HOME
CINEMA NEWS
GALLERY
TV NEWS
REVIEWS
CONTACT US
ಆರ್ಭಟ ಮಾಡಿರುವ ಪಾತ್ರಗಳು
ದುಡ್ಡು ಎಂತಹವರನ್ನು ಪ್ರಚೋದನೆಗೆ ಒಳಪಡಿಸುತ್ತದೆ ಎಂಬುದನ್ನು ‘ನಿಶ್ಯಬ್ದ-2’ ಚಿತ್ರ ನೋಡಿದಾಗ ತಿಳಿಯುತ್ತದೆ. ಕತೆಯಲ್ಲಿ ಒಬ್ಬನಿಗೆ ತುರ್ತಾಗಿ 25 ಲಕ್ಷ ಅವಶ್ಯಕತೆ ಇರುತ್ತದೆ. ಆಕೆ ಮಾನ ಉಳಿಸಿಕೊಳ್ಳಲು ಅರ್ಜೆಂಟ್ ಹಣ ಬೇಕಾಗಿದೆ. ಇದನ್ನು ತಿಳಿದ ಮೂರನೆಯವನು ಪಟ್ಟಣದಿಂದ ಹೊರಗಡೆ ಇರುವ ಅಂಧನ ಮನೆಯಲ್ಲಿ ಕ್ಯಾಶ್ ಇರುವುದಾಗಿ ತಿಳಿಸಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಆಸೆ ಹುಟ್ಟಿಸುತ್ತಾನೆ. ಆದರೆ ದರೋಡೆ ಮಾಡುವುದು ಹೇಳಿದಷ್ಟು ಸುಲುಭವಾಗಿರುವುದಿಲ್ಲ. ಆತ ಅಂಧನಾಗಿದ್ದರೂ ಬಹಳ ಬುದ್ದವಂತ. ಮನೆಯಲ್ಲಿ ಏನೇ ಶಬ್ದ ಬಂದರೂ, ಅರ್ಥ ಮಾಡಿಕೊಳ್ಳಬಲ್ಲ ಚಾಣಾಕ್ಷ. ಐದು ಜನ ಬಂದರೂ ಅವರನ್ನು ಸೆಣಸಾಡಬಲ್ಲ ಸದೃಡ ದೇಹ. ಇವೆಲ್ಲದರ ಜೊತೆಗೊಂಡು ಭಯಂಕರ ನಾಯಿ. ಇದೆಲ್ಲಾವನ್ನು ಭೇದಿಸಿದಲ್ಲಿ ಮಾತ್ರ ಕೋಟಿ ತಮ್ಮದಾಗಿಸಿಕೊಳ್ಳಬಹುದು. ಏನೇ ಆಗಲಿ ಅದನ್ನು ಪಡೆಯುವ ಎಂದು ಮೂವರು ಮನೆಯೊಳಗೆ ಪ್ರವೇಶಿಸಿದಾಗ ಸೋಜಿಗದ ಘಟನೆಗಳು ನಡೆಯುತ್ತವೆ. ಅಂದುಕೊಂಡಂತೆ ಆಗದೆ, ವಿಚಿತ್ರ ತಿರುವುಗಳು ಬಂದು ಏನೆನೋ ಆಗುತ್ತದೆ. ಇದನ್ನು ತಿಳಿಯಲು ಸಿನಿಮಾ ನೋಡಬೇಕು. ಟೈಟಲ್ ನಿಶ್ಯಬ್ದ ಆಗಿದ್ದರೂ ಪೂರ್ತಿ ಸಿನಿಮಾ ಸಿಟಿಮಾರ್ಕೆಟ್ ನಂತೆ ಸದ್ದು ಮಾಡುತ್ತಲೆ ಇರುತ್ತದೆ.

ಪ್ರತಿ ದೃಶ್ಯಗಳಲ್ಲಿ ರೋಚಕತೆ ತುಂಬಿರುವುದರಿಂದ ಹಾರರ್, ಥ್ರಿಲ್ಲರ್ ಅಭಿಮಾನಿಗಳಿಗೆ ಇಷ್ಟವಾಗುತ್ತದೆ. ವಿರಾಮದವರೆಗೂ ಫೈಟು, ಹಾಡು, ಬಿಲ್ಡಪ್ ಅಂತೆಲ್ಲಾ ಬಂದು ಹೋಗುತ್ತದೆ. ನಂತರ ಚಿತ್ರಕ್ಕೊಂದು ವೇಗ ಸಿಕ್ಕುತ್ತದೆ. ಕ್ಲೈಮಾಕ್ಸ್‍ನಲ್ಲಿ ನಿರ್ದೇಶಕರು ಗೊಂದಲ ಸೃಷ್ಟಿಸಿ ಭಾಗ-3 ಬರೋವರೆಗೂ ಕಾಯುವಂತೆ ಮಾಡಿದ್ದಾರೆ. ಇಡೀ ಚಿತ್ರಕ್ಕೆ ಜೀವ ತುಂಬಿರುವುದು ಅವಿನಾಶ್. ಕುರುಡನಾಗಿ ಅವರ ಅಭಿನಯ ಸೂಪರ್. ಎರಡನೆಯದಾಗಿ ವೀನಸ್‍ಮೂರ್ತಿ ಛಾಯಗ್ರಹಣ ಕಣ್ಣುಗಳಿಗೆ ತಂಪು ಕೊಡುತ್ತವೆ. ಮೂರನೆಯದಾಗಿ ಸತೀಶ್‍ಆರ್ಯನ್ ಹಿನ್ನಲೆ ಸಂಗೀತ ನೋಡುಗನಿಗೆ ಹೊಸದೊಂದು ಅನುಭವನ್ನು ನೀಡಿದಂತಿದೆ. ನಾಯಕ ರೂಪೇಶ್‍ಶೆಟ್ಟಿ ಎರಡನೆ ಚಿತ್ರದಲ್ಲಿ ಪರವಾಗಿಲ್ಲ ಎನ್ನಬಹುದು. ನಾಯಕಿ ಆರಾಧ್ಯಶೆಟ್ಟಿ ಅಭಿನಯದಲ್ಲಿ ಇನ್ನು ಸುಧಾರಿಸಬೇಕಾಗಿದೆ. ಗೆಳಯನ ಪಾತ್ರದಲ್ಲಿ ಪಟ್ರೋಲ್‍ಪ್ರಸನ್ನ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರವೀಂದ್ರಮುದ್ದಿ ಸಾಹಿತ್ಯದಲ್ಲಿ ಒಂದು ಹಾಡು ಚೆನ್ನಾಗಿದೆ. ನಿರ್ದೇಶಕ ದೇವರಾಜ್‍ಕುಮಾರ್, ನಿರ್ಮಾಪಕ ತಾರಾನಾಥಶೆಟ್ಟಿ ಬೋಳಾರು ನಿರ್ಮಾಣ ಮಾಡಿರುವ ಚಿತ್ರಕ್ಕೆ ನಿಮ್ಮ ಗುಂಡಿಗೆ ಗಟ್ಟಿಯಾಗಿದ್ದಲ್ಲಿ ಆರ್ಭಟ ಶಬ್ದವನ್ನು ಆಲಿಸಲು ಒಮ್ಮೆ ಟಾಕೀಸಿನೊಳಗೆ ಹೋಗಬಹುದು.
-4/11/17
ನಿಶ್ಯಬ್ದ ಶಬ್ದ ಮಾಡಲಿದೆ
ದುಡ್ಡು ಎಂತಹವರನ್ನು ತಪ್ಪು ದಾರಿಗೆ ಪ್ರಚೋದನೆ ನೀಡುತ್ತದೆ. ಅದರಂತೆ ‘ನಿಶ್ಯಬ್ದ-2’ ಸಿನಿಮಾದಲ್ಲಿ ದುಡ್ಡಿನ ಕುರಿತ ಕತೆಯಾಗಿದೆ. ಅಚಾನಕ್ ಆಗಿ ತಂಡಕ್ಕೆ ಒಂದು ಕೋಟಿ ಸಿಕ್ಕಾಗ ಹಂಚಿಕೊಳ್ಳುವ ಸಂದರ್ಭದಲ್ಲಿ ಅವರೊಳಗೆ ಭಿನ್ನಾಭಿಪ್ರಾಯಗಳು ಬಂದು ಮುಂದೇನಾಗುತ್ತದೆ ಎಂಬುದನ್ನು ಹಾರರ್, ಥ್ರಿಲ್ಲರ್ ಮಾದರಿಯಲ್ಲಿ ತೋರಿಸಿದ್ದಾರೆ. 24 ಘಂಟೆಯಲ್ಲಿ ನಡೆಯುವ ಕಥನ ಇರುವುದರಿಂದ ಪ್ರತಿಯೊಂದು ಸನ್ನಿವೇಶಗಳು ಕುತೂಹಲ ಮೂಡಿಸುತ್ತವೆ. ಇಡೀ ಸಿನಿಮಾ ನಾಲ್ಕು ಪಾತ್ರಗಳ ಸುತ್ತ ಸಾಗಲಿರುವುದು ವಿಶೇಷವಾಗಿದೆ. ಮುಖ್ಯವಾಗಿ ನಾಯಿಯೊಂದು ಪ್ರಮುಖವಾಗಿ ಆವರಿಸಿಕೊಂಡಿದೆಯಂತೆ. ಇದಕ್ಕಾಗಿ ನಿರ್ದೇಶಕರು ಬಾಂಬೆ, ಚೆನ್ನೈ ಕಡೆಗಳಲ್ಲಿ ಹುಡುಕಾಟ ನಡೆಸಿ ಅಂತಿಮವಾಗಿ ಬೆಂಗಳೂರಿನಲ್ಲಿ ಇವರಿಗೆ ಅನಿಸಿದ ನಾಯಿ ಸಿಕ್ಕಿದೆ. ಎರಡನೆ ಬಾರಿ ನಿರ್ದೇಶನ ಮಾಡಿರುವ ದೇವರಾಜ್‍ಕುಮಾರ್‍ಗೆ ರಚನೆ ಮಾಡಲು ಇಂಗ್ಲೀಷ್ ಚಿತ್ರವು ಪ್ರೇರಣೆಯಾಗಿದೆ. ರವೀಂದ್ರಮುದ್ದಿ ಸಾಹಿತ್ಯದ ನಾಲ್ಕು ಹಾಡುಗಳಿಗೆ ಸತೀಶ್‍ಆರ್ಯನ್ ಸಂಯೋಜನೆ ಇದೆ.

ರೂಪೇಶ್‍ಶೆಟ್ಟಿ ನಾಯಕ, ಆರಾಧ್ಯಶೆಟ್ಟಿ ನಾಯಕಿ. ಮತ್ತೋಂದು ಮುಖ್ಯ ಪಾತ್ರದಲ್ಲಿ ಕುರುಡನಾಗಿ ನಟಸಿರುವ ಅವಿನಾಶ್‍ಗೆ 800 ನೇ ಚಿತ್ರ, ಹಾಗೂ ಪೆಟ್ರೋಲ್‍ಪ್ರಸನ್ನ ಖಳನಾಗಿ ಕಾಣ ಸಿಕೊಂಡಿದ್ದಾರೆ. ಒಂದು ಹಂತದಲ್ಲಿ ರೂಪೇಶ್‍ಶೆಟ್ಟಿ-ಅವಿನಾಶ್ 40 ಅಡಿ ಎತ್ತರದಿಂದ ಡ್ಯೂಪ್ ಬಳಸದೆ ಜಂಪ್ ಮಾಡಿದ್ದಾರೆ. ಸಂಭಾಷಣೆ ಮನ್ವರ್ಷಿ, ಸಂಕಲನ ವೈ.ಎಸ್.ಶ್ರೀಧರ್, ಸಾಹಸ ಸಿದ್ದರಾಜು, ಛಾಯಗ್ರಹಣ ವೀನಸ್‍ಮೂರ್ತಿ ನಿರ್ವಹಿಸಿದ್ದಾರೆ. ಮಂಗಳೂರಿನ ತಾರನಾಥ ಶೆಟ್ಟಿ ಬೋಳಾರ ನಿರ್ಮಾಪಕರಾಗಿ ಮೊದಲ ಅನುಭವ. ವಿತರಕ ರಾಧಕೃಷ್ಣ ಮುಖಾಂತರ ಶುಕ್ರವಾರದಂದು 150 ಕೇಂದ್ರಗಳಲ್ಲಿ ಚಿತ್ರವು ತೆರೆಕಾಣಲಿದೆ.
-30/10/17

ಹಾಡುಗಳು ಹಿಟ್ ಆದರೆ ಸಿನಿಮಾ ಅರ್ಧ ಗೆದ್ದಂತೆ – ವಿಶ್ವೇಶ್ವರಭಟ್
ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ ‘ನಿಶ್ಯಬ್ದ-2’ ಚಿತ್ರದ ಧ್ವನಿಸಾಂದ್ರಿಕೆಯು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅನಾವರಣಗೊಂಡಿತ್ತು . ಪ್ರೀತಿ ತೋರಿದ ವೇದಿಕೆಯಲ್ಲಿ ಪತ್ರಿಕಾರಂಗದ ಮುಖ್ಯಸ್ಥರು ಆಗಮಿಸಿದ್ದರಿಂದ ಕಾರ್ಯಕ್ರಮಕ್ಕೆ ಹೆಚ್ಚು ಕಳೆ ತಂದುಕೊಟ್ಟಿತ್ತು. ಕನ್ನಡಪ್ರಭ,ಸುವರ್ಣ ವಾಹಿನಿ ಮುಖ್ಯಸ್ಥ ರವಿಹೆಗಡೆ ಮಾತನಾಡುತ್ತಾ ಇತ್ತೀಚೆಗೆ ಬರುತ್ತಿರುವ ಗೀತೆಗಳಲ್ಲಿ ಶಬ್ದಗಳು ಜಾಸ್ತಿ, ಸಾಹಿತ್ಯ ಇರುವುದಿಲ್ಲ. ಇದರಲ್ಲಿ ಸಾಹಿತ್ಯ ಚೆನ್ನಾಗಿದೆ ಎಂದು ನಂಬಿದ್ದೇನೆ. ನಾಯಕ,ನಾಯಕಿಯರಿಗೆ ಕೊಡುವ ಪ್ರಾಮುಖ್ಯತೆ ಸಂಗೀತಕ್ಕೆ ಕೊಡುವುದಿಲ್ಲ. ಇದರಿಂದ ಪ್ರಾರಂಭಿಕ ಹಂತದಲ್ಲೆ ಸಿನಿಮಾಕ್ಕೆ ಹೊಡೆತ ಬೀಳುತ್ತದೆ. ಪುಟ್ಟಣ್ಣಕಣಗಾಲ್ ಅವರ ಚಿತ್ರಗಳಲ್ಲಿ ಗೀತೆಗಳು ಸುಮಧುರವಾಗಿದ್ದವು ಎಂಬುದನ್ನು ಗಮನಿಸಬೇಕಾಗಿದೆ. ಅದೇ ರೀತಿ ಬಾಲಿವುಡ್‍ನಲ್ಲಿ ರಾಜ್‍ಕಪೂರ್ ಇದ್ದರು. ಸಹದ್ಯೋಗಿಯಾಗಿದ್ದ ರವೀಂದ್ರಮುದ್ದಿ ಕೆಲಸ ತಿಳಿದಿರುವುದರಿಂದ ಅವರು ಮೊದಲಬಾರಿ ಬರೆದಿರುವ ಪದಗಳು ಅಚ್ಚುಕಟ್ಟಾಗಿವೆ, ಒಳ್ಳೆಯದಾಗಲಿ ಎಂದರು. ಇವರ ಮಾತನ್ನು ಅನುಮೋದಿಸಿದ ವಿಶ್ವವಾಣ ಸಂಪಾದಕ ವಿಶ್ವೇಶ್ವರಭಟ್ ಸಾಹಿತಿಯನ್ನು ಗುಣಗಾನ ಮಾಡಿ, ಗೀತೆಗಳು ಎಲ್ಲರಿಗೂ ತಲುಪಿದಲ್ಲಿ ಸಿನಿಮಾ ಅರ್ಧ ಯಶಸ್ಸುಕಂಡಂತೆ. ಆಲಿಸುವಾಗ ಮೊದಲಸಲ ಸಾಮಾನ್ಯ, ಎರಡನೆ ಸಲ ಯೋಚಿಸುತ್ತೆ, ಮೂರನೆಬಾರಿ ಗುಣುಗುತ್ತೆ, ನಂತರ ಅಪ್ಯಾಯಮಾನವಾಗುತ್ತದೆ. ಅಪರೂಪದ ಪ್ರತಿಭೆಯಾಗಿದ್ದು, ಚಿತ್ರಸಾಹಿತ್ಯದಲ್ಲಿ ನಾಯಕನಾಗಿ ವಿಜೃಂಬಿಸಿ, ನಿಶ್ಯಬ್ದವು ಶಬ್ದ ಮಾಡಲಿ ಎಂದು ಶುಭಹಾರೈಸಿದರು.

ನಾನು ಕೊನೆಯವನಾಗಿದ್ದರಿಂದ ಧೈರ್ಯವಾಗಿ ಮಾತನಾಡಬಹುದೆಂದು ಸಾರಾಗೋವಿಂದು ಕನಸುಗಾರ ಯಶಸ್ಸು ಕಾಣಲು ಕೆ.ಕಲ್ಯಾಣ್ ಬರೆದ ಹಾಡುಗಳು. ಇಂದಿಗೂ ಅದು ಮಾಸಿಲ್ಲ. ನಿರ್ಮಾಪಕರಿಗೆ ಬಜೆಟ್ ನೀಡಿದಂತೆ ಅದರೊಳಗೆ ಮುಗಿಸಿರುವುದು ಅವರ ಜಾಣ್ಮೆತನ ತೋರಿಸುತ್ತದೆ. ನೀವು ಒಳ್ಳೆಯ ನಿರ್ಮಾಪಕರ ನಿರ್ದೇಶಕ ಆಗಿದ್ದೀರಿ. ಮಂಗಳೂರು ಕಡೆಯಿಂದ ನಿರ್ಮಾಪಕರು, ನಾಯಕಿಯರು ಆಗಮಿಸುತ್ತಿರುವುದು ಸಂತಸದ ವಿಷಯ ಎಂಬುದು ಅವರ ನುಡಿ. ಮೇಕಪ್‍ಮ್ಯಾನ್ ಆಗಿದ್ದು ನಾನು ಮೂರನೆ ಚಿತ್ರಕ್ಕೆ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. 35 ದಿವಸಗಳ ಕಾಲ ಮಂಗಳೂರು, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ದುಡ್ಡಿನ ಹಿಂದೆ ಬಿದ್ದಾರೆ ಏನಾಗುತ್ತದೆ. ಒಂದು ಕೋಟಿ ಹಣ ತಕ್ಕಣ ಸಿಕ್ಕಿದಾಗ ಹಂಚಿಕೊಳ್ಳುವ ಸಂದರ್ಭದಲ್ಲಿ ಅವಘಡಗಳು ಉಂಟಾಗುತ್ತದೆ. ಒಂದು ದಿನದಲ್ಲಿ ನಡೆಯುವ ಕತೆಯಾಗಿದೆ ಎಂಬ ಮಾಹಿತಿಯನ್ನು ನಿರ್ದೇಶಕ ದೇವರಾಜ್‍ಕುಮಾರ್ ಪ್ರಾರಂಭದಲ್ಲಿ ನೀಡಿದರು. ನಾಯಕನಾಗಿ ರೂಪ್‍ಶೆಟ್ಟಿಗೆ ಮೂರನೆಚಿತ್ರ, ಆರಾಧ್ಯಶೆಟ್ಟಿ ನಾಯಕಿಯಾಗಿ ಹೊಸ ಅನುಭವ. ಉಳಿದಂತೆ ಅವಿನಾಶ್, ಪೆಟ್ರೋಲ್‍ಪ್ರಸನ್ನ ಹಾಗೂ ಎರಡು ನಾಯಿಗಳು ಕಾಣ ಸಿಕೊಂಡಿವೆ. 93 ಲಕ್ಷ ಖರ್ಚು ಮಾಡಿ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ತಾರನಾಥಶೆಟ್ಟಿ ಬೋಳಾರ್ ಹೆಚ್ಚೇನು ಮಾತನಾಡಲಿಲ್ಲ. ಪ್ರೆಸ್‍ಕ್ಲಬ್ ಅಧ್ಯಕ್ಷ ಸದಾಶಿವಶಣೈ, ಸಾಹಿತಿ ಕೆ.ಕಲ್ಯಾಣ್, ನಿರ್ದೇಶಕ ದಯಾಳ್, ಕೆ.ಮಂಜು, ತಂತ್ರಜ್ಘರು ಸಿಡಿ ಬಿಡುಗಡೆಗೆ ಸಾಕ್ಷಿಯಾಗಿದ್ದರು. ಇದಕ್ಕೂ ಮುನ್ನ ಚಿತ್ರದ ಎg.
-Cine Circle News
-30/08/17
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore