ್ಟಣ್ಣಕಣಗಾಲ್ ಚಿತ್ರದಲ್ಲಿ ನಟಿಸೋದು ಅಂದರೆ ಸುಲಭದ ಮಾತಲ್ಲ. ಚಿತ್ರದುರ್ಗದ ಕೋಟೆಯನ್ನು ಅದ್ಬುತವಾಗಿ ತೋರಿಸಿದ್ದಾರೆ. ಮೊದಲಬಾರಿ ಸ್ಲೋಮೋಷನ್‍ದಲ್ಲಿ ಚಿತ್ರೀಕರಣಗೊಂಡ ಮೊದಲ ಚಿತ್ರ ಇದಾಗಿದೆ. ರವಿಚಂದ್ರನ್ ಮಾರ್ಗದರ್ಶನದಲ್ಲಿ ಚಿತ್ರ ಮೂಡಿಬಂದಿದೆ. ಖಳನಟ,ಪೋಷಕಪಾತ್ರ, ನಾಯಕ, ಜನನಾಯಕ, ಸಚಿವನಾಗಿ ಇಲ್ಲಿಯವರೆಗೂ ಸಾಧನೆ ಮಾಡುವುದಕ್ಕೆ ಮೊದಲು ಇಟ್ಟಿಗೆ ಇಟ್ಟಿದ್ದು ಪುಟ್ಟಣ್ಣ, ವೀರಸ್ವಾಮಿ ಎಂದು ನೆನಪುಗಳನ್ನು ಹಂಚಿಕೊಂಡರು ಅಂಬರೀಷ್.

ಉದಯಶಂಕರ್ ಪ್ರಥಮ ಬಾರಿ ಪುಟ್ಟಣ್ಣನವರ ಸಿನಿಮಾಕ್ಕೆ ಕೆಲಸ ಮಾಡಿದ್ದರು. ಪುಟ್ಟಣ್ಣನವರು ಮೊದಲು ಕಲಾವಿದರ ಸುರಕ್ಷತೆಯನ್ನು ನೋಡುತ್ತಿದ್ದರು. ಮೂರು ಧರ್ಮಗಳನ್ನು ತೋರಿಸಲಾಗಿದೆ. ಇಂತಹ ಚಿತ್ರ ಮರುಸೃಷ್ಟಿಯಾಗಿದ್ದು ಅವರೆಲ್ಲರು ಹುಟ್ಟಬಂದಂತೆ ಎನ್ನುತ್ತಾ ಸಾಕಷ್ಟು ಹಾವಿನ ಸುದ್ದಿಗಳನ್ನು ಹೇಳುತ್ತಾ ಹೋದರು ಶಿವರಾಂ.

ಗೋಷ್ಟಿಯಲ್ಲಿ ದೊಡ್ಡಣ್ಣ, ರಾಕ್‍ಲೈನ್‍ವೆಂಕಟೇಶ್, ನಾಗ¯ಕ್ಷೀಪುಟ್ಟಣ್ಣಕಣಗಾಲ್, ಶಂಕರ್‍ಅಶ್ವಥ್ ಚಿತ್ರವು ಯಶಸ್ಸುಗಳಿಸಲು ಮಾದ್ಯಮದ ಪ್ರೋತ್ಸಾಹಬೇಕೆಂದು ಅಲವತ್ತು ಮಾಡಿಕೊಂಡರು. ಎರಡು ವರ್ಷದ ಶ್ರಮ, ಬಾಲಾಜಿ ನೇತೃತ್ವದಲ್ಲಿ ಮೂಡಿಬಂದಿರುವ ಚಿತ್ರವು ಇದೇ 20ರಂದು ರಾಜ್ಯದ್ಯಂತ ತೆರೆಕಾಣಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
12/07/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore