HOME
CINEMA NEWS
GALLERY
TV NEWS
REVIEWS
CONTACT US
ಪ್ರೀತಿಕಥನ ನಾನು ನನ್‍ಜಾನು
ಬದುಕೇಚೆಂದಇನ್ನುಅಂತಅಡಿಬರಹದಲ್ಲಿ ಹೇಳಿಕೊಂಡಿರುವ ‘ನಾನು ನನ್‍ಜಾನು’ ಚಿತ್ರದಕತೆಯು ಶೀರ್ಷಿಕೆ ಹೇಳುವಂತೆ ಸುಂದರ ಪ್ರೇಮಕತೆಜೊತೆಗೆ ತೆಳು ಹಾಸ್ಯಇರಲಿದೆ. ಒಬ್ಬನು ಸಾಧನೆ ಮಾಡಲು ಹೋಗುವಾಗ ಅವನಿಗೆ ಉತ್ತೇಜನಕೊಡುವ ಬದಲು ನಿಂದನೆ ಮಾಡುತ್ತಾರೆ. ಆಡೋಜನರು ಕಡೆಗಣಿಸಿದರೂ ಕೊನೆಗೂ ತಾನುಅಂದುಕೊಂಡಿದ್ದನ್ನು ಸಾಧಿಸುವ ಹೊತ್ತಿಗೆಎಲ್ಲವನ್ನು ಕಳೆದುಕೊಂಡಿರುತ್ತಾನೆ. ಪ್ರಚಲಿತ ವಾಸ್ತವ ಜಗತ್ತನ್ನುತೋರಿಸಲಾಗಿದೆ.ಇದರಜೊತೆಗೆ ಪ್ರೀತಿಯ ಭಾವನೆಗಳ ಸನ್ನಿವೇಶಗಳು ಬರಲಿದೆ. ಹಲವು ನಿರ್ದೇಶಕರ ಬಳಿ ಅನುಭವ ಪಡೆದುಕೊಂಡಿರುವ ಶ್ರೀಹರಿ ರಚನೆ, ನಿರ್ದೇಶನಮಾಡಿರುವುದುಹೊಸ ಅನುಭವ. ಕರ್ನಾಟಕದ ಸುಂದರ ಜಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಏಳು ಹಾಡುಗಳಿಗೆ ರಾಗ ಒದಗಿಸಿರುವ ಶ್ರೀಧರ್‍ಕಶ್ಯಪ್ ಅವರಿಗೆ ಮೂರನೇಚಿತ್ರವಾಗಿದೆ.

ಕ, ಮೋಜೋ ಸಿನಿಮಾಗಳಲ್ಲಿ ನಟಿಸಿದ್ದ ಮನು ಬೇಜವಬ್ದಾರಿ ಹುಡುಗ, ಅತ್ಯುನ್ನುತ ಕೆಲಸ ಸಿಕ್ಕಿ ಜವಬ್ದಾರಿ ಬಂದಾಗಅದನ್ನು ಹೇಗೆ ನಿಭಾಯಿಸುತ್ತಾನೆಎನ್ನುವಎರಡು ಶೇಡ್‍ಗಳಲ್ಲಿ ನಾಯಕನಾಗಿಕಾಣಿಸಿಕೊಂಡಿದ್ದಾರೆ. ಜೊತೆಗೆಆಕ್ಷನ್, ಕಾಮಿಡಿತೋರಿಸಲು ಅವಕಾಶ ಸಿಕ್ಕಿದೆಯಂತೆ. ಕುಟುಂಬದ ಸಲುವಾಗಿ ಯಾವುದೇತ್ಯಾಗಕ್ಕೂ ಸಿದ್ದಳಾದಾಗ ಅಂತಿಮವಾಗಿಜಯ ಸಿಗುತ್ತದಾ ಎನ್ನುವರುತ್ವಿಕಾಶೆಟ್ಟಿ ನಾಯಕಿ.ಇವರೊಂದಿಗೆ ಮಜಾಭಾರತದಕಲಾವಿದರು ಮತ್ತುಕತೆಗೆತಿರುವುಕೊಡುವಮಹತ್ವದಪಾತ್ರದಲ್ಲಿ ಸೃಜನ್‍ಲೋಕೇಶ್ ಅಭಿನಯಿಸಿರುವುದು ವಿಶೇಷ. ನೋಡುಗರಿಗೆಅವರಹಳೆಯ ಲವ್ ಸ್ಟೋರಿನೆನಪಿಗೆ ಬರುತ್ತದಂತೆ. ಛಾಯಾಗ್ರಹಣ ಆನಂದ್‍ಇಳಯರಾಜ-ಮಾರವರ್ಮನ್, ಸಂಕಲನ ವಿಶ್ವ.ಎಂ.ಎನ್, ಸಾಹಸ ಅಪ್ಪುವೆಂಕಟೇಶ್, ನೃತ್ಯ ಹೇಮಂತ್‍ರಾಜ್, ವಿಎಫ್‍ಎಕ್ಸ್ ಪ್ರಣವ್‍ಅವರದಾಗಿದೆ.ಬಿಲ್ಡರ್‍ಕೆಂಪೆಗೌಡ.ಎನ್ ಹಾಗೂ ಕಾಸ್‍ಮೋಟಿಕ್ಸ್ ಶಾಪ್‍ಮಾಲೀಕ ಹರೀಶ್.ಪಿ ಜಂಟಿಯಾಗಿ ನಿರ್ಮಾಣ ಮಾಡಿರುವಚಿತ್ರವುಅಕ್ಟೋಬರ್‍ದಲ್ಲಿ ಬಿಡುಗಡೆಯಾಗುವ ಸಾದ್ಯತೆಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
8/08/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore