HOME
CINEMA NEWS
GALLERY
TV NEWS
REVIEWS
CONTACT US

ಭಾಗ್ಯವಂತರು ಹಾಡುಗಳ ಸಮಯ
ಡಾ.ರಾಜ್‍ಕುಮಾರ್ ಅಭಿನಯದಲ್ಲಿ ‘ಭಾಗ್ಯವಂತರು’ ಸಿನಿಮಾವು ತೆರೆಕಂಡಿತ್ತು. ಈಗ ‘ನಾವೇ ಭಾಗ್ಯವಂತರು’ ಎನ್ನುವ ಚಿತ್ರಕ್ಕೆ ಮೂಲತ: ಛಾಯಗ್ರಾಹಕರಾಗಿದ್ದ ಎಂ.ಹರಿಕೃಷ್ಣ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಪ್ರಸಕ್ತ ಯುವಜನಾಂಗವು ಕುಡಿತದಂತಹ ದುಶ್ಚಟಕ್ಕೆ ಬಲಿಯಾಗಿ ಹೆತ್ತವರನ್ನು ಹಾಗೂ ಮನೆಯವರನ್ನು ಹೇಗೆಲ್ಲಾ ನಿರ್ಲಕ್ಷ್ಯ ಮಾಡುತ್ತಾರೆ. ಅದರಿಂದ ಉಂಟಾಗುವ ಪರಿಣಾಮಗಳೇನು ಎಂಬುದನ್ನು ಸಂದೇಶದ ಮೂಲಕ ಹೇಳಲಾಗಿದೆ. ಪ್ರಚಾರದ ಸಲುವಾಗಿ ಧ್ವನಿಸಾಂದ್ರಿಕೆ ಅನಾವರಣಗೊಂಡಿತು. ಶ್ರವಂತ್, ಸೂರಜ್ ಮತ್ತು ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್‍ಕುಮಾರ್ ನಾಯಕರುಗಳು. ಇವರುಗಳು ಡಾ|| ರಾಜ್‍ಕುಮಾರ್, ವಿಷ್ಣುವರ್ಧನ್ ಹಾಗೂ ಶಂಕರ್‍ನಾಗ್ ರವರ ಅಭಿಮಾನಿಗಳಾಗಿ ಕಾಣಿಸಿಕೊಂಡು, ಅವರ ಆದರ್ಶಗಳನ್ನು ತಪ್ಪದೇ ಪಾಲಿಸುತ್ತಾ, ಕುಡಿತದ ದಾಸರಾಗಿರುತ್ತಾರೆ.

ದಿವ್ಯ, ಚಂದನಗೌಡ ಹಾಗೂ ಶಿಲ್ಪರವಿ ನಾಯಕಿಯರು. ಕುಡಿತದ ಬಗ್ಗೆ ಬುದ್ದಿವಾದ ಹೇಳುವ ಹಿರಿಯ ನಟಿ ಆದಿವಾನಿಲಕ್ಷೀದೇವಿ ಮಾಡ್ರನ್ ಡ್ರೆಸ್‍ನಲ್ಲಿ ಗಿಟಾರ್ ಹಿಡಿದುಕೊಂಡು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ತಾರಬಳಗದಲ್ಲಿ ಲಕ್ಷ್ಮಿದೇವಮ್ಮ, ಮುಖ್ಯಮಂತ್ರಿಚಂದ್ರು, ಸುಂದರರಾಜ್, ನಾರಾಯಣಸ್ವಾಮಿ, ರಾಮಕೃಷ್ಣ, ಅಂಜನಪ್ಪ, ಸುಚೇಂದ್ರಪ್ರಸಾದ್, ಬೇಬಿ ಕಾರುಣ್ಯ, ಮಿಮಿಕ್ರಿ ರಾಜು ಮುಂತಾದವರು ನಟಿಸಿದ್ದಾರೆ. ಎಂ.ಪಿ.ಬಸವಣ್ಣ ಸಾಹಿತ್ಯ ರಚಿಸಿ ಸಂಗೀತ ಸಂಯೋಜನೆ ಮಾಡಿರುವುದು ಮೊದಲ ಅನುಭವ. ಅಮ್ಮನ ಪದವನ್ನು ಕೊಂಡುಕೊಳ್ಳೋಕ್ಕೆ ಯಾರಿಂದಲೂ ಸಾದ್ಯವಿಲ್ಲವೆಂದು ತಂಡಕ್ಕೆ ಶುಭ ಹಾರೈಸಿದರು. ಬೆಂಕೋಶ್ರೀ ಮಾತನಾಡಿ ಈ ಚಿತ್ರರಂಗದಲ್ಲಿ ಶ್ರಮಪಟ್ಟರೆ ಯಾರು ಬೇಕಾದರೂ ಬೆಳೆಯಬಹುದು. ಅದಕ್ಕೆ ನಾನು ಸ್ಪಷ್ಟ ಉದಾಹರಣೆ. ಚಿತ್ರರಂಗದಲ್ಲಿ ಸೋಲು ಗೆಲುವು ಎರಡನ್ನು ಕಂಡ ಸಮಾಜದಲ್ಲಿ ನಾನೇನಾದರೂ ಗುರುತಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ಚಿತ್ರರಂಗ ಹಾಗೂ ಮಾಧ್ಯಮಗಳೇ ಕಾರಣ. ಇಲ್ಲಿ ಎಲ್ಲರೂ ಬೆಳೆಯಲು ಅವಕಾಶವಿದೆ. ಚಿನ್ನೇಗೌಡರು ನನಗೆ ತುಂಬಾ ಆತ್ಮೀಯರು. ವಜ್ರೇಶ್ವರಿ ಸಂಸ್ಥೆಯನ್ನು ಬೆಳೆಸಿದವರು. ಈಗ ಫಿಲಂ ಛೇಂಬರ್ಸ್ ಅಧ್ಯಕ್ಷರಾಗಿದ್ದಾರೆ. ಅವರ ಮುಂದೆ ಬಹಳಷ್ಟು ಸಮಸ್ಯೆಗಳಿವೆ ಎಂದು ಹೇಳಿದರು. ಪತ್ರಕರ್ತ ಜಾಣಗೆರೆವೆಂಕಟರಾಮಯ್ಯ ಅವರು ಶ್ರೀನಿವಾಸ್ ಮಾತಇಗೆ ದಸ್‍ಕತ್ ಹಾಕಿದರು. ಎಂ.ಪ್ರಕಾಶ್ ಹಾಗೂ ಹೆಚ್.ಎಸ್. ಅಶ್ವಥ್ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಚಿತ್ರವು ಸದ್ಯದಲ್ಲೆ ತೆರೆಗೆ ಬರಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
11/10/18

For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

\