HOME
CINEMA NEWS
GALLERY
TV NEWS
REVIEWS
CONTACT US
ನಾನೇ ರಾಜ ಹೊಸಬ
1982ರಲ್ಲಿ ‘ನಾನೇ ರಾಜ’ ಚಿತ್ರದ ಮೂಲಕ ರವಿಚಂದ್ರನ್ ನಾಯಕನಾಗಿ ಗುರುತಿಸಿಕೊಂಡಿದ್ದರರು.ಈಗ ಅದೇ ಹೆಸರಿನಲ್ಲಿಚಿತ್ರವೊಂದುತೆರೆಗೆ ಬರಲು ಸಜ್ಜಾಗಿದೆ.ನಟಗಣೇಶ್‍ಕಿರಿಯ ಸೋದರಉಮೇಶ್‍ಈ ಚಿತ್ರದ ಮೂಲಕ ಸೂರಜ್‍ಕೃಷ್ಣ ಹೆಸರಿನೊಂದಿಗೆ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.ಶೇಕಡ 50ರಷ್ಟು ಚಿತ್ರೀಕರಣ ಬನ್ನೂರು, ಉಳಿದಂತೆ ಬೆಂಗಳೂರು, ಚಿಕ್ಕಮಗಳೂರು ಕಡೆಗಳಲ್ಲಿ ಮೂರು ಹಂತದಂತೆ ಕೆಲಸ ಮುಗಿಸಲಾಗಿದೆ. ಪ್ರಚಾರದ ಮೊದಲ ಹಂತವಾಗಿಗಣ್ಯರಿಂದಟ್ರೈಲರ್‍ನ್ನುಅನಾವರಣ ಮಾಡಿಸಲಾಯಿತು. ಶಿಷ್ಯನ ಚಿತ್ರಕ್ಕೆ ಶುಭ ಹಾರೈಸಲು ಆಗಮಿಸಿದ್ದ ಹಿರಿಯ ನಿರ್ದೇಶಕ ಭಾರ್ಗವಮಾತನಾಡುತ್ತಾಸಿನಿಮಾದಲ್ಲಿ ನಾಯಕಿಯಎತ್ತರ ಮುಖ್ಯವಾಗಿರುವುದಿಲ್ಲ. ಅದು ಮ್ಯಾಟರ್,ಮಟೇರಿಯಲ್‍ಆಗೋಲ್ಲ. ಪ್ರತಿಭೆಇದ್ದರೆಅದೇಎತ್ತಿಕೊಂಡು ಹೋಗುತ್ತೆ.ರಾಜ್‍ಕುಮಾರ್-ಮಂಜುಳ, ಅಮಿತಾಬ್‍ಬಚ್ಚನ್-ಜಯಪ್ರದ ಇವರುಗಳ ಜೋಡಿಯನ್ನುಉದಾಹರಣೆಕೊಡಬಹುದಾಗಿದೆ.ತುಣುಕುಗಳನ್ನು ನೋಡಿಚಿತ್ರವು ಹೀಗೆ ಇದೆಅಂತ ಹೇಳುವುದು ತಪ್ಪಾಗುತ್ತದೆ.ದಯಮಾಡಿಎಲ್ಲರೂಚಿತ್ರಮಂದಿರಕ್ಕೆ ಬನ್ನಿರೆಂದು ನಿರ್ಮಾಪಕರ ಪರವಾಗಿಕೋರಿಕೊಂಡರು.

ಮಾಸ್ಟರ್‍ಡಿಗ್ರಿ ಸೂರಜ್‍ಕೃಷ್ಣಎಲ್ಲವನ್ನುಅಣ್ಣನಿಂದಕಲಿತಿದ್ದು, ಏನೇ ಕ್ರೆಡಿಟ್ ಬಂದರೂಅವರಿಗೆ ಸಲ್ಲುತ್ತದೆ. ಹಳ್ಳಿ ಹುಡುಗನಾಗಿ ನಟಿಸಿದ್ದೇನೆಂದು ಪಾತ್ರದ ಪರಿಚಯ ಮಾಡಿಕೊಂಡರು. ಪಟ್ಟಣದಿಂದ ಹಳ್ಳಿಗೆ ಬಂದಾಗಅಲ್ಲಿ ನಡೆಯುವ ಘಟನೆಗಳಿಗೆ ನಾನೇ ಹೊಣೆಯಾಗಿರುತ್ತಾನೆಂದು ನಾಯಕಿ ಸೋನಿಕಾಗೌಡ ಹೇಳಿದರು. ವೈದ್ಯನಾಗಿಎಂ.ಎಸ್.ಉಮೇಶ್, ಅಜ್ಜಿಯಾಗಿ ಮಾಲತಿಶ್ರೀ, ರಚನೆ,ಚಿತ್ರಕತೆ ನಿರ್ದೇಶನ ಮಾಡಿರುವ ಶ್ರೀನಿವಾಸಶಿವಾರ, ನಿರ್ಮಾಪಕಎಲ್.ಆನಂದ್‍ಚಿತ್ರದಕುರಿತಂತೆ ಅನುಭವಗಳನ್ನು ಹಂಚಿಕೊಂಡರು. ಕರ್ನಾಟಕ ವಾಣಿಜ್ಯ ಮಂಡಳಿಯ ಹಾಲಿ ಕಾರ್ಯದರ್ಶಿ ಎಂ.ಎನ್.ಸುರೇಶ್, ಮಾಜಿ ಬಾ.ಮ.ಹರೀಶ್ ಮುಂತಾದವರು ಉಪಸ್ತಿತರಿದ್ದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
9/09/19
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore