HOME
CINEMA NEWS
GALLERY
TV NEWS
REVIEWS
CONTACT US
ಎರಡು ಭಾಗದಲ್ಲಿ ಎನ್.ಟಿ.ಆರ್ ಬಯೋಪಿಕ್
ಮೂರು ದಶಕಗಳ ಕಾಲ ಚಿತ್ರರಂಗ, ನಂತರ ಮುಖ್ಯ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ನಟ,ರಾಜಕಾರಣಿ ಎನ್.ಟಿ.ರಾಮರಾವ್ ಅವರ ಬಯೋಪಿಕ್ ‘ಎನ್‍ಟಿಆರ್ ಕಥಾನಾಯಕುಡು’ ಚಿತ್ರದಲ್ಲಿ ಪುತ್ರ ಬಾಲಕೃಷ್ಣ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಚಾರದ ಸಲುವಾಗಿ ತಂಡವು ಸಿಲಿಕಾನ್ ಸಿಟಿಗೆ ಭೇಟಿ ನೀಡಿ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು.

ಮೈಕ್ ಮೊದಲಿಗೆ ಬಾಲಿವುಡ್ ನಟಿ ವಿದ್ಯಾಬಾಲನ್‍ಗೆ ತಲುಪಿತು. ಮೊದಲಬಾರಿ ತೆಲುಗು ಚಿತ್ರರಂಗಕ್ಕೆ ಪಾರ್ದಾಪಣೆ ಮಾಡಿದ್ದೇನೆ. ಪ್ರಾರಂಭದಲ್ಲಿ ಒಂದು ಚಿತ್ರ ಅಂತ ಸಹಿ ಮಾಡಿದ್ದು, ಮುಂದೆ ಎರಡನೆ ಭಾಗದಲ್ಲಿ ನಟಿಸುವಂತಾಯಿತು. ಎನ್‍ಟಿಆರ್ ಪತ್ನಿಯಾಗಿ ಕಾಣಿಸಿಕೊಂಡಿದ್ದು ಖುಷಿ ನೀಡಿದೆ ಎಂದರು.

ಕರ್ನಾಟಕ-ಆಂದ್ರ ಅಣ್ಣ ತಮ್ಮ ಇದ್ದಂತೆ. ಕೆಜಿಎಫ್ ಬಿಡುಗಡೆ ಸಂದರ್ಭದಲ್ಲಿ ವಿತರಕ ಸಾಯಿಕೊರ್ರಪಾಠಿ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ನೀಡಿದ್ದರು. ದಿಗ್ಗಜ ಕಲಾವಿದರ ಬಗ್ಗೆ ಹೆಚ್ಚೇನು ತಿಳಿಯದು. ಅಪ್ಪು ಸರ್ ಅವರ ಜೀವನದ ಅನುಭವದ ಬಗ್ಗೆ ಹೇಳಬಹುದಂದು ಯಶ್ ಮಾತಿಗೆ ವಿರಾಮ ಹಾಕಿದರು.

ಇಡೀ ಭಾರತ ಎನ್‍ಟಿಆರ್ ಬಗ್ಗೆ ತಿಳಿದುಕೊಳ್ಳುವವರು ಈ ಸಿನಿಮಾವನ್ನು ನೋಡಬಹುದು. ಅಪ್ಪಾಜಿಯನ್ನು ತಮ್ಮುಡು ಅಂತ ಕರೆಯುತ್ತಿದ್ದರು. ನಮ್ಮ ಕುಟುಂಬದವರ ಮೇಲೆ ಅವರಿಗೆ ವಿಶೇಷ ಅಭಿಮಾನವಿತ್ತು. ತುಣುಕುಗಳನ್ನು ನೋಡಿದಾಗ ರೋಮಾಂಚನವಾಗುತ್ತೆ ಎಂದು 1981 ಮತ್ತು 86ರಲ್ಲಿ ನಡೆದ ಘಟನೆಯನ್ನು ಪುನೀತ್‍ರಾಜ್‍ಕುಮಾರ್ ಮೆಲುಕು ಹಾಕಿದರು.

ಪ್ರಾರಂಭದಲ್ಲಿ ಚಿತ್ರ ಮಾಡುವ ಯೋಚನೆ ಇರಲಿಲ್ಲ. ಹಿತೈಷಿಗಳು ಧೈರ್ಯ ನೀಡಿದ್ದರಿಂದ ಎನ್‍ಬಿಕೆ ಸಂಸ್ಥೆಯ ಮೂಲಕ ನಿರ್ಮಾಣ ಮಾಡಲಾಗಿದೆ. ಮೊದಲಭಾಗ ಎನ್‍ಟಿಆರ್ ಕಥಾನಾಯಕಡು ಸಿನಿಮಾದಲ್ಲಿ ಅಪ್ಪನ ಜೀವನ, ಚಿತ್ರರಂಗದಲ್ಲಿ ಗಳಿಸಿದ ಖ್ಯಾತಿಯನ್ನು ತೋರಿಸಲಾಗಿದೆ. ರಾಜಕೀಯಕ್ಕೆ ಪ್ರವೇಶ ಮಾಡಿ ಜನವರಿ 10ರಂದು ಪ್ರಮಾಣವಚನ ಸ್ವೀಕಾರ ಮಾಡಿದ್ದರಿಂದ ನೆನಪಿಗಾಗಿ ಇದೇ ದಿನದಂದು ಬಿಡುಗಡೆ ಮಾಡಲಾಗುತ್ತಿದೆ. ಎನ್‍ಟಿಆರ್ ಮಹಾನಾಯಕುಡು ಎರಡನೆ ಭಾಗವು ಸದ್ಯ ಡಿಟಿಎಸ್ ಹಂತದಲ್ಲಿದ್ದು ಫೆಬ್ರವರಿ ಎರಡರಂದು ತೆರೆಗೆ ತರಲು ಯೋಜನೆ ಹಾಕಲಾಗುತ್ತಿದೆ. ಇದರಲ್ಲಿ ರಾಜಕೀಯದ ಒಡನಾಟ, ಜನರೊಂದಿಗೆ ಸಂಬಂದ, ಗೆಲುವು ಸೋಲು ಎಲ್ಲವು ಬರಲಿದೆ. ಹದಿಮೂರು ಮಕ್ಕಳ ತಂದೆಯಾಗಿ ಅವರು ಸಾಧಿಸಿದ ಪರಿ ಅಮೋಘವಾಗಿದೆ. ಇಡೀ ವಿಶ್ವದಲ್ಲಿ ಅಪ್ಪನ ಪಾತ್ರವನ್ನು ಮಗ ನಿರ್ವಹಿಸುತ್ತಿರುವುದು ಮೊದಲು ಎನ್ನಬಹುದು. ಕಳೆದ ವರ್ಷ ಅಣ್ಣ ಹರಿಕೃಷ್ಣ, ಅಣ್ಣನಂತೆ ಇರುವ ಅಂಬರೀಷ್ ಅಗಲಿದ್ದು ದುಖ:ದ ಸಂಗತಿಯಾಗಿದೆ. ನಟನೆ ಮಾಡಿದ ಗೌತಮಿ ಪುತ್ರ ಇತಿಹಾಸದ ಕತೆಯಾದರೆ, ಎನ್‍ಟಿಆರ್ ಆಧುನಿಕ ಕಥನವಾಗಿದೆ. ನನ್ನಂತೆ ಪುನೀತ್‍ರಾಜ್‍ಕುಮಾರ್ ಅವರು ಡಾ.ರಾಜ್ ಪಾತ್ರ ಮಾಡುವಂತೆ ಆಗಲಿ. ಪ್ರೇಕ್ಷಕ ದೇವರುಗಳನ್ನು ತೃಪ್ತಿಪಡಿಸಲು ಎಲ್ಲಾ ಭಾಷೆಯಲ್ಲಿ ಉತ್ತಮ ಚಿತ್ರಗಳು ಬರಬೇಕೆಂದು ಧೀರ್ಘ ಕಾಲದ ಮಾತುಗಳಿಗೆ ಬಾಲಕೃಷ್ಣ ವಿರಾಮ ತೆಗೆದುಕೊಂಡರು.

ಸಹ ನಿರ್ಮಾಪಕರುಗಳಾದ ಸಾಯಿಕೊರ್ರಪಾಠಿ, ನಟ ಕಲ್ಯಾಣ್‍ರಾಮ್, ನಿರ್ದೇಶಕ ಕೃಷ್ಣಜಾಗರ್‍ಲಾಮುಡಿ, ಕರ್ನಾಟಕ ಹಕ್ಕುಗಳನ್ನು ಪಡೆದುಕೊಂಡಿರುವ ವಿಜಯ್‍ಕಿರಗಂದೂರು ಉಪಸ್ತಿತರಿದ್ದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
8/01/19
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore